ಕೊಪ್ಪಳ ಫೆಬ್ರವರಿ 28 (ಕರ್ನಾಟಕ ವಾರ್ತೆ): ಕೊಪ್ಪಳ ಪಂಚಾಯತ ರಾಜ್ ಎಂಜಿನಿಯರಿಂಗ್ ವಿಭಾಗ ಕಛೇರಿಯ ಕಾರ್ಯನಿರ್ವಾಹಕ ಅಭಿಯಂತರರಾದ ಸೈಯ್ಯದ್ ಫಜಲ್ ಅವರು ತಮ್ಮ ಕಚೇರಿಯ ಕೊಠಡಿಯಲ್ಲಿ ಲಂಚದ ಹಣ 15,000 ಪಡೆದುಕೊಂಡು ಲೋಕಾಯುಕ್ತ ಟ್ರ‍್ಯಾಪ್‌ಗೆ ಒಳಪಟ್ಟಿರುತ್ತಾರೆ.
ಕುಕನೂರು ತಾಲೂಕ ಮಂಗಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಂಪೌಂಡ್ ನಿರ್ಮಾಣ ಕಾಮಗಾರಿ ಅಂದಾಜು ಮೊತ್ತ ರೂ. 5,00,000 ಹಾಗೂ ಮಂಗಳೂರ ದಿಂದ ಬೇವೂರ ರಸ್ತೆಯ ಸುಧಾರಣೆ (ಕಿ.ಮೀ. 0 ದಿಂದ ಕಿ.ಮೀ 2.25) ಕಾಮಗಾರಿ ಅಂದಾಜು ಮೊತ್ತ ರೂ 4,50,000 ತುಂಡುಗುತ್ತಿಗೆ ಕಾಮಗಾರಿ ಬಿಲ್ಲು ಮಂಜೂರಾತಿ ಮಾಡಲು ಗುತ್ತಿಗೆದಾರರಿಗೆ 25,000 ಸಾವಿರ ರೂ.ಗಳಿಗೆ ಲಂಚದ ಬೇಡಿಕೆ ಇಟ್ಟಿದ್ದು, ಪರ‍್ಯಾಧಿದಾರರು ಚೌಕಾಸಿ ಮಾಡಲಾಗಿ 15,000 ರೂಪಾಯಿ ಕೊಡು ಅಂತ ಲಂಚ ಹಣಕ್ಕೆ ಒತ್ತಾಯಿಸಿದ ಬಗ್ಗೆ ನೀಡಿದ ದೂರಿನ ಸಾರಾಂಶದ ಮೇರೆಗೆ ಕೊಪ್ಪಳ ಲೋಕಾಯುಕ್ತ ಠಾಣೆ ಗುನೆ ನಂ: 02/2023 ಕಲಂ: 7(ಎ) ಭ್ರಷ್ಟಾಚಾರ, ಪ್ರತಿಬಂಧಕ ಕಾಯ್ದೆ 1988 (ತಿದ್ದುಪಡಿ ಕಾಯ್ದೆ 2018) .ರೀತ್ಯ ಪಿ.ಐ ಗಿರೀಶ ರೋಡಕರ ಅವರು ಪ್ರಕರಣ ದಾಖಲಿಸಿ, ಟ್ರ‍್ಯಾಪ್ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಅದರಂತೆ ಫೆ.27ರ ಸಾಯಂಕಾಲ 4:20 ಗಂಟೆ ಸುಮಾರಿಗೆ ದೂರುದಾರರಿಂದ ಆಪಾದಿತ ಅಧಿಕಾರಿ ಸೈಯ್ಯದ್ ಫಾಜಲ್ ಅವರು ಹಣ ಪಡೆಯುವಾಗ ಟ್ರ‍್ಯಾಪ್‌ಗೆ ಒಳಗಾಗಿದ್ದು, ಅಪಾದಿತ ಅಧಿಕಾರಿಯಿಂದ ಲಂಚದ ಹಣ ಜಫ್ತು ಮಾಡಿಕೊಂಡು ತನಿಖೆಯನ್ನು ಮುಂದುವರೆಸಲಾಗಿರುತ್ತದೆ.
ಲೋಕಾಯುಕ್ತ ಕೊಪ್ಪಳ ಪೊಲೀಸ್ ಉಪಾಧೀಕ್ಷಕರಾದ ಸಲೀಂಪಾಷಾ ಅವರ ನೇತೃತ್ವದಲ್ಲಿ ಪಿ.ಐ ಗಿರೀಶ ರೋಡ್ಕರ್, ಪಿ.ಐ ಚಂದ್ರಪ್ಪ ಈಟಿ., ಪಿ.ಐ ಸಂತೋಷ ರಾಠೋಡ, ಸಿಹೆಚ್‌ಸಿ ಸಿದ್ದಯ್ಯ, ಸಿಹೆಚ್‌ಸಿ ರಾಮಣ್ಣ, ಸಿಹೆಚ್‌ಸಿ ಬಸವರಾಜ, ಸಿಪಿಸಿ ರಂಗನಾಥ, ಸಿಪಿಸಿ ನಾಗಪ್ಪ, ಮಪಿಸಿ ತಾರಾಮತಿ, ಮಪಿಸಿ ಶೈಲಜಾ,, ಎಪಿಸಿ ಆನಂದಕುಮಾರ, ಎಪಿಸಿ ಗುರು ದೇಶಪಾಂಡೆ, ಎಹೆಚ್‌ಸಿ ರಾಜು ಅವರು ದಾಳಿ ನಡೆಸಿದ್ದರು ಎಂದು ಕರ್ನಾಟಕ ಲೋಕಾಯುಕ್ತ ರಾಯಚೂರು ಪೊಲೀಸ್ ಅಧೀಕ್ಷಕರ ಕಚೇರಿಯ ಪ್ರಕಟಣೆ ತಿಳಿಸಿದೆ.
ಲಂಚ ಪ್ರಕರಣ : ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಇಇ ಲೋಕಾಯುಕ್ತ ಬಲೆಗೆ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments