ಚಳ್ಳಕೆರೆ ಜನಧ್ವನಿ ವಾರ್ತೆ ಫೆ.22. ಮಾರ್ಚ್ 10 ರೊಳಗೆ ರೈತರು ಕಟ್ಟಿದ ಬೆಳೆವಿಯನ್ನು ಬಿಡುಗಡೆ ಮಾಡದಿದ್ದರೆ ವಿಧಾನಸಭಾ ಚುನಾವಣೆಗೆ ಬಹಿಷ್ಕಾರ ಮಾಡಲಾಗುವುದು ಎಂದು ರಾಜ್ಯ ರೈತ ಸಂಗದ ಹಿರಿಯ ಉಪಾಧ್ಯಕ್ಷ ಕೆ.ಪಿ
ಭೂತಯ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರೈತರು ತಮ್ಮ ಹೆಂಡ್ತಿ, ಮಗಳ ಒಡವೆ ಅಡ ಇಟ್ಟು ವಿಮೆ ಕಟ್ಟಿದ್ದಾರೆ. ಬಿತ್ತಿದ ಬೀಜ ಸಹ ಪುನಃ ಬಾರದೆ ಬೆಳೆ ಕೈಕೊಟ್ಟಿದೆ. ಒಡವೆಗಳು ಹರಾಜಿಗೆ ಬಂದಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ವಿಮಾ ಕಂಪೆನಿಯವರು ಬಿಡಿಗಾಸೂ ಕೊಡದೆ ರೈತರನ್ನು ಹಗಲು ದರೋಡೆ ಮಾಡ್ತಿದ್ದಾರೆ . ಬೆಳೆ ನಷ್ಟ ಪರಿಹಾರದಲ್ಲೂ ಸುಮಾರು 6 ಸಾವಿರ ರೈತರ ಖಾತೆಗೆ ಹಣ ಬಿಡುಗಡೆ ಮಾಡಿಲ್ಲ.
ಚಳ್ಳಕೆರೆ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆ ಕಂಪನಿಗಳು ಮಾರ್ಚ್ ಹತ್ತರ ಒಳಗೆ ರೈತರ ಖಾತೆಗೆ ಹಣ ಜಮವಾಗದಿದ್ದರೆ ರೈತರ ಗ್ರಾಮಗಳಿಗೆ ರಾಜಕಾರಣಿಗಳು ಊರ ಒಳಗೆ ಪ್ರವೇಶವಿಲ್ಲ ಎಂಬ ನಾಮಫಲಕ ಹಾಕಲಾಗುವುದು ಎಂದು ರೈತ ಸಂಘದ ಮುಖಂಡ ಕೆಪಿ ಭೂತಯ್ಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಗುಡುಗಿದರು.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ರೈತರಿಗೆ ಉಪಯುಕ್ತ ಬೆಳೆ ವಿಮೆಯನ್ನು 2016 ನೇ ಬಿಡುಗಡೆಯಾಗಿ ನಂತರ 17 18 ನೇ ಇಸವಿಯಲ್ಲಿ ನೂರು ಕೋಟಿ ರೈತರ ಬೆಳೆ ವಿಮೆ ಬಿಡುಗಡೆಯಾಗಿದ್ದು ಅದರಲ್ಲಿ ಶೇಕಡ 75 ಪರ್ಸೆಂಟೇಜ್ ಪರಿಹಾರ ಸಿಕ್ಕಿದೆ ಇನ್ನೂ 25% ಎಲ್ಲಾ ಗ್ರಾಮ ಪಂಚಾಯತಿಗೆ ಹಣ ಸಂದಾಯ ವಾಗಿದೆ ಅಲ್ಲದೆ 2020 ನೇ ಇಸವಿಯಲ್ಲಿ ಪರ್ಸೆಂಟೇಜ್ ಮೇಲೆ ಹಣ ಸಂದಾಯವಾಗುತ್ತಿದೆ ಬಿಟ್ಟರೆ 22 ,23ನೇ ಸಾಲಿನ ಸಂಪೂರ್ಣ ಅತಿವೃಷ್ಟಿಯಿಂದ ಬೆಳೆ ನಷ್ಟ ರೈತರ ಖಾತೆಗೆ ಜಮವಾಗಿಲ್ಲ, ಇದರಿಂದ ರೈತ ಪಿ ವರ್ಗದವರು ಅತಿವೃಷ್ಟಿಯಿಂದ ರೈತರು ಕಂಗಾಲಾಗಿದ್ದಾರೆ ಇದನ್ನು ಅರಿತು ಕೇಂದ್ರ ಸರ್ಕಾರ ವಾಗಲಿ ರಾಜ್ಯ ಸರ್ಕಾರವಾಗಲಿ ರೈತರ ಬಗ್ಗೆ ಯಾವುದೇ ರೀತಿಯ ಬೆಳೆ ನಷ್ಟ ಪರಿಹಾರವಾಗಲಿ ಸರ್ಕಾರ ನೀಡುವಲ್ಲಿ ವಿಫಲವಾಗಿದೆ ಅಲ್ಲದೆ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಪ್ರಚಾರ ನಡೆಸಿ ವಿಮೆ ಕಟ್ಟಲು ಪ್ರೇರಣೆ ನೀಡಿದರು ಆದರೆ ರೈತರು, ವಿಮೆ ಕಟ್ಟಿ ತಲೆ ಮೇಲೆ ಕೈ ಎತ್ತಿ ಕೂತಿದ್ದಾರೆ ಇದರಿಂದಾಗಿ ರೈತರು ಸಂಕಷ್ಟಿದಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಈ ವೇಳೆ ರೈತ ಮುಖಂಡ ನಿಜಲಿಂಗಪ್ಪ ಮಾತನಾಡಿ ರೈತರ ಜಮೀನಿಗೆ ಹಿಂಗಾರು ಹಾಗೂ ಮುಂಗಾರು ಸಮಯದಲ್ಲಿ ಸಮೀಕ್ಷೆ ನಡೆಸಬೇಕು ಅಲ್ಲದೆ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಔಷಧಿಗಳನ್ನು ವಿತರಿಸಬೇಕು ಹಾಗೂ ಕೃಷಿ ಉಪಕರಣಗಳನ್ನು ಸರ್ಕಾರ ರದ್ದುಗೊಳಿಸಿದ್ದು ಅದನ್ನು ಹಿಂಪಡೆದು ರೈತರಿಗೆ ಕೃಷಿ ಉಪಕರಣಗಳನ್ನು ಕೊಡಬೇಕು ಅಧಿಕಾರಿಗಳು ಕಾಲಕಾಲಕ್ಕೆ ಸಮೀಕ್ಷೆ ನಡೆಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದರು
ಇದೇ ಸಂದರ್ಭದಲ್ಲಿ ಹಿರಿಯ ರೈತ ಮುಖಂಡ ಜಿ ನಾರಾಯಣ್ ರೆಡ್ಡಿ ಅವರ ಅಕಾಲಿಕ ಮರಣದಿಂದ ಒಂದು ನಿಮಿಷ ಮೌನಚರಣೆ ಮಾಡಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಮಂಜುನಾಥ್ ಟಿ ಹಂಪಣ್ಣ .ರಾಮಸ್ವಾಮಿ. ನಿಜಲಿಂಗಪ್ಪ ಇತರರಿದ್ದರು.
ಮಾರ್ಚ್ 10 ರೊಳಗೆ ರೈತರು ಕಟ್ಟಿದ ಬೆಳೆವಿಯನ್ನು ಬಿಡುಗಡೆ ಮಾಡದಿದ್ದರೆ ವಿಧಾನಸಭಾ ಚುನಾವಣೆಗೆ ಬಹಿಷ್ಕಾರ ಮಾಡಲಾಗುವುದು ಎಂದು ರಾಜ್ಯ ರೈತ ಸಂಗದ ಹಿರಿಯ ಉಪಾಧ್ಯಕ್ಷ ಕೆ.ಪಿ ಭೂತಯ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments