ಲಿಡ್ಕರ್ ನಿಗಮದಿಂದ ನಿರಾಶ್ರಿತರಿಗೆ ಸುಸರ್ಜಿತವಾದ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದು ಈ ವಸತಿ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಫಲಾನುಭವಿಗಳಿಗೆ ಶಾಸಕ ಟಿ.ರಘುಮೂರ್ತಿ

by | 24/03/23 | ಸುದ್ದಿ

ಜನಧ್ವನಿವಾರ್ತೆ ಮಾ 24
ಲಿಡ್ಕರ್ ನಿಗಮದಿಂದ ನಿರಾಶ್ರಿತರಿಗೆ ಸುಸರ್ಜಿತವಾದ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದು ಈ ವಸತಿ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಫಲಾನುಭವಿಗಳಿಗೆ ಶಾಸಕ ಟಿ.ರಘುಮೂರ್ತಿ ಕಿವಿಮಾತು ಹೇಳಿದರು.
ನಗರದ ಹೊರವಲಯದಲ್ಲಿರುವ ಅಭಿಷೇಕನಗರದಲ್ಲಿ ಲಿಡ್ಕರ್ ನಿಗಮದಿಂದ ೧೩೪ ಫಲಾನುಭವಿಗಳಿಗೆ ವಸತಿ ಹಕ್ಕು ಪತ್ರಗಳನ್ನು ವಿತರಣೆ ಮಾಡಿದರು.
ಲಿಡ್ಕರ್ ನಿಗಮದಿಂದ ೧೭೫ ನಿರಾಶ್ರಿತ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಪಟ್ಟಿಯಿದ್ದು, ಇದರಲ್ಲಿ ೧೩೪ ಫಲಾನುಭವಿಗಳಿಗೆ ವಸತಿ ಹಕ್ಕ ಪತ್ರವನ್ನು ವಿತರಣೆ ಮಾಡಲಾಗುತ್ತಿದೆ. ಉಳಿದ ೪೧ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲು ಗೊಂದಲವಿದ್ದು, ಮುಂದಿನ ದಿನಗಳಲ್ಲಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಆಡಳಿತದ ಅವಧಿಯಲ್ಲಿ ಸುಮಾರು ೧೨ ಸಾವಿರ ವಸತಿ ಮನೆಗಳಳ ಸೌಲಭ್ಯ ಕಲ್ಪಿಸಲಾಗಿತ್ತು. ಬದಲಾದ ಸರ್ಕಾರ ವಸತಿ ಸೌಲಭ್ಯಗಳು ಕಲ್ಪಿಸಲು ವಿಫಲವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ವಸತಿ ಸೌಲಭ್ಯ ಕೊರತೆಯಿದೆ. ನಿಮಗೆ ಲಿಡ್ಕರ್ ನಿಗಮ ನಿರ್ಮಾಣ ಮಾಡಿಕೊಡುತ್ತಿರುವ ಮನೆಗಳನ್ನು ಸದುಪಯೋಗಪಡಿಸಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ, ಸದಸ್ಯರಾದ ವೀರಭದ್ರಯ್ಯ, ಮಲ್ಲಿಕಾರ್ಜುನ, ರಮೇಶ್, ಜೈತುನ್ಬಿ, ಲಿಡ್ಕರ್ ನಿಗಮದ ಜಿಲ್ಲಾ ಅಧಿಕಾರಿ ಗಂಗಾಧರ್, ನಗರಸಭೆ ಪೌರಾಯುಕ್ತ ರಾಮಕೃಷ್ಣ ಎಫ್ ಸಿದ್ದಕೊಳ ಇತರರಿದ್ದರು

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *