ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳು ಮಾರಾಟವಾದ ತಕ್ಷಣದ ರೈತರ ಖಾತೆಗೆ ನೇರವಾಗಿ ಹಣ ಪಾವತಿಸುವಂತೆ ಚಳ್ಳಕೆರೆ ಠಾಣೆಯ ಪಿಐ ದೇಸಾಯಿ

by | 22/02/23 | ಜನಧ್ವನಿ


ಚಳ್ಳಕೆರೆ ಜನಧ್ವನಿ ವಾರ್ತೆ ಫೆ.22
ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳು ಮಾರಾಟವಾದ ತಕ್ಷಣದ ರೈತರ ಖಾತೆಗೆ ನೇರವಾಗಿ ಹಣ ಪಾವತಿಸುವಂತೆ ಚಳ್ಳಕೆರೆ ಠಾಣೆಯ ಪಿಐ ದೇಸಾಯಿ ಕಿವಿಮಾತು ಹೇಳಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿ ಸಭಾಂಗಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ವರ್ತಕರಿಗೆ ಪೊಲೀಸ್ ಇಲಾಖೆವತಿಯಿಂದ ಕಾನೂನು ಸುವ್ಯವಸ್ಥೆ ಕಾನೂನು ಅರಿವು ಸಭೆಯಲ್ಲಿ ಮಾತನಾಡಿದರು.
ಇತ್ತೀಚೆಗೆ ನಗರ ಸೇರಿದಂತೆ ವಿವಿಧ ಕಡೆ ಕಳ್ಳತನ ಪ್ರಕರಗಳು ಹೆಚ್ಚಾಗುತ್ತಿದ್ದು ಮಾರುಟ್ಟೆಯಲ್ಲಿನ ಎಲ್ಲಾ ವರ್ತಕರು ಹಾಗೂ ಕಚೇರಿಗೆ ಸಿಸಿ ಕ್ಯಾಮರ ಅಳವಡಿಸಿಕೊಂಡು ಅಪರಾದ ಕೃತ್ಯಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡ ಬೇಕು.
ನಗರದಲ್ಲಿ ರಾಷ್ಟಿçÃಯ ಹೆದ್ದಾರಿ ಹಾದು ಹೋಗಿರುವುದರಿಂದ ಜನ ಹಾಗೂ ವಾಹನಗಳ ದಟ್ಟಣೆ ಹೆಚ್ಚಾಗಿರುವುರಿಂದ ಅಪರಿಚಿತರು ಸಾರ್ವಜನಿಕ ಸ್ಥಳ, ಬ್ಯಾಂಕ್ ,ಮಾರುಕಟ್ಟೆ ಸ್ಥಳದಲ್ಲಿ ಹಣ ವಹಿವಾಟು ಮೇಲೆನಿಗಾವಹಿಸಿ ಹಣ ತೆಗೆದುಕೊಂಡು ಹೋಗುವಾಗ ಬೇರೆಕಡೆ ಗಮನಹರಿಸಿ ಹಣ ಎಗರಿಸಿಕೊಂಡು ಎಸ್ಕೇಪ್ ಆಗುತ್ತಾರೆ ವರ್ತಕರು ಯಾರೂ ವಾಹನಗಳನ್ನುಹಣ ಇಟ್ಟು ಮರೆತು ಹೋಗುವುದು ಮಾಡಬಾರದು ಹಣ ತರುವಾಗ ಹಾಗೂ ಬ್ಯಾಂಕಿಗೆ ಹೋಗುವಾಗ ಎಚ್ಚರವಹಿಸ ಬೇಕು .
ಯಾರದಾದರೂ ಅಪರಿಚಿತರ ಓಡಾಡುವುದು ಕಂಡು ಬಂದರೆ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡ ಬೇಕು ವರ್ತಕರು ಹಾಗೂ ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಿದಾಗ ಮಾತ್ರ ಅಪರಾದಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ತಿಳಿಸಿದರು.

ಮುಖ್ಯ ರಸ್ತೆಗಳಲ್ಲಿ ಎಲ್ಲೆಂದರೆಲ್ಲಿ ವಾಹನಗಳನ್ನು ನಿಲುಗಡೆಮಾಡ ಬಾರದು ವಾಹನಗಳ ನಿಲುಗಡೆಗೆ ನಗರಸಭೆವತಿಯಿಂದಸ್ಥಳ ಪರಿಶೀಲನೆ ಮಾಡಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗುವುದು ಅಲ್ಲಿಯವರೆಗೆ ವಾಹನಗಳನ್ನು ನಿಲ್ಲಿಸುವಾಗ ಸಂಚರಿಸುವಾಗ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ವಾಹನ ಸವಾರರಿಗೆ ಸಲಹೆ ನೀಡಿದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *