ಯುವಜನತೆ ರಕ್ತದಾನ ಮಾಡಲು ಹಿಂಜರಿಯಬೇಡಿ: ಡಾ.ಸೈಯದ್ ಜುನೇದ್ ಖಾದರಿ

by | 23/01/24 | ಆರೋಗ್ಯ

ಚಳ್ಳಕೆರೆ: ದೇಶದಲ್ಲಿ ಪ್ರತಿನಿತ್ಯ ಹಲವು ರೀತಿಯ ಅಪಘಾತಗಳು ಸಂಭವಿಸಿ ರಕ್ತದ ಕೊರತೆಯಿಂದ ಅನೇಕ ಸಾವು ನೋವುಗಳು ಸಂಭವಿಸುತ್ತಿವೆ ಇಂತಹ ಘಟನೆಗಳು ನಮ್ಮ ಮನೆಗಳಲ್ಲಿ ಅಥವಾ ಸಂಬಂಧಿಕರಲ್ಲಿ ಸಂಭವಿಸಿದಾಗ ರಕ್ತದ ಮಹತ್ವ ಎಂತಹದು ಎಂದು ಅರಿವಿಗೆ ಬರುತ್ತದೆ ಎಂದು ಬೊಮ್ ಬೊಮ್ ಸಾನಿ ಆಧ್ಯಾತ್ಮಿಕ ಟ್ರಸ್ಟ್  ನ ಅಧ್ಯಕ್ಷ ಡಾ. ಸೈಯದ್ ಜುನೇದ್ ಖಾದರಿ ಅಭಿಪ್ರಾಯ ಪಟ್ಟರು.

ತಾಲೂಕಿನ ಡಿ ಸುಧಾಕರ್ ನಗರದ ಆಶ್ರಮದಲ್ಲಿ ಸೈಯದ್ ಹಯಾತ್ ಭಾಷಾ ಖಾದರಿ ರವರ 11ನೇ ಉರುಸ್ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮುಸ್ಲಿಂ ಸಮುದಾಯ ಹಬ್ಬ ಹರಿದಿನಗಳಲ್ಲಿ ದಾನ ಮಾಡುವುದು ಶ್ರೇಷ್ಠವೆಂದು ಭಾವಿಸಿದೆ ಹಾಗೆಯೇ ರಕ್ತದಾನ ಮಾಡುವುದು ಸಹ ದಾನಗಳಲ್ಲಿ ಶ್ರೇಷ್ಠದಾನವಾಗಿದೆ ಎಲ್ಲಾ ಜಾತಿ ಮತ ಧರ್ಮದ ಜನರಲ್ಲೂ ಸಹ ಒಂದೇ ರಕ್ತ ಹರಿಯುತ್ತಿದೆ ಒಬ್ಬ ವ್ಯಕ್ತಿ ಸಾವು ಬದುಕಿನ ನಡುವೆ ಹೋರಾಡುವ ಸಂದರ್ಭದಲ್ಲಿ ಜಾತಿ ಮತ ನೋಡದೆ ಆರೋಗ್ಯವಂತ ವ್ಯಕ್ತಿಯು ರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಸಿದ ಭಾವನೆ ಮನಸ್ಸಿನಲ್ಲಿ ಮೂಡುತ್ತದೆ ಯುವ ಜನತೆ ರಕ್ತದಾನ ಮಾಡುವುದರಿಂದ ಅಪಾಯ ಉಂಟಾಗುತ್ತದೆ ಎಂಬ ಮನೋಭಾವದಿಂದ ಹೊರಬಂದು ಪ್ರತಿ ಆರು ತಿಂಗಳಿಗೆ ಒಮ್ಮೆಯಾದರೂ ರಕ್ತದಾನ ಮಾಡಿದರೆ, ದೇಹವು ಉತ್ತಮ ಸ್ಥಿತಿಯಲ್ಲಿ ರೂಪುಗೊಳ್ಳುವುದಲ್ಲದೆ ಸಾಮಾಜಿಕ ಕಾರ್ಯ ಮಾಡಿದ ಸಾರ್ಥಕತೆ ಮೂಡುತ್ತದೆ ಗ್ರಾಮೀಣ ಭಾಗದ ಅನಕ್ಷರಸ್ಥರಲ್ಲಿ ರಕ್ತದಾನದ ಮಹತ್ವವನ್ನು ತಿಳಿಸುವ ಮೂಲಕ ಇಂತಹ ಕಾರ್ಯಕ್ರಮಗಳು ಹೆಚ್ಚು ನೆರವೇರಲು ಉತ್ತೇಜಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಯುವಕರಾದ ಅಮ್ರಾಜ್, ನೂರ್ ಅಹಮದ್ ನಯಾಜ್ ಅಹಮದ್ ರಿಯಾಜ್ ಅಹಮದ್ ಸಮೀರ್ ಬಾಷಾ ಯೂನಿಸ್ ಇಮ್ರಾನ್ ಮುಬಾರಕ್ ಜಬಿವುಲ್ಲಾ ಹನೀಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು‌.

Latest News >>

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ದೇವರ ಎತ್ತುಗಳ ನಿರ್ವಹಣೆಗೆ ಟ್ರಸ್ಟ್ ರಚನೆಗೆ ಪ್ರೇರೇಪಿಸಿ

ಚಿತ್ರದುರ್ಗ ಜೂನ್.14: ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ದೇವರ ಎತ್ತುಗಳು ಹೆಚ್ಚಾಗಿವೆ. ಈ ಜಾನುವಾರುಗಳ ನಿರ್ವಹಣೆಗೆ ಟ್ರಸ್ಟ್...

ಅಂತರಾಷ್ಟ್ರೀಯ ಯೋಗ ದಿನಾಚರಣೆ: ಯೋಗೋತ್ಸವ ಕಾರ್ಯಕ್ರಮ

ಚಿತ್ರದುರ್ಗ ಜೂನ್.14: ಚಿತ್ರದುರ್ಗ ನಗರದ ಮಠದ ಕುರುಬರಹಟ್ಟಿ ಸಮೀಪದ ಎಸ್‍ಜೆಎಂ ವಸತಿ ಶಾಲೆಯಲ್ಲಿ ಶುಕ್ರವಾರ ಜಿಲ್ಲಾ ಆಯುಷ್ ಇಲಾಖೆ,...

ಕುಡಿಯುವ ನೀರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆ ಅವಘಡ ಸಂಭವಿಸಿದಂತೆ ಎಚ್ಚರಿಕೆಯಿಂದ ಕ್ರಮ ವಹಿಸಿ

ಚಿತ್ರದುರ್ಗ ಜೂನ್14: ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆಯಂತಹ ಯಾವುದೇ ಅಹಿತಕರ ಅವಘಡ ಸಂಭವಿಸಿದಂತೆ ಮುಂಜಾಗ್ರತಾ ಕ್ರಮವಾಗಿ ಎಲ್ಲ ಅಗತ್ಯ...

ಮೃತ ರೇಣುಕಾಸ್ವಾಮಿ ಮನೆಗೆ ಮಾಜಿಉಪಮುಖ್ಯಮಂತ್ರಿ ಗೋವಿಂದಕಾರಜೋಳ,ಮಾಜಿ ಶಾಸಕರಾದ ತಿಪ್ಪಾರೆಡ್ಡಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಚಿತ್ರದುರ್ಗ: ನಗರದ ವಿ.ಆರ್.ಎಸ್ ಬಡಾವಣೆಯಲ್ಲಿರುವ ರೇಣುಕಾ ಸ್ವಾಮಿಯ ಕೊಲೆಯಾದ ಸಂಗತಿ ತಿಳಿದು ಮನಸ್ಸಿಗೆ ಅಘಾತವಾಗಿದ್ದು ಇಂದು ಅವರ ಮನೆಗೆ...

ನಾಲ್ಕು ಸಾವಿರಕ್ಕೂ ಹೆಚ್ಚಿನ ಜನರಿರುವ ಆದಿವಾಲ ಗ್ರಾಮಕ್ಕೆಒಂದು ರುದ್ರಭೂಮಿಯೇ ಇಲ್ಲದಂತಾಗಿದೆ.

ಹಿರಿಯೂರು: ಆದಿವಾಲ ಗ್ರಾಮದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚಿನ ಜನರಿದ್ದಾರೆ. ಆದರೆ ಆ ಗ್ರಾಮದ ಜನರಿಗೆ ಒಂದು ರುದ್ರ ಭೂಮಿಯೇ...

*ಸಫಾಯಿ ಕರ್ಮಚಾರಿಗಳಿಗೆ ಕಾನೂನಾತ್ಮಕವಾಗಿ ಎಲ್ಲ ಸೌಲಭ್ಯಗಳು ಸೀಗಬೇಕು; ವಿಳಂಬ, ತೀರಸ್ಕಾರ ಮಾಡಿದಲ್ಲಿ ಸಂಬಂಧಿಸಿದವರ ಮೇಲೆ ಕ್ರಮ: ರಾಷ್ಟ್ರೀಯ ಸಫಾಯಿ ಕಾರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ವೆಂಕಟೇಶನ್

ಧಾರವಾಡ ಜೂನ್.13: ಸಫಾಯಿ ಕರ್ಮಚಾರಿಗಳಾಗಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರಿಗೆ ರಾಷ್ಟ್ರೀಯ ಮತ್ತು ರಾಜ್ಯ ಸರಕಾರಗಳಿಂದ ಕಾನೂನಾತ್ಮಕವಾಗಿ...

ಅದ್ದೂರಿ ಭಗೀರಥ ಜಯಂತೋತ್ಸವ ಕಾರ್ಯಕ್ರಮ ಉಪ್ಪಾರ ಸಮಾಜದ ಯುವಗೌರವಾಧ್ಯಕ್ಷ ಕನಕದಾಸ್

ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಜೂನ್ 14ರಂದು ಹಿರಿಯೂರು: ತಾಲ್ಲೂಕಿನ ಆಲೂರು ಗ್ರಾಮದಲ್ಲಿ ದಿನಾಂಕ 14-ಜೂನ್-2024 ನೇ ಶುಕ್ರವಾರದಂದು ಶ್ರೀ...

ನೂತನ ಸಂಸದ ಗೋವಿಂದ ವಿವಿಧ ಕ್ಷೇತ್ರಗಳಲ್ಲಿ ಕೃತಜ್ಞತಾ ಸಮಾವೇಶ.

ಚಿತ್ರದುರ್ಗ ಜೂ. 12 ಚಿತ್ರದುರ್ಗದ ನೂತನ ಸಂಸದರಾದ ಗೋವಿಂದ ಕಾರಜೋಳರವರು ತಮ್ಮ ಗೆಲುವಿಗೆ ಶ್ರಮಿಸಿದ ಮತದಾರರು ಮತ್ತು ಬಿಜೆಪಿ ಹಾಗೂ ಜೆಡಿಎಸ್...

ಗ್ರಾಮೀಣ ಮತ್ತು ನಗರ ಕುಂಚಿಟಿಗ ಎಂದುತಾರತಮ್ಯ ಮಾಡದಂತೆ ಸಮಸ್ಥ ಕುಂಚಿಟಿಗರಿಗೆ ಕೇಂದ್ರ ಓಬಿಸಿ ಮೀಸಲಾತಿ ಕಲ್ಪಿಸಲು ಆಗ್ರಹ :ಎಸ್.ವಿ.ರಂಗನಾಥ್

ಹಿರಿಯೂರು: ಕುಂಚಿಟಿಗರಿಗೆ ಗ್ರಾಮೀಣ ಮತ್ತು ನಗರ ಕುಂಚಿಟಿಗ ಎಂದು ತಾರತಮ್ಯ ಮಾಡದಂತೆ ಸಮಸ್ಥ ಕುಂಚಿಟಿಗರಿಗೆ ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page