ಚಳ್ಳಕೆರೆ ಅ13.ರಾಷ್ಟ್ರ ಹೆದ್ದಾರಿ ಪಕ್ಕದಲ್ಲಿರುವ ಗ್ರಾಮಗಳ ಬಸ್ ನಿಲ್ದಾಣಗಳಿಗೆ ಸಾರಿಗೆ ಬಸ್‌ಗಳು ಬರದಿದ್ದಕ್ಕೆ ತಳಕು ಗರಣಿ ಕ್ರಾಸ್ ಬಳಿ ರಾಷ್ಟಿçÃಯ ಹೆದ್ದಾರಿ ತಡೆದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದ್ದಾರೆ.
ಸರ್ಕಾರಿ ಸಾರಿಗೆ ಬಸ್‌ಗಳು ಸೇರಿ ವಿವಿಧ ನಿಗಮಗಳ ಬಸ್‌ಗಳು ಬಳ್ಳಾರಿಯಿಂದ ಬೆಂಗಳೂರಿಗೆ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ರಾಷ್ಟಿçÃಯ ಹೆದ್ದಾರಿಯಲ್ಲಿ ಸಂಚರಿಸುತ್ತವೆ. ಆದರೆ ಹೆದ್ದಾರಿ ಪಕ್ಕದಲ್ಲಿರುವ ತಳಕು, ಹಿರೇಹಳ್ಳಿ, ಬಿಜೆಕೆರೆ, ಹಾನಗಲ್ ಗ್ರಾಮದ ಬಸ್ ನಿಲ್ದಾಣಗಳಿಗೆ ಬರದೆ ನೇರವಾಗಿ ರಾಷ್ಟಿçÃಯ ಹೆದ್ದಾರಿಯಲ್ಲಿ ಮೇಲೆ ಸಂಚಾರ ನಡೆಸುತ್ತವೆ. ಇನ್ನು ಈ ಗ್ರಾಮಗಳಿಗೆ ಬರುವ ಪ್ರಯಾಣಿಕರನ್ನು ಬಸ್ ನಿಲ್ದಾಣಗಳಿಗೆ ಬಂದು ಇಳಿಸದೆ, ರಾಷ್ಟಿçÃಯ ಹೆದ್ದಾರಿಯ ಬೈಪಾಸ್ ಮೇಲೆ ಇಳಿಸಿ ಹೋಗುತ್ತಾರೆ ಎಂದು ರೈತ ಮುಖಂಡರು ಆರೋಪಿಸಿದರು.
ರಾತ್ರಿ ವೇಳೆಯಲ್ಲಿ ಸಂಚಾರ ನಡೆಸುವ ಸಾರಿಗೆ ಬಸ್‌ಗಳು ಗ್ರಾಮಗಳ ಬಸ್ ನಿಲ್ದಾಣಗಳು ೧ ರಿಂದ ೨ ಕಿ.ಲೋ ಮೀಟರ್ ದೂರವಿರುವ ರಾಷ್ಟಿçÃಯ ಹೆದ್ದಾರಿ ಮೇಲೆ ಪ್ರಯಾಣಿಕರನ್ನು ಇಳಿಸಿ ಹೋಗುತ್ತಾರೆ. ಪ್ರಯಾಣಿಕರಿಗೆ ಹೆದ್ದಾರಿಯಲ್ಲಿ ಅಪಾಯವಾದರೆ ಯಾರು ಹೊಣೆ..? ಚಳ್ಳಕೆರೆ ಸಾರಿಗೆ ಬಸ್ ನಿಲ್ದಾಣದಲ್ಲಿ ತಳಕು ಗ್ರಾಮಕ್ಕೆ ಹೋಬೇಕೆಂದು ಪ್ರಯಾಣಿಕರು ಸಾರಿಗೆ ಬಸ್ ಹತ್ತಿದರೆ ಹೋಗಲ್ಲಂತ ಕೆಳಗೆ ಇಳಿಸುತ್ತಾರೆ ಎಂದು ಸಾರಿಗೆ ಜಿಲ್ಲಾಧಿಕಾರಿ ನಿರಂಜನ್ ಮುಂದೆ ರೈತ ಸಂಘದ ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸಾರಿಗೆ ಬಸ್‌ಗಳಲ್ಲಿ ಪಾಸವುಳ್ಳ ವಿಕಲಚೇತನರಿಗೆ ೧೦೦ ಕಿ.ಮಿ. ಸಂಚರಿಸುವ ಅನುಮತಿ ಇದ್ದರು, ಸಾರಿಗೆ ಬಸ್ ನಿರ್ವಾಹಕರು ಸಾರಿಗೆ ಬಸ್ ಹತ್ತಿಸಿಕೊಳ್ಳದೆ ಸಮಂಜಸವಲ್ಲದ ಮಾತುಗಳಾಡಿ ಬಸ್‌ನಿಂದ ಕೆಳಗೆ ಇಳಸಿ ಹೋಗುತ್ತಾರೆ ಎಂದು ಪ್ರತಿಭಟನಕಾರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಪ್ರತಿಭಟನಕಾರರು ಸಾರಿಗೆ ಜಿಲ್ಲಾ ವ್ಯವಸ್ಥಾಪಕ ನಿರಂಜನ್ ಗೆ ಮನವಿ ಸಲ್ಲಿಸಿದರು. ತಳಕು ಪಿಎಸ್ ಐ ಲೋಕೇಶ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ರಾಜ್ಯ ಸಂಚಾಲಕ ನಾಗಭೂಷಣ, ರೈತ ಮುಖಂಡರಾದ ಕೋನಸಾಗರ ಮಂಜುನಾಥ, ವೀರಣ್ಣ, ನಿಂಗಣ್ಣ, ಚಂದ್ರಶೇಖರ್, ಕೃಷ್ಣ ಮೂರ್ತಿ ಸೇರಿದಂತೆ ಮುಂತಾದವರು ಇದ್ದರು.
0 Comments