ರೈತರ ಬೆಳೆಗಳು ಮಳೆ ಬಾರದೆ ಒಣಗಿವೆ . ಬರಪೀಡಿತ ಪ್ರದೇಶ ಎಂದು ಸರಕಾರ ಘೋಷಣೆ ಮಾಡಿದೆ ಬೆಳೆ ನಷ್ಟ ಪರಿಹಾರ. ಬೆಳೆವಿಮೆ ಬಿಡುಗಡೆ ಯಾವಾಗ …?

by | 04/10/23 | ಜನಧ್ವನಿ

. ತಳಕು ಹೋಬಳಿ ವ್ಯಾಪ್ತಿಯಲ್ಲಿ ಸಂಪೂರ್ಣ ಒಣಗಿರುವ ಶೇಂಗಾ ಬೆಳೆ
ಚಳ್ಳಕೆರೆ ಜನಧ್ವನಿ ವಾರ್ತೆ ಅ.4. ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡಿದ ಬೆಳೆಗಳು ಮಳೆರಾಯನ ವಕ್ರದೃಷ್ಠಿಗೆ ಸಿಲುಕಿ ಬಿಸಿಲಿನ ತಾಪಕ್ಕೆ ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಮಳೆಕೊರತೆಯಿಂದ ಬೆಳೆಗಳು ಒಣಗಿದ್ದು ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಿದ್ದು ಸರಕಾರ ಬೆಳೆ ನಷ್ಟ ಪರಿಹಾರ. ಬೆಳೆ ವಿಮೆ ಕಟ್ಟಿದ ರೈತರ ಖಾತೆ ಬೆಳೆ ವಿಮೆ ಯಾವಾಗ ನೀಡುತ್ತದೆ ಎಂಬುದು ರೈತರ ಪ್ರಶ್ನೆಯಾಗಿದೆ.

ರಾಜ್ಯದ ದೊರೆ ಮುಖ್ಯಂತ್ರಿ ಸಿದ್ದರಾಮಯ್ಯನವರು ಜಿಲ್ಲೆಯ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರ ಪ್ರಾರಂಭಿಸಿ ನೂರು ವರ್ಷಗಳು ತುಂಬಿದ್ದು ಶತಮಾನೋತ್ಸವ ಸಂಭ್ರಮಕ್ಕೆ ಬರಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಮ್ಮೆ ಗ್ರಾಮೀಣ ಪ್ರದೇಶಗಳಲ್ಲಿ ಸುತ್ತು ಹಾಕಿದರೆ ಬಾಡಿದ ಬೆಳೆಗಳು, ರೈತರ ಸೊರಗಿದ ಮುಖಗಳು ಕಾಣಿಸುತ್ತವೆ. ಹಸಿರಿನಿಂದ ನಳ ನಳಿಸಬೇಕಿದ್ದ ಬಡವರ ಬಾದಾಮಿ ಶೇಂಗಾ.ತೊಗರಿ.ಜೋಳ. ಸೇರಿದಂತೆ ವಿವಿಧ ಬೆಳೆಗಳು ಹೊಲಗಳಲ್ಲಿ ಜೀವಕಳೆ ಇಲ್ಲದಂತಾಗಿದೆ. ಭವಿಷ್ಯದ ಬಗ್ಗೆ ಅನ್ನದಾತರು ಆತಂಕಗೊಂಡಿದ್ದಾರೆ. ಜಿಲ್ಲೆಯನ್ನು ಬರ ಹೇಗೆ ಆವರಿಸಿದೆ ಎನ್ನುವುದಕ್ಕೆ ಇದೊಂದು ಝಲಕ್.

ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಸರ್ಕಾರ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ಆರೂ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದೆ.
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಮಳೆ ಕಣ್ಣಾಮುಚ್ಚಾಲೆ ಆಟವಾಡಿದೆ. ಬೆಳೆಗಳಿಗೆ ಬೇಕಿದ್ದಾಗ ಮಳೆರಾಯ ಸುಳಿಯಲೇ ಇಲ್ಲ. ಬೆಳೆಗಳು ಬೆಳವಣಿಗೆ ಹಂತದಲ್ಲಿದ್ದಾಗಲೇ ಸೊರಗುವಂತಾಯಿತು. ರೈತರಿಗೆ ಆದಾಯ ತಂದುಕೊಡಬೇಕಿದ್ದ ಬೆಳೆಗಳು ಹಾನಿಗೀಡಾಗಿ ಬರದ ಭೀಕರತೆ ಎದುರಿಸುವಂತಾಗಿದೆ.

ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ‌ ಮಳೆರಾಯನ ವಕ್ರದೃಷ್ಟಿಯಿಂದ ಬಾರದ ಮಳೆ ಶೇಂಗಾ ವಿವಿಧ ಬೆಳೆಗಳು ಕಮರಿಹೋಗುತ್ತಿದ್ದು ಈ ಬಾರಿಯೂ ಮಳೆಯಿಲ್ಲದೆ ಮುಂದಿನ ದಿನಗಳು‌ ತೀವ್ರ ಬರಗಾಲಕ್ಕೆ ಸಿಲುಕುವ ಆತಂಕ ರೈತರಲ್ಲಿ ಮನೆ ಮಾಡಿದೆ.
ತಾಲೂಕಿನ ಮುಂಗಾರು ಆರಂಭದಲ್ಲಿ ಅಲ್ಪಸ್ವಲ್ಪ ಮಳೆ ಬಂದು ರೈತಾಪಿ ವರ್ಗ ಸಾಲಾ ಸೂಲ ಮಾಡಿ ದುಬಾರಿ ಬಿತ್ತನೆ ಬೀಜ.ಗೊಬ್ಬರ.ಕೂಲಿ.ಕೃಷಿ ಸೇರಿದಂತೆ ಬೆಳೆ ಬಿತ್ತನೆ ಮಾಡಿ ಉತ್ತಮ ಇಳುವರಿ ಕನಸು ಕಂಡಿದ್ದ ರೈತರಿಗೆ ಮಳೆರಾಯನ ವಕ್ರದೃಷ್ಠಿಯಿಂದ ಶೇಂಗಾ.ತೊಗರಿ.ಸಜ್ಜೆ.ಜೋಳ ಸೇರಿದಂತೆ ವಿವಿಧ ಬೆಳೆಗಳು ಹೂವು.ಕಾಯಿ ಕಟ್ಟುವ ಮುನ್ನವೇ ಬಿಸಿಲಿನ ತಾಪಕ್ಕೆ ಕಮರಿ ಹೋಗುತ್ತಿದ್ದು ಇನ್ನು ಒಂದು ಮಳೆ ಬಾರದಿದ್ದರೆ ಸಂಪೂರ್ಣ ಬೆಳೆಗಳು ನೆಲಕಚ್ಚಲಿದ್ದು ಹಾಕಿದ ಬಂಡವಾಳವೂ ಕೈಸೇರದೆ ಈಗೆ ಒಂದು ತಿಂಗಳು ಮಳೆ ಬಾರದಿದ್ದರೆ ಜನ ಜಸನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿಗಾಗಿ ಪರದಾಡುವ ಸ್ಥಿತಿ ಎದುರಾಗಿ ತೀವ್ರ ಬರದ ಛಾಯೆ ಆವರಿದಲಿದೆ.


ಒಂದು ತಿಂಗಳಿನಿಂದ ಮೋಡ ಕವಿದ ವಾತಾವರಣ ಇದ್ದರೂ ಒಮ್ಮೆಯೂ
ಹದ ಮಳೆ ಬಿದ್ದಿಲ್ಲ. ಆಗೊಮ್ಮೆ ಈಗೊಮ್ಮೆ ಕೆಲವು ಕಡೆ ಮಳೆ
ಎಂದರೆ ಮತ್ತೊಂದು ಕಡೆ ಮಳೆ ಬಾರದೆ ಮುಗಿಲಿನತ್ತ ನೋಡುತ್ತ ರೈತ,
ಎಲ್ಲಿ ಓಡುವಿರಿ ನಿಲ್ಲಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ ಹೋಗಿ‌ ಎಂದು ಪ್ರಾರ್ಥನೆ ಮಾಡಿದರೂ ಮಳೆರಾಯ ಕರುಣೆ ತೋರಿಸುತ್ತಿಲ್ಲ.ಬಯಲು ಸೀಮೆಯ ರೈತರು ಸುಮಾರು ಕಳೆದ ಹದಿನೈದು ವರ್ಷಗಳಿಂದ ಸಕಾಲಕ್ಕೆ ಮಳೆ ಬೆಳೆಯಾಗದೇ ಅತಿವೃಷ್ಟಿ-ಅನಾವೃಷ್ಟಿಗೆ ಸಿಲುಕಿ ನಷ್ಟ ಅನುಭವಿಸು
ತ್ತಲೇ ಇದ್ದಾರೆ. ಬೆಳೆ ಬಾರದೆ ಇದಕ್ಕೆ ಸಂಬಂಧಿಸಿದ ವಿಮೆ ಸಹ ಬರದೇ ಸಾಲಗಾರರಾಗುತ್ತಲೇ ಇದ್ದಾರೆ. ಈ ಹಿಂದೆ ಮಾಡಿರುವ ಸಾಲ ಒಂದು ಕಡೆಯಾದರೆ ಈಗ ಮತ್ತೆ ಮತ್ತೆ ಸಾಲ ಮಾಡಬೇಕಾದ ಸನ್ನಿವೇಶ ಎದುರಾಗು ತ್ತಲೇ ಇವೆ. ಪ್ರತಿ ವರ್ಷದಂತೆ ಈ ಬಾರಿಯೂ ಈರುಳ್ಳಿ, ಶೇಂಗಾ,ತೊಗರಿ,ಸಜ್ಜೆ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದು,ಮಳೆ ಕೈಕೊಟ್ಟ ಕಾರಣ ಋಷ್ಠಿ ಭೂ ಪ್ರದೇಶಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ ಹೊಲಗಳಲ್ಲಿ ಶೇಂಗಾ ಒಣಗಿರುವ ದೃಶ್ಯ ಕಂಡುಬರುತ್ತದೆ. ನೀರಾವರಿ ಇರುವ ಪ್ರದೇಶಗಳನ್ನು ಹೊರತುಪಡಿಸಿದರೆ ಮಿಕ್ಕಂತೆ ರೈತರಿಗೆ ಈಬಾರಿಯೂ ಭರದ ಛಾಯೆ ಇದ್ದು ರೈತರಲ್ಲಿ ಆತಂಕವನ್ನುಂಟು ಮಾಡಿದೆ.

. ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಜಮಧ್ವನಿ ಡಿಜಿಟಲ್ ಮೀಡಿಯಾದೊಂದಿಗೆಮಾತನಾಡಿ, ಬೆಳೆ ಹಾನಿ ಕುರಿತು ಕಂದಾಯ, ಕೃಷಿ ಮತ್ತು ವಿಮಾ ಕಂಪ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿರುವ ಪದ್ಧತಿ ಅವೈಜ್ಞಾನಿಕವಾಗಿದ್ದು ಕಳೆದವರ್ಷ ಬಿತ್ತನೆ ಮಾಡಿದ ಶೇಂಗಾ ಬೆಳೆ ನಷ್ಟ ವಾದರೂ ಬೆಳೆ ವಿಮೆ ಪಾವತಿಮಾಡಿಲ್ಲ. ಈ ಬಾರಿಯೂ ಮಳೆಯಿಲ್ಲದೆ ಬೆಳೆಗಳು ಒಣಗಿ ನೆಲಕಚ್ಚಿವೆ. ತಾಲೂಕಿನ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾವುದೋ‌ ಒಂದು ಮೂಲೆಯಲ್ಲಿ ಉತ್ತಮ ಫಸಲು ಇರುವ ಭೂಮಿಯನ್ನು ಆಯ್ಕೆಮಾಡಿಕೊಂಡು ವಿಮೆ ಮಂಜೂರಾತಿಗಾಗಿ ಕಳಿಸುವುದನ್ನು ಬಿಟ್ಟುಗ್ರಾ.ಪಂ. ವ್ಯಾಪ್ತಿಯ ಎಲ್ಲಭೂಮಿಗಳಲ್ಲೂ ಬೆಳೆವಿಮೆ ಕಂಪನಿ ಹಾಗೂ ಇಲಾಖೆ ಅಧಿಕಾರಿಗಳುನಡೆಸುತ್ತಿರುವ ರೈತ ವಿರೋಧಿ, ಅವೈಜ್ಞಾನಿಕ ಪದ್ಧತಿಕೂಡಲೇ ಕೈಬಿಟ್ಟು ಮಳೆ ಕೈಕೊಟ್ಟಿರುವ ಪೂರ್ಣ ಪ್ರದೇಶವನ್ನು ವಿಮೆಗೂಳ ಪಡಿಸಬೇಕೆಂದು ಸರಕಾರಗಳನ್ನು ಒತ್ತಾಯಿಸಿದ್ದಾರ.


ಜಿಲ್ಲೆಯಲ್ಲಿ ಮಳೆಯ ಅಭಾವ ಉಂಟಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಇತ್ತ ಅಷ್ಟೊ, ಇಷ್ಟೋ ಬಿತ್ತನೆಯಾದ ಬೆಳೆಗಳು ಮಳೆಯಿಲ್ಲದೆ ಸೊರಗುತ್ತಿವೆ. ಮತ್ತೊಂದೆಡೆ ಸರ್ಕಾರ ಮಳೆ ಇಲ್ಲದಿರುವ ಪ್ರದೇಶಗಳನ್ನು ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಿದೆ.
strong>
ಕುಡಿಯು ನೀರು ಮೇವಿನ ಕೊರತೆ.
ಈಗೆ ಇನ್ನು ಒಂದು ತಿಂಗಳು ಮಳೆ ಕೈಕೊಟ್ಟರೆ ಅಂತರ್ಜಲ. ಮಟ್ಟ ಪಾತಾಳಕ್ಕೆ ಕುಸಿದು ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ .
2018-19 ನೇ ಸಾಲಿನಲ್ಲಿಯೂ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಘೋಷಣೆ ಮಾಡಿತ್ತು . ಅದೇ ರೀತಿ 2022-23 ನೇ ಸಾಲಿನಲ್ಲಿಯೂ ಬರಪೀಡಿತ ಪ್ರದೇಶಗಳು ಎಂದು ಹಣೆ ಪಟ್ಟಿಕೊಂಡಿರುವ ತಾಲೂಕುಗಳನ್ನು ಈಗಾಗಲೇ ಸರಕಾರ ಬರಪೀಡಿತ ಹಾಗೂ ರಾಜ್ಯದ ಅತೀ ಕಡಿಮೆ ಮಳೆ ಬೀಳುವ ಪ್ರದೇಶಗಳು ಎಂದು ಘೋಷಣೆ ಮಾಡಿದೆ. ರೈತರು ಬಿತ್ತನೆ ಮಾಡಿದ ಬೆಳೆಗಳು ಒಣಗಿಹೋಗಿದ್ದು ರೈತರಿಗೆ ಅಪಾರ ನಷ್ಣವಾಗಿದೆ. ಈಗಲಾದರೂ ಸರಕಾರ ಬೆಳೆ ನಷ್ಟ ಪರಿಹಾರ ಹಾಗೂ ರೈತರು ಕಟ್ಟಿದ ಬೆಳೆವಿಮೆಯನ್ನು ರೈತರ. ಖಾತೆಗೆ ಹಾಕುವರೇ ಕಾದು ನೋಡ ಬೇಕಿದೆ.

<

Latest News >>

ಸಮಾಜದ ಸಮಗ್ರ ಬೆಳವಣಿಗೆಗೆ ಶಿಕ್ಷಣ ವಲಯ ಅಭಿವೃದ್ಧಿ ಆಗಬೇಕಾಗಿದೆ ಶಾಸಕ ಎನ್ ವೈ ಗೋಪಾಲಕೃಷ್ಣ.

ನಾಯಕನಹಟ್ಟಿ:: ಮೇ.23. ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದ್ದಾರೆ....

ತಾಲ್ಲೂಕಿನ ಶುಭೋದಯ ಸೇವಾವೃದ್ದಾಶ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಎಲ್.ಮೂರ್ತಿ ರವರ ಹುಟ್ಟುಹಬ್ಬಆಚರಣೆ: ಮುಖ್ಯಸ್ಥ ತೇಜೋಮೂರ್ತಿ

ಹಿರಿಯೂರು: ಅಭಿಮತ ಪತ್ರಿಕೆಯ ಸಂಪಾದಕರು ಹಾಗೂ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಎಸ್.ಸಿ.ಸೆಲ್. ಘಟಕ ಅಧ್ಯಕ್ಷರಾದ ಜಿ.ಎಲ್.ಮೂರ್ತಿ...

ಮೌಡ್ಯಗಳಿಂದ ಹೊರಬಂದು ಬುದ್ಧನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ:ಪ್ರೊ.ಸಿಕೆ ಮಹೇಶ್ವರಪ್ಪ ಅಭಿಮತ 

ಚಳ್ಳಕೆರೆ: ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಶಾತವಾಹನ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ವಿಜಯ ಸಂಕಲ್ಪ ದಿನಪತ್ರಿಕೆ ವತಿಯಿಂದ ಬುದ್ಧ...

ವಾಣಿವಿಲಾಸಸಾಗರ ಜಲಾಶಯಕ್ಕೆ ತಗ್ಗಿದ ಒಳಹರಿವು ಮುಂಗಾರು ಮಳೆಯಿಂದಾಗಿ 1.65ಅಡಿ ನೀರು ಸಂಗ್ರಹ

ಹಿರಿಯೂರು : ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ಪೂರ್ವ ಮುಂಗಾರು ಮಳೆಯಿಂದಾಗಿ 1.65 ಅಡಿ ನೀರು ಸಂಗ್ರಹವಾಗಿದೆ. ಇದರಿಂದ ಪ್ರಸ್ತುತ...

ಸಡಗರ ಸಂಭ್ರಮದಿಂದ ಜರುಗಿದ ಶ್ರೀವೀರಭದ್ರಸ್ವಾಮಿ ರಥೋತ್ಸವ..

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 22 ನಗರದ ಜನತೆಯ ಆರಾದ್ಯದೈವ ಶ್ರೀ ವೀರಭದ್ರಸ್ವಾಮಿ ರಥೋತ್ಸವವು ಶ್ರದ್ಧೆ ಭಕ್ತಿ ಸಂಭ್ರಮದಿAದ ಬುಧವಾರ...

ವಾಣಿವಿಲಾಸ ಸಾಗರಕ್ಕೆ ಈ ಮಳೆಯಲ್ಲಿ 3800ಕ್ಯೂಸೆಕ್ ನೀರಿನ ಒಳಹರಿವು ರೈತರ ಮೊಗದಲ್ಲಿ ಸಂತಸ ತಂದಿದೆ

ಹಿರಿಯೂರು: ಈ ಬಾರಿ ಸುರಿದ ಮಳೆಯಿಂದಾಗಿ ಕಡೂರು, ಬೀರೂರು, ಹೊಸದುರ್ಗ ಸೇರಿದಂತೆ ವೇದಾವತಿ ಜಲಾನಯನ ಪ್ರದೇಶದಾದ್ಯಂತ ಸುರಿಯುತ್ತಿರುವ...

ಮಾಡಿದಷ್ಟು ನೀಡು ಬಿಕ್ಷೆ ಕಾಯಕಯೋಗಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಕಟ್ಟಿಸಿದ ಚಿಕ್ಕ ಕೆರೆ- 18 ವರ್ಷಗಳ ನಂತರ ಕೆರೆಗೆ ನೀರು ಈ ಭಾಗರದ ಜನರಲ್ಲಿ ಮಂದಹಾಸ ಮೂಡಿಸಿದ ವರುಣ..

ನಾಯಕನಹಟ್ಟಿ ಮೇ 22 ಸುಮಾರು ವರ್ಷಗಳಿಂದ ನೀರು ಕಾಣದ ಕೆರೆಗೆ ನೀರು ಬರುತ್ತಿರುವ ದೃಶ್ಯ ಕಂಡು ಗ್ರಾಮದ ಜನರಲ್ಲಿ ಮಂದಹಾಸ ಮೂಡುವಂತೆ ಮಾಡಿದೆ....

ವಿಶ್ವಕರ್ಮ ಸಮುದಾಯದ ವತಿಯಿಂದ ಪಟ್ಟಣದ ಶ್ರೀ ಕಾಳಿಕಾದೇವಿ ಪಲ್ಲಕ್ಕಿ ಉತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು.

ನಾಯಕನಹಟ್ಟಿ:: ಶ್ರೀ ಕಾಳಿಕಾದೇವಿ ಏಳನೇ ವರ್ಷದ ವಾರ್ಷಿಕ ಸಮಾರಂಭದ ಪಲ್ಲಕ್ಕಿ ಉತ್ಸವ ಸಂಭ್ರಮ ಸಡಗರದಿಂದ ಜರುಗಿದೆ ಎಂದು ಕಾರ್ಯದರ್ಶಿ...

ಚಿತ್ರದುರ್ಗ ಜಿಲ್ಲೆಯಲ್ಲಿ ವಿಧಾನ ಪರಿಷತ್ ಸ್ಥಾನ ಗಳಿಸುವ ಕಾಂಗ್ರೆಸ್ ಪಕ್ಷದ ಕನಸು ಭಗ್ನವಾಗಲಿದೆ ಶಿಕ್ಷಕ ಮತದಾರರು ನಾಲ್ಕನೇ ಬಾರಿಗೆ ಬೆಂಬಲಿಸಲಿದ್ದಾರೆ: ವೈಎ ನಾರಾಯಣಸ್ವಾಮಿ ವಿಶ್ವಾಸ 

ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಇದುವರೆಗೂ ವಿಧಾನ ಪರಿಷತ್ ಸ್ಥಾನದ ಗೆಲುವಿನ ಬಾಗಿಲು ತೆಗೆಯುವಲ್ಲಿ ವಿಫಲವಾಗಿದೆ ಈ...

ಮೇ 22 ರ ಬುಧವಾರ ಮಧ್ಯಾಹ್ನ 3.30ಕ್ಕೆ ಮುಕ್ತಿ ಬಾವುಟ ಹರಾಜು ನಂತರ ಶ್ರೀವೀರಭದ್ರಸ್ವಾಮಿ ದೊಡ್ಡ ರಥೋತ್ಸವ ಜರುಗಲಿದೆ.

ಚಳ್ಳಕೆರೆ ಮೇ 20ಚಳ್ಳಕೆರೆ ನಗರದ ಆರಾಧ್ಯ ದೈವ ವೀರಭದ್ರಸ್ವಾಮಿ ದೊಡ್ಡ ರಥೋತ್ಸವ ಮೇ 22 ರಂದು ಬುಧವಾರ ಮಧ್ಯಾಹ್ನ 3.30ಕ್ಕೆ ಮುಕ್ತಿ ಬಾವುಟ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page