ಮೂಡಲಪಾಯ – ಬಯಲಾಟ ಕಲಾವಿದರನ್ನು ಗುರುತಿಸಿ ಸರಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿರುವುದು ಸಂತಸ ತಂದಿದೆ. ಕಲಾವಿದ – ಬಿಷ್ಣಹಳ್ಳಿ ಸಿದ್ದಪ್ಪ ದಳವಾಯಿ

by | 06/11/23 | ಸುದ್ದಿ

ಕೂಡ್ಲಿಗಿ ನ.6. ಮೂಡಲಪಾಯ – ಬಯಲಾಟ ಕಲಾವಿದರನ್ನು ಗುರುತಿಸಿ ಸರಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿರುವುದು ಸಂತಸ ತಂದಿದೆ.
ಕಲಾವಿದ – ಬಿಷ್ಣಹಳ್ಳಿ ಸಿದ್ದಪ್ಪ ದಳವಾಯಿ.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಿಷ್ಣಹಳ್ಳಿ ಸಿದ್ದಪ್ಪ ದಳವಾಯಿ ಅವರು ಮತ್ತು ಗ್ರಾಮದ ಹಿರಿಯ ಮುಖಂಡರು ಕೂಡ್ಲಿಗಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರನ್ನು ದಿನಾಂಕ 6-11-23 ರಂದು ನರಸಿಂಹಗಿರಿ ಸ್ವ ಗ್ರಾಮಕ್ಕೆ ಭೇಟಿ ನೀಡಿ ಸನ್ಮಾನಿಸಿದರು. ಕಲಾವಿದರು ಮಾತನಾಡಿ, ರಾಯಚೂರು ನಿಂದ ಸಿರಾ ದವರೆಗೂ ‌ಮೂಡಲಪಾಯ -ಬಯಲಾಟ ಕಲಾವಿದರನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಮೊದಲ ಬಾರಿಗೆ ಕೊಟ್ಟಿರುವುದಕ್ಕೆ ಸಂತಸ ತಂದಿದೆ ಎಂದೂ ಶಾಸಕರಿಗೆ ಧನ್ಯವಾದಗಳು ತಿಳಿಸಿದರು.

ಶಾಸಕರು ಮಾತನಾಡಿ , ಬಿಷ್ಣಹಳ್ಳಿ ಸಿದ್ದಪ್ಪ ದಳವಾಯಿ ಅವರನ್ನು ಒಳಗೊಂಡಂತೆ ನೂರಾರು ಕಲಾವಿದರು ಸುಮಾರು 45 ವರ್ಷಗಳ ಕಾಲ ಉಚಿತವಾಗಿ ಬಿಷ್ಣಹಳ್ಳಿ ಗ್ರಾಮದ ಚಿಕ್ಕ ಹಳ್ಳಿಯ ಬಯಲಾಟ ಮತ್ತು ಯಕ್ಷಗಾನ ಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದಕ್ಕೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸರಕಾರ ಕೊಟ್ಟು ಗೌರವಿಸಿದೆ. ಇದರಲ್ಲಿ ನನ್ನದು ಯಾವುದೇ ಪಾತ್ರ ಇಲ್ಲ ಎಂದೂ ತಿಳಿಸಿದರು. ಈ ಸಂದರ್ಭದಲ್ಲಿ ಬಿಷ್ಣಹಳ್ಳಿ ಗ್ರಾಮದ ಕಲಾವಿದರು, ಶಿಕ್ಷಕರು ಮತ್ತು ಮುಖಂಡರು ಉಪಸ್ಥಿತರಿದ್ದರು. 🌱

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *