ಹಿರಿಯೂರು :
ನಮ್ಮ ತಾಲ್ಲೂಕಿನಲ್ಲಿ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಮೂರು ಪಕ್ಷಗಳಿಗೂ ಮತ ನೀಡಿ, ಅಧಿಕಾರಕ್ಕೆ ತಂದಿದ್ದೇವೆ, ಆದರೆ ಅವರ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಯಾವುದೇ ಕಚೇರಿಯಲ್ಲಿ ಹಣ ಕೊಟ್ಟರೆ ಮಾತ್ರ ಕೆಲಸ ಎಂಬಂತಾಗಿದೆ, ಹೊರಗಿನವರು ಬಂದು ಹಣ ಚೆಲ್ಲಿ ಚುನಾವಣೆಯಲ್ಲಿ ಗೆದ್ದ ಮೇಲೆ ಹಣ ಮಾಡುವುದೇ ಅವರ ಕೆಲಸವಾಗಿದೆ ಎಂಬುದಾಗಿ ಆಮ್ ಆದ್ಮಿ ಪಕ್ಷದ ಆಕಾಂಕ್ಷಿ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ತಾಲ್ಲೂಕಿನ ಕಸಬಾ ಹೋಬಳಿ ಕೂನಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕ್ಯಾತೆ ದೇವರ ಹಟ್ಟಿ ಗ್ರಾಮದಲ್ಲಿ ನಿನ್ನೆ ಸಂಜೆ ಆಮ್ ಆದ್ಮಿ ಪಕ್ಷದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭ್ರಷ್ಟಾಚಾರದ ಮೂಲ ಹುಡುಕುತ್ತಾ ಹೋದರೆ ಮತದಾರರೇ ಭ್ರಷ್ಟರು ಎಂಬಂತಾಗಿದೆ ಅವರು ಕೊಡುವ ಹಣಕ್ಕೆ ಮತ ಹಾಕಿದ್ದಾರೆ ಭ್ರಷ್ಟಾಚಾರವನ್ನು ಕಡಿವಾಣ ಹಾಕಲು ಸಾಧ್ಯವಿಲ್ಲ ಆದ್ದರಿಂದ ಮತದಾರರು ಜಾಗೃತರಾಗಿ ದೇಶದಲ್ಲಿ ಒಂದು ಹೊಸ ಬದಲಾವಣೆ ತರಬೇಕಿದೆ ಎಂಬುದಾಗಿ ಅವರು ಹೇಳಿದರಲ್ಲದೆ,
ಈ ನಿಟ್ಟಿನಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣ, ಸಾರ್ವಜನಿಕರ ಆರೋಗ್ಯ ಸೇರಿದಂತೆ ರೈತರಿಗೆ ಬೆಳೆದ ಎಲ್ಲಾ ಬೆಳೆಗಳಿಗೂ ಬೆಂಬಲ ಬೆಲೆ ಕೊಡುತ್ತಾ ಉತ್ತಮವಾದಂತ ಪಂಜಾಬ್ ಮತ್ತು ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಅಮ್ ಆದ್ಮಿ ಪಕ್ಷಕ್ಕೆ ನಾವೆಲ್ಲರೂ ಬೆಂಬಲಿಸಿ, ಹಣ ಪಡೆಯದೆ ಮತ ಹಾಕಬೇಕು ಎಂಬುದಾಗಿ ಮನವಿ ಮಾಡಿದರು.
ನಾನು ಸುಮಾರು 22 ವರ್ಷಗಳಿಂದ ಅನೇಕ ಸಂಘ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ಅನೇಕ ಹೋರಾಟಗಳನ್ನ ಮಾಡಿ ಸರ್ಕಾರದ ಗಮನ ಸೆಳೆದು ರೈತರಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದೇನೆ ನಾನು ಒಬ್ಬ ಹೋರಾಟಗಾರನಾಗಿ ದೇಶದಲ್ಲೇ ಪ್ರಾಮಾಣಿಕ ಆಡಳಿತ ನೀಡುತ್ತಿರುವ ಇಂಥ ಪಕ್ಷಕ್ಕೆ ಬೆಂಬಲಿಸುವುದರ ಜೊತೆಗೆ ಈ ಪಕ್ಷದ ಅಭ್ಯರ್ಥಿಯಾಗಬೇಕೆಂದು ಬಯಸಿದ್ದೇನೆ ಎಂದರಲ್ಲದೆ,
ನಮ್ಮ ತಾಲೂಕಿನಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಕಾಡುಗೊಲ್ಲ ಮತದಾರರಿದ್ದು ಎಲ್ಲರೂ ನನ್ನನ್ನು ಬೆಂಬಲಿಸಬೇಕು ರಾಜ್ಯ ಸರ್ಕಾರದಲ್ಲಿ ಯಾವುದೇ ಒಬ್ಬ ನಿಜವಾದ ಕಾಡುಗೊಲ್ಲ ಪ್ರತಿನಿಧಿ ಇಲ್ಲದೆ ಇರುವುದರಿಂದ ಕಾಡುಗೊಲ್ಲರಿಗೆ ಎಸ್ ಟಿ ಮೀಸಲಾತಿ ಪಡೆಯಲು ವಿಫಲರಾಗಿದ್ದೇವೆ, ಆದ್ದರಿಂದ ಈ ಬಾರಿ ನನಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಗ್ರಾಮದ ಮುಖಂಡರುಗಳಾದ ಪಾಂಡಪ್ಪ ತಿಪ್ಪೇಸ್ವಾಮಿ ಮೂಡಲಗಿರಿಯಪ್ಪ ಮಾತನಾಡಿ, ಕಾಡುಗೊಲ್ಲ ಬುಡಕಟ್ಟು ಸಂಪ್ರದಾಯದ ಕುಲದಲ್ಲಿ ಹುಟ್ಟಿರುವ ನಮ್ಮ ಅಳಿಯ ಮತ್ತು ಅಣ್ಣ ತಮ್ಮ ಆಗಿರುತ್ತೀಯ ನಮ್ಮ ವಂಶದ ಕುಡಿ ಹೋರಾಟದ ಮೂಲಕ ರಾಜಕೀಯ ಪ್ರವೇಶ ಮಾಡಿರುವುದು ನಮ್ಮೆಲ್ಲರಿಗೂ ಒಂದು ಶಕ್ತಿ ಇದ್ದಂತೆ ಎಂದರಲ್ಲದೆ,
ನಮ್ಮ ಗ್ರಾಮದ ಖ್ಯಾತೆಲಿಂಗನ ಆಶೀರ್ವಾದ ನಿಮ್ಮ ಮೇಲಿದೆ ನಮ್ಮ ಗ್ರಾಮದ ಎಲ್ಲರೂ ಪಕ್ಷ ಮರೆತು ಈ ಬಾರಿ ನಮ್ಮ ಗ್ರಾಮದ ಎಲ್ಲ ಮತಗಳನ್ನು ನಿಮಗೆ ಹಾಕಲಿದ್ದೇವೆ ಎಂಬುದಾಗಿ ಈ ಸಂದರ್ಭದಲ್ಲಿ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕಾಟಪ್ಪ, ಶಿವಣ್ಣ, ನಿಂಗಪ್ಪ, ಎತ್ತಪ್ಪ, ಮೂರ್ತಿ, ಕರಿಯಪ್ಪ, ಕಲ್ಲಪ್ಪ, ಜಗ್ಗರಿ, ಕಾಟಪ್ಪ, ಈಶ್ವರಪ್ಪ, ಒಟ್ಟಪ್ಪ, ರಾಮಕೃಷ್ಣ, ಕೃಷ್ಣಮೂರ್ತಿ, ಸೇರಿದಂತೆ ಅನೇಕ ಗ್ರಾಮಸ್ಥರು ಭಾಗವಹಿಸಿದ್ದರು.
ಯಾವುದೇ ಕಚೇರಿಯಲ್ಲಿ ಹಣ ಕೊಟ್ಟರೆ ಮಾತ್ರ ಕೆಲಸ ಎಂಬಂತಾಗಿದೆ :ಆಮ್ ಆದ್ಮಿಪಕ್ಷದ ಕೆ.ಟಿ.ತಿಪ್ಪೇಸ್ವಾಮಿ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments