ಯುವ ಜನತೆ ಮಾದಕ ವಸ್ತುಗಳಿಂದ ದೂರವಿರಿ -ಆರೋಗ್ಯಾಧಿಕಾರಿ ಡಾ.ಆರ್.ಮಂಜುನಾಥ್

by | 16/09/23 | ಆರೋಗ್ಯ

ಚಿತ್ರದುರ್ಗಸೆ.16:
ಯುವ ಜನತೆ ಮಾದಕ ವಸ್ತುಗಳಿಂದ ದೂರ ಇರಬೇಕು ಎಂದು ಆರೋಗ್ಯಾಧಿಕಾರಿ ಡಾ.ಆರ್.ಮಂಜುನಾಥ್ ಹೇಳಿದರು.
ನಗರದ ಎಸ್‍ಜೆಎಂ ಫಾರ್ಮಸಿ ಕಾಲೇಜಿನಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಮಾದಕ ವ್ಯಸನ ಮತ್ತು ಕಾನೂನುಗಳ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾದಕ ವಸ್ತುಗಳು ಮಾರಾಟ ಮುಖ್ಯವಾಗಿ ಯುವ ಜನತೆ ಇರುವ ಸ್ಥಳಗಳು, ಕಾಲೇಜುಗಳು ಅವುಗಳಿಂದ ದೂರವಿರಬೇಕು. ದೊಡ್ಡ ನಗರಗಳಲ್ಲಿ ಕಾಲೇಜು ಹತ್ತಿರ ಎಲ್ಲಾ ತರಹದ ಮಾದಕ ವಸ್ತುಗಳು ಜಾಲ ಇರುತ್ತದೆ. ಪೆÇೀಷಕರು ರಣಹದ್ದಿನಂತೆ ಕಾದು ಕಾಲೇಜಿನ ದಿನಗಳಲ್ಲಿ ಯುವಕರನ್ನು ಈ ದುಶ್ಚಟಕ್ಕೆ ಬಲಿಯಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಯುವ ಜನತೆ ದುಶ್ಚಟದ ದಾಸರಾಗಿ ಸಮಾಜದ ಕಣ್ಣಿಗೆ ದೇಶಕ್ಕೆ ಕುಟುಂಬಕ್ಕೆ ಹಾನಿಯಾಗುವುದನ್ನು ತಪ್ಪಿಸಬೇಕು ಎಂದರು.
ವರ್ಷಕ್ಕೆ ಒಂದು ಸಾರಿ, ಮೂರು ತಿಂಗಳಿಗೆ ಒಂದು ಸಾರಿ, ಸಮಾರಂಭದಲ್ಲಿ ಒಂದು ಸಾರಿ ಮಾತ್ರ ಅಂತ ಸಣ್ಣ ಕಾರಣಗಳಿಂದ ಚಟವನ್ನು ಕಲಿಯುತ್ತಾ ನಂತರ ಯಾವುದೇ ಕಾರಣ ಹುಡುಕದೆ ಪ್ರತಿದಿನ ದುಶ್ಚಟ ತರಿಸುವ ಪದಾರ್ಥಗಳಿಗೆ ದಾಸರಾಗಿ ಬಿಡುತ್ತಾರೆ. ಈ ಪದಾರ್ಥಗಳು ಮುಖ್ಯವಾಗಿ ಮೆದುಳಿನ ಕಾರ್ಯವನ್ನು ಅಸಮತೋಲನಗೊಳಿಸಿ, ಮೊದಲಿಗೆ ಡೋಪಮೈನ್ ಹಾರ್ಮೋನ್ ಹೆಚ್ಚಿಸುತ್ತಾ ಹೆಚ್ಚು ಮಾದಕವಾಗಿ ಇರಲು ಪ್ರೇರೇಪಿಸುತ್ತದೆ. ನಂತರ ಹೆಚ್ಚು ಹೆಚ್ಚಾಗಿ ಸೇವಿಸುವುದರಿಂದ ಸದಾಕಾಲ ಡೋಪಮೈನ್ ಹಾರ್ಮೋನ್ ಗಣನೀಯವಾಗಿ ಇರುವಂತೆ ಮಾಡಿಕೊಳ್ಳುತ್ತಾ ನಶೆ ಪದಾರ್ಥಗಳಿಗೆ ದಾಸರಾಗಿ ಬಿಡುತ್ತಾರೆ.. ನಂತರದ ಅವಸ್ಥೆಯಲ್ಲಿ ವ್ಯಸನಿ ಯಾವುದೇ ತರದ ದೈನಂದಿನ ಕಾರ್ಯಗಳನ್ನು ಮಾಡಿಕೊಳ್ಳಲು ಆಗದಂತಹ ದುರ್ಬಲ ಮನಸ್ಥಿತಿ ಅವರಿಗೆ ಉಂಟಾಗುತ್ತದೆ. ಅವುಗಳಿಂದ ಹೊರಗೆ ಬರಲು ಅವರಿಗೆ ಆಗುವುದಿಲ್ಲ ಇದರಿಂದ ಸಮಾಜದಲ್ಲಿ ಏನು ಬೇಕಾದರೂ ಮಾಡಲು ವ್ಯಸನಿ ಹಿಂಜರಿಯುವುದಿಲ್ಲ. ಹಲವು ರೀತಿಯ ಚಿಕಿತ್ಸೆಗಳು ಹಾಗೂ ಔಷಧಗಳು ಲಭ್ಯವಿದೆ. ವ್ಯಸನಿ ನಿರ್ಮೂಲನ ಕೇಂದ್ರಗಳನ್ನು ಭೇಟಿಯಾದರೆ ಸೂಕ್ತ ಸಲಹೆಗಳಿಂದ ಸಮಾಜದ ಸ್ವಾಸ್ಥ್ಯಕಾಪಾಡಬಹುದು ಎಂದರು.
ಈ ನಶೆ ಪದಾರ್ಥಗಳ ಬಳಕೆ ಹಾಗೂ ಮಾರಾಟ ಹೆಚ್ಚಾಗಿ ಪಕ್ಕದ ದೇಶಗಳ ಪರಿಸ್ಥಿತಿ ಹಾಗೂ ಆ ದೇಶದ ಯುವ ಜನಾಂಗದ ಪರಿಸ್ಥಿತಿ ಹೇಳಲಾರದಷ್ಟು ಗಂಭೀರವಾಗಿದೆ ಮತ್ತು ದೇಶದ ಆರ್ಥಿಕತೆಯ ಮೇಲೆ ತುಂಬಾ ಪ್ರಭಾವ ಬೀರಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಮಾತನಾಡಿ, ಯುವಕರೇ ದೇಶದ ಸಂಪತ್ತು. ಅವರಿಗೆ ಉಪಯೋಗವಾಗುವಂತಹ ಕಾನೂನು ಅರಿವು ಮತ್ತು ಮಾದಕ ವಸ್ತುಗಳ ನಿμÉೀಧ ಇಂತಹ ಕಾರ್ಯಕ್ರಮಗಳು ಯುವ ಜನತೆಗೆ ಬೇಕು. ಅದರ ಲಾಭವನ್ನು ನೀವು ಪಡೆದು ಇತರರಿಗೂ ಇದರ ವಿಚಾರ ತಿಳಿಸಿ ಎಂದು ಹೇಳಿದರು.
ಅಬಕಾರಿ ಇನ್ಸ್‍ಪೆಕ್ಟರ್ ಶೇಕ್ ಇಮ್ರಾನ್ ಮಾತನಾಡಿ, ಯಾವುದೇ ರೀತಿಯ ಉತ್ಪಾದನೆ, ತಯಾರಿಕೆ, ಕೃಷಿ, ಸ್ವಾಧೀನ, ಮಾರಾಟ, ಖರೀದಿ, ಸಾಗಣೆ, ಸಂಗ್ರಹಣೆ ಮತ್ತು ಅಥವಾ ಯಾವುದೇ ಮಾದಕ ದ್ರವ್ಯ ಅಥವಾ ಮನೋದ್ರಿಕಕಾರಿ ವಸ್ತುವಿನ ಸೇವನೆಯನ್ನು ನಿμÉೀಧಿಸುತ್ತದೆ. ಇಂತಹ ವಸ್ತುಗಳ ಬಳಕೆ ಮಾರಾಟ ತಿಳಿದುಬಂದಲ್ಲಿ ನಮಗೆ ತಿಳಿಸಿ. ಇದರಿಂದ ನೀವು ಸಮಾಜದ ದೇಶದ ಹಾಗೂ ಕುಟುಂಬದ ಸ್ವಾಸ್ಥ್ಯ ಬೆಳವಣಿಗೆಗೆ ಸಹಕಾರಿಯಾಗುತ್ತೀರಾ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಅನಿಲ್ ಕುಮಾರ್, ಕಾರ್ಯದರ್ಶಿ ಆರ್.ಗಂಗಾಧರ್, ಎಸ್‍ಜೆಎಂ ಫಾರ್ಮಸಿ ಕಾಲೇಜು ಪ್ರಾಂಶುಪಾಲ ಡಾ.ಟಿ.ಎಸ್.ನಾಗರಾಜ್, ಪ್ರಾಧ್ಯಾಪಕ ಡಾ.ಮಾರುತಿ ಟಿ.ಹೆಗ್ಗಟೆ, ಉಪನ್ಯಾಸಕ ವಿಕಾಸ್ ಆರ್ ಮಠದ್, ಡಿ ಫಾರ್ಮ್, ಬಿ.ಫಾರ್ಮ್ ವಿದ್ಯಾರ್ಥಿಗಳು ಇದ್ದರು. ರಂಜಿತಾ ಕಾರ್ಯಕ್ರಮ ನಿರೂಪಿಸಿದರು. ಚೈತ್ರ ಪ್ರಾರ್ಥಿಸಿದರು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page