ಮಹಿಳಾ ಅಧಿಕಾರಿಯೊಬ್ಬರು ಪೌರಕಾರ್ಮಿಕರಿಂದ ಕಟ್ಟಡ ದುರಸ್ಥಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ ಪೌರಾಯುಕ್ತ ರಾಮೃಷ್ಣ

by | 15/03/23 | ಜನಧ್ವನಿ


ಚಳ್ಳಕೆರೆ ಜನಧ್ವನಿ ವಾರ್ತೆ ಮಾ.15
ಕೈದಿಗಳಿಂದ ಜೈಲರ್ ಮನೆಕೆಲಸ, ದೊಡ್ಡ ಹುದ್ದೆಯ ಅಧಿಕಾರಿಗಳ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು, ತರಕಾರಿ ಸೇರಿದಂತೆ ಮನೆಕೆಲಸಕ್ಕೆ ಇಟ್ಟುಕೊಳ್ಳುವುದನ್ನು ನೋಡಿದ್ದೇವೆ ಓದಿದ್ದೇವೆ ಆದರೆ ಇಲ್ಲೊಬ್ಬ ಮಹಿಳಾ ಅಧಿಕಾರಿ ಕಚೇರಿ ಸಿಬ್ಬಂದಿಗಳಿAದ ಸರಕಾರಿ ವಸತಿ ಗೃಹ ದುರಸ್ಥಿ ಕೆಲಸಕ್ಕೆ ಇಟ್ಟುಕೊಂಡಿರುವುದು ಬೆಳೆಕಿಗೆ ಬಂದಿದೆ.
ಹೌದು ಇದು ಚಳ್ಳಕೆರೆ ನಗರಸಭೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯಾಧಿಕಾರಿ ಗೀತ ವಿವಾದಕ್ಕೆ ಸಿಲಿಕಿಕೊಂಡಿರುವ ಅಧಿಕಾರಿಯಾಗಿದ್ದಾರೆ. ಕಚೇರಿಯ ಪೌರಕಾರ್ಮಿಕರಿಂದ ವಸತಿ ಗೃಹ ದುರಸ್ಥಿಕಾರ್ಯ ಮಾಡಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೌರಾಯುಕ್ತ ರಾಮಕೃಷ್ಣ ಬುಧವಾರ ವಸತಿ ಗೃಹ ದುರಸ್ಥಿ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿದಾಗ ಇಬ್ಬರು ಪೌರಕಾರ್ಮಿಕರು ಮನೆ ದುಸ್ಥಿ ಕಾರ್ಯದಲ್ಲಿ ತೊಡಗಿರುವುದು ಕಂದು ಬಂದು ಅಧಿಕಾರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಯಾವುದೇ ಹಳೆ ಕಟ್ಟಡ ದುರಸ್ಥಿ, ನೂತನ ಕಟ್ಟಡ ಹಾಗಳು ಪಾಳು ಬಿದ್ದ ಕಟ್ಟಡವನ್ನು ತೆರವುಗೊಳಿಸ ಬೇಕಾದರೆ ನಗರಸಭೆವತಿಯಿಂದ ನಿಗಧಿತ ಶುಲ್ಕ ಕಟ್ಟಿ ಕಟ್ಟಡ ಕಾಮಗಾರಿ ಪ್ರಾರಂಭಿಸ ಬೇಕು ಎಂಬ ನಿಯವಿದೆ ಆದರೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸರಕಾರಿ ವಸತಿ ಗೃಹವನ್ನು ಯಾವುದೇ ಪರವಾನಿಗೆ ಪಡೆಯದೆ ಪೌರಕಾರ್ಮಿಕರಿಗೆ ಕಟ್ಟಡ ದುರಸ್ಥಿ

ನಗರಸಭಾ ಕಿರಿಯ ಆರೋಗ್ಯ ನಿರೀಕ್ಷಕಿ ಗೀತಾ ಅವರು ಕ್ವಾಟರ‍್ಸ್ ನವೀಕರಣ ಕಾರ್ಯದಲ್ಲಿ ಸಿಮೆಂಟ್ ಮತ್ತು ಕಟ್ಟಡ ಕೆಲಸ ಮಾಡಿಸುತ್ತಿದ್ದು ಪೌರಕಾರ್ಮಿಕರನ್ನು ಯಾವುದೇ ಅನುಮತಿ ಇಲ್ಲದೆ ಮನೆ ಕಟ್ಟುವ ಕೆಲಸಕ್ಕೆ ಹೇಗೆ ಬಳಸಿಕೊಳ್ಳಲಾಯಿತು. ಮೇಲಾಗಿ, ನಗರಸಭಾ ವ್ಯಾಪ್ತಿಗೆ ಸೇರಿರುವ ವಸತಿ ಗೃಹ ನವೀಕರಣಕ್ಕೆ ಯಾವುದೇ ಮಂಜೂರಾತಿ ಪಡೆದುಕೊಂಡಿಲ್ಲ. ಏಕಾಏಕಿ ನಿಮ್ಮ ಇಚ್ಚೆಯಂತೆ ಕಟ್ಟಡ ನವೀಕರಣ ಹೇಗೆ ಮಾಡಿಸುತ್ತಿದ್ದೀರಾ? ಪೌರಕಾರ್ಮಿಕರ ಹಾಜರಾತಿ ಪರಿಶೀಲನೆ ಮಾಡಿದ ಬಳಿಕ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ನೀವು ಹೊಣೆ ಆಗಬೇಕಾಗುತ್ತದೆ ಎಂದು ಸಿಬ್ಬಂದಿ ಗೀತಾ ಅವರಿಗೆ ಪೌರಾಯುಕ್ತ ರಾಮಕೃಷ್ಣ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಪೌರಾಯುಕ್ತರ ಪ್ರಶ್ನೆಗೆ ಗೀತಾ ಮಾತನಾಡಿ ಅವರ ಕರ್ತವ್ಯ ಮುಗಿದ ನಂತರ ಊಟದ ಸಮಯದಲ್ಲಿ ಇಲ್ಲಿನ ಮನೆ ಕೆಲಸಕ್ಕೆ ಬರುತ್ತಾರೆ. ಇದಕ್ಕೆ ೫೦೦ ರೂಪಾಯಿ ಕೂಲಿ ಕೊಡುತ್ತೇನೆ ಎಂದು ಸಮಜಾಯಿಷಿ ನೀಡಿದ್ದನ್ನು ತಳ್ಳಿ ಹಾಕಿದ ಪೌರಾಯುಕ್ತರು, ಅದೇ ಕೂಲಿ ಹಣವನ್ನು ಬೇರೆ ಕೂಲಿಕಾರ್ಮಿಕರಿಗೆ ಕೊಟ್ಟು ಕೆಲಸ ಮಾಡಿಕೊಳ್ಳಬಹುದಿತ್ತು ಅಷ್ಟಕ್ಕೂ ಕಚೇರಿ ಪೌರಕಾರ್ಮಿಕರನ್ನು ಬಳಸಿಕೊಂಡು ಅಧಿಕಾರವನ್ನು ದುರಪಯೋಗ ಪಡಿಸಿಕೊಂಡಿದ್ದೀರಿ ಇದು ನಿಮ್ಮ ಉತ್ತರವಲ್ಲ ನೋಟಿಸ್ ಗೆ ಉತ್ತರ ನೀಡುವಂತೆ ತಿಳಿಸಿದರು.

ನಗರಸಭಾ ಮಾಜಿ ಉಪಾಧ್ಯಕ್ಷ ಟಿ. ವಿಜಯಕುಮಾರ್ ಮಾತನಾಡಿ, ಹೊರಗುತ್ತಿಗೆ ನೌಕರರ ಪೌರಕಾರ್ಮಿಕರು ಸೇರಿದಂತೆ ನಗರಸಭಾ ನಿರ್ವಹಣೆ ಪರಿಸರ ಅಭಿಯಂತರ ನರೇಂದ್ರಬಾಬು ಅವರು ನೋಡಿಕೊಳ್ಳಲಾಗುತ್ತಿದೆ. ಒಂದು ವಾರದಿಂದ ಪೌರಕಾರ್ಮಿಕರನ್ನು ನಿಯಮಬಾಹೀರವಾಗಿ ಸಿಮೆಂಟ್ ಮತ್ತು ಕಟ್ಟಡ ಕಟ್ಟುವ ಕೆಲಸಕ್ಕೆ ತೊಡಗಿಸಲಾಗಿದೆ. ಪೌರಕಾರ್ಮಿಕರ ಸೇವೆಯಲ್ಲಿ ಇಬ್ಬರು ನಿರಂತರವಾಗಿ ಕರ್ತವ್ಯಕ್ಕೆ ಹಾಜರಾಗದಿದ್ದರೂ, ವೇತನ ನೀಡಲಾಗುತ್ತಿದೆ. ಇದನ್ನು ಪರಿಶೀಲನೆ ಮಾಡಬೇಕು. ನಗರಸಭೆಗೆ ಸೇರಿರುವ ವಸತಿ ಗೃಹ ನವೀಕರಣಕ್ಕೆ ಟೆಂಡರ್ ಪ್ರಕ್ರಿಯೆ ಮಾಡಿಕೊಂಡಿಲ್ಲ. ಪೌರಕಾರ್ಮಿಕರ ಸೇವೆಯನ್ನು ದುರುಪಯೋಗ ಮಾಡಿಕೊಂಡಿರುವ ನರೇಂದ್ರಬಾಬು ಅವರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ದೂರು ಮಾಡಲಾಗುತ್ತದೆ ಎಂದು ಆಗ್ರಹಿಸಿದರು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page