ಮೋಜಿಣಿ ಲಾಗಿನ್ ಸ್ಟೇಟಸ್ ಯಡವಟ್ಟಿನಿಂದ ರೈತರ ಜಮೀನು ಅಲಾಂಟ್ ಮಾಡಲು ಸಾಧ್ಯವಾಗದೇ ತಿಂಗಳುಗಟ್ಟಲೆ ರೈತರು ಕಚೇರಿಗೆ ಅಲೆದಾಡಿ ಹೈರಾಣು..!.

by | 03/01/24 | ಜನಧ್ವನಿ


ಚಳ್ಳಕೆರೆ ಜನಧ್ವನಿ ವಾರ್ತೆ ಜ.3. ಕಂದಾಯ ಇಲಾಖೆಯ ಮೋಜಣಿ ತಂತ್ರಾಂಶದಲ್ಲಿನ ಲೋಪ, ಸರ್ವರ್ ಸಮಸ್ಯೆಯಿಂದ ಜಮೀನಿನ ಹದ್ದುಬಸ್ತಿಗೆ ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೆ ಕಚೇರಿಗೆ ಅಲೆದರೂ ಬಗೆಹರಿಯದ ಸಮಸ್ಯೆ ಯಾರಿಗೇಳಬೇಕು ನಮ್ಮ ಪ್ರಾ ಬ್ಲಮ್ ಎಂಬಂತಾಗಿದೆ ರೈತರ ಗೋಳು.

ಹೌದು ಇದು ಚಳ್ಳಕೆರೆ ತಾಲೂಕಿನ ಕಂದಾಯ ಇಲಾಖೆಯಲ್ಲಿ ಸೇವೆ ಪಡೆಯಲು ಆಗುವ ವಿಳಂಬ ತಪ್ಪಿಸಲು ಸರಕಾರ ಹಲವು ತಂತ್ರಾಂಶಗಳನ್ನು ಅಳವಡಿಸಲಾಗುತ್ತಿದೆ ತಂತ್ರಾಂಶ ಕೈಕೊಟ್ಟಾಗ ಸರಿಪಡಿಸಲು ವಿಳಂಬದೋರಣೆ ಮಾಡುತ್ತಿದ್ದು ಇಲಾಖೆ ವಿರುದ್ದ ರೈತರು ಹಿಡಿ ಶಾಪ ಹಾಕುತ್ತಾರೆ. ರೈತರ ಪಹಣಿ ತಪ್ಪಾಗಿದ್ದರೆ ಜಮೀನಿನ ಹದ್ದುಬಸ್ತು, ಇ–ಪೋಡಿ, ಇ–ಸ್ವತ್ತು ಸೇವೆ ಪಡೆಯಲು ಮೋಜಣಿ ತಂತ್ರಾಂಶದ ಮೂಲಕ ಆಯಾ ಹೋಬಳಿಯ ನಾಡಕಚೇರಿಗಳಲ್ಲಿ ನಿಗಧಿತ ಶುಲ್ಕ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುತ್ತಾರೆ. ಈ ತಂತ್ರಾಂಶ ಪದೇ ಪದೇ ಕೈಕೊಡುವುದರಿಂದ ರೈತರು ತಾಲ್ಲೂಕು ಕಚೇರಿ, ನಾಡ ಕಚೇರಿಗಳಿಗೆ ಅಲೆದಾಡುವುದು ಒಂದಾದರೆ ಮತ್ತೊಂದು ಸಮಸ್ಯೆಯಾಗಿದ್ದು ಆಕಾರ ಬಂದು. ತತ್ಕಾಲಿಕ ಪೋಡಿ.11ಎ.11ಬಿ ಸೇರಿದಂತೆ ತಪ್ಪಾಗಿರುವ ಜಮೀನು ದಾಖಲೆ ಸರಿಪಡಿಸಲು ಅರ್ಜಿ ಸಲ್ಲಿಸಿದರೆ ಸರ್ವೆ ಇಲಾಖೆಗೆ ಹೋಗುವ ಬದಲು ಕಂದಾಯ ಇಲಾಖೆ ಆರ್ ಆರ್ ಟಿ ವಿಭಾಗಕ್ಕೆ ಹೋಗುತ್ತವೆ ಅಲ್ಲಿ ಇವು ಏಕೆ ಬಂದಿವೆ ಎಂದು ಪರಿಶೀಲನೆ ಮಾಡ ಬೇಕೆಂದರೆ ಆರ್ ಆರ್ ಟಿ ಶಾಖೆಯ ಶಿರಸ್ತೆದಾರ್ ಲಾಗಿನ್ ಡೆಡ್ಡಾಗಿದೆ ಎನ್ನಲಾಗಿದೆ. ಸರಕಾರಿ ಖರಾಬು. ಸರಕಾರಿ ಪಹಣಿಯಾಗಿದ್ದಾರೆ ಮಾತ್ರ ಆರ್ ಆರ್ ಟಿ ಶಾಖೆಯ ಶಿರಸ್ತೆದಾರ್ ಲಾಗಿನ್ ಗೆ ಹೋಗ ಬೇಕು ಆದರೆ ಮೋಜಿಣಿ ತಂತ್ರಾಂಶದ ಲೋಪದಿಂದಾಗಿ ಸರ್ವೆ ಇಲಾಖೆ ಅಧಿಕಾರಿಗಳ ಲಾಗಿನ್ ಬದಲಾಗಿ ಕಂದಾಯ ಇಲಾಖೆ ಶಿರಸ್ತೆದಾರ್ ಲಾಗಿನ್ ಗೆ ಹೋಗುತ್ತವೆ ಎನ್ನಲಾಗಿದೆ.

ತಾಲ್ಲೂಕಿನ ಪರಶುರಾಂಪುರ ನಾಡ ಕಚೇರಿಯಲ್ಲಿ ಚೌಳೂರು ಗ್ರಾಮದ ತಿಮ್ಮಯ್ಯ ಎಂಬ ರೈತ ಚೌಳೂರು ಗ್ರಾಮದ 84/ರಲ್ಲಿ 1 ಎಕರೆ 15 ಗುಂಟೆ ಜಮೀನಿದ್ದು ಪಹಣಿಯಲ್ಲಿ84!1 ರ ಬದಲಾಗಿ84/* ಎಂದು ನಮೂದಾಗಿರುವುದರಿಂದ ಪಹಣಿಯಲ್ಲಿನ ತಪ್ಪು ಸರಿಪಡಿಸಿಕೊಳ್ಳಲು ತತ್ಕಾಲಿಕ ಪೋಡಿಗೆ ಶುಲ್ಕ ಕಟ್ಟಿ 15-8-2023ರಂದು ಪರಶುರಾಂಪುರ ನಾಡಕಚೇರಿಯಲ್ಲಿ ಹದ್ದು ಬಸ್ತಿಗೆ ಶುಲ್ಕ ಕಟ್ಟಿ ಸುಮಾರು ನಾಲ್ಕು ತಿಂಗಳಿಂದ ನಾಡ ಕಚೇರಿ.ತಾಲೂಕು ಭೂಮಾಪನ. ತಾಲೂಕು ಕಚೇರಿ. ಬೆಂಗಳೂರು ಭೂಮಾಪನ ಆಯುಕ್ತರ ಕಚೇರಿಗಳಿಗೆ ಅಲೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಪ್ರತಿದಿನವೂ ಮೋಜಣಿ ತಂತ್ರಾಂಶದಲ್ಲಿ ಸರ್ವರ್ ಲಾಗಿನ್ ಎರರ್ ಎಂಬ ಸಂದೇಶ ತೋರಿಸುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ಮೇಲಧಿಕಾರಿಗಳಿಗೆ ತಿಳಿಸಿ ಎಂಬ ಉತ್ತರವನ್ನು ಸಿಬ್ಬಂದಿ ನೀಡುತ್ತಿದ್ದಾರೆ. ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು’ ಎಂದು ಹದ್ದುಬಸ್ತಿಗೆ ಅರ್ಜಿ ಸಲ್ಲಿಸಿದ
ರೈತರು ಇಂದು ಸರಿಯಾಗಬಹುದು ನಾಳೆ ಸರಯಾಗ ಬಹುದು ಎಂದು ಕಚೇರಿಗಳ ಬಳಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಅರ್ಜಿ ಸಲ್ಲಿಕೆಯಾಗಿದೆ. ಒಬ್ಬ ರೈತ ಅರ್ಜಿ ಸಲ್ಲಿಸಲು ವಾರಗಟ್ಟಲೆ ಕಾಯಬೇಕು ಅರ್ಜಿ ಸಲ್ಲಿಸಿದ ನಂತರವೂ ಯಾರ ಲಾಗಿನ್ ಗೆ ಹೋಗಿದೆ ಎಂದು ತಿಂಗಳು ಕಳೆದರೂ ಕೆಲಸ ಆಗದೆ ಕಚೇರಿಗಳ ಸುತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರ ಅಳಲಾಗಿದೆ. ಇದೆ’ ಎಂದರು.

ಭೂಮಾಪನ ಇಲಾಖೆಯ ಎಡಿಎಲ್ ಆರ್ ಗಂಗಯ್ಯ ಜನಧ್ವನಿ ಡಿಜಿಟಲ್ ಮೀಡಿಯಾ ದೊಂದಿಗೆ ಮಾತನಾಡಿ ರೈತರು ಆಯಾ ವ್ಯಾಪ್ತಿಯ ನಾಡ ಕಚೇರಿಯಲ್ಲಿ ಹದ್ ಬಸ್ತು ಮಾಡಿಸಲು ಶುಲ್ಕ ಕಟ್ಟಿ ಅರ್ಜಿ ಸಲ್ಲಿಸುತ್ತಾರೆ ಆಕಾರ್ ಬಂದ್ .ತತ್ಕಾಲ್ ಪೋಡಿ.11b. 11e. ಎಲ್ಲಾ ಸರಿ ಇದ್ದರೂ ಮೋಜಿಣಿ ತಂತ್ರಾಂಶದ ದೋಶದಿಂದ ಕಂದಾಯ ಇಲಾಖೆಯ ಆರ್ ಆರ್ ಟಿ ಶಾಖೆಗೆ ವರ್ಗಾವಣೆಯಾಗುತ್ತವೆ.ಸರಕಾರಿ ಖರಾಬ್ ಹಾಗೂ.ಸರಕಾರಿ ಭೂಮಿ ಮಿಸ್ ಮ್ಯಾಚ್ ಆದವುಗಳ ಮಾತ್ರ ಅವರ ಲಾಗಿನ್ ಗೆ ಹೋಗುತ್ತಿವೆ ಈರೀತಿ ಸುಮಾರು 30 ಕ್ಕೂ ಹೆಚ್ಚು ರೈತರ ಸಮಸ್ಯೆಯಾಗಿದ್ದು ದಿನ ನಿತ್ಯ ಕಚೇರಿಗೆ ಅಲೆದಾಡುತ್ತಿದ್ದಾರೆ ನಾವೂ ಸಹ ಬೆಂಗಳೂರಿನ ಭೂಮಾಪನ ಇಲಾಖೆಯ ಆಯುಕ್ತರಿಗೆ ಪತ್ರ ಬರೆದರೂ ಸಹ ತಂತ್ರಾಂಶದ ದೋಷವನ್ನು ಸರಿಪಡಿಸಲು ಮುಂದಾಗಿಲ್ಲ ದಿನ ನಿತ್ಯ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸುವ ಜತೆಗೆ ಪತ್ರ ಬರೆಯಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಆಕಾರಬಂದಿಗೂ ಆರ್.ಟಿ.ಸಿ ಗೂ ತಾಳೆ ಇದ್ದು, ಈ ಕೆಳಲನ ಸ.ನಂ ಶಿರಸ್ತೆದಾರರ ಲಾಲನ್ ಗೆ ಹೋಗಿದ್ದು, ಶಿರಸ್ತೆದಾರರ ಮೊದಲನೇ ಹಂತ ತೆಗೆದುಕೊಂಡಿದ್ದು, ಎರಡನೇ ಹಂತದಲ್ಲಿ ಬಾಕಿ ಇದ್ದು ಆಕಾರಬಂದಿಗೂ ಆರ್.ಟಿ.ಸಿ ಗೂ ಮಿಸ್ ಮ್ಯಾಚ್ ಎಂದು ಬರುತ್ತಿರುವ ಬಗ್ಗೆ, ಹಾಗೂ ಇನ್ನು ಕೆಲವು ಕಡತಗಳು ಮೋಜಿಣಿ ಲಾಗಿನ್ ಸ್ಟೇಟಸ್ ಆರ್ ಆರ್ ಟಿ ಲಾಗಿನ್ ತೋರಿಸುತ್ತಿದ್ದು, ಸದರಿ ಯವರ ಲಾಗಿನ್ ತೋರಿಸುತ್ತಲ್ಲದರ ಬಗ್ಗೆ, ಸಿ.ಎಲ್ ಎಸ್ ನಂ-199725 ****** ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಆಕಾರಬಂಐಗೂ ಆರ್.ಟಿ.ಸಿ ಗೂ ತಾಳೆ ಇದ್ದು, ಈ ಕೆಳಗಿನ ಸ.ನಂ ಶಿರಸ್ತೆದಾರರ ಲಾಲನ್ ಗೆ ಹೋಗಿದ್ದು, ಶಿರಸ್ತೆದಾರರ ಮೊದಲನೇ ಹಂತ ತೆಗೆದುಕೊಂಡಿದ್ದು, ಎರಡನೇ ಹಂತದಲ್ಲಿ ಬಾಕಿ ಇದ್ದು ಆಕಾರಬಂದಿಗೂ ಆರ್.ಟಿ.ಸಿ ಗೂ ಮಿಸ್ ಮ್ಯಾಚ್ ಎಂದು ಬರುತ್ತಿದ್ದು, ಅಲಾಟೆಂಟ್ ಗೆ ಕಳುಹಿಸಲು ಡಿಲೇ ಆಗುತ್ತಿದ್ದು, ಸದರಿ ಸಮಸ್ಯೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಪ್ರತಿ ದಿನ ಸಾರ್ವಜನಿಕರೂ ಕಛೇರಿಗೆ ಬೇಟಿ ನೀಡುತ್ತಿರುತ್ತಾರೆ. ಸದರಿ ಸಮಸ್ಯೆಯಿಂದಾಗಿ ಅಲಾಂಟ್ ಮಾಡಲು ಸಾಧ್ಯವಾಗದೇ ಕೆಲಸವು ನಿಂತಿದೆ. ಸದರಿ ಸಮಸ್ಯೆಯನ್ನು ಬೇಗ ಸರಿಪಡಿಸಿಕೊಡಬೇಕಾಗಿ ಸಲ್ಲಿಸಿದೆ.

ಜನರ ಬಳಿ ಸರಕಾರ ಎಂದು ಹೇಳುವ ಸರಕಾರ ಸರಕಾರಿ ಕಚೇರಿಗಳಿಗೆ ಜನರ ಅಲೆದಾಟ ತಪ್ಪಿಸಲು ಜನರಾ ದರ್ಶನ. ಜನಸಂಪರ್ಕ ಸಭೆ. ಜನಸ್ಪಂದನಾ ಸಭೆ . ಸೇರಿದಂತೆ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗುತ್ತದೆ ಆದರೆ ತಂತ್ರಾಂಶ ಕೈಕೊಟ್ಟಾಗ ಸರಿಪಡಿಸಲು ವಿಳಂಭ ದೋರಣೆಯಿಂದ ಸಾರ್ವಜನಿಕರು. ರೈತರು ಸರಕಾರಿ ಕಚೇರಿಗಳಿಗೆ ತಿಂಗಳು ಗಟ್ಟಲೆ ಅಲೆದಾಡುವಂತಾದರೂ ದುರಸ್ಥಿ ಪಡಿಸಲು ಮಾತ್ರ ಅಧಿಕಾರಿಗಳು ಇಚ್ವಾ ಶಕ್ತಿ ತೋರುತ್ತಿಲ್ಲ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತವೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಮೋಜಿಣಿ ತಂತ್ರಾಂಶದಲ್ಲಿ ಲೋಪದೋಷಗಳನ್ನು ಸರಿಪಡಿಸಿ ರೈತರ ಅಲೆದಾಟ ತಪ್ಪಿಸುವರೇ ಕಾದು ನೋಡ ಬೇಕಿದೆ..
ಚೌಳೂರು ಗ್ರಾಮದ ರೈತ ರೇಣುಕಾ ಪ್ರಸಾದ್ ಜನಧ್ವನಿ ಡಿಜಿಟಲ್ ಮೀಡಿಯಾ ದೊಂದಿಗೆ ಅಳಲು ತೋಡಿಕೊಂಡಿರುವುದು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page