ಚಳ್ಳಕೆರೆ ಸೆ.29 ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಲು ಮುಂದಾಗಿರುವುದನ್ನು ವಿರೋಧಿಸಿ ನಗರದ ತಾಲ್ಲೂಕು ಕಚೇರಿ ಬಳಿ ವಸುಂಧರ ಶಿಕ್ಷಣ ಸಾಂಕೃತಿಕ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ಪದಾಧಿಕಾರಿಗಳು ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ಸಾಮಾಜಿಕ ಹೋರಾಟಗಾರ ಹೆಚ್.ಎಸ್. ಸೈಯದ್ ಮಾತನಾಡಿ ಮಳೆಯಿಲ್ಲದ ಬರಗಾಲದ ಪರಿಸ್ಥಿತಿಯಲ್ಲಿ ನಾಡಿನ ಬೃಹತ್ ನಗರಗಳು ಕುಡಿಯುವ ನೀರಿಗೆ ಮತ್ತು ರೈತರ ಕೃಷಿ ಚಟುವಟಿಕೆಗಳಿಗೆ ಅವಲಂಬಿಸಿರುವ ಕಾವೇರಿ ನದಿ ನೀರನ್ನು ಅವೈಜ್ಞಾನಿಕವಾಗಿ ತಮಿಳು ನಾಡಿಗೆ ಹರಿಸುತ್ತಿರುವುದು ಖಂಡನೀಯ ಎಂದರು.
ತುರ್ತಾಗಿ ವಿಧಾನಸಭೆಯ ವಿಶೇಷ ಸಭೆ ನಡೆಸಿ, ಕಾವೇರಿ ನದಿ ನೀರನ್ನು ಕಾಪಾಡಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ತಮಿಳು ನಾಡಿನ ರಾಜಕೀಯ ಪ್ರಭಾವ ಕೇಂದ್ರ ಸರ್ಕಾರದ ಮೇಲೆ ಹಿಡಿತ ಸಾಧಿಸುತ್ತಿದೆ. ಕಾವೇರಿ ನದಿ ಸಂರಕ್ಷಣಾ ವಿಚಾರದಲ್ಲಿ ರಾಜಕೀಯ ಧೋರಣೆ ಅನುಸರಿಸದೆ ಎಲ್ಲಾ ರಾಜಕೀಯ ಪಕ್ಷಗಳು ಏಕಪಕ್ಷೀಯ ನಿರ್ಧಾರಕ್ಕೆ ಬದ್ದವಾಗಬೇಕು ಎಂದು ಆಗ್ರಹಿಸಿದರು.
ಈ ವೇಳೆ ವಸುಂಧರ ಶಿಕ್ಷಣ ಸಾಂಕೃತಿಕ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ಅಧ್ಯಕ್ಷ ಜೆ.ತಿಪ್ಪೇಸ್ವಾಮಿ ಕರ‍್ಲಕುಂಟೆ, ಗೌರವಾಧ್ಯಕ್ಷ ಲಂಕಪ್ಪ, ಖಜಾಂಚಿ ಮಂಜುನಾಥ, ಕಾರ್ಯದರ್ಶಿ ಉಜ್ಜಿನಪ್ಪ ಸೇರಿದಂತೆ ಮುಂತಾದವರು ಇದ್ದರು.

0 Comments