ರೈತರ ಜಮೀನುಗಳಿಗೆ ಹೋಗುವ ರಸ್ತೆ ಒತ್ತುವರಿ ತೆರವಿಗಾಗಿ ರೈತರ ಅಲೆದಾಟ ರೈತರ ಗೋಳು ಕೇಳುವರಾರು?.

by | 22/10/23 | ತನಿಖಾ ವರದಿ

. ನಕಾಶೆ ಕಂಡ ದಾರಿ ಒತ್ತುವರಿಯಾಗಿರುವುದು
ಚಳ್ಳಕೆರೆ ಜನಧ್ವನಿ ವಾರ್ತೆ ಅ.22 ಕೃಷಿ ಕಾಯಕದಲ್ಲಿ ಬದುಕು ಕಟ್ಟಿಕೊಂಡಿರುವ ರೈತರು ತಮ್ಮ ಹೊಲಗಳಿಗೆ ಹೋಗಲು ರಸ್ತೆ ಬಿಡಿಸಿಕೊಡುವಂತೆ ಕಂದಾಯ ಇಲಾಖೆಗೆ ಅಲೆದಾಡಿದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ನಕಾಶೆ ಹೌದು ಇದು ಚಳ್ಳಕೆರೆ ತಾಲೂಕಿನ ಅಡವಿಚಿಕ್ಕೇನಹಳ್ಳಿ ಗ್ರಾಮದ ರೈತರ ಜಮೀನುಗಳು ದೇವರಮರಿಕುಂಟೆ ಗ್ರಾಮದ ಗ್ರಾಮದ ರೀಸನಂ 113/2 . 113/9
ಹಾಗೂ 102/3ಸಿ ಜಮೀನುಗಳಿಗೆ ಹೋಗಲು ನಕಾಶ ಕಂಡ ಸರ್ಕಾರಿ ರಸ್ತೆ ಇದ್ದು ಇದೇ ಗ್ರಾಮದ ರೈತನೊಬ್ಬ ನಕಾಶೆ ಕಂಡ ದಾರಿಯನ್ನು ಒತ್ತುವರಿ ಮಾಡಿಕೊಂಡು ದಾರಿಯನ್ನು ಉಳುಮೆ ಮಾಡಿದ್ದು ಅನಾದಿ ಕಾಲದಿಂದಲೂ ನಮ್ಮ ಜಮೀನುಗಳಿಗೆ ಹೋಗಲು ಇದೇ ದಾರಿಯನ್ನು ಬಳಕೆ ಮಾಡಿಕೊಂಡು ಹೊಲಗಳಿಗ ಕೃಷಿ ಚಟುವಟಿ ಮಾಡಲು ಹೋಗುತ್ತಿದ್ದೆವೆ ಈಗ ಏಕಾಕಿ ದಾರಿಯನ್ನು ಉಳುಮೆ ಮಾಡಿ ಜಮೀನುಗಳಿಗೆ ಹೋಗಲು ದಾರಿಯಿಲ್ಲದೆ ರೈತರಿಗೆ ಕಿರಿಕಿರಿ ಉಂಟಾಗಿ ಹೊಲಗಳಿಗೆ ಹೋಗಲು ದಾರಿಯಾವುದಯ್ಯ ಎಂಬಂತಾಗಿ.

ಕೃಷಿ ಚಟುವಟಿಕೆಗಳಿಗೆ ಅಡಚಣೆಯಾಗುವಂತೆ ಮಾಡಿದ್ದು.
ತಮ್ಮ ತಾತನ ಕಾಲದಿಂದಲೂ ಇದೇ ರಸ್ತೆಯಲ್ಲೇ ಓಡಾಡುತ್ತಿದ್ದರು. ಪ್ರತಿ ದಿನ ಅದೇ ರಸ್ತೆಯ ಮೂಲಕ ಹಸು, ಕರು, ಎತ್ತು ಕರೆದುಕೊಂಡು ಜಮೀನಿಗೆ ಹೋಗಿ ಕೃಷಿಕಾಯಕ ಮಾಡಿಕೊಂಡು ಮರಳಿ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದರು. ಆದ್ರೆ ಜಮೀನುಗಳಿಗೆ ಹೋಗೋಕೆ ರಸ್ತೆ ಯಲ್ಲಿ ಉಳುಮೆ ಮಾಡಿರುವುದರಿಂದ ರಸ್ತೆಯಿಲ್ಲದೆ ರೈತರು ರಸ್ತೆ ಬುಡಿಸುವಂತೆ ಕಂದಾಯ ಇಲಾಖೆಗೆ ಮನವಿ ನೀಡಿ ವರ್ಷಗಟ್ಟಲೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

. ಕಂದಾಯ ಇಲಾಖೆಗೆ ರೈತರು ನೀಡಿರುವ ಮನವಿಗಳು ಗ್ರಾಮದ ರೈತರಿಗೆ ಎರಡು ದಶಕದಿಂದ ರಸ್ತೆಗಾಗಿ ಕಚೇರಿಗಳಿಗೆ ಅಲೆದಾಡಿದರೂ ಪ್ರಯೋಜನವಾಗದ ಕಾರಣ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾದಿಕಾರಿಗಳಿಗೆ ಹಾಗೋ ಲೋಕಾಯುಕ್ತ ಕಚೇರಿಗೆ ದೂರು ನೀಡಲಾಗುವುದು ಎಂದು ರೈತರಾದ
.ಪುರುಷೋತ್ತಮ .ಟಿ.ನಾಗರಾಜ ಬಿನ್ ಪಿ . ಆರ್,ಮಂಗ್ಯಣ್ಣ ಎಂ.ಪಾಂಡುರಂಗಯ್ಯ . ಎಂ.ಚಿದಾನಂದಪ್ಪ .ಎಂ.ತಿಪ್ಪೇಸ್ವಾಮಿ .ರವಿಕುಮಾರ್ ರಸ್ತೆ ಒತ್ತುವರಿ ತಡರವುಗೊಳಿಸುಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಹಾಗೋ ಲೋಕಾಯುಕ್ತ ಕಚೇರಿಗಳ ಮೆಟ್ಟಿಲೇರುವ ಸಾಧ್ಯತೆ ಇದೆ. ಗ್ರಾಮದ ರೈತರಿಗೆ ತಮ್ಮ ಜಮೀನುಗಳಿಗೆ ಹೋಗೋಕೆ ಇರೋದು ಇದೊಂದೆ ಮಾರ್ಗ. ಇದೇ ಮಾರ್ಗದಲ್ಲಿ ತಮ್ಮ ಹಸು, ಕರು, ಎತ್ತುಗಳು ಸೇರಿದಂತೆ ಕೃಷಿ ಪರಿಕರಗಳನ್ನ ಕೊಂಡೊಯ್ದು ಕೃಷಿ ಮಾಡಿ ಬದುಕು ಕಟ್ಟಟಿಕೊಂಡಿದ್ದಾರೆ. ಆದ್ರೆ ಈಗ ದಾರಿಯಿಲ್ಲದ ಮತ್ತೊಂದೆಡೆ ಬೆಳೆದ ಬೆಳೆಗಳನ್ನೆಲ್ಲಾ ಕಟಾವು ಮಾಡಿ ಮಾರುಕಟ್ಟೆಗೆ ಹೊತ್ತು ತರಲಾಗದೆ ದಾರಿ ಬಿಡಿಸಿಕೊಡುವಂತೆ ಶಾಸಕ ಟಿ.ರಘುಮೂರ್ತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ದೂರು ನೀಡಿ ಅಲೆದಾಡಿದರೂ ರಸ್ತೆ ಮಾತ್ರ ಒತ್ತುವರಿ ತೆರವು ಮಾಡಿದಕು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಈಗಲಾದರೂ ರೈತರ ಜಮೀನುಗಳಿಗೆ ಹೋಗುವ ರಸ್ತೆ ಒತ್ತುವರಿಯನ್ನು ತೆರವುಕೊಳಿಸುವರೇ ಕಾದು ನೋಡ ಬೇಕಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *