ಯೋಗ ಬಲ್ಲವರಿಗೆ ರೋಗವಿಲ್ಲ- ಸತ್ಯನಾರಾಯಣ್

by | 21/05/24 | ಆರೋಗ್ಯ

ಚಿತ್ರದುರ್ಗ: ನಿತ್ಯ ಯೋಗ ಮಾಡುವವರಿಗೆ ಯಾವುದೇ ರೋಗ ಬರುವುದಿಲ್ಲವೆಂದು ಬಸವೇಶ್ವರ ಆಸ್ಪತ್ರೆಯ ವ್ಯವಸ್ಥಾಪಕರಾದ ಸತ್ಯನಾರಾಯಣ್ ಹೇಳಿದರು.
ಚಿತ್ರದುರ್ಗದ ಐಯುಡಿಪಿ ಬಡಾವಣೆಯ ನಿಸರ್ಗ ಯೋಗ,ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದ ಅವರು.
ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಜಿಸಿಬಿ ಬಸಣ್ಣ‌ಅವರ ನರ್ಸರಿಯಲ್ಲಿ ನಡೆದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಕಳೆದ ಹತ್ತು ವರ್ಷಗಳ ಹಿಂದೆ ತಾವು ಸಹ ದೈತ್ಯ ದೇಹವನ್ನು ಹೊಂದಿದ್ದು,ನಿರಂತರ ವ್ಯಾಯಾಮ, ವಾಕಿಂಗ್ ಹಾಗು ಆಹಾರ ಬಳಕೆಯಲ್ಲಿ ನಿಯಮವನ್ನು ಪಾಲಿಸುವ ಮೂಲಕ ದೇಹದ ತೂಕವನ್ನು ಇಳಿಸಿದ್ದೇನೆ.ಅಂದು ದಡೂತಿ ದೇಹದಿಂದ ತುಂಭಾ ಹಿಂಸೆ ಅನುಭವಿಸಿದ್ದೆನು. ಆಗ ಸ್ವಯಂ ನಿರ್ಧಾರದಿಂದ ವ್ಯಾಯಾಮ ಹಾಗು ಆಹಾರದಲ್ಲಿ ಕಠಿಣ ಪಾಲನೆ ಮಾಡುವ ಮೂಲಕ ತಮ್ಮ ಎತ್ತರಕ್ಕೆ ತಕ್ಕಂತೆ ತೂಕವನ್ನು ಮಿತವಾಗಿಸುವಲ್ಲಿ ಯಶಸ್ವಿಯಾಗಿದ್ದೇನೆ.ಹೀಗಾಗಿ ನನ್ನ ಸಾಧನೆಯ ಬಗ್ಹೆ ನನಗೆ ಹೆಮ್ಮೆ ಇದೆ ಎಂದು ಸಂತಸ ವ್ಯಕ್ತಪಡಿಸಿದರು.

ಇನ್ನು ಇದೇ ವೇಳೆ ಮಾತನಾಡಿದ ಯೋಗ ಕೇಂದ್ರದ ಯೋಗಗುರುಗಳಾದ ಶಿವಲಿಂಗಪ್ಪ ಅವರು,ಸತತ ಹತ್ತು‌ವರ್ಷಗಳ ಪರಿಶ್ರಮದಿಂದ ನಮ್ಮ ಯೋಗ ಕೇಂದ್ರ ಹೆಮ್ಮರವಾಗಿ ಬೆಳ
ದಿದೆ. ಇಂದು ನಿಸರ್ಗದ ಮಡಿಲಲ್ಲಿ ನೈಸರ್ಗಿಕವಾಗಿ ಬೆಳೆದು‌ನಿಂತಿದೆ.ಇದಕ್ಕೆಲ್ಲ ಬೆನ್ನೆಲುಬಾಗಿ ನಿಂತಿದ್ದ ಪತಾಂಜಲಿ ಯೋಗ ಸಂಸ್ಥೆಯ ಮಾಜಿ ಜಿಲ್ಲಾಧ್ಯಕ್ಷ ದಿವಂಗತ ಮಲ್ಲಿಕಾರ್ಜುನಪ್ಪ ಅವರು ಸ್ಪೂರ್ತಿ ಎಂದು ಅವರನ್ನು ಸ್ಮರಿಸಿದರು.

ಬಳಿಕ ಮಾತನಾಡಿದ ಯೋಗ ಕೇಂದ್ರದ ಅಧ್ಯಕ್ಷ ರಾಮಪ್ಪ ಅವರು, ಈ ನಿಸರ್ಗ ಯೋಗ ಕೇಂದ್ರವೊಂದು ಕುಟುಂಬದಂತೆ.ಎಲ್ಲರು ತಮ್ಮ ಆರೋಗ್ಯ ರಕ್ಷಣೆಗಾಗಿ ನಿತ್ಯ ಯೋಗಾಭ್ಯಾಸ ಮಾಡುತ್ತೇವೆ.ಅಲ್ಲದೇ ನಮ್ಮ ಯೋಗ ಕೇಂದ್ರದಲ್ಲಿನ ಎಲ್ಲಾ‌ಸದಸ್ಯರ ಕಷ್ಟ ಸುಖದಲ್ಲಿ ಭಾಗಿಯಾಗುತ್ತೇವೆ.ನಮ್ಮ‌ಸದಸ್ಯರು‌ ಯಾರಾದರೂ ಒಂದು ದಿನ ಯೋಗಾಭ್ಯಾಸಕ್ಕೆ ಗೈರಾದರೆ ಅವರ ಬಗ್ಗೆ ವಿಚಾರಿಸುತ್ತೇವೆ.ಆಗ ಅವರಿಗೆ ಏನಾದರು ಸಾಮಾಜಿಕವಾಗಿ,ಕೌಟಂಬಿಕವಾಗಿ ಅಥವಾ ಆರೋಗ್ಯದ ವಿಚಾರದಲ್ಲಿ ಸಮಸ್ಯೆ ಆಗಿದ್ದರೆ ತಕ್ಷಣ ಅವರ ಸಮಸ್ಯೆ ನಿವಾರಿಸಲು ಮುಂದಾಗುತ್ತೇವೆ.

ನಮ್ಮ ಯೋಗ ಬಂಧುಗಳಲ್ಲಿ ಯಾವುದೇ ತಾರತಮ್ಯ ಇಲ್ಲ.ಜಾತಿಭೇಧವಿಲ್ಲ.ಪರಸ್ಪರ ಎಲ್ಲರಲ್ಲೂ‌ ಅನ್ಯೋನ್ಯತೆ ಮನೆ ಮಾಡಿದೆ ಎಂದರು.ಇದೇ ವೇಳೆ ಯೋಗ ಕೇಂದ್ರದ ಬಗ್ಹೆ ತಮ್ಮ ಅಭಿಪ್ರಾಯ ತಿಳಿಸಿದ ಯೋಗ ಪಟುಗಳಾದ ರವಿಶಂಕರ್,ಪುಷ್ಪ ಹಾಗು ದಿವ್ಯ ಅವರು, ನಿಸರ್ಗ ಯೋಗ ಕೇಂದ್ರದಿಂದ ನಮ್ಮಲ್ಲಿನ ಸೋಮಾರಿತನ ನಿರ್ಮೂಲನೆ ಆಗಿದೆ.ಇಲ್ಲಿನ ಸದಸ್ಯರೆಲ್ಲರು ಒಂದೇ ಕುಟುಂಬದಂತೆ ಪ್ರೀತಿ,ಬಾಂದವ್ಯದಿಂದ ಇರುತ್ತೇವೆ.ಹೀಗಾಗಿ ಒಂದು‌ದಿನ ತಪ್ಪದೇ‌ಯೋಗಾಭ್ಯಾಸ ಮಾಡುತ್ತೇವೆ.

ಇದರಿಂದಾಗಿ ನಮ್ಮ‌ಲ್ಲಿನ ಆರೋಗ್ಯದ ಸಮಸ್ಯೆ ನಿವಾರಣೆ ಆಗಿದೆ.ಮನಸಿಗೆ ಸಂತೋಷವಿದೆ.ದೇಹಕ್ಕೆ ಉಲ್ಲಾಸವಿದ್ದು,ಈ ಯೋಗಕೇಂದ್ರ ಬಾಂದವ್ಯದ ಬೆಸುಗೆ ಎನಿಸಿದೆ ಎಂದರು.ಈ ವೇಳೆ ಕೇಂದ್ರವನ್ನು ಉದ್ಗಾಟಿಸಿದ ಸತ್ಯನಾರಾಯಣ,ಯೋಗಗುರು ಶಿವಲಿಂಗಪ್ಪ,ಅಧ್ಯಕ್ಷ ರಾಮಪ್ಪಹಾಗು ಹಿರಿಯ ಯೋಗಪಟು ರವಿಶಂಕರ್ ಅವರನ್ನು ಯೋಗಪಟುಗಳು ಗೌರವಿಸಿ,ಅಭಿನಂದಿಸಿದರು.

ಯೋಗ ಕೇಂದ್ರದ ಉದ್ಘಾಟನೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದ್ದು,ಕೋಟೆನಾಡಿನ ಜೂನಿಯರ್ ವಿಜಯ್ ಪ್ರಕಾಶ್ ಖ್ಯಾತಿಯ ಸತ್ಯನಾರಾಯಣ ಅವರು ಗೀತ ಗಾಯನದ ಮೂಲಕ ಎಲ್ಲರ ಗಮನ ಸೆಳೆದರು.ಈ ವೇಳೆ ಯೋಗ ಬಂಧುಗಳು ಸಹ ಗೀತೆಗಳ ರಸದೌತಣ ಸವಿಯುತ್ತಾ,ಹಾಡುತ್ತಾ ಕುಣಿದು ಕುಪ್ಪಳಿಸಿದರು.ನಿಸರ್ಗದ‌ಮಡಿಲಲ್ಲಿ ಸಮಯದ ಅರಿವಿಲ್ಲದಂತೆ ನಡೆದ ಗೀತಗಾಯನವನ್ನು‌ ಮೈಮರೆತು ಎಂಜಾಯ್ ಮಾಡಿದರು.

ಈ ಕಾರ್ಯಕ್ರಮದಲ್ಲಿ‌ ನಿಸರ್ಗ ಯೋಗ,ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರದ ಪ್ರಧಾನ ಕಾರ್ಯದರ್ಶಿ ಎಸ್.ಸಿದ್ದರಾಜು ಸ್ವಾಗತಿಸಿದರು.ಯೋಗಪಟು ಶಬರಿ ಪ್ರಾರ್ಥಿಸಿದರು.ಗೌರವ ಸಲಹೆಗಾರರಾದ ಮಹಲಿಂಗಪ್ಪ‌ ನಿರೂಪಿಸಿದರು.ಖಜಾಂಚಿ‌ಯಾದ ಜಯ್ಯಣ್ಣ ವಂದಿಸಿದ್ದು,ಕಾರ್ಯಕ್ರಮದಲ್ಲಿ ಹಿರಿಯ ಯೋಗಬಂಧುಗಳಾದ ಚಿದಾನಂದ ಮೂರ್ತಿ, ನಳಿನಾ,ಹನುಮಂತಪ್ಪ,ಗೀತಮ್ಮ,ಪುಷ್ಪವತಿ‌,ಕೌಸಲ್ಯ ಮತ್ತು ಯುವ ಯೋಗಪಟುಗಳಾದ ಶಬರಿ,ಸಂಯುಕ್ತ,ದಿವ್ಯ,ಮಧುಸೂದನ್,ಅಣ್ಣೇಶ್ ಭಾಗವಹಿ‌ಸಿದ್ದರು.

Latest News >>

ತಂತ್ರಜ್ಞಾನ ಮತ್ತು ಆಧುನಿಕತೆಯ ಭರಾಟೆಯಲ್ಲಿ ಮನುಷ್ಯರ ವ್ಯವಧಾನ ಕಡಿಮೆಯಾಗುತ್ತಿದ್ದು,ಓದುಗರ ಸಂಖ್ಯೆ ಕ್ಷೀಣಿಸುತ್ತದೆ ಜಿಲ್ಲಾಕ.ಸಾ.ಪ.ಅಧ್ಯಕ್ಷ ಶಿವಸ್ವಾಮಿ

ಹಿರಿಯೂರು : ತಂತ್ರಜ್ಞಾನ ಮತ್ತು ಆಧುನಿಕತೆಯ ಭರಾಟೆಯಲ್ಲಿ ಮನುಷ್ಯರ ವ್ಯವಧಾನ ಕಡಿಮೆಯಾಗುತ್ತಿದ್ದು, ದಿನೇ ದಿನೇ ಓದುಗರ ಸಂಖ್ಯೆ ಕಡಿಮೆ...

ನಗರದ ನಗರಸಭೆಗೆ ಜಿಲ್ಲಾಧಿಕಾರಿ ವೆಂಕಟೇಶ್ ಭೇಟಿ ನಗರಸಭೆಯ ಆಯುಕ್ತರು,ಅಧಿಕಾರಿಗಳೊಂದಿಗೆ ಸಭೆ

ಹಿರಿಯೂರು: ಇದೀಗ ಪ್ರಸ್ತುತ ತಿಂಗಳು ಮಳೆಗಾಲ ಆಗಿರುವುದರಿಂದ ಹಲವಾರು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದ್ದು, ನಗರದ ಜನರ ಉತ್ತಮ...

ಲಕ್ಕೇನಹಳ್ಳಿ: ಸ್ವಾಮಿತ್ವ ಯೋಜನೆಯ ಕುರಿತು ಗ್ರಾಮ ಸಭೆ ಗ್ರಾಮ ಪಂಚಾಯಿತಿಗೆ ಒಳಪಡುವ ಆಸ್ತಿಗಳಿಗೆ ಪಿ.ಆರ್.ಕಾರ್ಡ್ (ಹಕ್ಕುಪತ್ರ) ನೀಡುವ ಯೋಜನೆ

ಹಿರಿಯೂರು ಜೂ.21: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜೆ.ಜಿ.ಹಳ್ಳಿ ಹೋಬಳಿಯ ದಿಂಡಾವರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೊಳಪಡುವ...

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ಪಹಣಿಗೆ ಆಧಾರ್ ಜೋಡಣಿ: ತಿಂಗಳಾಂತ್ಯಕ್ಕೆ ಶೇ.75ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿ

ಚಿತ್ರದುರ್ಗ ಜೂನ್.21: ಪಹಣಿಗೆ ಆಧಾರ್ ಜೋಡಣೆ ಕಾರ್ಯವನ್ನು ಪ್ರಥಮಾಧ್ಯತೆಯಾಗಿ ಪರಿಗಣಿಸಿ, ತಿಂಗಳಾಂತ್ಯಕ್ಕೆ ಹಿರಿಯೂರು ತಾಲ್ಲೂಕಿನಲ್ಲಿ...

10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಅಭಿಮತ ಮಾನಸಿಕ ಸದೃಢತೆ ಹಾಗೂ ಒತ್ತಡ ಮುಕ್ತ ಜೀವನಕ್ಕೆ ಯೋಗ ಸಹಕಾರಿ

ಚಿತ್ರದುರ್ಗ ಜೂನ್21: ಯೋಗ ದೈಹಿಕವಾಗಿ ಶಕ್ತಿ ಹಾಗೂ ಚೈತನ್ಯ ತುಂಬುವದರ ಜೊತೆಗೆ ಮಾನಸಿಕವಾಗಿ ಸಹ ಸದೃಢರನ್ನಾಗಿಸುತ್ತದೆ. ಇಂದಿನ ನಿತ್ಯದ...

ವಿದ್ಯಾರ್ಥಿಗಳು ಪ್ರತಿ ದಿನ ಯೋಗಾಸನ ಮಾಡುವುದು ಅಭ್ಯಾಸ ಮಾಡಿಕೊಳ್ಳಿ ಶ್ರೀ ತಿಪ್ಪೇರುದ್ರಸ್ವಾಮಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂವೈಟಿ ಸ್ವಾಮಿ.

ನಾಯಕನಹಟ್ಟಿ:: ವಿದ್ಯಾರ್ಥಿಗಳು ಪ್ರತಿಯೊಬ್ಬರು ಯೋಗಾಸನ ಮಾಡುವುದು ರೂಡಿಸಿಕೊಂಡಾಗ ಮಾತ್ರ ಆರೋಗ್ಯವಂತರಾಗಿರಲು ಸಾಧ್ಯ. ಎಂದು ಶ್ರೀ...

ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ: -ಮುಖ್ಯಮಂತ್ರಿ ಸಿದ್ದರಾಮಯ್ಯ

ಬಳ್ಳಾರಿ,ಜೂ.20 ರಾಜ್ಯದಲ್ಲಿ ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ವಿಷಯ ಸದ್ಯ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸೋಲಿನ ಹೊಣೆಯನ್ನು ನಾನೇ ಹೊರುವೆ: ಪರಾಜಿತ ಅಭ್ಯರ್ಥಿ ಬಿ ಎನ್ ಚಂದ್ರಪ್ಪ 

ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆಯು ಕಳೆದ ಹತ್ತು ವರ್ಷಗಳಿಂದ ನನ್ನ ಕರ್ಮಭೂಮಿಯಾಗಿದ್ದು ಇಲ್ಲಿನ ಜನತೆ ಮನೆ ಮಗನಂತೆ ನೋಡಿದ್ದು ಒಂದು ಬಾರಿ...

ಜಾತಿನಿಂದನೆ, ದೌರ್ಜನ್ಯಗಳಂತಹ ಆರೋಪಗಳನ್ನು ಪರಿಶಿಷ್ಟರು ಕೈಬಿಟ್ಟಾಗ ಮಾತ್ರ ಸಮಾಜದಲ್ಲಿಬೆಳೆಯಲು ಸಾಧ್ಯ: ನೂತನ ಸಂಸದರಾದ ಗೋವಿಂದ ಕಾರಜೋಳ

ಹಿರಿಯೂರು: ಜಾತಿ ನಿಂದನೆ ಮತ್ತು ದಲಿತ ದೌರ್ಜನ್ಯಗಳಂತಹ ವೃತಾ ಆರೋಪಗಳನ್ನು ಪರಿಶಿಷ್ಟರು ಕೈ ಬಿಟ್ಟಾಗ ಮಾತ್ರ ಸಮಾಜದಲ್ಲಿ ಬೆಳೆಯಲು ಸಾಧ್ಯ...

ಚಿಕ್ಕಾಲಘಟ್ಟ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮ ಶೀಘ್ರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯ ಭರವಸ -ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ

ಚಿತ್ರದುರ್ಗ. ಜೂನ್.19: ಚಿಕ್ಕಾಲಘಟ್ಟ ಗ್ರಾಮದ ಬಹುದಿನಗಳ ಬೇಡಿಕೆಯಾದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಈಗಾಗಲೇ ಜಾಗ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page