ಆಧುನಿಕ ಭರಾಟೆಯಲ್ಲಿ ಕಲಾ ಶ್ರೀಮಂತಿಕೆಯ ಸಂಸ್ಕೃತಿಮರೆಯಾಗುತ್ತಿವೆ ಎಂದು ಗ್ರಾಪಂ ಅಧ್ಯಕ್ಷೆ ಎಂ. ಸುಮಾ

by | 15/01/23 | ರಂಗಭೂಮಿ

ಚಳ್ಳಕೆರೆ: ಆಧುನಿಕ ಭರಾಟೆಯಲ್ಲಿ ಕಲಾ ಶ್ರೀಮಂತಿಕೆಯ
ಸಂಸ್ಕೃತಿಮರೆಯಾಗುತ್ತಿವೆ ಎಂದು ಗ್ರಾಪಂ ಅಧ್ಯಕ್ಷೆ ಎಂ. ಸುಮಾ ವಿಷಾದ ವ್ಯಕ್ತ ಪಡಿಸಿದರು.
ತಾಲೂಕಿನ ದೊಡ್ಡ ಚೆಲ್ಲೂರು ಗ್ರಾಮದಲ್ಲಿ ಜ್ಯೋತಿಬಾ ಫುಲೆ ಗ್ರಾಮೀಣಾಭಿವೃದ್ಧಿ ಸಾಂಸ್ಕೃತಿಕ ಸೇವಾ ಸಂಸ್ಥೆ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಮಾತನಾಡಿದರು.
ನಾಡಿನ ಸೌಂದರ್ಯವನ್ನು ಕಲೆ ಮತ್ತು ಸಾಂಸ್ಕೃತಿಕ
ನೆಲೆಯಲ್ಲಿ ಕಾಣಬೇಕಿದೆ. ಗ್ರಾಮೀಣ ಭಾಗದ ಜಾನಪದ ಮತ್ತು
ರಂಗಭೂಮಿ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ
ಅಗತ್ಯವಿದೆ ಎಂದರು. ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ
ಅಧ್ಯಕ್ಷ ಡಿ.ಟಿ. ಶ್ರೀನಿವಾಸನ್ ಮಾತನಾಡಿ, ರಂಗಭೂಮಿ
ಕಲಾವಿದರಿಂದ ಭಾಷಾ ಮತ್ತು ಜನ ಜೀವನದ ಸಂಸ್ಕೃತಿ
ಜಾಗೃತಿಗೊಳಿಸಲು ಸಾಧ್ಯ. ಆದರೆ, ಪ್ರಸ್ತುತ ಸಮಾಜದಲ್ಲಿ
ಕಲಾವಿದರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಕಳವಳ
ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಗಮಕ, ಗಾಯನ
ಸಂಗೀತ, ಕೋಲಾಟ ಮತ್ತು ಭಜನೆ ಕಲಾವಿದರಿಂದ
ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಗ್ರಾಪಂ ಸದಸ್ಯರಾದ ಎಚ್. ಪಟೇಲ್ ರಾಘವೇಂದ್ರ,
ಕೆ. ರತ್ನಮ್ಮ, ಡಿ.ಎಂ. ಶಿವಕುಮಾರ್, ಜಯಮ್ಮ, ಎಲ್‌.
ಶುತಿ, ಎಲ್.ವಿ. ಸವಿತಾ, ಟಿ. ದೇವರಾಜ್, ಎಲ್.
ಕೆಂಚರಾಯ, ಎಚ್. ಶ್ರೀನಿವಾಸ, ಎಂ. ಅರ್ಪಿತಾ,
ಮುತ್ತುರಾಜ್, ನನ್ನಿವಾಳ ಹನುಮಂತಪ್ಪ
ಪುನೀತ್‌ಪೂಜಾರ್‌, ಭದ್ರಿ ಮತ್ತಿತರರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *