ಚಳ್ಳಕೆರೆ ಜನಧ್ವನಿ ವಾರ್ತೆ ಮಾ.23
ಬುಡಕಟ್ಟು ಸಂಸ್ಕೃತಿ ಹಿನ್ನೆಲೆ ಹೊಂದಿರುವ ಮ್ಯಾಸ ನಾಯಕರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಮತ್ತು ಚಳ್ಳಕೆರೆ ಈ ಎರಡು ತಾಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಕಾಂಗ್ರೆಸ್ ಪಕ್ಷದಿಂದ
ಕಳೆದ ವಿಧಾಸಭೆ ಚುನಾವಣೆಯಲ್ಲೂ ಮೊಳಕಾಲ್ಮುರು ಕ್ಷೇತ್ರದಲ್ಲಿ ಮ್ಯಾಸ ನಾಯಕ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದ್ದು, ಈ ಬಾರಿಯು ನೀಡಿದಲ್ಲಿ ಪಕ್ಷ ಗೆಲವು ಸಾದಿಸುವುದು. ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷ ಮತದಾರರಿರುವ ಮ್ಯಾಸನಾಯಕ ಸಮುದಾಯದ ಅಭ್ಯರ್ಥಿಗೆ ಮ್ಯಾಸನಾಯಕ ಸಮುದಾಯದ ಮುಖಂಡ ಡಾ.ಬಿ. ಯೋಗೇಶ್‌ಬಾಬು ಅವರಿಗೆ ಟಿಕೆಟ್ ನೀಡಬೇಕು. ಕ್ಷೇತ್ರದಲ್ಲಿ ಮ್ಯಾಸ ನಾಯಕ ಸಮುದಾಯಕ್ಕೆ ಆದ್ಯತೆ ನೀಡುವುದರಿಂದ ಅತಿಹೆಚ್ಚು ಮ್ಯಾಸ ನಾಯಕ ಸಮುದಾಯವಿರುವ ಚಳ್ಳಕೆರೆ, ಸಂಡೂರು, ಕೂಡ್ಲಿಗಿ, ಹಿರಿಯೂರು, ಹೊಸಪೇಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಲಿದೆ. ಕ್ಷೇತ್ರದಲ್ಲಿ ನಿರಂತರವಾಗಿ ಪಕ್ಷದ ಸಂಘಟನೆ ಮತ್ತು ಸಮುದಾಯಗಳ ಸಂಕಷ್ಟಗಳಲ್ಲಿ ಬಾಗಿಯಾಗಿರುವ ಯೋಗೇಶ್‌ಬಾಬು ಅವರಿಗೆ ಈ ಬಾರಿ ಕ್ಷೇತ್ರದ ಜನತೆ ಗೆಲುವು ತಂದುಕೊಡಲಿದ್ದಾರೆ. ಯೋಗೇಶ್‌ಬಾಬು ಹೊರತಾಗಿ ಬೇರೆಯವರಿಗೆ ಟಿಕೆಟ್ ನೀಡಿದ್ದಲ್ಲಿ ಚುನಾವಣೆಯನ್ನು ಬಹಿಷ್ಕರಿಸಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಬೊಮ್ಮಣ್ಣ ಮಾತನಾಡಿ,ಮೊಳಕಾಲ್ಮುರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಮ್ಯಾಸ ನಾಯಕ ಸಮುದಾಯಕ್ಕೆ ಟಿಕೆಟ್ ಕೊಡದಿದ್ದಲ್ಲಿ ಚುನಾವಣೆ ಬಹಿಷ್ಕಾರ ಮಾಡಬೇಕಾಗುತ್ತದೆ ಎಂದರೆ, ಗ್ರಾಪಂ ಸದಸ್ಯ ಒ. ರವಿ ಮಾತನಾಡಿ, ಮ್ಯಾಸ ನಾಯಕರಿಗೆ ಬಿಟ್ಟು ಹೊರಗಿನ ಅಭ್ಯರ್ಥಿ ವಿ.ಎಸ್.ಉಗ್ರಪ್ಪಗೆ ಟಿಕೆಟ್ ನೀಡಿದಲ್ಲಿ ಚುನಾವಣೆ ಬಹಿಷ್ಕಾರ ಮಾಡುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಪಂ ಅಧ್ಯಕ್ಷೆ ಮಂಜಮ್ಮ, ಮಂಜಣ್ಣ, ತಾಪಂ ಮಾಜಿ ಸದಸ್ಯ ಚಂದ್ರಣ್ಣ, ಮ್ಯಾಸನಾಯಕ ಜಾಗೃತಿ ವೇದಿಕೆ ಅಧ್ಯಕ್ಷ ಪಾಲಯ್ಯ, ಗ್ರಾಪಂ ಸದಸ್ಯರಾದ ಶ್ರೀನಿವಾಸ್, ದೇವರಹಳ್ಳಿ ರಾಮಪ್ಪ, ಮುಖಂಡರಾದ ಚನ್ನಾಗನಹಳ್ಳಿ ರುದ್ರಮುನಿ, ಯಾದಲಗಟ್ಟೆ ಜಗನ್ನಾಥ, ಮೈರಾಡ ಪಾಲಯ್ಯ, ಹೇಮಣ್ಣ, ಎಚ್. ರಾಜಣ್ಣ, ದೊಡ್ಡಯ್ಯ, ಹೀಮಂತ, ಎನ್. ನಾಗರಾಜ ಇತರರಿದ್ದರು.
ಮೊಳಕಾಲ್ಮುರು ವಿಧಾಸಭೆ ಕ್ಷೇತ್ರದ ಟಿಕೆಟ್ ಮ್ಯಾಸ ನಾಯಕ ಸಮುದಾಯಕ್ಕೆ ನೀಡದಿದ್ದಲ್ಲಿ ಚುನಾವಣೆ ಬಹಿಷ್ಕಾರ ಮ್ಯಾಸನಾಯಕ ಜಾಗೃತಿ ವೇದಿಕೆ ಮುಖಂಡರು ಎಚ್ಚರಿಸಿದರು.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments