.
ಮಾರಣಾಂತಿಕ ಹಲ್ಲೆಗೊಳಗಾಗಿ ಚಿಕಿತ್ಸೆ ಫಲಿಸದೆ ಮೃತ ಪಟ್ಟ ಈರಣ್ಣ
ಚಳ್ಳಕೆರೆ ನ18. ದೇವರ ಪೂಜೆ ವಿಚಾರದಲ್ಲಿ ನಡೆದ ಮಾರಣಾಂತಿಕ ಹಲ್ಲೆಗೊಳಗಾದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ. ಚಳ್ಳಕೆರೆ ತಾಲೂಕಿನ ಬೆಳಗೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ರಂಗನಾಥಪುರ(ಯಳವರಹಟ್ಟಿ)ಗ್ರಾಮದಲ್ಲಿ
ದೇವಸ್ಥಾನದ ಪೂಜೆ ವಿಚಾರದಲ್ಲಿ ಹಳೆಯ
ದ್ವೇಷದಿಂದ ದಿನಾಂಕ :03-10-2023 ರಂದು ಮಧ್ಯಾಹ್ನ 1 :00 ಗಂಟೆ ಸಮಯದಲ್ಲಿ ಗ್ರಾಮ ಬೆಳೆಗೆರೆ
ರಂಗನಾಥಪುರದಲಿ, ಮಾರಮ್ಮನ ದೇವಸ್ಥಾನದ ಮುಂದೆ ಮಾರಮ್ಮನ ಉತ್ಸವ ನೋಡಿಕೊಂಡು ನಿಂತಿರುವಾಗ ಏಕಾಏಕಿಯಾಗಿ ತಿಮ್ಮಣ . ದಾಸಯ್ಯ.ವೆಂಕಟೇಶ ನಾಲ್ಕು ಜನರು ಅವಾಚ್ಯಶಬ್ದಗಳಿಂದ ಬೈದಾಡುತ್ತ ಬಂದು ಅಲೆ ಇದ್ದ
ಕಟ್ಟಿಗೆಗಳನ್ನು ತೆಗೆದುಕೊಂಡು
ಮೈಕೈಗೆ ಹಾಗೂ ತಲೆಗೆ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ. ಮಾರಾಣಾಂತಿಕ ಹಲ್ಲೆಗೊಳಗಾದ ಈರಣ್ಣನನ್ನು ಚಿಕಿತ್ಸೆಗಾಗಿ ಚಳ್ಳಕೆರೆ.ಚಿತ್ರದುರ್ಗ. ಶಿವಮೊಗ್ಗ ಹಾಗೂ ಬೆಂಗಳೂರು ಆಸ್ಪತ್ರೆಗಳಿಗೆ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಿಸದೆ ಶನಿವಾರ ಮಧ್ಯಾಹ್ನ .1.30ರ ಸುಮಾರಿನಲ್ಲಿ ಈರಣ್ಣ(50) ಮೃತಪಟ್ಟಿದ್ದು ಮೃತ ದೇಹವನ್ನು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ಹಲ್ಲೆ ಪ್ರಕರಣ ಚಳ್ಳಕೆರೆ ಠಾಣೆಯಲ್ಲಿ ಅ.5 ರಂದು ನಾಲ್ಕು ಜನರ ಮೇಲೆ ಹಲ್ಲೆ ಪ್ರಕರಣ ದಾಖಲಾಗಿತ್ತು ಚಿಕಿತ್ಸೆ ಫಲಿಸದೆ ಈರಣ್ಣ ಮೃತಪಟ್ಟಿದ್ದಾನೆ.
ಮಾರಣಾಂತಿಕ ಹಲ್ಲೆಗೊಳಗಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments