ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾಳುಮಾಡುತ್ತಿರುವ ಗೂಳಿಯನ್ನು ಹೊರಗೆ ಸಾಗಿಸುವಂತೆ ಗ್ರಾಮಸ್ಥರ ಅಳಲು.

by | 30/10/23 | ಪ್ರತಿಭಟನೆ

ಚಳ್ಳಕೆರೆ ಜನಧ್ವನಿ ವಾರ್ತೆ ಅ.30 ದೇವರ ಹೆಸರಿನಲ್ಲಿ ಬಿಟ್ಟ ಗೂಳಿ(ಬಸವ) ರೈತರ ಬೆಳೆಗಳನ್ನು ನಾಶ ಮಾಡುತ್ತಿದ್ದು ಕೂಡಲೆ ಇದನ್ನು ಹಿಡಿದು ಬೇರೆ ಕಡೆ ಸಾಗಿಸುವಂತೆ ರೈತರು ಒತ್ತಾಯಿಸಿದ್ದಾರೆ.

ಹೌದ ಇದು ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮಯಕ್ಕೆ ಯೋವುದೋ ಊರಿಂದ ದೇವರ ಗೂಳಿಯನ್ನು ತಂದು ಬಿಟ್ಟುಹೋಗಿರುವುದರಿಂದ ರೈತರ ಬೆಳೆಗಳನ್ನು ಹಾಳು ಮಾಡುತ್ಡಿಯಲು ಹೋದರೆ ಮೇಲೆ ಎರಗುತ್ತದೆ. ಈಗಾಗಲೆ ರೈತರು ಇತ್ತನೆ ಮಾಡಿದ ಬೆಳೆಗಳಿಗೆ ಮಳೆಯಿಲ್ಲದೆ ಬೆಳೆ ಹೊಣಗಲು ಪ್ರಾರಂಭಿಸಿದ್ದು ಹಾಕಿದ ಬಂಡವಾಳ ಕೈ ಸೇರದೆ ಸಾಲದ ಸುಳಿಗೆ ಸಿಲುಕುವಂತೆ ಮಾಡಿದ್ದು. ಇದರ ಬೆನ್ನೇಲೆ ಕಳೆದ ಸುಮಾರು ಎರಡು ತಿಂಗಳಿಂದ ಯಾರೋ ಬಿಟ್ಟುಹೋದ ಬಸವ ರಾತ್ರಿ ವೇಳೆ ರೈತರ ಜಮೀನುಗಳಿಗೆ ನುಗ್ಗಿ ಮೆಕ್ಕೆಜೋಳ, ತರಕಾರಿ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳನ್ನು ತಿಂದು ನಾಷ ಮಾಡುತ್ತಿದೆ.


ಗ್ರಾಮಸ್ಥರಿಗೆ ವಿಪರೀತ ತೊಂದರೆ ನೀಡುತ್ತಿದೆ ತಾಲೂಕು ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಗೂಳಿಯನ್ನು ನಿಯಂತ್ರಿಸಬೇಕು ಎಂದು ರೈತ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ತಹಶಿಲ್ದಾರ್ ರೆಹಾನ್ ಪಾಷಾ ರವರಿಗೆ ಒತ್ತಾಯಿಸಿದರು.


ತಹಶೀಲ್ದಾರ್ ರೆಹಾನ್ ಪಾಷಾ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಬುಡಕಟ್ಟು ಜನರು ದೇವರ ಎತ್ತುಗಳನ್ನು ಹಾರೈಕೆ ಮಾಡುವುದು ಸರ್ವೇಸಾಮಾನ್ಯವಾಗಿದೆ ಇಂತಹ ಗೂಳಿಗಳು ದೇವರ ಎತ್ತುಗಳ ಜೊತೆ ಒಡನಾಟ ಬೆಳೆಸಿಕೊಂಡರೆ ಇಂತಹ ಸಮಸ್ಯೆಗಳು ಉದ್ಭವಿಸುವುದಿಲ್ಲ ಒಂಟಿಯಾಗಿ ಓಡಾಡುವಾಗ ಸಾರ್ವಜನಿಕರು ಇಂತಹ ಗೂಳಿಗಳಿಗೆ ತೊಂದರೆ ಮಾಡಿದಾಗ ಮಾತ್ರ ಅವು ತಿರುಗಿ ಬೀಳುತ್ತವೆ ಅಪರ ಜಿಲ್ಲಾಧಿಕಾರಿಗಳೊಂದಿಗೆ ಈಗಾಗಲೇ ಈ ಸಮಸ್ಯೆಯ ಬಗ್ಗೆ ದೂರವಾಣಿ ಮೂಲಕ ಚರ್ಚಿಸಿದ್ದು ಅರಣ್ಯ ಇಲಾಖೆ, ಪಶುಸಂಗೋಪನೆ ಹಾಗೂ ಕಂದಾಯ ಇಲಾಖೆ ಮೂಲಕ ಗೂಳಿಯನ್ನು ಸಾಗಿಸಲಾಗುವುದು ಇದರಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯ ಎಂದು ತಿಳಿಸಿದರು.
ಪಶು ಇಲಾಖೆ ಅಧಿಕಾರಿ ರೇವಣ್ಣ ಮಾತನಾಡಿ ದೇವರ ಎತ್ತುಗಳಿಗೆ ಅಥವಾ ಸಾಕುವ ಪಶುಗಳಿಗೆ ಅರವಳಿಕೆ ಮದ್ದು ನೀಡಲು ಬರುವುದಿಲ್ಲ ಕೇವಲ ಕಾಡುಪ್ರಾಣಿಗಳಿಗೆ ಮಾತ್ರ ಅದನ್ನು ಉಪಯೋಗಿಸಲು ಕಾನೂನಿನಲ್ಲಿ ಅವಕಾಶವಿದೆ ಗ್ರಾಮಸ್ಥರು ಸಹಕಾರ ನೀಡಿದರೆ ಪಶು ಇಲಾಖೆಯಿಂದ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಬೇರೆಡೆ ಸಾಗಿಸಲು ಏರ್ಪಾಡು ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಕಾರ್ತಿಕ್ ಬಸವರಾಜ್ ತಿಪ್ಪೇಸ್ವಾಮಿ ತಿಮ್ಮ ರೆಡ್ಡಿ ಗಂಗಾಧರ ಹನುಮಂತ್ ರೆಡ್ಡಿ ಪ್ರಶಾಂತ ರೆಡ್ಡಿ ಚಂದ್ರಣ್ಣ ಮಂಜುನಾಥ ಶಿವಮೂರ್ತಿ ರಾಜಣ್ಣ ಕೃಷ್ಣಮೂರ್ತಿ ನಿಂಗಣ್ಣ ಈರಣ್ಣ ಇತರರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *