ಹಿರಿಯೂರು :
ತಾಲ್ಲೂಕಿನ ಮಸ್ಕಲ್ ಮಟ್ಟಿ ಕಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿಯ ಜವಾಬ್ದಾರಿಯನ್ನು ಗ್ರಾಮದ ಯುವಕ ಓಂಕಾರಪ್ಪರವರಿಗೆ ಬಿಟ್ಟು ಬೇರೆ ಯಾರಿಗೂ ಕೊಡಬಾರದು ಎಂಬುದಾಗಿ ಮಸ್ಕಲ್ ಮಟ್ಟಿ ಗ್ರಾಮದ ಯುವಕರು, ಮುಖಂಡರುಗಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ತಾಲ್ಲೂಕಿನ ಮಸ್ಕಲ್ ಮಟ್ಟಿ ಕಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿಯು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ನರೇಗಾ ಯೋಜನೆ ಅಡಿಯಲ್ಲಿ ಅಧಿಕಾರಿಗಳು ಮತ್ತು ನಮ್ಮ ಗ್ರಾಮದ ಯುವಕ ಓಂಕಾರಪ್ಪರವರು ಅಧಿಕಾರಿಗಳ ಜೊತೆ ಮತ್ತು ಗ್ರಾಮಸ್ಥರ ಸಹಕಾರದಿಂದ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ ಗುಣಮಟ್ಟದ ಕಾಮಗಾರಿಯನ್ನು ಮಾಡುತ್ತಿದ್ದಾರೆ,
ಆದ್ದರಿಂದ ಸಂಪೂರ್ಣ ಕಾಮಗಾರಿ ಮುಗಿಯುವವರೆಗೂ ಅವರು ಜವಾಬ್ದಾರಿಯಿಂದ ಮಾಡಿಕೊಂಡು ಹೋಗುವಂತೆ ನಾವುಗಳು ಒಪ್ಪಿರುತ್ತೇವೆ, ಈ ವಿಚಾರವಾಗಿ ಬೇರೆ ಯಾರಿಗೂ ಆ ಕಾಮಗಾರಿಗಳ ಜವಾಬ್ದಾರಿಯನ್ನು ಕೊಡಬಾರದೆಂದು ಈ ಮೂಲಕ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡರುಗಳಾದ ಅಭಿಷೇಕ್, ವೇಣು, ಗೋಪಾಲ, ಅಜಯ್, ವಿಘ್ನೇಶ್, ರವಿ, ಹರಿ, ಅರುಣ್ ಕುಮಾರ್, ರಘು, ಅಂಜಿನಪ್ಪ, ಪ್ರವೀಣ್, ಗಣೇಶ್, ಲಿಂಗರಾಜು, ವಿನಯ್, ಅರುಣ್, ಜಯಂತ್, ಸಂತೋಷ್, ಬಾಲು, ಶಾರದಾಮಣಿ, ನಂದಿನಿ, ಸಂಧ್ಯಾ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮಸ್ಕಲ್ ಮಟ್ಟಿ ಕಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣದ ಅಭಿವೃದ್ಧಿಕಾಮಗಾರಿ ಓಂಕಾರಪ್ಪರೇ ಮುಂದುವರೆಸಿಕೊಂಡು ಹೋಗಲು ಗ್ರಾಮದ ಯುವಮುಖಂಡರುಗಳಿಂದ ಮನವಿಪತ್ರ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments