ರೈತರ ಆದಾಯ ಹೆಚ್ಚಿಸುವಲ್ಲಿ ಹೈನುಗಾರಿಕೆಯ ಕೊಡುಗೆ ಬಹುಮುಖ್ಯ- ಜಿ.ಪಂ. ಸಿಇಒ ದಿವಾಕರ್ ಎಂ.ಎಸ್

by | 23/02/23 | ಆರ್ಥಿಕ

ಚಿತ್ರದುರ್ಗ.ಫೆ.23:
ರೈತರ ಆದಾಯದಲ್ಲಿ ಕೃಷಿಯ ಜೊತೆಗೆ ಹೈನುಗಾರಿಕೆಯ ಪ್ರಮಾಣ ಶೇ.30 ರಷ್ಟು ಇದೆ. ರೈತರ ಆದಾಯ ಹೆಚ್ಚಿಸುವಲ್ಲಿ ಹೈನುಗಾರಿಕೆಯ ಕೊಡುಗೆ ಬಹುಮುಖ್ಯವಾದದು ಎಂದು ಜಿ.ಪಂ. ಸಿಇಒ ದಿವಾಕರ್.ಎಂ.ಎಸ್ ಅವರು ಹೇಳಿದರು.
ನಗರದ ಜಿಲ್ಲಾ ಕ್ರೀಡಾ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಪಶು ವೈದ್ಯಕೀಯ ಪರೀಕ್ಷಕರ ಸಂಘದ ಸಹಯೋಗದಲ್ಲಿ ‘ಸಮಗ್ರ ಮಾದರಿ ಸಮೀಕ್ಷೆ ಯೋಜನೆಯ ಇ-ಲಿಸ್ ತಂತ್ರಾಂಶ ಮತ್ತು ಜಾನುವಾರುಗಳಿಗೆ ಬರುವ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ’ ಕುರಿತು ಹಮ್ಮಿಕೊಳ್ಳಲಾದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ರೈತರ ಆದಾಯ ಏನಿದೆ ಎಂಬುದ ಅರ್ಥ ಮಾಡಿಕೊಂಡರೆ ಮಾತ್ರ, ರೈತರ ಆದಾಯ ದ್ವಿಗುಣಗೊಳಿಸಬಹುದು. ಇಲ್ಲವಾದರೆ ರೈತರ ಆದಾಯ ದ್ವಿಗುಣಗೊಳಿಸುವುದು ಎಂಬುದು ಭಾಷಣದ ವಸ್ತುವಾಗುತ್ತದೆ. ತೋಟಗಾರಿಕೆ, ಮೀನು ಸಾಗಣೆ ಸೇರಿದಂತೆ ಇತರೆ ಪಶು ಸಂಗೋಪನೆಗಳಿಂದ ರೈತರ ಆದಾಯ ಹೆಚ್ಚಾಗುತ್ತದೆ. ರೈತರ ಆದಾಯ ಹೆಚ್ಚಾದರೆ ದೇಶದ ಜಿಡಿಪಿಯು ಸಹ ಹೆಚ್ಚಾಗುತ್ತದೆ. ಪಶು ಇಲಾಖೆಯಲ್ಲಿ ಕೆಲಸ ಎಂದುಕೊಂಡರೆ ಒತ್ತಡ ಹೆಚ್ಚಾಗುತ್ತದೆ. ಇದನ್ನು ಸೇವೆ ಎಂದುಕೊಂಡು ಕಾರ್ಯ ನಿರ್ವಹಿಸಿದರೆ ಒತ್ತಡ ಎನಿಸುವುದಿಲ್ಲ. ಮುಗ್ದ ಪ್ರಾಣಿಗಳ ಸೇವೆ ಮಾಡುವ ಅವಕಾಶ ನಿಮಗೆ ಲಭಿಸಿದೆ. ಇದನ್ನು ಸೇವಾ ಮನೋಭಾವದಿಂದ ನೋಡಬೇಕು. ಹಸುವೊಂದು ಕರು ಹಾಕುವ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದರೆ ಅದರ ಪುಣ್ಯ ನಿಮಗೆ ಲಭಿಸುತ್ತದೆ. ಮುಗ್ದ ಪಶುಗಳೊಂದಿಗೆ ವ್ಯವಹಿರಿಸುವ ನಿಮ್ಮಲ್ಲೂ ಮುಗ್ದತೆ ಇದೆ ಎಂದರು.
ಗ್ರಾಮೀಣ ಭಾಗದ ಪಶು ಆಸ್ಪತ್ರೆಗಳಿಗೆ ಭೇಟಿ ನೀಡಿದಾಗ ಕಚೇರಿಗಳು ಸರಿಯಾದ ರೀತಿಯಲ್ಲಿ ನಿರ್ವಹಣೆ ಆಗದಿರುವುದು ಕಂಡು ಬಂದಿದೆ. ಕಚೇರಿಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು. ನಿಮ್ಮ ಜೀವಿತ ಅವಧಿಯ ಹೆಚ್ಚು ಭಾಗವನ್ನು ಕಚೇರಿಯಲ್ಲಿ ಕಳೆಯುತ್ತೀರಿ. ಹಾಗಾಗಿ ಉತ್ತಮ ರೀತಿಯಲ್ಲಿ ಕಚೇರಿ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
60ನೇ ವಯಸ್ಸಿನಲ್ಲಿ ಮುಗ್ದತೆ ಉಳಿಸಿಕೊಳ್ಳುವುದು ಕಷ್ಟ. ಸಹಜವಾಗಿ ಈ ವಯಸ್ಸಿನಲ್ಲಿ ಅಹಂಕಾರ ಬರುತ್ತದೆ. ಎಲ್ಲವನ್ನೂ ತಿಳಿದುಕೊಂಡಿದ್ದೇನೆ. ನನ್ನ ಕೈಕೆಳಗೆ ಇμÉ್ಟೂಂದು ಜನರು ಕೆಲಸ ಮಾಡುತ್ತಾರೆ ಎಂದು ಅಧಿಕಾರದ ದರ್ಪ ಬರುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಕಲ್ಲಪ್ಪ ಕೆಲಸ ನಿರ್ವಹಿಸಿದ್ದಾರೆ. ಇದೇ ತಿಂಗಳ ಫೆ.28 ರಂದು ನಿವೃತ್ತರಾಗುತ್ತಿರುವ ಅವರಿಗೆ ದೇವರು ಒಳಿತು ಮಾಡಲಿ. ಕುಟುಂಬದೊಂದಿಗೆ ಅವರು ಉತ್ತಮ ಕಾಲ ಕಳೆಯುವಂತಾಗಲಿ ಎಂದು ಸಿಇಓ ದಿವಾಕರ.ಎಂ.ಎಸ್. ಹಾರೈಸಿದರು.
ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಕಲ್ಲಪ್ಪ ಮಾತನಾಡಿ, ಜಿಲ್ಲೆಯಲ್ಲಿ ಪಶು ಇಲಾಖೆ ಸೇರಿದ 156 ಸಂಸ್ಥೆಗಳಿವೆ. ಇದರಲ್ಲಿ 18 ಪಶು ಆಸ್ಪತ್ರೆ, 69 ಪ್ರಾಥಮಿಕ ಪಶು ಆರೋಗ್ಯ ಚಿಕಿತ್ಸಾ ಕೇಂದ್ರಗಳು. 68 ಪಶು ಚಿಕಿತ್ಸಾಲಯಗಳು, 6 ಸಂಚಾರಿ ಯುನಿಟ್‍ಗಳಿವೆ. ಜಿಲ್ಲೆ 10 ಪಶು ಸಂಜೀವಿನಿ ವಾಹನಗಳು ಮಂಜೂರು ಆಗಿವೆ. ರಾಜ್ಯ ಮಟ್ಟದಲ್ಲಿ ಇವುಗಳ ನಿರ್ವಹಣೆಗೆ ಏಜೆನ್ಸಿ ನಿಯೋಜಿಸಿ ಆದೇಶ ಹೊರಬೀಳಲಿದೆ. ನಂತರ ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಗೆ ಪಶು ಸಂಜೀವಿನಿ ಮೂಲಕ ಸೇವೆ ನೀಡಲಾಗುವುದು. ಒಟ್ಟು 609 ಮಂಜೂರು ಹುದ್ದೆಗಳಲ್ಲಿ 303 ಜನರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಗ್ರಾಮೀಣ ಭಾಗದಲ್ಲಿ ಸೇವೆ ನೀಡುತ್ತಿದ್ದಾರೆ. ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ, ರಾಷ್ಟ್ರೀಯ ಕೃತಕ ಗರ್ಭಧಾರಣಾ ಕಾರ್ಯಕ್ರಮ ಅನುμÁ್ಠನದ ಜೊತೆಗೆ ಪ್ರತಿ ತಿಂಗಳು ಒಂದು ಲಸಿಕಾ ಅಭಿಯಾನ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 4ನೇ ಹಂತದ ಕೃತಕ ಗರ್ಭಧಾರಣಾ ಕಾರ್ಯಕ್ರಮ ಅನುμÁ್ಠನಕ್ಕೆ ಅಧಿಕಾರಿಗಳನ್ನು ನೇಮಿಸಿ, ಹಳ್ಳಿಗಳನ್ನು ಮ್ಯಾಪಿಂಗ್ ಮಾಡಲಾಗಿದೆ. ಇವರಿಗೆ ವಿಶೇಷ ಭತ್ಯಗಳನ್ನು ಸಹ ನೀಡಲಾಗುತ್ತಿದೆ. ಶೇ.90 ರಷ್ಟು ಪ್ರಗತಿ ಸಾಧಿಸಲಾಗಿದೆ. ಕೇಂದ್ರ ಸರ್ಕಾರ ಎನ್.ಎಲ್.ಎಂ.ಇ.ಡಿ(ನ್ಯಾಷನಲ್ ಲೈವ್ ಸ್ಟಾಕ್ ಮಿಷನ್) ಅಡಿ ಜಿಲ್ಲೆಯಲ್ಲಿ ಕುರಿ ಸಾಕಣಿಕೆ ಘಟಕ ನಿರ್ಮಾಣಕ್ಕೆ ಶೇ.50 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಜಿಲ್ಲೆಯಿಂದ 19 ಅರ್ಜಿಗಳನ್ನು ಯೋಜನೆ ಮಂಜೂರಾತಿಗೆ ಕಳುಹಿಸಿಕೊಡಲಾಗಿತ್ತು. ಇದರಲ್ಲಿ 3 ಘಟಕಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಜಿಲ್ಲೆಯಲ್ಲಿ ಪ್ರತಿ ಮನೆ ಮನೆಗೂ ತೆರಳಿ ಜಾನುವರುಗಳಿಗೆ ಶೇ.97 ರಷ್ಟು ಲಸಿಕೆ ನೀಡಲಾಗಿದೆ. ನಾಲ್ಕು ಅಥವಾ ಐದು ತಿಂಗಳ ಕರುಗಳಿಗೆ ಸಂಪೂರ್ಣ ಲಸಿಕೆಗಳನ್ನು ನೀಡಲಾಗುತ್ತದೆ. ರೇಬಿಸ್ ಮಿಷನ್ ಸಹ ಹಮ್ಮಿಕೊಳ್ಳಾಗಿದೆ. 28 ಸಾವಿರ ನಾಯಿಗಳಿಗೆ ರೇಬಿಸ್ ಲಸಿಕೆ ನೀಡಲಾಗಿದೆ. ಇದರ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 2030ರ ವೇಳೆಗೆ ರಾಜ್ಯವನ್ನು ರೇಬಿಸ್ ಮುಕ್ತವಾಗಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುರಿ ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ.ತಿಪ್ಪೇಸ್ವಾಮಿ, ತಾಲೂಕುಗಳ ಪಶು ಇಲಾಖೆ ಸಹಾಯಕ ನಿರ್ದೇಶಕರುಗಳಾದ ಡಾ. ಕುಮಾರ್, ಡಾ.ರಂಗಪ್ಪ, ಡಾ.ರೇವಣ್ಣ, ಚಳ್ಳಕೆರೆ ಶಿವಾನಂದ ಪಶು ಮೆಡಿಕಲ್ಸ್ ವೀರೇಶ್ ಉಪಸ್ಥಿತಿರಿದ್ದರು.
ದಾವಣಗೆರೆ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಶಂಕರಪ್ಪ, ಪಶುಗಳ ಕೃತಕ ಗರ್ಭಧಾರಣೆ ತಂತ್ರ ವಿಧಾನಗಳ ಕುರಿತು ಹಾಗೂ ಸಂಪನ್ಮೂಲ ವ್ಯಕ್ತಿ ಡಾ.ರಕ್ಷಿತ್ ಇ-ಲಿಸ್ ತಂತ್ರಾಂಶದ ಕಾರ್ಯಗಾರ ನೇರವೇರಿಸಿದರು. ಪಶು ವೈದ್ಯರು, ಪಶು ಪರಿವೀಕ್ಷರು ಭಾಗವಹಿಸಿದ್ದರು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page