ಯೋಧರ ಸ್ಮಾರಕ ನಿರ್ಮಾಣಕ್ಕೆ “ಅಮೃತ ಕಳಶ”ಯಾತ್ರೆ

by | 17/10/23 | ಸುದ್ದಿ


ಚಿತ್ರದುರ್ಗ ಅ.17:
ಚಿತ್ರದುರ್ಗ ನಗರದ ಸರ್ಕಾರಿ ಕಲಾ ಕಾಲೇಜು ಮುಂಭಾಗದ ಮೈದಾನದಲ್ಲಿ ಮಂಗಳವಾರ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ದೇಶಕ್ಕಾಗಿ ತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ಸಮರ್ಪಿಸಲು “ನನ್ನ ಮಣ್ಣು ನನ್ನ ದೇಶ” ಕಾರ್ಯಕ್ರಮದ ಭಾಗವಾಗಿ ಚಿತ್ರದುರ್ಗ ತಾಲ್ಲೂಕಿನ ಎಲ್ಲಾ ಗ್ರಾಮಗಳ ಮನೆ ಮನೆಗಳಿಂದ ಸಂಗ್ರಹಿಸಿದ ಮಣ್ಣಿನ “ಅಮೃತ ಕಳಶ” ಯಾತ್ರೆಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನೆಹರು ಯುವ ಕೇಂದ್ರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ನನ್ನ ಮಣ್ಣು ನನ್ನ ದೇಶ-ಮಣ್ಣಿನ ನಮನ ವೀರ ಯೋಧರಿಗೆ ವಂದನ “ತಾಲ್ಲೂಕುಮಟ್ಟದ ಅಮೃತ ಕಳಶ ಯಾತ್ರೆ” ಕಾರ್ಯಕ್ರಮದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ಕಳಶಕ್ಕೆ ಮಣ್ಣು ಹಾಕಿಸುವ, ಧ್ವಜಾರೋಹಣ ಮತ್ತು ಮಾಜಿ ಸೈನಿಕರಿಗೆ ಸನ್ಮಾನ ಮಾಡಿದರು.
75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂದರೆ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ದೇಶಕ್ಕಾಗಿ ತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ಸಲ್ಲಿಸಲು, ಒಂದೇ ಭಾರತ ಶ್ರೇಷ್ಠ ಭಾರತ ಎಂದು ಸಾರಲು ಮತ್ತು ಮನೆ ಮನಗಳಲ್ಲಿ ದೇಶಭಕ್ತಿ ತುಂಬಲು ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮವನ್ನು ದೇಶವ್ಯಾಪಿ ಹಮ್ಮಿಕೊಳ್ಳಲಾಗಿದೆ. ಈಗಾಗಲೆ ಸ್ವಾತಂತ್ರ್ಯೋತ್ಸವದಂದು ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಥವಾ ಅಮೃತ ಸರೋವರ ದಂಡೆಯ ಮೇಲೆ ದೇಶಕ್ಕಾಗಿ ತ್ಯಾಗ ಮಾಡಿದ ವೀರ ಯೋಧರ ಸ್ಮರಣಾರ್ಥ ಸ್ಮಾರಕ ಮಾಡಲಾಗಿದೆ ಹಾಗೂ 75ನೇ ಸ್ವಾತಂತ್ರ್ಯ ಮಹೋತ್ಸವದ ನೆನಪಿಗೆ 75 ಸ್ಥಳೀಯ ಔಷಧೀಯ ಸಸ್ಯಗಳ ವಾಟಿಕೆ ಅನುμÁ್ಟನ ಮಾಡಲಾಗುತ್ತಿದೆ.
ಪ್ರತಿ ಗ್ರಾಮಗಳ ಮನೆ ಮನೆಗಳಿಂದ ಅಕ್ಕಿ, ಮಣ್ಣು ಸಂಗ್ರಹಿಸಿ, ಒಟ್ಟು ಸಂಗ್ರಹಿಸಿದ ಮಣ್ಣಿನ ಅಮೃತ ಕಳಶವನ್ನು ವೈಭವೋಪೇತವಾಗಿ ಸಕಲ ಗೌರವಗಳಿಂದ ಶಾಲಾ ಮಕ್ಕಳೊಡಗೂಡಿ ಮೆರವಣಿಗೆ ಮಾಡಿ 75ನೇ ಅಮೃತ ಮಹೋತ್ಸವದ ನೆನಪು ಹಾಗೂ ದೇಶಕ್ಕಾಗಿ ತ್ಯಾಗ ಮಾಡಿದವರ ಗೌರವಾರ್ಥ ಮತ್ತು ದೇಶಭಕ್ತಿಗೆ ಪೂರಕ ಪ್ರವಚನ, ದೇಶಭಕ್ತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಿ ಅಮೃತ ಕಳಶವನ್ನು ಸಕಲ ಗೌರವಗಳಿಂದ ಮೆರವಣಿಗೆ ಮಾಡಲಾಯಿತು.
ದೇಶದ ಮೂಲೆ ಮೂಲೆಯಿಂದ ಬಂದ ಅಮೃತ ಕಳಶದ ಮಣ್ಣಿನಿಂದ ಕೇಂದ್ರದ ರಾಷ್ಟ್ರೀಯ ಯುದ್ಧ ಸ್ಮಾರಕ ಭವನದ ಹತ್ತಿರ ದೇಶಕ್ಕಾಗಿ ತ್ಯಾಗ ಮಾಡಿದ ವೀರ ಯೋಧರ ಗೌರವಾರ್ಥವಾಗಿ ಸ್ಮಾರಕ ಮತ್ತು 75ನೇ ಸ್ವಾತಂತ್ರ್ಯೋತ್ವದ ಸವಿ ನೆನಪಿನ ಉದ್ಯಾನವನ, ವಾಟಿಕ ನಿರ್ಮಾಣ ಮಾಡಲಾಗುತ್ತದೆ.
ಕಾರ್ಯಕ್ರಮದಲ್ಲಿ ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ಹೆಚ್ ಹನುಮಂತಪ್ಪ, ಶಿಕ್ಷಣ ಇಲಾಖೆಯ ಬಿ ಇ ಒ ನಾಗಭೂಷಣ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹುಲಿಕುಂಟರಾಯಪ್ಪ, ಜಿಲ್ಲಾ ಪಂಚಾಯತಿ ಸಿಬ್ಬಂದಿ, ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ತಿಪ್ಪೇರುದ್ರಪ್ಪ ಮತ್ತು ಇತರೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು, ತಾ. ಪಂ. ಸಹಾಯಕ ನಿರ್ದೇಶಕರಾದ ಯರ್ರಿಸ್ವಾಮಿ ಮತ್ತು ರೂಪಕುಮಾರಿ, ತಾ ಪಂ ಸಿಬ್ಬಂದಿ, ನರೇಗಾ ಸಿಬ್ಬಂದಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಕಲಾ ತಂಡಗಳು, ಮಾಜಿ ನಿವೃತ್ತ ಸೈನಿಕರು, ಸಾರ್ವಜನಿಕರು ಭಾಗವಹಿಸಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *