ನಾಯಕನಹಟ್ಟಿ ಜನಧ್ವನಿ ವಾರ್ತೆ ಅ.28. ಮಹರ್ಷಿ ವಾಲ್ಮೀಕಿ ಸಮಾಜಕ್ಕೆ ನೀಡಿದ ಉತ್ತಮ ಸಂದೇಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗೆ ಆಚರಣೆಗೆ ಸಾರ್ಥಕತೆ ಬರುತ್ತದೆ ಎಂದು ನಿಕಟಪೂರ್ವ ತಹಶೀಲ್ದಾರ್ ಎನ್ .ರಘುಮೂರ್ತಿ ಅಭಿಪ್ರಾಯ ಪಟ್ಟರು. ತಾಲೂಕಿನ ನಾಯಕನಹಟ್ಟಿ ಪಟ್ಟಣದಲ್ಲಿ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಹಾಗೂ ವಾಲ್ಮೀಕಿ ಸಮುದಸಯದವತಿಯಿಂದ ಆಯೋಸಿದ್ದ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರು.

ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಆದರ್ಶಗಳಿಗೂ ಮತ್ತು ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳಿಗೂ ಒಂದಕ್ಕೊಂದು ಸಾಮ್ಯತೆ ಇದೆ ಸಾಮಾಜಿಕ ಅಸಮತೋಲನತೆ ಪರಿಶ್ರಮ ಮತ್ತು ನಿಷ್ಠೆಯ ಬಗ್ಗೆ ಇಬ್ಬರು ಕೂಡ ಪ್ರತಿಪಾದಿಸಿದ್ದಾರೆ ಪಾಶ್ಚ್ಯಾತ ರಾಷ್ಟ್ರಗಳಲ್ಲಿ ಇವತ್ತು ಶ್ರೀ ರಾಮಾಯಣ ಮಹಾಕಾವ್ಯವನ್ನು ಪಠಣ ಮಾಡುತ್ತಾರೆಂದರೆ ಅದು ಭಾರತೀಯರ ಹೆಮ್ಮೆಯ ವಿಚಾರ ಆದರೂ ಕೂಡ ಮಹರ್ಷಿ ವಾಲ್ಮೀಕಿ ಅವರು ಮತ್ತು ಡಾ. ಬಿಆರ್ ಅಂಬೇಡ್ಕರ್ ಅವರ ಆಸೆಗಳಂತೆ ಸರಿ ಸಮಾನ ಆದಂತಹ ಸಮಾಜದ ನಿರ್ಮಾಣವಾಗಬೇಕು ಸಮಾಜದಲ್ಲಿ ಸಂಕಷ್ಟದಲ್ಲಿರುವಂತಹ ಜನರ ನೆರವಿಗೆ ಉಳ್ಳವರು ನಿಲ್ಲಬೇಕು ಸಂಪತ್ತು ಹಂಚಿಕೆ ಆಗಬೇಕು ಸಂವಿಧಾನದ ಮತ್ತು ಮೀಸಲಾತಿಯ ನೆರವಿನಿಂದ ಬದುಕು ಕಟ್ಟಿಕೊಂಡಂತಹ ಜನ ಸ್ವಾರ್ಥಿಗಳಾಗಬಾರದೆಂದು ಈ ಇಬ್ಬರು ದರ್ಶನಿಕರ ಆಶಯವಾಗಿತ್ತು ಇವತ್ತು ನಾವು ನೀವೆಲ್ಲರೂ ಕೂಡ ಸಂವಿಧಾನದ ಆಶಯದಂತೆ ಮೀಸಲಾತಿ ಉಂಡಂತವರು ಸಮಾಜದಲ್ಲಿ ಧ್ವನಿ ಇಲ್ಲದವರ ಮತ್ತು ಅಸಹಾಯಕರ ನೆರವಿಗೆ ನಿಂತು ಸಮಾಜದ ಬದಲಾವಣೆಗೆ ಇಂದಿನಿಂದಲೇ ಮುನ್ನುಡಿ ಬರೆಯೋಣವೆಂದು ಹೇಳಿದರು

ಕಟ್ಟಡದ ಉದ್ಘಾಟನೆ ನಂತರ 20ಕ್ಕೂ ಹೆಚ್ಚು ಕಲಾತಂಡಗಳೊಂದಿಗೆ ಅಪಾರ ಸಂಖ್ಯೆ ಜನರು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು ಯುವಕರು ವಾಲ್ಮೀಕಿ ಅವರ ಜಯ ಘೋಷಣೆ ಹಾಕಿದರು.

ಈ ಸಂದರ್ಭದಲ್ಲಿ ಬಂಡೆ ಕಟ್ಟೆ ಓಬಣ್ಣ ಮುದಿಯಪ್ಪ.ಬಸವರಾಜು ತಿಪ್ಪೇಸ್ವಾಮಿ .ಅನ್ವರ್ .ಬಂಗಾರಿ. ಪಟ್ಟಣ ಪಂಚಾಯತಿ ಸದಸ್ಯರುಗಳು ತಳುಕು ಮತ್ತು ನಾಯಕನಹಟ್ಟಿ ಹೋಬಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು
0 Comments