ಮಾನವನ ಬದುಕು ಕೂಡ ಸುಂದರವಾರವಾದ ಸಾಹಿತ್ಯವಿದ್ದಂತೆ, ಬದುಕನ್ನು ಸಾಹಿತ್ಯದಂತೆ ಸುಂದರವಾಗಿ ಕಟ್ಟಿಕೊಳ್ಳಬೇಕು ಎಂದು ಸಾಹಿತಿ ತಿಪ್ಪಣ್ಣ ಮರಿಕುಂಟೆ

by | 21/02/23 | ಸಾಂಸ್ಕೃತಿಕ

 • ಚಳ್ಳಕೆರೆ ಜನಧ್ವನಿ ವಾರ್ತೆ ಫೆ.21
  ಮಾನವನ ಬದುಕು ಕೂಡ ಸುಂದರವಾರವಾದ ಸಾಹಿತ್ಯವಿದ್ದಂತೆ, ಬದುಕನ್ನು ಸಾಹಿತ್ಯದಂತೆ ಸುಂದರವಾಗಿ ಕಟ್ಟಿಕೊಳ್ಳಬೇಕು ಎಂದು ಸಾಹಿತಿ ತಿಪ್ಪಣ್ಣ ಮರಿಕುಂಟೆ.
  ತಾಲ್ಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ಗ್ರಾಮೀಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ನೆನಪು ಮಾಸಿಕ ಕಾರ್ಯಕ್ರಮದಡಿ ಕೃಷಿ ಸಾಹಿತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
  ಗ್ರಾಮೀಣ ಭಾಗದ ರೈತರಿಗೆ ಸಾಹಿತ್ಯದ ಜೊತೆಯಲ್ಲಿ ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ನೀಡುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರೈತರು ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ. ಮಾಹಿತಿ ಪಡೆದ ರೈತರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
  ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶ ವಿರೂಪಾಕ್ಷಪ್ಪ ಮಾತನಾಡಿ ತಾಲ್ಲೂಕಿನಲ್ಲಿ ವಾಣಿಜ್ಯ ಬೆಳೆಗಳು ಬೆಳೆಯು ಯೋಗ್ಯವಾದ ಭೂಮಿಯಾಗಿರುವುದರಿಂದ ಕಾಳು ಮೆಣಸು, ಗೋಡಂಭಿ, ದ್ರಾಕ್ಷಿ, ಡ್ರಾಗನ್ ನಂತಹ ಬೆಳೆಗಳನ್ನು ಬೆಳೆಯಬಹುದು. ಇದಕ್ಕೆ ಇಲಾಖೆಯಿಂದ ಉತ್ತೇಜ ನೀಡಲಾಗುವುದು ಎಂದು ರೈತರಿಗೆ ಕಿವಿಮಾತು ಹೇಳಿದರು.
  ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಆಶೋಕ್ ಮಾತನಾಡಿ ರೈತರು ಯಾವುದೇ ಬೆಳೆ ಬೆಳೆಯಬೇಕು. ಅದು ಉತ್ತಮ ಇಳುವರಿ ಬರಬೇಕು ಎಂದರೆ ಸಾವಯವ ಗೊಬ್ಬರವನ್ನು ಬಳಸಬೇಕು. ಸಿಕ್ಕ-ಸಿಕ್ಕ ರಾಸಾಯನಿಕ ಗೊಬ್ಬರುಗಳು ಬೆಳೆಗಳಿಗೆ ಹಾಕಿದರೆ ಅ ಬೆಳೆ ಉತ್ತಮವಾದ ಇಳುವರಿ ಬರುವುದುದಿಲ್ಲ ಎಂದು ಹೇಳಿದರು.
  ರೈತರು ಬೆಳೆಗಳಿಗೆ ರಾಸಾಯನಿಕ ಗೊಬ್ಬರುಗಳನ್ನು ಹಾಕುವಾಗ ಇಲಾಖೆಯಿಂದ ಮಾಹಿತಿ ಪಡೆದು ಇಲಾಖೆ ಶಿಪಾರಸ್ಸು, ಸೂಚಿಸುವ ಗೊಬ್ಬರವನ್ನು ಹಾಕಬೇಕು. ಅಕ್ಕಪಕ್ಕ ತೋಟಗಳ ರೈತರು ರಾಸಾಯನಿಕ ಗೊಬ್ಬರಗಳನ್ನು ಹಾಕಿದ್ದಾರೆಂದು ಸಿಕ್ಕ-ಸಿಕ್ಕ ಗೊಬ್ಬರಗಳನ್ನು ಹಾಕಿ ಬೆಳೆಗಳನ್ನು ಹಾಳು ಮಾಡಿಕೊಳ್ಳಬಾರದು ಎಂದು ಹೇಳಿದರು.
  ಈ ವೇಳೆ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶ ಕೆಂಜೋಚಿರಾವ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷಿö್ಮÃದೇವಿ, ಪಿಡಿಓ ಶಶಿಕಲಾ, ಪ್ರಗತಿಪರ ರೈತ ದಯಾನಂದಮೂರ್ತಿ, ರೈತರಾದ ನರಸಿಂಹಪ್ಪ, ತಿಪ್ಪೇಸ್ವಾಮಿ, ಎನ್.ಟಿ.ಓಬಣ್ಣ ಸೇರಿದಂತೆ ಇತರರಿದ್ದರು.

 • ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
  ವಿಶ್ಲೇಷಣೆ ಬೇಕು
  ನಮಗೆ ನಿಮ್ಮಂತಹ ಓದುಗರು ಬೇಕು
  ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

  0 Comments

  Submit a Comment

  Your email address will not be published. Required fields are marked *