ರಂಗಭೂಮಿ

ರಂಗಮಾಧ್ಯಮ ಹಲವು ಕಲೆಗಳ ಸಮ್ಮಿಶ್ರಣವಾದ ಒಂದು ಪರಿಣಾಮಕಾರಿ ಮಾಧ್ಯಮವಾಗಿದೆ: ಡಾ.ವಿ.ಬಸವರಾಜ್


ಹಿರಿಯೂರು :
ರಂಗಮಾಧ್ಯಮ ಹಲವು ಕಲೆಗಳ ಸಮ್ಮಿಶ್ರಮಣವಾದ ಒಂದು ಪರಿಣಾಮಕಾರಿ ಮಾಧ್ಯಮವಾಗಿದೆ.ಇಂತಹ ಕಲೆಯನ್ನು ಶಿಕ್ಷಕರು ಕರಗತ ಮಾಡಿಕೊಂಡರೆ ಮಕ್ಕಳಿಗೆ ಪರಿಣಾಮಕಾರಿಯಾಗಿ ಬೋಧಿಸಲು ಸಾಧ್ಯವಾಗುತ್ತದೆ ಎಂಬುದಾಗಿ ಡಾ.ವಿ.ಬಸವರಾಜ್ ಅವರು ತಿಳಿಸಿದರು.
ನಗರದ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಶಿಕ್ಷಣದಲ್ಲಿ ರಂಗಕಲೆ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಹನ ಕೌಶಲ ಹಾಗೂ ನಟನಾ ಕೌಶಲವನ್ನು ಶಿಕ್ಷಕರು ತಮ್ಮ ಬೋಧನೆಯಲ್ಲಿ ಬಳಸಿಕೊಂಡಾಗ ಭೋಧನೆ ಪರಿಣಾಮಕಾರಿಯಾಗಲು ಸಾಧ್ಯವಾಗುತ್ತದೆ. ಪ್ರಶಿಕ್ಷಣಾರ್ಥಿಗಳು ರಂಗಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ಸಾಹಿತ್ಯಿಕ ಅಭಿರುಚಿಯನ್ನ ಸಾಂಸ್ಕೃತಿಕ ಮೌಲ್ಯಗಳನ್ನು ಹೊಂದಲು ಸಹಾಯವಾಗುತ್ತದೆ ಎಂದರಲ್ಲದೆ,
ವಿಷಾದದ ಸಂಗತಿ ಎಂದರೆ ಈ ವಿಶಿಷ್ಟ ಪುರಾತನ ಕಲೆಗಳಿಂದ ವಿದ್ಯಾರ್ಥಿಗಳು ಯುವಕರು ವಿಮುಖರಾಗುತ್ತಿರುವುದು ಬೇಸರದ ಸಂಗತಿ, ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಮಾನವನನ್ನು ನಿಜಮಾನವನ್ನಾಗಿಸುವಿಕೆಯಲ್ಲಿ ಸಮಾಜವನ್ನು ಪರಿವರ್ತಿಸುವಲ್ಲಿ ನಾಟಕಗಳು ಯಶಸ್ವಿ ಪಾತ್ರ ವಹಿಸುವ ಸಾಮಾಜಿಕ ಮಾಧ್ಯಮಗಳಾಗಿವೆ ಎಂಬುದಾಗಿ ಅವರು ತಿಳಿಸಿದರು.
ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾದ ರಂಗಕರ್ಮಿ ಕೆ.ಪಿ.ಎಂ. ಗಣೇಶಯ್ಯ ಅವರು ಮಾತನಾಡಿ, ರಂಗಭೂಮಿಯ ಆಳ ಅರಿವುಗಳ ಬಗ್ಗೆ ತಿಳಿಸುತ್ತಾ, ಅಲ್ಲಿನ ನವರಸಗಳನ್ನು ತಿಳಿಸಿಕೊಟ್ಟರು. ಶಿಕ್ಷಕರಿಗೆ ಆಂಗಿಕ ಭಾವಗಳೊಂದಿಗಿನ ವಾಕ್ಚಾತುರ್ಯದಂತಹ ಮುಂತಾದ ಅಭಿನಯದ ರೂಪಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಡಾ.ಅವಿನಾಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಚ್.ರವಿಕುಮಾರ್, ಅರುಣಾ ಕುಮಾರಿ, ನಾಗೇಶ್, ಜೆ.ಆರ್. ಮಾರುತೇಶ್, ನಿಂಗರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಆರಂಭದಲ್ಲಿ ಪ್ರಶಿಕ್ಷಣಾರ್ಥಿ ವಿ.ರಂಗಸ್ವಾಮಿ ಸ್ವಾಗತಿಸಿದರು. ನಿಂಗರಾಜ್ ಪಿ.ಕೂಡಲಸಂಗಮ ಕಾರ್ಯಕ್ರಮವನ್ನು ನಿರೂಪಿಸಿದರು.

ಜಿಲ್ಲಾ ಮಟ್ಟದ ಮಕ್ಕಳ ಹಬ್ಬ ಚಿಣ್ಣರ ಪ್ರತಿಭೆಯ ಅನಾವರಣ : ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ


ಚಿತ್ರದುರ್ಗ ಫೆ.28:
ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ, ಶಾಲಾ ಶಿಕ್ಷಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ತರಾಸು ರಂಗಮದಿರದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಮಕ್ಕಳ ಹಬ್ಬ, ಚಿಣ್ಣರ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಯಿತು.
ವೀರಗಾಸೆ, ಕಂಸಾಳೆ, ಕೋಲಾಟ, ಜಾನಪದ ಹಾಗೂ ಚಿತ್ರಗೀತೆಗಳಿಗೆ ನೃತ್ಯ, ನಾಟಕ ಸೇರಿದಂತೆ ಮಕ್ಕಳಿಂದ ಮೂಡಿಬಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನ ರಂಜಿಸಿದವು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕಿ ಭಾರತಿ ಆರ್ ಬಣಕಾರ್ ಮಾತನಾಡಿ, ರಾಜ್ಯ ಸರ್ಕಾರ 2009 ರಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯನ್ನು ಧಾರವಾಡದಲ್ಲಿ ಸ್ಥಾಪನೆ ಮಾಡಿದೆ. ಮಕ್ಕಳ ಸರ್ವಾಗೀಣ ಅಭಿವೃದ್ಧಿ ಹಾಗೂ ಸಂಪೂರ್ಣ ವ್ಯಕ್ತಿತ್ವದ ವಿಕಾಸ ಅಕಾಡೆಮಿಯ ಮುಖ್ಯ ಉದ್ದೇಶವಾಗಿದೆ. ಪ್ರತಿವರ್ಷವೂ ಜಿಲ್ಲಾ ಮಟ್ಟದಲ್ಲಿ ಮಕ್ಕಳ ಹಬ್ಬ ಆಯೋಜಿಸುವ ಮೂಲಕ ಅವರ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿಕೊಡಲಾಗಿದೆ. ಮಕ್ಕಳು ನೀಡುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ಪರ್ಧೆ ಎಂದು ಪರಿಗಣಿಸದೆ, ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಗುವುದು. ಕೊವಿಡ್ ಕಾರಣದಿಂದ ನಿಂತು ಹೋಗಿದ್ದ ಮಕ್ಕಳ ಹಬ್ಬಕ್ಕೆ ಮತ್ತೆ ಚಾಲನೆ ನೀಡಲಾಗಿದೆ. ಜಾನಪದ, ಸಾಹಿತ್ಯ, ಕ್ರೀಡೆ, ಸಂಸ್ಕೃತಿ ಮುಂತಾದ ಕ್ಷೇತ್ರಗಳಲ್ಲಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸಲಾಗುತ್ತಿದೆ. ಗ್ರಾಮೀಣ ಮಕ್ಕಳ ಬದುಕನ್ನು ಸಶಕ್ತಗೊಳಿಸಲು ಮತ್ತು ಉನ್ನತಿಗೆ ತರಲು ರಚನಾತ್ಮಕ ಕಾರ್ಯಕ್ರಮಗಳನ್ನು ಅಕಾಡೆಮಿ ವತಿಯಿಂದ ಕೈಗೊಳ್ಳಲಾಗಿದೆ ಎಂದರು.
ಆರ್ಥಿಕವಾಗಿ, ಸಾಮಾಜಿಕವಾಗಿ, ಹಿಂದುಳಿದ ಮಕ್ಕಳನ್ನು ಗುರುತಿಸಿ ಶಿಕ್ಷಣ, ಸಾಹಿತ್ಯ, ಸಂಗೀತ ಮತ್ತು ಕಲೆ ಸೇರಿದಂತೆ ಇತರ ವಿಷಯಗಳಲ್ಲಿ ಅವರಿಗೆ ಸೂಕ್ತ ಪ್ರೋತ್ಸಾಹ ನೀಡಲು ಕಾರ್ಯಕ್ರಮಗಳನ್ನು ಬಾಲ ವಿಕಾಸ ಅಕಾಡೆಮಿ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಭಾರತಿ ಆರ್ ಬಣಕಾರ್ ತಿಳಿಸಿದರು.
ವೇದಿಕೆ ಕಾರ್ಯಕ್ರಮವನ್ನು ಮಕ್ಕಳಿಂದಲೇ ಉದ್ಘಾಟಿಸಲಾಯಿತು. ನಂತರ ಜಿಲ್ಲೆಯ ವಿವಿಧಡೆಯಿಂದ ಆಗಮಿಸಿದ ಮಕ್ಕಳ ತಂಡಗಳು ಕಂಸಾಳೆ, ವೀರಗಾಸೆ, ರೂಪಕ, ಕೋಲಾಟ, ಚಿತ್ರಗೀತೆ, ದೇಶಭಕ್ತಿ ಗೀತೆ, ಜಾನಪದ ಗೀತೆಗಳಿಗೆ ನೃತ್ಯ ಮಾಡಿದರು. ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಬೆಂಕಿಯಲ್ಲಿ ಅರಳಿದ ಹೂ ನಾಟಕ ಪ್ರದರ್ಶಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕಲಾ ತಂಡಳಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ, ಸಿಡಿಪಿಓ ಪವಿತ್ರ, ನಿರೂಪಣಾಧಿಕಾರಿ ವಿಜಯ ಕುಮಾರ್, ಜಿಲ್ಲಾ ಅಂಗವಿಕಲ ಅಭಿವೃದ್ದಿ ಅಧಿಕಾರಿ ವೀಣಾ, ಶಿಕ್ಷಕರಾದ ಕುಮಾರ್, ಹೊನ್ನಪ್ಪ ಇದ್ದರು.

ಸಾಮಾಜಿಕ ನಾಟಕಗಳು ಸಮಾಜ ತಿದ್ದುವ ಕೆಲಸ ಮಾಡುತ್ತವೆ ಡಿ .ಜಿ. ಗೋವಿಂದಪ್ಪ.

ನಾಯಕನಹಟ್ಟಿ:: ಸಮೀಪದ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜೋಗಿಹಟ್ಟಿ ಗ್ರಾಮದಲ್ಲಿ ಸಾಮಾಜಿಕ ನಾಟಕ ಪ್ರೇಮಪಂಜರ ಅರ್ಥಾರ್ಥ ರವಿಚಂದ್ರ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿ ಅವರು ಗ್ರಾಮೀಣ ಪ್ರದೇಶದಲ್ಲಿ ಇಂತಹ ಬರಗಾಲದ ನಡುವೆ ಕಲಾವಿದರು ಸಾಮಾಜಿಕ ನಾಟಕ ಪ್ರದರ್ಶನ ಮಾಡುವುದು ತುಂಬಾ ಕಷ್ಟ.
ಸಮಾಜದಲ್ಲಿ ಸಾಹಿತ್ಯ ಕಲೆ ಸಂಗೀತ ನೃತ್ಯ ಎಲ್ಲವನ್ನು ಉಳಿಸಿಕೊಳ್ಳಲು ಸಾಮಾಜಿಕ ನಾಟಕಗಳು ತುಂಬಾ ಮುಖ್ಯ ಎಂದರು.


ಸಭೆಯಲ್ಲಿ ನಾಯಕನಹಟ್ಟಿ ಹೋಬಳಿ ನೀರಾವರಿ ಹಾಗೂ ಸಾಮಾಜಿಕ ಹೋರಾಟ ಸಮಿತಿಯ ಅಧ್ಯಕ್ಷ ಜಿ ಬಿ . ಮುದಿಯಪ್ಪ ಮಾತನಾಡಿ ಜೋಗಿಹಟ್ಟಿ ಗ್ರಾಮ ಬುಡಕಟ್ಟು ಸಂಸ್ಕೃತಿ ಆಚರಣೆಗಳು ಸೇರಿದಂತೆ ಕಲೆ ಮತ್ತು ಸಾಂಸ್ಕೃತಿಗೆ ಅಷ್ಟೇ ಹೆಸರುವಾಸಿ ಆದ ಗ್ರಾಮ ಗ್ರಾಮೀಣ ಪ್ರದೇಶದ ಕಲೆ ಇಂದಿನ ದಿನಮಾನಗಳಲ್ಲಿ ಅಳಿವಿನಂಚಿನಲ್ಲಿದೆ ಗ್ರಾಮೀಣ ಜನ ಜೀವನವನ್ನು ಕಥಾನಕವನ್ನಾಗಿಸಿಕೊಂಡು ಪಾತ್ರಗಳಿಗೆ ಜೀವ ತುಂಬುವುದು ಕಷ್ಟಕರವಾದ ಕಲೆಯಾಗಿದೆ ಗ್ರಾಮದ ಪ್ರತಿಯೊಬ್ಬರೂ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಿ ಗೌರವಿಸಿ ಆರ್ಥಿಕವಾಗಿ ನೆರವು ನೀಡಿ ಬೆಳೆಸಬೇಕಿದೆ ಎಂದರು.

ಇದೇ ವೇಳೆ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಟಿ ಬಸಪ್ಪ ನಾಯಕ ಮಾತನಾಡಿ ನಮ್ಮ ಭಾರತ ದೇಶ ಸಾಹಿತ್ಯ ಕಲೆ ಸಂಸ್ಕೃತಿಗೆ ಶೌರ್ಯ ಪರಾಕ್ರಮಕ್ಕೆ ತನ್ನದೇ ಆದ ಇತಿಹಾಸವಿದೆ.
ಕಲೆ ಮತ್ತು ಸಾಂಸ್ಕೃತಿ ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ಗ್ರಾಮೀಣ ಪ್ರದೇಶದ ಯುವಕರು ಮತ್ತು ಗ್ರಾಮಸ್ಥರು ಮುಂಚೂಣಿಯಲ್ಲಿರಬೇಕು ಎಂದರು.

ಇನ್ನೂ ಸಭೆಯಲ್ಲಿ ನಾಯಕನಹಟ್ಟಿ ನೀರಾವರಿ ಹಾಗೂ ಸಾಮಾಜಿಕ ಹೋರಾಟ ಸಮಿತಿ ಕಾರ್ಯಧ್ಯಕ್ಷ ಎಸ್‌ ಟಿ ಬೋರ್ ಸ್ವಾಮಿ, ಗೌಡಗೆರೆ ಗ್ರಾಮ ಪಂಚಾಯಿತಿ ಸದಸ್ಯ ಮಾಜಿ ಅಧ್ಯಕ್ಷ ಟಿ. ರಂಗಪ್ಪ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಹಾಗೂ ಸಭೆಯ ಅಧ್ಯಕ್ಷತೆಯನ್ನು ಎಚ್ ಸಿ ತಿಪ್ಪೇಸ್ವಾಮಿ ವಹಿಸಿದ್ದರು


ಇದೇ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಭೀಮಕೊಂಡನಹಳ್ಳಿ ಎಸ್ ಓ ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಮ್ಮ ಬೋರಯ್ಯ, ಉಪಾಧ್ಯಕ್ಷ ಸಣ್ಣಪ್ಪ, ಸದಸ್ಯರಾದ ಎಸ್. ವೆಂಕಟೇಶ್ ದಳಪತಿ, ಎಸ್ ಸಿ ನಾಗಪ್ಪ, ಸದಸ್ಯೆ ಮಾಜಿ ಉಪಾಧ್ಯಕ್ಷೆ ರೇವಮ್ಮ ಡಿ ಕೆ ಬಸವರಾಜ್, ಬಿ ಮಂಜಮ್ಮ, ಸರೋಜಮ್ಮ ಕರಿಬಸವರಾಜ್, ಮಂಜಮ್ಮ, ಮಂಜುಳಾ ರಂಗಸ್ವಾಮಿ ಭೀಮಗೊಂಡನಹಳ್ಳಿ, ಜಿ ಒ.ಓಬಳೇಶ್, ಮತ್ತು ಗ್ರಾಮದ ಮುಖಂಡರಾದ ಎಂ ಜಿ ತಿಪ್ಪೇಸ್ವಾಮಿ, ಜಿ ಸಿ ಬಾಲಯ್ಯ ಕಾರ್ಯದರ್ಶಿ ಉ.ಗ್ರಾ. ಅಭಿವೃದ್ಧಿ ಸಂಸ್ಥೆ ಜೋಗಿಹಟ್ಟಿ, ಎಚ್‌ ಬಿ ತಿಪ್ಪೇಸ್ವಾಮಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರೈತ ಉತ್ಪಾದಕರ ಕಂಪನಿ ಜೋಗಿಹಟ್ಟಿ, ಜಿ ಮುರುಳಯ್ಯ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಜೋಗಿಹಟ್ಟಿ, ಸಿ ಎಸ್ ಚನ್ನಪ್ಪ, ಎಸ್ ಜಿ ವೆಂಕಟೇಶ್ ಗುತ್ತಿಗೆದಾರರು. ಎಂ ಜಿ ಬಸವರಾಜ್, ಬಿ ಕರಿಬಸವರಾಜ್, ಸಿ ಕೆ ಬಾಲರಾಜ್, ಶಾಂತಪ್ಪ, ನಾಗೇಂದ್ರಪ್ಪ, ತಿಪ್ಪೇಸ್ವಾಮಿ, ಸಂಗೀತ ನಿರ್ದೇಶಕ ಎಸ್ ಬಿ ಗೋವಿಂದಪ್ಪ, ಸಂಘದ ಮ್ಯಾನೇಜರ್ ಎಂ ಬಿ ಸಣ್ಣ ಬಾಲಯ್ಯ, ಕೆ ಜಿ ಮಂಜುನಾಥ್, ಸ್ಟೇಜ್ ಮ್ಯಾನೇಜರ್ ಸೇರಿದಂತೆ ಸಮಸ್ತ ಜೋಗಿಹಟ್ಟಿ ಗ್ರಾಮಸ್ಥರು ವಿವಿಧ ಹಳ್ಳಿಗಳ ಕಲಾವಿದರು ಇದ್ದರು

ನುಡಿದಂತೆ ನಡೆದವರಿಗೆ ಬರಗಾಲ ಕಾಡುತ್ತಿದೆ- ನಾರಾಯಣಸ್ವಾಮಿ

ಹೊಸದುರ್ಗ: ಕರ್ನಾಟಕ ರಾಜ್ಯದಲ್ಲಿ ಬರಗಾಲ ಎದುರಾಗಿದ್ದು, ನುಡಿದಂತೆ ನಡೆದವರಿಗೆ ಬರಗಾಲ ಕಾಡುತ್ತಿದೆ. ಹೀಗಾಗಿ ಇಲ್ಲಿ ಸಂಸ್ಕಾರವಂತ ವ್ಯಕ್ತಿಗಳ ಮಾರ್ಗದರ್ಶನ ಕೊರತೆ ಎದ್ದು ಕಾಣುತ್ತಿದ್ದು, ಮಾನವೀಯತೆಯ ಮೌಲ್ಯಗಳನ್ನು ಮರೆಯುತ್ತಿದ್ದೇವೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸಾಣೇಹಳ್ಳಿ ಶ್ರೀಮಠದ ಶಿವಕುಮಾರ ಬಯಲು ರಂಗಮಂದಿರದಲ್ಲಿ ಶ್ರೀ ಶಿವಕುಮಾರ ಕಲಾಸಂಘದಿಂದ ಆಯೋಜಿಸಲಾಗಿದ್ದ ಎರಡನೇ ದಿನ ಶುಕ್ರವಾರ ನಡೆದ ರಾಷ್ಟ್ರೀಯ ನಾಟಕೋತ್ಸವ-2023ರ ಉದ್ದೇಶಿಸಿ ಮಾತನಾಡಿದ ಅವರು, ಅನೇಕ ರಾಜಕಾರಣ ನೋಡಿ ಭಾಷಣ ಕೇಳುವುದನ್ನೆ ಬೇಡ ಅನ್ನಿಸಿದೆ. ಪ್ರಾಮಾಣಿಕರ ಕೊರತೆಯಿಂದ ಭಾಷಣ ಕೇಳುವ ಅವಶ್ಯಕತೆ ಇಲ್ಲದಾಗಿದೆ ಎಂದು ಬೇಸರಿಸಿದರು.

ಬಸವಣ್ಣನವರ ವಚನಗಳನ್ನು ಪ್ರತಿಯೊಬ್ಬರ ಮನ, ಹೃದಯಕ್ಕೆ ತಲುಪಿಸುವ ಹಾಗೂ ಬಸವಣ್ಣನ ಹಾದಿಯಲ್ಲಿ ಮನುಕುಲ ನೋಡುವ ದೃಷ್ಠಿಯಲ್ಲಿ ಇಲ್ಲಿ ನಾಟಕೋತ್ಸವವನ್ನು ಮಾಡಲಾಗುತ್ತಿದೆ. ವಚನಗಳು ಕೇವಲ ಕರ್ನಾಟಕಕ್ಕೆ ಸೀಮಿತವಾಗಬಾರದು ಎಂದು ಹಿಂದಿ ಭಾಷೆಗೆ ತರ್ಜುಮೆ ಮಾಡಿ ಉತ್ತರ ಭಾರತದಾದ್ಯಂತ ವಚನಗಳನ್ನು ಪಸರಿಸುವ ಕೆಲಸವನ್ನು ಪಂಡಿತಾರಾಧ್ಯ ಸ್ವಾಮೀಜಿ ಮಾಡುತ್ತಿದ್ದಾರೆ ಎಂದರು.

ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮನಸ್ಸು ಪರಿಶುದ್ದವಾದರೆ ಏನನ್ನಾದರೂ ಸಾಧಿಸಬಹುದು. ಕಲೆ, ಸಾಹಿತ್ಯ, ಸಂಗೀತದ ಪರಿಚಯವಿಲ್ಲದ ಮನುಷ್ಯ ಜೀವನದಲ್ಲಿ ಸಂತಸದಿಂದ ಇರಲು ಸಾಧ್ಯವಿಲ್ಲ. ಹಾಗಾಗಿ ಸಂಗೀತ ಮನುಷ್ಯನ ಅವಿಭಾಜ್ಯ ಅಂಗವಾಗಿದೆ ಎಂದರು.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾಡಿನಲ್ಲಿ ಒಳ್ಳೆಯ ಮಾತುಗಳಿಗೆ ಬರ ಇಲ್ಲ. ಮಾತುಗಳನ್ನು ಕೃತಿಯಲ್ಲಿ ತರುವುದಕ್ಕೆ ಬರವಿದೆ. ನುಡಿದಂತೆ ನಡೆಯುವಲ್ಲಿ ರಾಜಕಾರಣಿ, ಮಠಾಧೀಶರು ಎಡವುತ್ತಿದ್ದಾರೆ. ಶಿಕ್ಷಣ ಜಾಸ್ತಿಯಾದಂತೆಲ್ಲಾ ಸಂಸ್ಕಾರ ಕಳೆದುಕೊಳ್ಳುತ್ತಿದ್ದೇವೆ. ಮನೆ, ಮಠ, ಸಮಾಜದಿಂದ ಒಳ್ಳೆಯ ಸಂಸ್ಕಾರ ಸಿಗುತ್ತಿಲ್ಲ ಎಂದು ಬೇಸರಿಸಿದ ಅವರು, ರಂಗಭೂಮಿಯ ಮೂಲಕ ಜನರ ಮನಸ್ಸನ್ನು ಅರಳಿಸುವ ಕೆಲಸ ಆಗುತ್ತದೆ. ಸಾಹಿತ್ಯ, ಸಂಗೀತ, ಭಾವನೆಗಳನ್ನು ಅರ್ಥ ಮಾಡಿಸುವ ಕಲೆ ಇದೆ ಎಂದರು.

ವೇದಿಕೆಯಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ಮಾಜಿ ಶಾಸಕರಾದ ಡಿ.ಎಸ್.ಸುರೇಶ್, ಮಾಡಾಳ್ ವಿರೂಪಾಕ್ಷಪ್ಪ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಪ್ರೋ.ಕೆ.ಬಿ.ಗುಡಸಿ, ಸಂಗೀತ ನಿರ್ದೇಶಕ ವಿ.ಮನೋಹರ್, ಕೇರಳದ ರಾಷ್ಟ್ರಕವಿ ಎಂ.ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಉಮೇಶ್ ಎಂ ಸಾಲಿಯಾನ ಮತ್ತಿತರಿದ್ದರು. ಸ್ವಾತಂತ್ರ ಹೋರಾಟಗಾರ ಎನ್.ಎಂ.ಬಸವರಾಜಪ್ಪ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ತಿಪ್ಪೇಸ್ವಾಮಿ, ಸುಬೇದರ್ ಶಿವಕುಮಾರ ಅವರನ್ನು ಅಭಿನಂದಿಸಲಾಯಿತು.

ಜಾನಪದ ಕಲಾತಂಡಗಳ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಮನೋರಂಜನೆಯೊಂದಿಗೆ ಸರ್ಕಾರದ ಯೋಜನೆ ಜನರಿಗೆ ತಲುಪಿಸಿ


ಚಿತ್ರದುರ್ಗ(ಕರ್ನಾಟಕ ವಾರ್ತೆ)ಸೆ.22:
ಕಲಾತಂಡಗಳು ಮನೋರಂಜನೆಯೊಂದಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸಬೇಕು ಎಂದು ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಹೇಳಿದರು.
ನಗರದ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಾಹಿತಿ ಶಿಕ್ಷಣ ಸಂವಹನ, ಸಾಮಾಜಿಕ ವರ್ತನೆ ಬದಲಾವಣೆ ಸಂವಹನ ಕಾರ್ಯಕ್ರಮದಡಿಯಲ್ಲಿ ಜಾನಪದ ಕಲಾತಂಡಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅವರು ಮಾತನಾಡಿದರು.
ಬೀದಿ ನಾಟಕಗಳ ಮೂಲಕ ನೀಡುವ ಕಲಾ ಪ್ರದರ್ಶನಗಳು ಬೆಳೆದು ಬಂದ ರೀತಿಯನ್ನು ತಿಳಿಸಿ, ಆಧುನಿಕ ಪೈಪೋಟಿ ಇರುವ ಈ ಸಂದರ್ಭದಲ್ಲಿ ಕಲಾತಂಡಗಳು ಮನೋರಂಜನೆಯೊಂದಿಗೆ ಸಾರ್ವಜನಿಕರು, ಆರೋಗ್ಯ ಇಲಾಖೆಯ ಯೋಜನೆಗಳನ್ನು ಒಪ್ಪಿಕೊಳ್ಳುವಂತಹ ಕಾರ್ಯನಿರ್ವಹಣೆ, ನಿಪುಣತೆ ಹೊಂದಬೇಕಿದೆ. ಮನೋರಂಜನೆಯೊಂದಿಗೆ ಇಲಾಖೆ ಯೋಜನೆಗಳ್ನು ಜನರಿಗೆ ತಲುಪಿಸಿ ಎಂದು ಹೇಳಿದರು.
ಜಿಲ್ಲಾ ಕುಟುಂಬ ಯೋಜನೆಗಳ ಅನುಷ್ಠಾನಾಧಿಕಾರಿ ಡಾ. ರೇಣುಪ್ರಸಾದ್ ಮಾತನಾಡಿ, ಕುಟುಂಬ ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿ ಪುರುಷರ ಭಾಗವಹಿಸುವಿಕೆ ಬಹಳಷ್ಟು ಕಡಿಮೆ ಇದೆ. ಬಾಲ್ಯ ವಿವಾಹಗಳು ಹೆಚ್ಚು ಹೆಚ್ಚು ನಡೆಯುತ್ತಲೇ ಇದೆ. ತಾಯಿ ಮರಣ ಶಿಶು ಮರಣ ನಿಯಂತ್ರಿಸಲು ಸ್ಥಳೀಯ ಭಾಷೆ ಬಳಸಿ ಜಾನಪದ ಕಲೆಯ ಮೂಲಕ ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯ ಯೋಜನೆಗಳ ಬಗ್ಗೆ ಮನನ ಮಾಡಿಕೊಡಿ ಎಂದರು.
ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅಭಿನವ ಮಾತನಾಡಿ, ಕಲಾತಂಡಗಳ ಆಯ್ಕೆಯು ಕಲಾತಂಡಗಳ ಅನುಭವ, ಉಪಯೋಗಿಸುವ ವಾದ್ಯ ಪರಿಕರಗಳು, ಕಲಾ ಪ್ರಕಾರ ಭಾಷೆಯ ಬಳಕೆ ಮತ್ತು ಪ್ರಭುತ್ವ, ಕಲಾತಂಡಗಳು ಉಪಯೋಗಿಸುವ ಸಮವಸ್ತ್ರ ಆಧಾರಿತ ಮಾನದಂಡ ರಚಿಸಿ ಅಂಕ ನಿಗದಿಪಡಿಸಲಾಗಿದೆ. ಗಳಿಸಿದ ಅಂಕದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯ್ಕ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಆರ್.ಗೌರಮ್ಮ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಮುಖ್ಯ ಆರೋಗ್ಯ ಮೇಲ್ವಿಚಾರಣಾಧಿಕಾರಿ ಎಂ.ಬಿ.ಹನುಮಂತಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ, ಜಾನಕಿ, ಜಿಲ್ಲಾ ಮೇಲ್ವಿಚಾರಣಾ ಅಧಿಕಾರಿ ಆಂಜನೇಯ, ಗಣಕಯಂತ್ರ ನಿರ್ವಾಹಕ ಜಬ್ಬರ್ ಸೇರಿದಂತೆ ಐದು ಕಲಾ ತಂಡಗಳಿಂದ 25 ಜನ ಕಲಾವಿದರು ಭಾಗವಹಿಸಿದ್ದರು.

ಕಲಾ ಸರಸ್ವತಿಯು ಕಲಾ ರಂಗಕ್ಕೆ ಎಲ್ಲರನ್ನೂ ಆಹ್ವಾನಿಸುತ್ತದೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ: ಶಾಸಕ ಟಿ ರಘುಮೂರ್ತಿ

ಚಳ್ಳಕೆರೆ: ಕನ್ನಡ ನಾಡು ನುಡಿ ಸಂಸ್ಕೃತಿಯ ರಕ್ಷಣೆಗೆ ತಾಲೂಕಿನ ಕನ್ನಡ ಅಭಿಮಾನಿಗಳು ಸದಾ ಮುಂದಿರುತ್ತಾರೆ. ಆಂಧ್ರದ ಗಡಿಭಾಗವಾಗಿ ತಾಲೂಕು ಗುರುತಿಸಿಕೊಂಡಿದ್ದರು ನಾಡು ನುಡಿಯ ವಿಷಯದಲ್ಲಿ ದಕ್ಕೆ ಉಂಟಾದಾಗ ಹೋರಾಟದ ಮನೋಭಾವ ಬೆಳೆಸಿಕೊಂಡಿರುವುದು ಶ್ಲಾಘನೀಯವಾದಂತಹ ವಿಷಯವಾಗಿದೆ. ಇತ್ತೀಚಿನ ದಿನಗಳಲ್ಲಿ ದೂರದರ್ಶನ ಹಾಗೂ ಸಾಮಾಜಿಕ ಜಾಲತಾಣಗಳ ವ್ಯಾಮೋಹದಿಂದ ಸಾರ್ವಜನಿಕರು ಬಯಲು ರಂಗಮಂದಿರದಲ್ಲಿ ಒಂದೆಡೆ ಸೇರಿ ಚಲನಚಿತ್ರ ಗೀತೆಗಳ ರಸಮಂಜರಿ ಕಾರ್ಯಕ್ರಮಗಳನ್ನು ವೀಕ್ಷಿಸುವ ಕಾಲ ಮರೆಯಾಗುತ್ತಿರುವುದು ವಿಷಾದ ಸಂಗತಿ ಎಂದು ಶಾಸಕ ಟಿ ರಘುಮೂರ್ತಿ ಅಭಿಪ್ರಾಯ ಪಟ್ಟರು.

ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಆವರಣದಲ್ಲಿ ಶ್ರೀ ವಿಶ್ವಭಾರತಿ ಯುವ ಬಳಗ ಗೋಣಿಬೀಡು ಭದ್ರಾವತಿ, ನೇತಾಜಿ ಸ್ನೇಹ ಬಳಗ, ಸುರಕ್ಷಾ ಪಾಲಿ ಕ್ಲಿನಿಕ್, ರೋಟರಿ ಕ್ಲಬ್, ಸಂಜೀವಿನಿ ಲ್ಯಾಬ್, ಹಾಗೂ ಸೃಷ್ಟಿ ಮಿತ್ರ ಬಳಗದ ಸಹಯೋಗದಲ್ಲಿ ಶ್ರೀ ವಿಶ್ವ ಭಾರತಿ ಯುವ ಬಳಗ ಗೋಣಿಬೀಡು ಇವರು ನಿರ್ಮಿಸುವ ಕಲಾವಿದರ ಆಶ್ರಯಧಾಮ ಮತ್ತು ಸಂಗೀತ ಶಾಲೆಯ ಸಹಾಯಾರ್ಥ ಕನ್ನಡ ನಿತ್ಯೋತ್ಸವ ರಸಮಂಜರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಚಿತ್ರರಂಗದ ಮೇರು ಧ್ರುವತಾರೆಗಳಾದ ಡಾ.ರಾಜ್ ಕುಮಾರ್ ಡಾ. ವಿಷ್ಣುವರ್ಧನ್ ಡಾ. ಅಂಬರೀಶ್, ಶಂಕರ್ ನಾಗ್ ರವಿಚಂದ್ರನ್ ಹೊರತುಪಡಿಸಿ ಮಹಾನ್ ನಟರು ತಮ್ಮದೇ ಆದ ವಿಶಿಷ್ಟ ನಟನಾಶೈಲಿಯಿಂದ ಕನ್ನಡ ಚಿತ್ರ ರಸಿಕರನ್ನು ರಂಜಿಸಿ ಮರೆಯಾಗಿದ್ದಾರೆ ಅವರನ್ನು ಇಂದಿನ ಯುವ ಪೀಳಿಗೆ ಪ್ರತ್ಯಕ್ಷವಾಗಿ ನೋಡಲಾಗದಿದ್ದರು ಜೂನಿಯರ್ ಕಲಾವಿದರು ಇಂತಹ ರಸಮಂಜರಿ ಕಾರ್ಯಕ್ರಮಗಳಲ್ಲಿ ಅವರಂತೆ ನಟಿಸಿ ಅವರ ನೆನಪನ್ನು ಅಚ್ಚಳಿಯದಂತೆ ಉಳಿಯುವಂತೆ ಮಾಡುತ್ತಿದ್ದಾರೆ ಕಲಾ ಸರಸ್ವತಿಯು ಕಲಾ ರಂಗಕ್ಕೆ ಎಲ್ಲರನ್ನೂ ಆಹ್ವಾನಿಸಿದರೂ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ.

 ಇಂದಿನ ದಿನಮಾನಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗಿದ್ದು ಅನೇಕ ಹಿರಿಯ ಕಲಾವಿದರು ಅವಕಾಶ ವಂಚಿತರಾಗಿ ತಮ್ಮ ಜೀವನ ನಡೆಸುವುದು ದುಸ್ತರವಾಗಿರುವುದರಿಂದ ಅಂತಹ ಕಲಾವಿದರನ್ನು ಪೋಷಿಸುವ ಸಲುವಾಗಿ ಶ್ರೀ ವಿಶ್ವ ಭಾರತಿ ಯುವ ಬಳಗ ಗೋಣಿಬೀಡು, ಆಶ್ರಯಧಾಮ ಮತ್ತು ಸಂಗೀತ ಶಾಲೆ ನಿರ್ಮಿಸುತ್ತಿರುವುದು ಹೆಮ್ಮೆ ಪಡುವಂತಹ ವಿಷಯವಾಗಿದೆ ಸರ್ಕಾರದೊಂದಿಗೆ ಮಾತನಾಡಿ ಆರ್ಥಿಕ ನೆರವನ್ನು ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಜೂನಿಯರ್ ಅಂಬರೀಶ್ ಜೂನಿಯರ್ ವಿಷ್ಣುವರ್ಧನ್ ಜೂನಿಯರ್ ಶಂಕರ್ ನಾಗ್ ಜೂನಿಯರ್ ರವಿಚಂದ್ರನ್ ಹಿರಿಯ ಕಲಾವಿದರ ಚಲನಚಿತ್ರ ಹಾಡುಗಳು ಹೆಜ್ಜೆ ಹಾಕಿ ನೆರೆದಿದ್ದ ತಾಲೂಕಿನ ಕಲಾ ರಸಿಕರನ್ನು ರಂಜಿಸಿದರು ಸೃಷ್ಟಿ ಮೆಲೋಡಿಸ್ ವತಿಯಿಂದ ಗಾಯನ ರಸಮಂಜರಿ ಕಾರ್ಯಕ್ರಮ ಸಹ ನಡೆಯಿತು ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಹಾಗೂ ಎಸ್ ಎಸ್ ಎಲ್ ಸಿ ಪಿಯುಸಿ ವಿಭಾಗಗಳಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ಮೂರನೇ ಬಾರಿಗೆ ಆಯ್ಕೆಯಾದ ಶಾಸಕ ಟಿ ರಘು ಮೂರ್ತಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ರಮೇಶ್ ಗೌಡ, ವಿರೂಪಾಕ್ಷ, ಸಾವಿತ್ರಮ್ಮ, ವಿಜಯಲಕ್ಷ್ಮಿ,  ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ  ವೀರಭದ್ರಪ್ಪ,  ಶಶಿಧರ, ಕುಶಲಕರ್ಮಿ ರಾಜ್ಯ ಅಧ್ಯಕ್ಷರಾದ ಆರ್. ಪ್ರಸನ್ನಕುಮಾರ್, ಕಲಾವಿದರಾದ ಜ್ಯೂನಿಯರ್ ಶ್ರೀ ವಿಷ್ಣುವರ್ಧನ್, ಶ್ರೀ ಅಂಬರೀಷ್, ಶ್ರೀ ರವಿಚಂದ್ರನ್, ಶ್ರೀ ಶಂಕರನಾಗ್, ಮುಖಂಡರುಗಳಾದ ನೇತಾಜಿ ಆರ್ ಪ್ರಸನ್ನ, ಕಸಪ್ಪ ತಾಲೂಕು ಕಾಸಪ್ಪ ಅಧ್ಯಕ್ಷ ಟಿ ವೀರಭದ್ರ ಸ್ವಾಮಿ ಸಂಜೀವಿನಿ ಲ್ಯಾಬ್ ಎಂಎಂ ಮೃತ್ಯುಂಜಯ ಫರೀದ್ ಖಾನ್ ಸೃಷ್ಟಿ ತಿಪ್ಪೇಶ್ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಸಾಮಸಜಕ್ಕೆ ಸಿನಿಮಾ ರಂಗದ ಮೂಲಕಬಕೊಡುಗೆ ನೀಡಿದ ದಿ.ನಟರ ಜೂ. ನಟರಿಂದ ರಸಮಂಜರಿ ಕಾರ್ಯಮ.

ಚಳ್ಳಕೆರೆ ಆ.5. ಭಾನುವಾರ ಸರಕಾರಿ ಬಿಸಿನೀರು ಮುದ್ದಪ್ಪ ಸರಕಾರೊ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿರುವ ಜೂ.ಕಲಾವಿದರಿಗೆ ಹಾಗೂ ಜಿಲ್ಲಾ ಉಸ್ತುವರಿ ಸಚಿವ ಹಾಗೂ ಶಾಸಕರಿಗೆ ಸನ್ಮಾನ ಹಾಗೂ ಕನ್ನಡ ನಿತ್ಯೋತ್ಸವ ರಸಮಂಜರಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವವಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ನೇತಾಜಿ ಸ್ನೇಹ ಬಳಗದ ಅಧ್ಯಕ್ಷ ನೇತಾಜಿ ಪ್ರಸನ್ನ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಶ್ರೀವಿಶ್ವ ಭಾರತಿ ಯುವ ಬಳಗ ಗೋಣಿಬೀಡು, ನೇತಾಜಿ ಸ್ನೇಹ ಬಳಗ, ಸುರಕ್ಷಾ ಪಾಲಿ ಕ್ಲಿನಿಕ್, ರೋಟರಿ ಕ್ಲಬ್, ಸಂಜೀವಿನಿ ಲ್ಯಾಬ್, ಹಾಗೂ ಸೃಷ್ಟಿ ಮಿತ್ರ ಬಳಗದ ಸಹಯೋಗದೊಂದಿಗೆ ನಗರದ ಬಿ ಎಂ ಜಿ ಎಚ್ ಎಸ್ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿರುವ ವಿಶ್ವ ಭಾರತಿ ಯುವ ಬಳಗ ಗೋಣಿಬೀಡು ಇವರು ನಿರ್ಮಿಸಿರುವ ಕಲಾವಿದರ ಆಶ್ರಯಧಾಮ ಮತ್ತು ಸಂಗೀತ ಶಾಲೆಯ ಸಹಾಯಾರ್ಥ ಕನ್ನಡ ನಿತ್ಯೋತ್ಸವ ರಸಮಂಜರಿ ಕಾರ್ಯಕ್ರಮದ ಪ್ರಯುಕ್ತ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಇಂದಿನ ಯುವ ಸಮೂಹಕ್ಕೆ ಡಾ‌. ರಾಜಕುಮಾರ್ ಡಾ. ವಿಷ್ಣುವರ್ಧನ್ ಡಾ. ಅಂಬರೀಶ್, ಶಂಕರ್ ನಾಗ್ ರಂತಹ ಅದ್ಭುತ ಕಲಾವಿದರನ್ನು ಕಾಣಲು ಸಾಧ್ಯವಾಗದ ಕಾರಣ ಇಂತಹ ಜೂನಿಯರ್ ಕಲಾವಿದರ ನಟನಾ ಕೌಶಲ್ಯದಿಂದಾದರು ಮೇರು ನಟರನ್ನು ನೆನಪಿಸುವಂತಾಗಬೇಕು ಎಂದು ನೇತಾಜಿ ಸ್ನೇಹ ಬಳಗದ ಅಧ್ಯಕ್ಷ ನೇತಾಜಿ ಆರ್ ಪ್ರಸನ್ನ ತಿಳಿಸಿದರು.

ಭದ್ರಾವತಿಯ ಅಭಿಜಾತ ಕಲಾವಿದ ಜಿ ಎಸ್ ಆರಾಧ್ಯ (ಜೂನಿಯರ್ ಅಂಬರೀಶ್) ರವರು ಹೆಸರಾಂತ ಕನ್ನಡ ಚಲನಚಿತ್ರ ನಟ ದಿ.ಅಂಬರೀಶ್ ರವರ ಹಲವು ಚಿತ್ರಗಳ ಅಭಿನಯದ ಅನುಕರಣೆ ಅಷ್ಟೇ ಅಲ್ಲದೆ ಇನ್ನು ಹಲವು ನಟ ನಟಿಯರಿಂದ ವಿವಿಧ ಪಾತ್ರಗಳ ನಟನ ವಿಶೇಷ ಪ್ರದರ್ಶನವನ್ನು ಕಾರ್ಯಕ್ರಮದಲ್ಲಿ ನೀಡಲಿದ್ದಾರೆ ಈ ಕಾರ್ಯಕ್ರಮದಲ್ಲಿ ಜೂನಿಯರ್ ವಿಷ್ಣುವರ್ಧನ್ ಜೂನಿಯರ್ ರವಿಚಂದ್ರನ್ ಜೂನಿಯರ್ ಶಂಕರ್ ನಾಗ್ ಸೇರಿದಂತೆ ಹಲವು ಕಲಾವಿದರು ಭಾಗವಹಿಸುವರು ಈ ರಸಮಂಜರಿ ಕಾರ್ಯಕ್ರಮಕ್ಕೆ ಯೋಜನಾ ಮತ್ತು ಸಾಂಕಿಕ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ಶಾಸಕ ಟಿ ರಘುಮೂರ್ತಿ ಶಾಸಕ ಕೆ ಸಿ ವೀರೇಂದ್ರ ರಾಜ್ಯ ಕೆಪಿಸಿಸಿ ಕುಶಲಕರ್ಮಿಗಳ ವಿಭಾಗದ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತದ ಅಧಿಕಾರಿ ವರ್ಗ ಪಾಲ್ಗೊಳ್ಳುವರು ಕನ್ನಡ ವಿಷಯದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ತರಗತಿಗಳಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಭದ್ರಾವತಿಯ ಅಭಿಜಾತ ಕಲಾವಿದ ಜಿಎಸ್ ಆರಾಧ್ಯ (ಜೂನಿಯರ್ ಅಂಬರೀಶ್) ಮಾತನಾಡಿ ಕನ್ನಡಿಗರ ಮನಸೂರೆಗೊಳ್ಳುವಂತೆ ಅಭಿನಯಿಸಿ ತಮ್ಮ ನಟನ ಚಾತುರ್ಯದಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡು 60 ವರ್ಷ ದಾಟಿದ ಅನೇಕ ಬಡ ಕಲಾವಿದರು ಇಂದು ಅವಕಾಶ ವಂಚಿತರಾಗಿ ಬೀದಿಗೆ ಬಂದಿದ್ದಾರೆ ಅಂತಹವರನ್ನು ಗುರುತಿಸಿ ಭದ್ರಾವತಿಯ ಗೋಣಿಬೀಡು ಗ್ರಾಮದಲ್ಲಿ ಶ್ರೀ ವಿಶ್ವ ಭಾರತಿ ಯುವ ಬಳಗ ವತಿಯಿಂದ ಕಲಾವಿದರ ಆಶ್ರಯ ಧಾಮ ಮತ್ತು ಸಂಗೀತ ಶಾಲೆಯ ನಿರ್ಮಾಣ ಮಾಡಿ ಕಲಾವಿದರನ್ನು ಸಲಹುವ ಇಚ್ಛೆ ಹೊಂದಿದ್ದು ತಮ್ಮ ಬದುಕಿನುದ್ದಕ್ಕೂ ಬಣ್ಣ ಹಚ್ಚಿಕೊಂಡು ರಂಜಿಸಿ ಇಂದು ಅವರ ಜೀವನದ ಅಂತ್ಯಕಾಲದಲ್ಲಿ ಬೀದಿಗೆ ಬೀಳಬಾರದು ಎಂಬ ಸದುದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿ ತನು-ಮನ ಧನಸಹಾಯ ಪಡೆದು ಕಲಾವಿದರಿಗೆ ನೆರವಾಗಬೇಕು ಎಂಬ ಉದ್ದೇಶವಿದೆ ಎಂದು ತಿಳಿಸಿದರು.

ಕೆಪಿಸಿಸಿ ಕುಶಲಕರ್ಮಿಗಳ ವಿಭಾಗದ ರಾಜ್ಯಾಧ್ಯಕ್ಷ ಆರ್ ಪ್ರಸನ್ನಕುಮಾರ್ ಮಾತನಾಡಿ ಚಳ್ಳಕೆರೆ ಕ್ಷೇತ್ರ ಬರದ ನಾಡಾಗಿದ್ದರು ಕಲೆಯನ್ನು ಪೋಷಿಸುವ ಇಂತಹ ಅಭಿಜಾತ ಕಲಾವಿದರಿಗೆ ಸದಾ ನೆರವು ನೀಡುವ ಮೂಲಕ ಚಳ್ಳಕೆರೆ ಕಲಾಭಿಮಾನಿಗಳು ಹಲವು ಬಾರಿ ಇಂತಹ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ ಈ ಬಾರಿಯೂ ರಸಮಂಜರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ರಾಜ್ಯಕ್ಕೆ ಮಾದರಿಯಾಗುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಟಿ ವೀರಭದ್ರಪ್ಪ ಸಂಜೀವಿನಿ ಲ್ಯಾಬ್ ನ ಎಂ ಎನ್ ಮೃತ್ಯುಂಜಯ ಸೃಷ್ಟಿ ತಿಪ್ಪೇಶ್ ಸುರಕ್ಷ ಪಾಲಿ ಕ್ಲಿನಿಕ್ ನ ಫರೀದ್ ಖಾನ್ ವಿಶ್ವಕರ್ಮ ಸಮಾಜದ ಅಧ್ಯಕ್ಷ ವೆಂಕಟೇಶ್ ಅಖಿಲ ಭಾರತ ವಿಶ್ವಕರ್ಮ ಸಮಾಜದ ಕಾನೂನು ಸಲಹೆಗಾರರಾದ ಸರಸ್ವತಿ ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಾಜೇಶ್ವರಿ ನಾಗೇಂದ್ರ, ಚೇತನ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೂಲ ಸಂಸ್ಕøತಿಯ ಬೇರು ಭವ್ಯ ಭಾರತದ ತೇರು ಜಗದೀಶ್ ಹಿರೆಮನಿ


ಚಿತ್ರದುರ್ಗ (ಕರ್ನಾಟಕ ವಾರ್ತೆ ) ಫೆ.28:
ಜಾನಪದ ಕಲೆಗಳಿಗೆ ಜೀವನ ಬದಲಾವಣೆ ಮಾಡುವಂತಹ ಶಕ್ತಿಯಿದೆ. ಈ ನೆಲದ ಮೂಲ ಸಂಸ್ಕøತಿಯ ಬೇರಿನ ಮೇಲೆ ಭವ್ಯ ಭಾರತ ನಿರ್ಮಾಣವಾಗಿದೆ ಎಂದು ಮೂಲ ಸಂಸ್ಕøತಿ-ಕನ್ನಡ ಸಂಸ್ಕøತಿ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ, ಮೂಲ ಸಂಸ್ಕøತಿ-ಕನ್ನಡ ಸಂಸ್ಕøತಿ-ನಶಿಸಿ ಹೋಗುತ್ತಿರುವ ತಳ ಸಮುದಾಯಗಳ ವಿಶಿಷ್ಟ ಕಲೆಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಿಡುವಿನ ವೇಳೆಯಲ್ಲಿ ಜನರು ತಮ್ಮ ಮಾತುಗಳ ಮೂಲಕ ರಚಿಸಿದ ಸಾಹಿತ್ಯ ಜಾನಪದವಾಗಿದೆ. ಇವುಗಳಿಗೆ ಲಿಖಿತ ರೂಪವಿಲ್ಲ. ಯಾರು ರಚಿಸಿದ್ದಾರೆ ಎಂಬುದು ತಿಳಿದಿಲ್ಲ. ಆದರೆ ಜೀವನ ಮೌಲ್ಯಗಳನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹಬ್ಬಿಸುತ್ತಾ ಸಮೃದ್ಧವಾಗಿ ಬೆಳದಿವೆ.
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಪ್ರಕರಣಗಳು ಕಂಡುಬರುತ್ತಿವೆ. ಈ ಪ್ರಮಾಣ ಭಾರತಕ್ಕೆ ಹೊಲಿಸಿದರೆ ಹೆಚ್ಚಿದೆ. ಜನಪದ ಸಾಹಿತ್ಯ ಮನ ಪರಿವರ್ತನೆ ಮಾಡುವ ಶಕ್ತಿ ಹೊಂದಿದೆ. ನೋವುಗಳನ್ನು ನಿವಾರಿಸುವ, ಒಂಟಿತನದಿಂದ ಹೊರ ಬರಲು ಸಹಾಯ ಮಾಡುತ್ತವೆ. ಆತ್ಮಹತ್ಯೆ ಪ್ರಯತ್ನಿಸುವ ವ್ಯಕ್ತಿಗೆ ಆತ್ಮಸ್ಥೈರ್ಯ ತುಂಬಿ ಬದುಕಿಸುವ ವಿಶಿಷ್ಠ ಶಕ್ತಿ ಜಾನಪದ ಕಲೆಗಳಿಗಿದೆ ಎಂದರು.
ರಾಜ್ಯದಲ್ಲಿ ನಶಿಸಿ ಹೋಗುತಿರುವ ಜಾನಪದ ಕಲೆಗಳಿಗೆ ಪುನರ್ಜನ್ಮ ನೀಡಬೇಕಿದೆ. ವಾದ್ಯಗಳು ಮತ್ತು ಕಲೆಗಳಿಗೆ ಜನರನ್ನು ಆಕರ್ಷಿಸುವ ಶಕ್ತಿಯಿದೆ. ಜಾನಪದ ಕಲೆಗಳನ್ನು ಮುಂದಿನ ಪೀಳಿಗೆ ಉಳಿಸಿ, ಬೆಳಸಿಕೊಂಡು ಹೋಗಬೇಕು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಾಡಿನ ಮೂಲ ಸಂಸ್ಕøತಿಯ ಕಲೆಗಳನ್ನು ಉಳಿಸಿ ಬೆಳೆಸಲು ಪಣ ತೊಟ್ಟಿದೆ. ಇದರ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲೆಯ ಜನಪದ ಕಲೆಗಳನ್ನು ಗುರುತಿಸಿ ಆಸಕ್ತ ಯುವಜನರಿಗೆ ಈ ಕಲೆಗಳ ಕುರಿತು 20 ದಿನಗಳ ತರಬೇತಿ ಕಾರ್ಯಗಾರ ಹಮ್ಮಿಕೊಂಡಿದೆ. ಇದುವರೆಗೂ ರಾಜ್ಯದ 21 ಜಿಲ್ಲೆಗಳಲ್ಲಿ 155 ಜಾನಪದ ಶಿಕ್ಷಕರು, 62 ತಂಡಗಳಲ್ಲಿ ಒಟ್ಟು 1550 ಕಲಾವಿದರಿಗೆ 150 ಜಾನಪದ ಕಲಾ ಪ್ರಕಾರಗಳ ತರಬೇತಿ ನೀಡಿದ್ದಾರೆ.
ಐತಿಹಾಸಿಕ ಚಿತ್ರದುರ್ಗ ಜಿಲ್ಲೆ ಪಾಳೇಗಾರರ ಕಾಲದಿಂದಲೂ ವಿಶಿಷ್ಟ ಜಾನಪದ ಕಲೆಗಳಿಗೆ ಹೆಸರಾಗಿದೆ. ಖಾಸಾ ಬೇಡರ ಪಡೆ, ಹಗಲು ವೇಷ, ಸೋಬಾನೆ ಪದ, ಜಡೆಕೋಲು ಪ್ರದರ್ಶನ, ತಮಟೆ ಚರ್ಮವಾದ್ಯಗಳ ಬಗ್ಗೆ ನುರಿತ ಜಾನಪದ ಕಲಾವಿದರು ಜಿಲ್ಲೆಯಲ್ಲಿ ತರಬೇತಿ ನೀಡಿದ್ದಾರೆ. ತರಬೇತಿ ಪಡೆದ ತಂಡಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಎರೆಡು ತಂಡಗಳನ್ನು ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಆಯ್ಕೆ ಮಾಡಲಾಗುವುದು. ಹೀಗೆ ಆಯ್ಕೆಯಾದ ತಂಡಗಳಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಮಾನ್ಯತೆ ನೀಡಲಾಗುವುದು ಎಂದರು.
ಶಿಕ್ಷಕಿ ಹಾಗೂ ಸಾಹಿತಿ ಗೀತಾ ಭರಮಸಾಗರ ಮೂಲ ಸಂಸ್ಕøತಿ ಕುರಿತು ಉಪನ್ಯಾಸ ನೀಡಿ, ವಿಶ್ವ ಸಂಸ್ಕøತಿಗೆ ಕರ್ನಾಟಕ ರಾಜ್ಯದ ಜಾನಪದ ಕಲೆಗಳು ತಮ್ಮದೇ ಆದ ಕೊಡುಗೆ ನೀಡಿವೆ. ನಾಡಿನ ಸಾಂಸ್ಕøತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಗ್ರಾಮೀಣ ಭಾಗದ ಜಾನಪದ ಕಲಾವಿದರನ್ನು ಮುಖ್ಯವಾಹಿನಿಗೆ ತರಬೇಕು. ನಾಡಿನ ಮೂಲ ಸಂಸ್ಕøತಿಗೆ ಹೆಚ್ಚು ಪ್ರಶಾಸ್ತ್ಯ ನೀಡಬೇಕು. ತಳ ಸಮುದಾಯಗಳ ಕಲೆಗಳು ವಂಶಪಾರಂರ್ಯವಾಗಿ ಮುಂದುವರೆದುಕೊಂಡು ಬಂದಿವೆ. ತಳ ಸಮುದಾಯದಲ್ಲಿ ವಿಶಿಷ್ಟ ಜಾನಪದ ಕಲೆಗಳ ಬಗ್ಗೆ ಆಸಕ್ತಿ ಜನ್ಮತಃಹ ಮೂಡಿ ಬಂದಿದೆ. ನಾಡಿನ ಆಚಾರ ವಿಚಾರಗಳಿಂದಾಗಿ ಇಡೀ ವಿಶ್ವವೇ ರಾಜ್ಯದ ಕಡೆ ನೋಡುತ್ತಿದೆ. ಅಳುವಿನಂಚಿನಲ್ಲಿರುವ ಜಾನಪದ ಕಲೆಗಳನ್ನು ಉಳಿಸುವ ಕಾರ್ಯ ಮಾಡಬೇಕಿದೆ, ಗ್ರಾಮೀಣ ಭಾಗದಲ್ಲಿ ಮಹಿಳೆಯರು ಜಾನಪದ ಕೆಲೆಗಳ ರಾಯಬಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಆವರಣದಲ್ಲಿ ಮೆರವಣಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಇದ್ದರು. ಮೆರವಣಿಗೆಯು ಒನಕೆ ಓಬವ್ವ, ಅಂಬೇಡ್ಕರ್, ಮದಕರಿ ವೃತದ ಮೂಲಕ ತರಾಸು ರಂಗಮಂದಿರ ತಲುಪಿತು.
ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಕಲಾವಿದರಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಕೆ. ಮಲ್ಲಿಕಾರ್ಜುನ, ಮೂಲ ಸಂಸ್ಕøತಿ ಕನ್ನಡ ಸಂಸ್ಕøತಿ ಜಿಲ್ಲಾ ಸಂಚಾ¯ಕಿ ಭಾರ್ಗವಿ ದ್ರಾವಿಡ್, ಜಾನಪದ ಸಂಗೀತ ಕಲಾವಿದರು ಹಾಗೂ ಜಿಲ್ಲಾ ಮಟ್ಟದ ಸಮಿತಿ ಸದಸ್ಯ ಡಿ.ಓ. ಮುರಾರ್ಜಿ, ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕøತ ಹಾಗೂ ಚಿತ್ರದುರ್ಗ ಜಿಲ್ಲಾ ಸಂಚಾಲಕ ಹುಲ್ಲೂರು ಎ. ಕೃಷ್ಣಪ್ಪ, ಜಾನಪದ ಹಿರಿಯ ಕಲಾವಿದ ಹೆಚ್, ನಿಂಗಪ್ಪ, ಶ್ರೀನಿವಾಸ್, ಗಂಗಣ್ಣ, ಮಾರಕ್ಕ, ಗೌರಮ್ಮ, ಕೃಷ್ಣಣ್ಣ, ಜಿ.ಬಿ ನಿಂಗರಾಜು ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು. ಡಿ.ಓ. ಮುರಾರ್ಜಿ ತಂಡದವರು ಜಾನಪದ ಗಾಯನ, ನಾಡಗೀತೆಗಳನ್ನು ಪ್ರಸ್ತುತ ಪಡಿಸಿದರು. ಕಲಾವಿದ ಹರೀಶ್ ನಿರೂಪಿಸಿದರು.

ಆಧುನಿಕ ಭರಾಟೆಯಲ್ಲಿ ಕಲಾ ಶ್ರೀಮಂತಿಕೆಯ ಸಂಸ್ಕೃತಿಮರೆಯಾಗುತ್ತಿವೆ ಎಂದು ಗ್ರಾಪಂ ಅಧ್ಯಕ್ಷೆ ಎಂ. ಸುಮಾ

ಚಳ್ಳಕೆರೆ: ಆಧುನಿಕ ಭರಾಟೆಯಲ್ಲಿ ಕಲಾ ಶ್ರೀಮಂತಿಕೆಯ
ಸಂಸ್ಕೃತಿಮರೆಯಾಗುತ್ತಿವೆ ಎಂದು ಗ್ರಾಪಂ ಅಧ್ಯಕ್ಷೆ ಎಂ. ಸುಮಾ ವಿಷಾದ ವ್ಯಕ್ತ ಪಡಿಸಿದರು.
ತಾಲೂಕಿನ ದೊಡ್ಡ ಚೆಲ್ಲೂರು ಗ್ರಾಮದಲ್ಲಿ ಜ್ಯೋತಿಬಾ ಫುಲೆ ಗ್ರಾಮೀಣಾಭಿವೃದ್ಧಿ ಸಾಂಸ್ಕೃತಿಕ ಸೇವಾ ಸಂಸ್ಥೆ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಮಾತನಾಡಿದರು.
ನಾಡಿನ ಸೌಂದರ್ಯವನ್ನು ಕಲೆ ಮತ್ತು ಸಾಂಸ್ಕೃತಿಕ
ನೆಲೆಯಲ್ಲಿ ಕಾಣಬೇಕಿದೆ. ಗ್ರಾಮೀಣ ಭಾಗದ ಜಾನಪದ ಮತ್ತು
ರಂಗಭೂಮಿ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ
ಅಗತ್ಯವಿದೆ ಎಂದರು. ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ
ಅಧ್ಯಕ್ಷ ಡಿ.ಟಿ. ಶ್ರೀನಿವಾಸನ್ ಮಾತನಾಡಿ, ರಂಗಭೂಮಿ
ಕಲಾವಿದರಿಂದ ಭಾಷಾ ಮತ್ತು ಜನ ಜೀವನದ ಸಂಸ್ಕೃತಿ
ಜಾಗೃತಿಗೊಳಿಸಲು ಸಾಧ್ಯ. ಆದರೆ, ಪ್ರಸ್ತುತ ಸಮಾಜದಲ್ಲಿ
ಕಲಾವಿದರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಕಳವಳ
ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಗಮಕ, ಗಾಯನ
ಸಂಗೀತ, ಕೋಲಾಟ ಮತ್ತು ಭಜನೆ ಕಲಾವಿದರಿಂದ
ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಗ್ರಾಪಂ ಸದಸ್ಯರಾದ ಎಚ್. ಪಟೇಲ್ ರಾಘವೇಂದ್ರ,
ಕೆ. ರತ್ನಮ್ಮ, ಡಿ.ಎಂ. ಶಿವಕುಮಾರ್, ಜಯಮ್ಮ, ಎಲ್‌.
ಶುತಿ, ಎಲ್.ವಿ. ಸವಿತಾ, ಟಿ. ದೇವರಾಜ್, ಎಲ್.
ಕೆಂಚರಾಯ, ಎಚ್. ಶ್ರೀನಿವಾಸ, ಎಂ. ಅರ್ಪಿತಾ,
ಮುತ್ತುರಾಜ್, ನನ್ನಿವಾಳ ಹನುಮಂತಪ್ಪ
ಪುನೀತ್‌ಪೂಜಾರ್‌, ಭದ್ರಿ ಮತ್ತಿತರರಿದ್ದರು.

ನಗರದ ಬಿಎಂ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜ.16 ರಾತ್ರಿ ಕರೆಭಂಟನ ವಧೆ ಎನ್ನುವ ಬಯಲಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ

ಚಳ್ಳಕೆರೆ
ನಗರದ ಬಿಎಂ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜ.16 ರಾತ್ರಿ ಕರೆಭಂಟನ ವಧೆ ಎನ್ನುವ ಬಯಲಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಹೇಳಿದರು.
ನಗರದ ರೈತ ಸಂಘದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಯಲಾಟ ಎನ್ನುವುದು ಗಂಡು ಕಲೆ, ಕಲೆಯಲ್ಲಿಯೇ ವಿಶೇಷ, ವಿಶಿಷ್ಟ ಕಲೆಯಾಗಿದೆ. ಆಧುನಿಕ ಭರಾಟೆಯಲ್ಲಿ ಮೊಬೈಲ್, ದಾರವಾಯಿ, ಸೋಷಿಯಲ್ ಮೀಡಿಯಾಗಳ ಹಾವಳಿಯಿಂದ ಈಗಿನ ಯುವಕರು ಬಯಲಾಟಗಳ ಕಡೆ ಆಸಕ್ತಿ ತೋರದೆ ಇರುವುದರಿಂದ ಬಯಲಾಟಗಳು ಗ್ರಾಮೀಣ ಪ್ರದೇಶದಲ್ಲಿ ಕಣ್ಮರೆಯಾಗುತ್ತಿವೆ ಎಂದು ವಿಷಾಧ ವ್ಯಕ್ತ ಪಡಿಸಿದರು.
ಪ್ರಸ್ತುತ ದಿನಮಾನಗಳಲ್ಲಿ ಬಯಲಾಟ ಕಲೆಯನ್ನು ಉಳಿಸುವುದೇ ದೊಡ್ಡ ಸವಾಲಾಗದಿದೆ. ಬಯಲಾಟ ಉಳಿಸಿ ಬೆಳೆಸುವ ಸಲುವಾಗಿ ಜ.೧೬ ರಂದ ರಾತ್ರಿ ಕರೆಭಂಟನ ವಧೆ ಎನ್ನುವ ಕಾರ್ಯಕ್ರಮವನ್ನು ಹಿರಿಯ ವಯಸ್ಕರ ಹಮ್ಮಕೊಳ್ಳಲಾಗಿದ್ದು ನಾಟಕ ವೀಕ್ಷಣೆ ಮಾಡಲು ಮೂರು ಸಾವಿರ ಖುರ್ಚಿಗಳ ವ್ಯವಸ್ಥೆ ಮಾಡಲಾಗಿದ್ದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಬಯಲಾಟ ನಾಟಕ ಹಾಗೂ ಕಲೆಗೆ ಪ್ರೋತ್ಸಹ ನೀಡಿ ಯುವಕರು ಬಯಲಾಟ ನಾಟಕಗಳನ್ನು ಕಟ್ಟಿ ಬೆಳೆಸುವಂತೆ ತಿಳಿಸಿದರು.
ನಾಟಕ ವೀಕ್ಷಣೆಗೆ ಜಿಲ್ಲಾಧಿರಿ, ಜಿಪಂ ಸಿಇಒ, ಜಿಲ್ಲಾ ವರಿಷ್ಠಾಧಿಕಾರಿ, ಸೇರಿದಂತೆ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾವಿದರ ಪಿಂಚಣಿ ಸದಸ್ಯ, ಕಲಾವಿದ ಮುರಾರ್ಜಿ, ಕಲಾವಿದರಾದ ಈ. ಪಾಲಯ್ಯ, ಸುರೇಶ್, ನಾಗರಾಜ, ಬಯಲಾಟ ಭಾಗವತರಾದ ಸಣ್ಣಬೋರಯ್ಯ ಇದ್ದರು.
ಚಳ್ಳಕೆರೆ
ನಗರದ ಬಿಎಂ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜ.೧೬ ರಾತ್ರಿ ಕರೆಭಂಟನ ವಧೆ ಎನ್ನುವ ಬಯಲಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಹೇಳಿದರು.
ನಗರದ ರೈತ ಸಂಘದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಯಲಾಟ ಎನ್ನುವುದು ಗಂಡು ಕಲೆ, ಕಲೆಯಲ್ಲಿಯೇ ವಿಶೇಷ, ವಿಶಿಷ್ಟ ಕಲೆಯಾಗಿದೆ. ಆಧುನಿಕ ಭರಾಟೆಯಲ್ಲಿ ಮೊಬೈಲ್, ದಾರವಾಯಿ, ಸೋಷಿಯಲ್ ಮೀಡಿಯಾಗಳ ಹಾವಳಿಯಿಂದ ಈಗಿನ ಯುವಕರು ಬಯಲಾಟಗಳ ಕಡೆ ಆಸಕ್ತಿ ತೋರದೆ ಇರುವುದರಿಂದ ಬಯಲಾಟಗಳು ಗ್ರಾಮೀಣ ಪ್ರದೇಶದಲ್ಲಿ ಕಣ್ಮರೆಯಾಗುತ್ತಿವೆ ಎಂದು ವಿಷಾಧ ವ್ಯಕ್ತ ಪಡಿಸಿದರು.
ಪ್ರಸ್ತುತ ದಿನಮಾನಗಳಲ್ಲಿ ಬಯಲಾಟ ಕಲೆಯನ್ನು ಉಳಿಸುವುದೇ ದೊಡ್ಡ ಸವಾಲಾಗದಿದೆ. ಬಯಲಾಟ ಉಳಿಸಿ ಬೆಳೆಸುವ ಸಲುವಾಗಿ ಜ.೧೬ ರಂದ ರಾತ್ರಿ ಕರೆಭಂಟನ ವಧೆ ಎನ್ನುವ ಕಾರ್ಯಕ್ರಮವನ್ನು ಹಿರಿಯ ವಯಸ್ಕರ ಹಮ್ಮಕೊಳ್ಳಲಾಗಿದ್ದು ನಾಟಕ ವೀಕ್ಷಣೆ ಮಾಡಲು ಮೂರು ಸಾವಿರ ಖುರ್ಚಿಗಳ ವ್ಯವಸ್ಥೆ ಮಾಡಲಾಗಿದ್ದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಬಯಲಾಟ ನಾಟಕ ಹಾಗೂ ಕಲೆಗೆ ಪ್ರೋತ್ಸಹ ನೀಡಿ ಯುವಕರು ಬಯಲಾಟ ನಾಟಕಗಳನ್ನು ಕಟ್ಟಿ ಬೆಳೆಸುವಂತೆ ತಿಳಿಸಿದರು.
ನಾಟಕ ವೀಕ್ಷಣೆಗೆ ಜಿಲ್ಲಾಧಿರಿ, ಜಿಪಂ ಸಿಇಒ, ಜಿಲ್ಲಾ ವರಿಷ್ಠಾಧಿಕಾರಿ, ಸೇರಿದಂತೆ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾವಿದರ ಪಿಂಚಣಿ ಸದಸ್ಯ, ಕಲಾವಿದ ಮುರಾರ್ಜಿ, ಕಲಾವಿದರಾದ ಈ. ಪಾಲಯ್ಯ, ಸುರೇಶ್, ನಾಗರಾಜ, ಬಯಲಾಟ ಭಾಗವತರಾದ ಸಣ್ಣಬೋರಯ್ಯ ಇದ್ದರು.

You cannot copy content of this page