ರಕ್ಬಷಣಾ ಕವಚಗಳಿಲ್ಲದೆ ಬರಿಗೈಲಿ ಸ್ವಚ್ಚತೆ ಮಾಡುತ್ತಿರುವ ಪೌರಕಾರ್ಮಿಕರು .ಕಂಡು ಕಾಣದಂತಿರುವ ಅಧಿಕಾರಿಗಳು.

by | 14/09/23 | ಆರೋಗ್ಯ


ಚಳ್ಳಕೆರೆ ಸೆ.14. ಸ್ವಚ್ಛತೆ ಮಾಡುವ ಮೂಲಕ ಸಮಾಜದಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸಲು ಶ್ರಮಿಸುತ್ತಿರುವ ಪೌರ ಕಾರ್ಮಿಕರು ಮೂಗು ಮುಚ್ಚಿಕೊಂಡು ಕರ್ತವ್ಯ ನಿರ್ವಹಿಸಬೇಕಿದೆ. ಹೌದು ಇದು ಚಳ್ಳಕೆರೆ ನಗರದ ಮುಖ್ಯ ರಸ್ತೆ.ಚರಂಡಿಗಳನ್ನು ಬೆಳ್ಳಂ ಬೆಳಗ್ಗೆ ಮಬ್ಬು ಗತ್ತಲಿನಲ್ಲಿ ಚಳಿ ಲೆಕ್ಕಿಸದೆ ಪೌರಕಾರ್ಮಿಕರು ಬರಿಗೈಲಿ ಸ್ವಚ್ಚತೆ ಮಾಡುತ್ತಿರುವುದು ಕಂಡು ಬಂದಿದೆ. ಸುರಕ್ಷಾ ಕವಚ ಧರಿಸಿ ಹಾಗೂ ಹಾಗೂ ರಕ್ಷಣಾ ಸಾಮಗ್ರಿಗಳನ್ನು ಬಳಸಿಯೇ ಸ್ವಚ್ಛತಾ ಕಾರ್ಯ ಮಾಡಬೇಕೆಂದು ಸರಕಾರ ನಿಯಮ ರೂಪಿಸಿದ್ದರೂ, ಇದಕ್ಕು ನಮಗೂ ಸಂಬಂಧವಿಲ್ಲ ಎಂಬಂತೆ ನಗರಸಭೆ ಅಧಿಕಾರಿಗಳು ಪೌರಕಾರ್ಮಿಕರು ಮುಂಜಾಗ್ರತ ಕ್ರಮ ಕೈಗೊಳ್ಳದೆ ಬರಿಗೈನಿಂದಲೇ ಚರಂಡಿ ಸ್ವಚ್ಛತಾ ಕಾರ್ಯತದಲ್ಲಿ ತೊಡಗಿದ್ದಾರೆ. ಈ ಬೆಳವಣಿಯಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದಲ್ಲದೇ, ಪ್ರಾಣಕ್ಕೂ ಕುತ್ತು ಬರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಇದೆ ಎಂದು ಸಾರ್ವಜನಿಕರು ದೂರಿದ್ದಾರೆ.

ತುಂಬಿ ತುಳುಕುತ್ತಿರುವ ಚರಂಡಿ, ಮೂಗಿಗೆ ರಾಚುವ ದುರ್ನಾತ. ಇದರ ಅಕ್ಕಪಕ್ಕದಲ್ಲಿ ಓಡಾಡುವ ಸಾರ್ವಜನಿಕರು ಮೂಗಿಗೆ ಕರ್ಚಿಪ್ ಮುಚ್ಚಿಕೊಂಡು ಅಸಹ್ಯಪಡುತ್ತಾ ಸಂಚರಿಸುವ ದುಸ್ಥಿತಿ. ಕನಿಷ್ಠ ಚರಂಡಿ ನೋಡಲು ಅಸಹ್ಯಪಡುತ್ತೇವೆ. ಆದರೆ ಪೌರಕಾರ್ಮಿಕರು ಮಾತ್ರ ಎಲ್ಲ ನೋವನ್ನು ಮನಸ್ಸಿನಲ್ಲಿಯೇ ಬಚ್ಚಿಟ್ಟುಕೊಂಡು ತಮ್ಮ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಪೌರ ಕಾರ್ಮಿಕರ ಆರೋಗ್ಯ ಹಾಗೂ ಪ್ರಾಣ ರಕ್ಷಣೆಗಾಗಿ ನಗರದ ಸ್ವಚ್ಛತೆಯ ಮಹತ್ತರ ಜವಾಬ್ದಾರಿ ಹೊತ್ತಿರುವ ಪೌರಕಾರ್ಮಿಕರಿಗೆ ಸುರಕ್ಷಾ ಕವಚ ನೀಡುವರೇ ಕಾದು ನೋಡ ಬೇಕಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *