ರೈತರಿಗೆ ವರದಾನವಾಗ ಬೇಕಿದ್ದ ನರೇಗಾ ಕೃಷಿಹೊಂಡ ನಿರ್ಮಾಣ ಮಧ್ಯವರ್ತಿಗಳ ಪಾಲಿಗೆ ವರದಾನ.

by | 25/10/23 | ತನಿಖಾ ವರದಿ


ಚಳ್ಳಕೆರೆ ಜನಧ್ವನಿ ವಾರ್ತೆ 25 ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಯೋಜನೆಯಡಿ ಅಂತರ್ಜಲ ಅಭಿವೃದ್ಧಿ ಮಾಡುವುದಕ್ಕೆ ಹಾಗೂ ಮಣ್ಣು ಮತ್ತು ನೀರು ಸಂರಕ್ಷಣೆಯ ಕಾಮಗಾರಿಗಳನ್ನು ಕೈಕೊಳ್ಳಲಾಗಿದೆ.

ರೈತರು ತಮ್ಮ ಹೊಲದಲ್ಲಿ ಬದು ನಿರ್ಮಾಣ ಹಾಗೂ ಕೃಷಿಹೊಂಡ ಮಾಡಿಕೊಂಡು ಮಳೆ ಬಂದಾಗ ನೀರು ಶೇಖರಣೆಯಾಗಿ ಅಂತರ್ಜಲ ಹೆಚ್ಚಳಕ್ಕೆ ಒತ್ತು ನೀಡಲು ನರೇಗಾ ಯೋಜನೆಯಡಿ ರೈತರಿಗೆ ಕೃಷಿಹೊಂಡ ಹಾಗೂ ಬದು ನಿರ್ಮಾಣ ಮಾಡಲು ಅವಕಾಶ ನೀಡಿದೆ ಆದರೆ ಇದನ್ನೇ ಬಂಡವಾಳಿ ಮಾಡಿಕೊಂಡ ಮಧ್ಯವರ್ತಿಗಳು ರೈತರ ಹೆಸರಿನಲ್ಲಿ ಹಣ ಲೂಟಿ ಮಾಡಿ ಜೇಬು ತುಂಬಿಸಿಕೊಳ್ಳುತ್ತಿರುವುದು ಬಯಲಾಗಿದೆ.
ಹೌದು ನಾಯಕನಟ್ಟಿ ಹೋಬಳಿಯ ರೈತ ಸಂಪರ್ಕ ವ್ಯಾಪ್ತಿಯ ಹಾಗೂತಿಮ್ಮಪ್ಪಯ್ಯನಹಳ್ಳಿ ಗ್ರಾಪಂ ವ್ತಾಪ್ತಿಯ ವಿವಿಧ ಗ್ರಾಮದ ರೈತರ ಜಮೀನಿನಲ್ಲಿ ಕೃಷಿ ಹೊಂಡ ನಿರ್ನಿಸಲಾಗಿದೆ ಎಂದು ತೋರಿಸಿ ನರೇಗಾ ಅಡಿಯಲ್ಲಿ ಲಕ್ಷ ಲಕ್ಷ ಹಣ ಲೂಟಿ ಮಾಡಿದ್ದಾರಿವುದು ಬೆಳಕಿಗೆ ಬಂದಿದೆ.


ನಾಯಕನಹಟ್ಟಿ ಹೋಬಳಿಯ ಗಿಡ್ಡಪುರ ಗ್ರಾಮದಲ್ಲಿ ರೈತರ ಜಮೀನಿನಲ್ಲಿ ಕೃಷಿ ಹೊಂಡದ ಬದಲು ಸರಕಾರಿ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿರುವುದು ರೈತರಿಂದಲೇ ಬಟಾ ಬಯಲಾಗಿದೆ.
ರೈತರನ್ನ ಉದ್ಧಾರ ಮಾಡ್ತೀವಿ ಅನ್ನೋ ಕೃಷಿ ಇಲಾಖೆ ಅಧಿಕಾರಿಗಳೇ ರೈತರ ಹೆಸರಿನಲ್ಲಿ ಮಧ್ಯವರ್ತಿಗಳು ಕೃಷಿ ಹೊಂಡ ನಿರ್ಮಿಸಲಾಗಿದೆ ಎಂದು ಟೋಪಿ ಹಾಕಿದ್ದಾರೆ. ರೈತರ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿದ್ದೀವಿ ಅಂತಾ ರೈತರ ಹೆಸರಿನಲ್ಲಿ ಮಧ್ಯವರ್ತಿಗಳು ಲಕ್ಷ ಲಕ್ಷ ಉಂಡೆನಾಮ ಹಾಕಿರುವುದು ಬೆಳಕಿಗೆ ಬಂದಿದೆ.


ಚಳ್ಳಕೆರೆ ತಾಲೂಕು ಬರಗಾಲ ಎಂದು ಘೋಷಣೆ ಮಾಡಿದೆ ಅತಿ ಹೆಚ್ಚು ಕಡಿಮೆ ಮಳೆ ಬೀಳುವ ಪ್ರದೇಶ ಎಂಬ ಹಣೆ ಪಟ್ಟಿಕಟ್ಟಿಕೊಂಡಿರುವ ಬರಪೀಡಿತ ಹಾಗೂ ಬಯಲು ಸೀಮೆಯಲ್ಲಿ ಮಳೆ ನೀರು ಇಂಗಿಸಲು ಹಾಗೂ ರೈತರ ಜೀವನೋಪಾಯಕ್ಕೆ ಸಹಕಾರಿಯಾಗಲೆಂದ ನರೇಗಾ ಯೋಜನೆಯಡಿಯಲ್ಲಿ ರೈತರ ಜಮೀನಲ್ಲಿ ಮಣ್ಣು ಸವಕಳಿ ಹಾಗೂ ನೀರು ಇಂಗಿಸಲು ಕೃಷಿಹೊಂಡ ಬದು ನಿರ್ಮಾಣ ಮಾಡಿಕೊಳ್ಳಲು ಸರಕಾರ ಮುಂದಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಮಧ್ಯವರ್ತಿಗಳು ರೈತರ ಗಮಕ್ಕೂ ತಾರದೆ ರೈತರ ಹೆಸರಿನಲ್ಲಿ ಸರಕಾರಿ ಭೂಮಿಯಲ್ಲಿ ಕೃಷಿಹೊಂಡ ನಿರ್ಮಿಸಿ ಅನ್ನದಾತರ ಹೆಸರಿನಲ್ಲಿ ಹುಂಡೆನಾಮ ಹಾಕಿ ರೈತರಿಗೆ ವರದಾನವಾಗ ಬೇಕಿದ್ದ ನರೇಗಾ ಕೃಷಿಹೊಂಡ ಭಾಗ್ಯ ಮಧ್ಯವರ್ತಿಗಳ ಖಜಾನೆ ಸೇರುವಂತಾಗಿದೆ.
ಸರಿಯಾಗಿ ಮಳೆ ಬಂದರೆ ಬೆಳೆಗೆ ಬೆಲೆಯೇ ಇಲ್ಲ. ಇನ್ನೊಂದೆಡೆ ವರುಣದೇವ ಮುನಿಸಿಕೊಂಡಿರುವ ಭಯಾ. ಆತಂಕ. ಒಟ್ನಲ್ಲಿ ರೈತರು ಅಕ್ಷರಶಃ ನಲುಗಿ ಹೋಗಿದ್ದಾರೆ. ಅದ್ರಲ್ಲೂ ಬರದ ನಾಡಿನ ಬಯಲು ಸೀಮೆಯ ರೈತರಿಗೆ ಕೃಷಿಹೊಂಡ ನಿರ್ಮಾಣದಲ್ಲಿ ಗೋಲ್ ಮಾಲ್ ಮಾಡಿದ್ದಾರೆ ಎಂದು ರೈತರೇ ಆರೋಪಿಸಿದ್ದಾರೆ.


ರೈತರನ್ನ ಉದ್ಧಾರ ಮಾಡ್ತೀವಿ ಅನ್ನೋ ಕೃಷಿ ಇಲಾಖೆ ಅಧಿಕಾರಿಗಳೇ ಅನ್ನದಾತರ ಹೆಸರಿನಲ್ಲಿ ಕೃಷಿಹೊಂಡ ನಿರ್ಮಿಸಿ ಬಿಲ್ ಪಡೆದಿರುವ ಕಾಮಗಾರಿಗಳನ್ನು ತನಿಖೆ ನಡೆಸಿ ಮಧ್ಯವರ್ತಿಗಳ ವಿರುದ್ದ ಕ್ರಮಕೈಗೊಳ್ಳಿ.
ಕೃಷಿಹೊಂಡ ಗೋಲ್​ಮಾಲ್ ಮಾಡಿರೋ ಬಗ್ಗೆ ಈಗಾಗಲೆ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ. ತಾಪಂ ಇ ಒ. ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ದೂರೂ ಸಹ ನೀಡಲಾಗಿದೆ.

ರೈತರ ಹೆಸರಿನಲ್ಲಿ ಗೋಲ್​ಮಾಲ್?

ಯೆಸ್ ಬೇಸಿಗೆಗಾಲದಲ್ಲಿ ರೈತರಿಗೆ ಅನುಕೂಲ ಆಗಲಿ ಅಂತಾ ಸರ್ಕಾರ ಕೃಷಿ ಹೊಂಡಗಳ ನಿರ್ಮಾಣಕ್ಕೆ ಭಾರಿ ಒತ್ತು ನೀಡುತ್ತಿದೆ. ಇದಕ್ಕಾಗಿ ಸಹಾಯ ಧನವನ್ನೂ ವಿತರಿಸುತ್ತಾ ಬಂದಿದೆ. ಆದ್ರೆ ಇದೆಲ್ಲಾ ಸರಿಯಾಗಿ ಬಳಕೆ ಆಗ್ತಾ ಇದಿಯಾ ಅನ್ನೋ ಪ್ರಶ್ನೆಗೆ ಉತ್ತರ ಮಾತ್ರ ಸಿಕ್ಕಿಲ್ಲ. ಈ ಹೊತ್ತಲ್ಲೇ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿ ರೈತ ಸಂಪರ್ಕ ವಾಪ್ತಿಯಲ್ಲಿ ಕೃಷಿ ಹೊಂಡ ಕಾಮಗಾರಿಗಳ ಗೋಲ್ ಮಾಲ್ ಸದ್ದು ಜೋರಾಗಿದೆ.

ಒಟ್ನಲ್ಲಿ ರೈತರ ಕಲ್ಯಾಣಕ್ಕಾಗಿ ಸರ್ಕಾರವೇನೋ ಸಾವಿರಾರು ಕೋಟಿ ವ್ಯಯ ಮಾಡುತ್ತಿದೆ. ಅದ್ರೆ ಇಲಾಖೆಗಳ ಮುಖ್ಯಸ್ಥರ ಬೇಜವಾಬ್ದಾರಿತನದಿಂದ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವರೇ ಕಾದು ನೋಡ ಬೇಕಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *