ಮಳೆ.ಗಾಳಿ ಬಿಸಿಲಿನಿಂದ ರಕ್ಷಣೆ ಹಾಗೂ ಮೇವಿಲ್ಲದೆ ಸಾವಿನ ಮನೆ ಸೇರುತ್ತಿರುವ ದೇವರ ಎತ್ತುಗಳು

by | 26/07/23 | ಜನಧ್ವನಿ, ಸಾಂಸ್ಕೃತಿಕ

ಚಳ್ಳಕೆರೆ ಜು.26.ದೇವರ ಎತ್ತುಗಳಿಗೆ ಪವಿತ್ರ ಸ್ಥಾನವಿದ್ದು ಮಳೆ ಗಾಳಿಗೆ ನೆರಳು ರಕ್ಷಣೆಯಿಲ್ಲದೆ ದೇವರ ಎತ್ತುಗಳು ಸಾವಿನ ಮನೆ ಸೇರುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಹೌದು ಇದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಪರಿಶಿಷ್ಟ ಪಂಗಡದ ಮ್ಯಾಸಬೇಡ
ಬುಡಕಟ್ಟು ಸಮುದಾಯ ಹೆಚ್ಚಾಗಿದ್ದು . ಈಗಲೂ ಸಹ ಹಬ್ಬ .ಜಾತ್ರೆ ಉತ್ಸಹಗಳಲ್ಲಿ ದೇವರ ಎತ್ತುಗಳ ಗೂಡಿನ ಬಳಿ ಹಾಗೂ ಹಟ್ಟಿಗಳಲ್ಲಿ ವಿಶೇಷವಾಗಿ ಪೂಜೆ ಪುರಸ್ಕಾರಗಳ ಸಂಸ್ಕೃತಿಗಳ ಆಚರಣೆ ಬುಡಕಟ್ಟು ಸಮುದಾಯ
ಕಟ್ಟುನಿಟ್ಟಾಗಿಆಚರಣೆ ಮಾಡಲಾಗುತ್ತದೆ.ಈ ಬುಡಕಟ್ಟು ಜನರಿಗೆ ಪ್ರಾಣಿ-ಪಕ್ಷಗಳೆಂದರ ವಿಶೇಷ ಪ್ರೀತಿ, ಹಾಗಾಗಿ ಬೊಮ್ಮಗಾದ್ರಿ, ಓಬಳ, ಮತ್ತೇಗಾರ, ಬಂಗಾರ,ಕಂಪಳದ ಹೆಸರಿನಲ್ಲಿ ದೇವರ
ಜಾನುವಾರುಗಳನ್ನು ಮ್ಯಾಸಬೇಡರು ಹರಕೆಯಾಗಿ ದೇವರಹಟ್ಟಿ
ಗೆ ಬಿಡುತ್ತಾರೆ. ಇದು ಪರಂಪರೆಯಾಗಿ ನಡೆದುಕೊಂಡು
ಬಂದಿದ್ದು, ದೇವರಹಟ್ಟಿಯಲ್ಲಿನ ಜಾನುವಾರುಗಳಿಗೆ ಹಬ್ಬ
ಹರಿದಿನ, ಜಾತ್ರೆಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಪೂಜಾ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳುಮ ವಿವಿಧ ಪಕ್ಷದ ಮುಖಂಡರು ಹಾಗೂ ಅಧಿಕಾರಿಗಳು ಭಾಗವಹಿಸುತ್ತಾರೆ ದೇವರ ಎತ್ತುಗಳು ಮಳೆ.ಬಿಸಿಲು.ಗಾಳಿ ಹಾಗೂ ವೇವಿಲ್ಲದೆ ಸೊರಗಿರುವ ದೃಶ್ಯವನ್ನು ಕಣ್ಣಾರೆ ಕಂಡರೂ ಸಹ ದೇವರ ಎತ್ತುಗಳ ರಕ್ಷಣೆಗಾಗಿ ಶೆಡ್‌ಗಳನ್ನು ನಿರ್ಮಿಸದೇ ಹಾಗೂ ಮೇವು ಸರಬರಾಜು ಮಾಡದೇ ಇರುವುದರಿಂದ ದೇವರ ಎತ್ತುಗಳು ಅಪೌಷ್ಟಿಕತೆಗೆ ತುತ್ತಾಗಿ ಸಾವಿನ ಮನೆ ಸೇರುತ್ತಿವೆ.
ಹರಕೆ ರೂಪದಲ್ಲಿ ಎತ್ತುಗಳು/strong>
ಮೂಲತಃ ಪಶುಪಾಲಕರಾದ ಮ್ಯಾಸಬೇಡ ಹಾಗೂ ಕಾಡುಗೊಲ್ಲ ಸಮುದಾಯ ಗೋವುಗಳಿಗೆ ದೈವದ ಸ್ಥಾನ ನೀಡಿವೆ. ಅಗಲಿದ ಪೂರ್ವಜರು ಸ್ವರ್ಗಕ್ಕೆ ಹೋಗುವ ಬದಲು ಪಾತಾಳ ಲೋಕಕ್ಕೆ ಹೋಗಿ ದನ–ಕರುಗಳಾಗಿ ಮರುಜನ್ಮ ಪಡೆಯುತ್ತಾರೆ ಎಂಬುದು ಈ ಸಮುದಾಯದ ನಂಬಿಕೆ. ಎತ್ತುಗಳನ್ನು ‘ಮುತ್ತೈಗಳು’ ಎಂದು ನಂಬುತ್ತಾರೆ. ಮೃತ ಎತ್ತುಗಳನ್ನು ಭೂಮಿಯಲ್ಲಿ ಹೂಳುವ ವಿಧಿ–ವಿಧಾನ ರೂಪಿಸಿದ್ದಾರೆ. ಇವುಗಳ ಸುತ್ತ ಬಣವೆ, ದೇಗುಲ ನಿರ್ಮಿಸುವ ಪರಿಪಾಠವೂ ಇದೆ.

ಹರಕೆಯ ರೂಪದಲ್ಲಿ ದೇವರಿಗೆ ಎತ್ತುಗಳನ್ನು ನೀಡಲಾಗುತ್ತದೆ. ಮನೆಯಲ್ಲಿ ಕಾಯಿಲೆ ಬಿದ್ದ ಜಾನುವಾರುಗಳನ್ನು ಹರಕೆಯ ರೂಪದಲ್ಲಿ ದೇವರಿಗೆ ಬಿಡಲಾಗುತ್ತದೆ. ಇಂತಹ ಜಾನುವಾರುಗಳ ಪೋಷಣೆಯ ಹೊಣೆ ಕಿಲಾರಿಗಳ ಮೇಲಿರುತ್ತದೆ. ತಲೆತಲಾಂತರದಿಂದ ಕಿಲಾರಿಗಳು ದೇವರ ಎತ್ತುಗಳ ಪೋಷಣೆ ಮಾಡಿಕೊಂಡು ಬಂದಿದ್ದಾರೆ. ಇವರು ಚಪ್ಪಲಿ, ಅಂಗಿ ಧರಿಸುವುದಿಲ್ಲ. ಹೆಗಲ ಮೇಲೊಂದು ಕಂಬಳಿ, ಕೈಯಲ್ಲಿ ದೊಣ್ಣೆ ಇರುತ್ತದೆ.

ಕಿಲಾರಿಗಳು ಬದುಕಿನಲ್ಲಿಯೂ ‘ಪಾವಿತ್ರ್ಯ’ ಕಾಪಾಡಿಕೊಳ್ಳುತ್ತಾರೆ. ಸನ್ಯಾಸಿಗಳ ರೀತಿಯಲ್ಲೇ ಇದ್ದರೂ, ಇವರಿಗೆ ಸಂಸಾರವಿದೆ. ಕುಟುಂಬ ಊರಿನಲ್ಲಿ ನೆಲೆಸಿರುತ್ತದೆ. ಕಿಲಾರಿಗಳು ಮಾತ್ರ ದೇವರ ಎತ್ತುಗಳ ರೊಪ್ಪದಲ್ಲಿ ವಾಸ. ಈಗಲೂ ಮಣ್ಣಿನ ಮಡಿಕೆ, ಕುಡಕೆ, ಪಾತ್ರೆಗಳಲ್ಲಿ ಅಡುಗೆ ಮಾಡಿಕೊಳ್ಳುತ್ತಾರೆ. ಆಗಾಗ ಕುಟುಂಬಸ್ಥರನ್ನು ಭೇಟಿಯಾಗಿ ರೊಪ್ಪಕ್ಕೆ ಮರಳುತ್ತಾರೆ. ಜಾನುವಾರುಗಳಲ್ಲಿ ಹಸುಗಳು ಇರುತ್ತವೆ. ಹಾಲು, ಮೊಸರು, ಬೆಣ್ಣೆ ಯಾವುದನ್ನೂ ಮಾರಾಟ ಮಾಡುವುದಿಲ್ಲ. ಹಸುವಿನ ಉತ್ಪನ್ನಗಳು ಹಟ್ಟಿಯಿಂದ ಹೊರಗೂ ಹೋಗುವಂತಿಲ್ಲ. ಕಿಲಾರಿಗಳ ಅಡುಗೆಗೆ ಅಗತ್ಯ ಇರುವಷ್ಟು ಹಾಲನ್ನು ಮಾತ್ರ ಕರೆದುಕೊಳ್ಳುತ್ತಾರೆ. ಈ ಹಿಂದೆ ಜಾನುವಾರುಗಳ ಸಗಣಿಯನ್ನು ಗೊಬ್ಬರವಾಗಿ ಬಳಸುತ್ತಿರಲಿಲ್ಲ. ಈ ಗೊಬ್ಬರವನ್ನು ಜಮೀನಿಗೆ ಹಾಕಿ ಚಪ್ಪಲಿಯಲ್ಲಿ ತುಳಿದರೆ ಗೋವುಗಳಿಗೆ ಅಪಚಾರವಾಗುತ್ತದೆ ಎಂಬುದು ಬುಡಕಟ್ಟು ಸಮುದಾಯದ ನಂಬಿಕೆ. ಇಂತಹ ದೇವರ ಎತ್ತುಗಳಿಗೆ ರಕ್ಷಣೆ. ಮೇವಿನ ಕೊರತೆಯಿಂದ ಸಾವಿನ ಮನೆ ಸೇರುತ್ತಿವೆ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿಧಿಗಳು ದೇವರ ಎತ್ತುಗಳಿಗೆ ಶೇಡ್ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವರೇ ಕಾದು ನೋಡ ಬೇಕಿದೆ.
ದೇವರ ಎತ್ತುಗಳ ರಕ್ಷಣೆಗೆ ಸ್ವಾಮೀಜಿ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹಾಗೂ ಕೂಡ್ಲಿಗಿ ಪ್ರದೇಶದ ಮತ್ತು ನಾಯಕನಹಟ್ಟಿ ಪ್ರದೇಶದ ದೇವರ ಹಸುಗಳ ಹಟ್ಟಿಗಳಿಗೆ ಭೇಟಿ ಇತ್ತು ಹುಲ್ಲನ್ನು ವಿತರಿಸಲಾಯಿತು . ಪೂಜ್ಯ ಸ್ವಾಮಿ ಜಪಾನಂದ ಜಿ ಅವರು ಖುದ್ದಾಗಿ ಈ ಪ್ರದೇಶಗಳಿಗೆ ಎಂದಿನಂತೆ ಭೇಟಿ ಇತ್ತು ಅಲ್ಲಿಯ ಗೋಪಾಲಕರು ಹಾಗೂ ಕಿಲಾರಿಗಳೊಂದಿಗೆ ಮಾತುಕತೆ ನಡೆಸಿ ಇದೀಗ ತಾನೇ ಮಳೆ ಆರಂಭವಾಗಿದ್ದು ಒಂದು ಶುಭ ಸೂಚನೆ ಎಂದು ತಿಳಿಸಿದರು . ಭಗವಂತನ ದಯೆಯಿಂದ ಚೆನ್ನಾಗಿ ಮಳೆ ಆಗಲಿ ಹಾಗೂ ಸಾವಿರಾರು ದೇವರ ಎತ್ತುಗಳಿಗೆ ಮೇವು ದೊರೆಯುವಂತಾಗಲಿ ಎಂದು ಹರಿಸಿದರು . ಇದೇ ಸಂದರ್ಭದಲ್ಲಿ ಮತ್ತೊಂದು ದೇವರ ಎತ್ತುಗಳ ಸ್ಥಳವಾದ ಮುತ್ತಗಾನಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸರಿಸುಮಾರು ನಾಲಕ್ಕು ಹಸುಗಳು ಮರಣ ಹೊಂದಿರುವುದರ ಬಗ್ಗೆ ಮಾಹಿತಿಯನ್ನು ಪಡೆದರು .ಈ ವಿಚಾರವನ್ನು ತಿಳಿದ ಪೂಜ್ಯ ಸ್ವಾಮಿ ಜಪಾನಂದ ಜಿ ಅವರು ಅತ್ಯಂತ ದುಃಖದಿಂದ ಹಾಗೂ ಆಡಳಿತದ ವೈಖರಿಯನ್ನು ಕಂಡು ಆಕ್ರೋಶವನ್ನು ವ್ಯಕ್ತಪಡಿಸಿದರು . ಕಾರಣ ಸಹಸ್ರ ಸಹಸ್ರ ಕೋಟಿಗಳನ್ನು ವೆಚ್ಚ ಮಾಡುತ್ತಿರುವ ಘನ ಸರ್ಕಾರ ಮೂಕ ಪ್ರಾಣಿಗಳ ವೇದನೆಗಳಿಗೆ ಸ್ಪಂದಿಸುತ್ತಿಲ್ಲ ಯಾಕೆ ? ಎಂಬ ಪ್ರಶ್ನೆಯನ್ನು ಹಾಕಿದರು ಇಡೀ ಭಾರತದಲ್ಲಿಯೇ ದೇವರ ಹೆಸರಿನಲ್ಲಿ ಸಾವಿರಾರು ಹಸುಗಳು ಕರುಗಳು ರಾಸುಗಳು ಚಳ್ಳಕೆರೆ ಹಾಗೂ ಬಳ್ಳಾರಿ ಕೂಡ್ಲಿಗಿ ನಾಯಕನಹಟ್ಟಿ ಚಿತ್ರದುರ್ಗದ ಕೆಲವು ಪ್ರದೇಶಗಳಲ್ಲಿ ಇಂದಿಗೂ ಅದ್ಭುತವಾದ ಪರಂಪರಾನುಗತದಿಂದ ಬಂದಿರುವಂತಹ ಗೋ ಸೇವೆಯು ನಿರಂತರವಾಗಿ ನಡೆದುಕೊಂಡು ಬರುತ್ತಿದೆ . ಈ ಗೋಸೇವೆಯನ್ನು ನಡೆಸಿಕೊಂಡು ಬರುತ್ತಿರುವ ನಿಷ್ಠಾವಂತ ಶ್ರದ್ಧಾವಂತ ಹಾಗೂ ಅಹರ್ನಿಸಿ ದುಡಿಯುತ್ತಿರುವ ಕಿಲಾರಿಗಳು ಮತ್ತು ಗೋಪಾಲಕರಿಗೆ ಸರ್ಕಾರ ಯಾವುದೇ ರೀತಿಯ ಸಹಾಯವನ್ನು ತೋರದೆ ಕಳೆದ ಐದು ತಿಂಗಳುಗಳಿಂದ ಶ್ರೀ ರಾಮಕೃಷ್ಣ ಸೇವಾಶ್ರಮ ಪಾವಗಡ ಹಾಗೂ ಶ್ರೀಮತಿ ಸುಧಾ ಮೂರ್ತಿ ಮೂರ್ತಿ ಫೌಂಡೇಶನ್ ರವರ ಸಹಕಾರದಿಂದ ಈ ವರವಿಗೆ ಈ ಪ್ರಾಂತ್ಯದ ಸರಿ ಸುಮಾರು 30ಕ್ಕೂ ಮಿಗಿಲಾದ ದೇವರ ಹಸುಗಳ ಹಟ್ಟಿಗಳಿಗೆ ಮೇವನ್ನು ನಿರಂತರವಾಗಿ ನೀಡುತ್ತಿರುವ ಈ ಸಂಸ್ಥೆ ನಿಜಕ್ಕೂ ಗೋವುಗಳು ಮೃತವಾಗಿದ್ದು, ನಾಗರೀಕ ಸಮಾಜ ತಲೆತಗಿಸುವಂಥಾಗಿದೆ ಎಂದು ತಮ್ಮ ಹೃದಯ ಅಂತರಾಳದಿಂದ ಹೊರಬಂದ ವೇದನೆಯನ್ನು ವ್ಯಕ್ತಪಡಿಸಿದರು . ಈ ವರವಿಗೆ 80ಕ್ಕೂ ಮಿಗಿಲಾಗದ ಹುಲ್ಲಿನ ಲೋಡ್ ಗಳನ್ನು ದೂರದ ಕಣೆಕಲ್ ಹಾಗೂ ಸುತ್ತಮುತ್ತಲ ಪ್ರದೇಶದಿಂದ ಖರೀದಿಸಿ ಚಿತ್ರದುರ್ಗ ಜಿಲ್ಲೆ ಬಳ್ಳಾರಿ ಜಿಲ್ಲೆ ಪ್ರದೇಶಗಳಿಗೆ ಹಲವಾರು ವರ್ಷಗಳಿಂದ ಪ್ರತಿ ಬೇಸಿಗೆಯಲ್ಲಿ ಸಲ್ಲಿಸುತ್ತಾ ಬರುತ್ತಿರುವುದು ಇಲ್ಲಿಯ ಕಿಲಾರಿಗಳಿಗೆ ಹಾಗೂ ಗೋಪಾಲಕರಿಗೆ ಅತ್ಯಂತ ಸಂತೋಷಕರ ಹಾಗೂ ನೆಮ್ಮದಿಯ ವಿಚಾರವಾಗಿದೆ . ಕಳೆದ ಮಾರ್ಚ್ ತಿಂಗಳಿನಿಂದ ಭಯಂಕರ ಬಿಸಿಲಿನ ಬೇಗೆಯಲ್ಲಿ ಬಳಲುತ್ತಿರುವ ಮೂಕ ಪ್ರಾಣಿಗಳಿಗೆ ಏಕಪ್ರಕಾರವಾಗಿ ಮೇವನ್ನು ಒದಗಿಸುತ್ತಿರುವ ಶ್ರೀ ರಾಮಕೃಷ್ಣ ಸೇವಾಶ್ರಮ ಪಾವಗಡ ಹಾಗೂ ಶ್ರೀಮತಿ ಸುಧಾ ಮೂರ್ತಿ ರವರ ಸಹಕಾರ ಅತ್ಯಮೂಲ್ಯವಾಗಿದೆ . ಇಲ್ಲಿ ಪೂಜ್ಯ ಸ್ವಾಮಿ ಜಪಾನಂದ ಜೀವನ ಒಂದು ಪ್ರಶ್ನೆ, ಅದೇನೆಂದರೆ ಆಶ್ರಮದ ಹಾಗೂ ಶ್ರೀಮತಿ ಸುಧಾ ಮೂರ್ತಿ ರವರ ಸಹಕಾರದಿಂದ ಒಂದು ಸ್ವಯಂಸೇವಾ ಸಂಸ್ಥೆ 80ಕ್ಕೂ ಮಿಗಿಲಾದ ಹುಲ್ಲಿನ ಲೋಡುಗಳನ್ನು ಖರೀದಿಸಿ ವಿತರಿಸಲಾಗಿದೆ . ಆದರೆ ಘನ ಸರ್ಕಾರ ಈ ಒಂದು ಜವಾಬ್ದಾರಿಯಿಂದ ತಪ್ಪಿಸಿಕೊಂಡಿದೆ . ಮಾರ್ಚ್ ತಿಂಗಳ ನಂತರ ಮತ್ತೆ ಮತ್ತೆ ಸರ್ಕಾರಕ್ಕೆ ವಿನಂತಿಸಿಕೊಂಡಿದ್ದಾಗ ಚುನಾವಣೆಯ ನೀತಿ ಸಂಹಿತೆಯ ನೆಪವಡ್ಡಿ ಘನ ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಂಡಿತು . ಆದಾಗಿಯೂ ಪೂಜ್ಯ ಸ್ವಾಮಿ ಜಪಾನಂದ ಜೀ ರವರ ನೇತೃತ್ವದಲ್ಲಿ ಈ ಮೂಕ ಪ್ರಾಣಿಗಳಿಗೆ ನಿರಂತರವಾಗಿ ಮೇವನ್ನು ಒದಗಿಸಲಾಗುತ್ತಿದೆ ಆದರೆ ನೂತನ ಸರ್ಕಾರ ಆಡಳಿತ ಆರಂಭಿಸಿದ್ದಾಗಿಯೂ ಈ ಮೂಕ ಪ್ರಾಣಿಗಳಿಗೆ ಯಾವುದೇ ರೀತಿಯ ಸಹಾಯ ದೊರೆಯುತ್ತಿಲ್ಲ ಪೂಜ್ಯ ಸ್ವಾಮಿ ಜಪಾನಂದ ಜೀವನ ಪ್ರಕಾರ ಮಳೆ ಪೂರ್ಣ ಪ್ರಮಾಣದಲ್ಲಿ ಬಂದು ಕಾಡಿನಲ್ಲಿ ಮೇವು ಸಮೃದ್ಧಿಯಾಗಿ ದೊರಕುವವರೆಗೂ ಈ ಸೇವಾ ಕಾರ್ಯ ಮುಂದುವರಿಯುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಂದು ತಾರೀಕು 25 ಜುಲೈ ಮಂಗಳವಾರದಂದು ಮೇ ವಿತರಣಾ ಯೋಜನೆಯ ಮುಂದುವರಿದ ಭಾಗ ನೆರವೇರಿತು . ಈ ಸಂದರ್ಭದಲ್ಲಿ ಆಶ್ರಮದ ಸ್ವಯಂಸೇವಕರು ಹಾಗೂ ಸ್ಥಳೀಯ ಸಂಯೋಜಕರುಗಳಾದ ಶ್ರೀ ಮಹೇಶ್ ಹಾಗೂ ಶ್ರೀ ಸಿದ್ದೇಶ್ ರವರು ಉಪಸ್ಥಿತರಿದ್ದರು.

Latest News >>

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಸಹಾಯವಾಣಿ ಆರಂಭ

ಚಿತ್ರದುರ್ಗ ಮೇ.30: ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ-2024ರ ಸಂಬಂಧ ಶಿಕ್ಷಕರು ಮತ ಚಲಾಯಿಸಲು ಮತದಾರರಿಗೆ ಸಹಾಯ ಮಾಡಲು ಮತದಾರರ...

ಜೆಜೆಎಂ ಕಾಮಗಾರಿ ಪರಿಶೀಲಿಸಿದ ಜಿ.ಪಂ ಸಿಇಒ ಸೋಮಶೇಖರ್

ಮೊಳಕಾಲ್ಮೂರು ಮೇ.30: ಮೊಳಕಾಲ್ಮರು ತಾಲ್ಲೂಕಿನ ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕೊಂಡಾಪುರ ಗ್ರಾಮ ಹಾಗೂ ಅಶೋಕ ಸಿದ್ದಾಪುರ ಗ್ರಾಮ...

ಕಾರ್ಮಿಕರಿಗೆ ರಾಜಕೀಯ ತಿಳುವಳಿಕೆ ಬರುವವರೆಗೂ ಜೀವನದಲ್ಲಿ ಬದಲಾವಣೆ ಸಾಧ್ಯವಿಲ್ಲ: ಸಿಐಟಿಯು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಪತ್ತರ್

ಚಳ್ಳಕೆರೆ: ಕಾರ್ಮಿಕರಿಗೆ ರಾಜಕೀಯ ತಿಳುವಳಿಕೆ ಬರುವವರೆಗೂ ಅವರ ಜೀವನದಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ಸಿಐಟಿಯು ಸಂಘಟನೆಯ ರಾಜ್ಯ ಪ್ರಧಾನ...

ಸರಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಬಹಳ ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದ ಪ್ರದೇಶವನ್ನು ಕಂದಾಯ ಗ್ರಾಮಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿ ಕಾರ್ತಿಕ್.

ಚಳ್ಳಕೆರೆ ಜನಧ್ವನಿಮೆ30 ಸರಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಬಹಳ ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದ ಪ್ರದೇಶವನ್ನು...

ಮಗು ಇದೇ ಏಗಪ್ಪ ಕೂಲಿಕೆಲಕ್ಕೆ ಹೋಗೋದು ಎಂಬ ಚಿಂತೆ ಬಿಡಿ ಕೂಸಿನ‌ಮನೆ ಬಿಡಿ ಕೆಲಸಕ್ಕೆ ಹೋಗಿ ಎಂದು ತಾಪಂ ಇಒ‌ ಲಕ್ಷ್ಮಣ್.

ಚಳ್ಳಕೆರೆ ಮೇ.30 ಮಗು ಇದೇ ಏಗಪ್ಪ ಕೂಲಿಕೆಲಕ್ಕೆ ಹೋಗೋದು ಎಂಬ ಚಿಂತೆ ಬಿಡಿ ಕೂಸಿನ‌ಮನೆ ಬಿಡಿ ಕೆಲಸಕ್ಕೆ ಹೋಗಿ ಎಂದು ತಾಪಂ ಇಒ‌ ಲಕ್ಷ್ಮಣ್...

ತಿಮ್ಮಪ್ಪಯ್ಯನಹಳ್ಳಿ ಗ್ರಾಪಂ ಉಪಾಧ್ಯಕ್ಷರಾಗಿ ಎಂ.ತಿಪ್ಪೇಸ್ವಾಮಿ ಅವಿರೋಧವಾಗಿ ಆಯ್ಕೆ.

ನಾಯಕನಹಟ್ಟಿ::ಮೇ28. ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ರಾಜಿನಾಮೆಯಿಂದ ತೆರವಾಗಿದ್ದ ಉಪಧ್ಯಾಕ್ಷ ಸ್ಥಾನಕ್ಕೆ ಮಂಗಳವಾರ ನಡೆದ...

ಬಿಜೆಪಿ ನೇತೃತ್ವದ ಸರ್ಕಾರ ದೇಶದ ಜನರ ಸಂಪತ್ತನ್ನು ಕೆಲವೇ ಶತ ಕೋಟ್ಯಾಧಿಪತಿಗಳಿಗೆ ಧಾರೆ ಎರೆದಿದೆ ಸಿ.ವೈ. ಶಿವರುದ್ರಪ್ಪ

ಚಳ್ಳಕೆರೆ ಮೋದಿ ಸರ್ಕಾರ ದೇಶದ ಕಾನೂನುಗಳನ್ನು ಕಾರ್ಪೊರಿಕ್ ಸಾಗರ ಪ ತಿದ್ದುಪಡಿ ಮಾಡಿ, ಅವುಗಳ ಲಕ್ಷಾಂತರ ಕೋಟಿ ರೂಗಳ ಸಾಲ ಮನ್ನಾ ಮಾಡಿದೆ...

ಯುಪಿ ಯಿಂದ ಬಂದು ಅನಧಿಕೃತವಾಗಿ ಸೆಲೂನ್ ಅಂಗಡಿ ಪ್ರಾರಂಭಿಸುತ್ತಿರುವ ವ್ಯಕ್ತಿಗಳಿಗೆ ಅಂಗಡಿ ಪ್ರಾರಂಭಿಸಲು ಪರವಾನಗಿ ನೀಡದಿರಲು ಮನವಿ

ಹಿರಿಯೂರು : ಉತ್ತರಪ್ರದೇಶ ರಾಜ್ಯದಿಂದ ಹಿರಿಯೂರು ನಗರಕ್ಕೆ ಬಂದು ಅನಧಿಕೃತವಾಗಿ ಸೆಲೂನ್ ಅಂಗಡಿ ಪ್ರಾರಂಭಿಸುತ್ತಿರುವ ವ್ಯಕ್ತಿಗಳಿಗೆ ಅಂಗಡಿ...

ವಿದ್ಯುತ್ ತಂತಿ ಹರಿದು ಬಿದ್ದು ಎಮ್ಮೆ ಸ್ಥಳದಲ್ಲೇ ಸಾವು.

ಚಳ್ಳಕೆರೆ ಮೇ28 ಹಳ್ಳದಲ್ಲಿ ಮೇಯುತ್ತಿದ್ದ ಎಮ್ನೆ ಮೇಲೆ ವಿದ್ಯುತ್ ತಂತಿ ಹರಿದ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಹೌದು...

ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ ವಸತಿ ನಿಲಯಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಕಾವಲುಗಾರರ ನೇಮಿಸಿ

ಚಿತ್ರದುರ್ಗ ಮೇ.27: ಜಿಲ್ಲೆಯ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿರಬೇಕು. ಒಂದು ವೇಳೆ ಸಿಸಿ ಕ್ಯಾಮೆರಾಗಳು...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page