ರಾಜ್ಯದಲ್ಲಿ ಬದಲಾವಣೆ ಪರ್ವ ಆರಂಭವಾಗಿದ್ದು, ಅನೇಕರು ಅನ್ಯ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ ಶಾಸಕ ಟಿ.ರಘುಮೂರ್ತಿ .
by ಗೋಪನಹಳ್ಳಿಶಿವಣ್ಣ | 19/02/23 | ರಾಜಕೀಯ
ಚಳ್ಳಕೆರೆ ಫೆ.19 ರಾಜ್ಯದಲ್ಲಿ ಬದಲಾವಣೆ ಪರ್ವ ಆರಂಭವಾಗಿದ್ದು, ಅನೇಕರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಚಳ್ಳಕೆರೆ ನಗರದ ವಿವಿಧ ವಾರ್ಡ್ ಹಾಗೂ ಲಕ್ಷ್ಮೀಪುರ ಗ್ರಾಮದ ವಿವಿಧ ಪಕ್ಷದ ಕಾರ್ಯಕರ್ತರು.ಯುವಕರನ್ನು ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯ ಸರಕಾರ ಬಜೆಟ್ ವಿರುದ್ದ ರೈತರು. ಸರಕಾರಿ ನೌಕರರು ಅಸಂಘಟಿತ ಕಾರ್ಮಿಕರು ಸರಕಾರದ ವಿರುದ್ದ ಅಕ್ರೋಶ ವ್ಯಕ್ತ ಪಡಿಸುತ್ತಿದ್ದು ಅನ್ಯ ಪಕ್ಷದ ನಾಯಕರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ.ನಾವು ಅವರಿಗೆ ಶಕ್ತಿ ನೀಡಿ, ಅವರನ್ನು ಪಕ್ಷಕ್ಕೆ ಸ್ವಾಗತ ಮಾಡುತ್ತೇನೆ. ನಮ್ಮಲ್ಲಿ ಹೊಸಬರು, ಹಳಬರು ಎಂಬ ಬೇಧವಿಲ್ಲ. ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದು ಶಾಸಕ ಟಿ.ರಘುಮೂರ್ತಿ ಭವಿಷ್ಯ ನುಡಿದರು.

ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕ ಟಿ ರಘುಮೂರ್ತಿ ರವರ ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚಿ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ಒಪ್ಪಿ ಕಾಟಪ್ಪನ ಹಟ್ಟಿ ನರಹರಿನಗರ ಮದಕರಿ ನಗರ ಮತ್ತು ಲಕ್ಷ್ಮಿಪುರ ವ್ಯಾಪ್ತಿಯ ಯುವ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು ಉಪಸ್ಥಿತಿ

ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಭದ್ರಯ್ಯ ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್. ಕೆಪಿಸಿಸಿ ಉಪಾಧ್ಯಕ್ಷ ದೊಡ್ಡ ರಂಗಪ್ಪ ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ .ನಗರಸಭಾ ಸದಸ್ಯ ರಮೇಶ್ ಗೌಡ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಾಬುರೆಡ್ಡಿ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್. ಕಿಸಾನ್ ಸೆಲ್ ಅಧ್ಯಕ್ಷ ನಾಗರಾಜ್ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ್ . ಬದ್ರಿ ಇತರರಿದ್ದರು

0 Comments