ಮರುಬಳಕೆ ಮಾಡಬಹುದಾದ ಮಾನವರಹಿತ ಉಡಾವಣಾ ರಾಕೆಟ್ ಯಶಸ್ವಿ ಹಾರಾಟ ಮತ್ತು ಸ್ವಾಯುತ್ತವಾಗಿ ನೆಲೆ ಕಂಡುಕೊಳ್ಳುವ ಸಾಮರ್ಥ್ಯ ಹೊಂದಿರುವ ಬಾಹ್ಯಕಾಶ ವಾಹನದ ಪ್ರಯೋಗವನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು.

by | 03/04/23 | ವಿಜ್ಞಾನ ತಂತ್ರಜ್ಞಾನ


ಜನಧ್ವನಿ ವಾರ್ತೆ ಏ.2
ಮರುಬಳಕೆ ಮಾಡಬಹುದಾದ ಮಾನವರಹಿತ ಉಡಾವಣಾ ರಾಕೆಟ್ ಯಶಸ್ವಿ ಹಾರಾಟ ಮತ್ತು ಸ್ವಾಯುತ್ತವಾಗಿ ನೆಲೆ ಕಂಡುಕೊಳ್ಳುವ ಸಾಮರ್ಥ್ಯ ಹೊಂದಿರುವ ಬಾಹ್ಯಕಾಶ ವಾಹನದ ಪ್ರಯೋಗವನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು.
ತಾಲೂಕಿನ ನಾಯಕನಹಟ್ಟಿ ಸಮೀಪದ ಕುದಾಪುರ ಡಿಆರ್‌ಡಿಒ ವಾಯುನೆಲೆಯಲ್ಲಿ ಭಾನುವಾರ ಬೆಳಿಗ್ಗೆ ಇಸ್ರೋ, ಡಿಆರ್‌ಡಿಒ, ಭಾರತೀಯ ವಾಯುನೆಲೆ, ಸೆಮಿಲ್ಯಾಕ್, ಎಡಿಇ, ಎಡಿಆರ್‌ಡಿಇ ಸಹಯೋಗದಲ್ಲಿ ನಡೆಸಿದ ಮಾನವರಹಿತ ಸ್ವಾಯುತ್ತ ನೆಲೆಕಂಡುಕೊಳ್ಳುವ ರಾಕೆಟ್ ಹಾರಾಟವು ಯಶಸ್ವಿಯಾಯಿತು.
ಭಾರತ ದೇಶದಲ್ಲಿ ಇಸ್ರೋ ಸಂಸ್ಥೆಯು ಹಲವಾರು ಯಶಸ್ವಿ ರಾಕೆಟ್‌ಗಳ ಉಡಾವಣೆಯ ಮೂಲಕ ಬಾಹ್ಯಾಕಾಶ ಕ್ಷೇತ್ರಕ್ಕೆ ವಿಶೇಷವಾದ ಕೊಡುಗೆಯನ್ನು ನೀಡಿದೆ. ಹಾಗೇ ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ದೊಡ್ಡದೊಡ್ಡ ಯೋಜನೆಗಳನ್ನು ಯಶಸ್ವಿಗೊಳಿಸಿದ ಹೆಗ್ಗಳಿಕೆ ಇಸ್ರೋ ಸಂಸ್ಥೆಗಿದೆ. ಈ ಹಿನ್ನೆಲೆಯಲ್ಲಿ ಇನ್ನೂ ಕಡಿಮೆ ವೆಚ್ಚದಲ್ಲಿ ಬಾಹ್ಯಕಾಶದ ಯೋಜನೆಗಳನ್ನು ಕಾರ್ಯಗತಗೊಳಿಸಬೇಕು ಎಂಬ ಉದ್ದೇಶದಿಂದ 2016ರ ಮೇ ತಿಂಗಳಲ್ಲಿ ಸ್ವತಂತ್ರö್ಯವಾಗಿ ನೆಲೆ ಕಂಡುಕೊಳ್ಳುವ ಸಾಮರ್ಥ್ಯ ಹೊಂದಿರುವ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ (ಆರ್‌ಎಲ್‌ವಿ ಎಲ್‌ಇಎಕ್ಸ್) ಹಾರಾಟ ಮತ್ತು ಇಳಿಯುವಿಕೆಯ ಪರೀಕ್ಷೆಯನ್ನು ಬಂಗಾಳಕೊಲ್ಲಿಯ ಸಮುದ್ರದ ಮೇಲಿನ ಕಾಲ್ಪನಿಕ ರನ್‌ವೇಯಲ್ಲಿ ಪ್ರಯೋಗಿಸಲಾಗಿತ್ತು. ಅಲ್ಲಿ ನಿಖರವಾಗಿ ರನ್‌ವೇಯಲ್ಲಿ ಇಳಿಯದೇ ಇರುವುದರಿಂದ ಇನ್ನೂ ಹೆಚ್ಚಿನ ಅಧ್ಯಯನ, ಪ್ರಯೋಗ ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಹಲವಾರು ಬಾರಿ ಪರೀಕ್ಷಾರ್ಥ ಹಾರಾಟ ನಡೆಸಲಾಗಿತ್ತು.

ಡಿಆರ್‌ಡಿಒ ಪರೀಕ್ಷಾರ್ಥ ವಾಯುನೆಲೆಯಲ್ಲಿ ಭಾನುವಾರ ಬೆಳಿಗ್ಗೆ 7.11ಕ್ಕೆ ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಮೊದಲು ಮೇಲೆ ಹಾರಿ ನಂತರ ಅದರ ಕೆಳಗಡೆ ಮರುಬಳಕೆ ಮಾಡಬಹುದಾದ ಉಡಾವಣಾ ವಿಮಾನಕ್ಕೆ (ಆರ್‌ಎಲ್‌ವಿ ಎಲ್‌ಇಎಕ್ಸ್) ಹಗ್ಗ ಕಟ್ಟಿಕೊಂಡು ಸುಮಾರು ೪.೫ಕಿ.ಮೀ ಎತ್ತರಕ್ಕೆ ಹಾರಿತು. ಇದೇವೇಳೆ ಮರುಬಳಕೆ ಮಾಡಬಹುದಾದ ಉಡಾವಣಾ ವಿಮಾನವು(ಆರ್‌ಎಲ್‌ವಿ-ಎಲ್‌ಇಎಕ್ಸ್) ಮಿಷನ್ ಮ್ಯಾನೇಜ್‌ಮೆಂಟ್ ಕಂಪ್ಯೂಟರ್ ಆದೇಶದ ಮೇರೆಗೆ ಪೂರ್ವನಿರ್ಧರಿತ ಪಿಲ್‌ಬಾಕ್ಸ್ ಸೂಚನೆಗಳನ್ನು ಸ್ವಯಂಚಾಲಿತವಾಗಿ ಸಾಧಿಸಿದ ನಂತರ, ವಿಮಾನವನ್ನು ಗಾಳಿಯಲ್ಲಿ ಭೂಮಿಯಿಂದ4.6 ಕಿ.ಮೀ.ಎತ್ತರದಲ್ಲಿ ಹೆಲಿಕಾಪ್ಟರ್ ಬಿಡುಗಡೆ ಮಾಡಿತು. ನಂತರ ವಿಮಾನವು ಸ್ಥಾನ, ವೇಗ, ಎತ್ತರ ಇತ್ಯಾದಿ ಷರತ್ತುಗಳನ್ನು ಒಳಗೊಂಡ 10 ಸೂಚನೆಗಳನ್ನು ಸ್ವತಂತ್ರö್ಯವಾಗಿ ಪಾಲಿಸಿಕೊಂಡು ನಂತರ ಇಂಟಿಗ್ರೇಟೆಡ್ ನ್ಯಾವಿಗೇಷನ್, ಗೈಡೆನ್ಸ್ & ಕಂಟ್ರೋಲ್ ಸಿಸ್ಟಮ್ ಅನ್ನು ಬಳಸಿಕೊಂಡು ವ್ಯವಸ್ಥಿತವಾಗಿ ಲ್ಯಾಂಡಿAಗ್ ತಂತ್ರಗಳನ್ನು ನಿರ್ವಹಿಸಿ ಡಿಆರ್‌ಡಿಒ ಪರೀಕ್ಷಾರ್ಥ ವಾಯುನೆಲೆಯಲ್ಲಿ ಬೆಳಿಗ್ಗೆ 7.40ಕ್ಕೆ ಸುರಕ್ಷಿತವಾಗಿ ಮತ್ತು ಸ್ವತಂತ್ರವಾಗಿ ನೆಲೆಯೂರಿತು. ಅದರಲ್ಲೂ ವಿಶ್ವದಲ್ಲಿಯೇ ಮೊದಲ ಬಾರಿಗೆ, ರೆಕ್ಕೆಯ ದೇಹವನ್ನು ಹೆಲಿಕಾಪ್ಟರ್ ಮೂಲಕ 4.5ಕಿಮೀ ಎತ್ತರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ ರನ್‌ವೇಯಲ್ಲಿ ಸ್ವತಂತ್ರವಾಗಿ ನೆಲೆಕಂಡುಕೊಳ್ಳಲು ಬಿಡುಗಡೆ ಮಾಡಲಾಯಿತು. ಆಗ ವಿಮಾನವು ಗಂಟೆಗೆ ೩೫೦ಕಿ.ಮೀ ಹೆಚ್ಚಿನ ವೇಗದಲ್ಲಿ ಸುರಕ್ಷಿತವಾಗಿ ಇಳಿಯಿತು. ಇದರೊಂದಿಗೆ ಮಾನವರಹಿತ ಬಾಹ್ಯಾಕಾಶ ವಾಹನದ ಸ್ವಾಯುತ್ತ ಲ್ಯಾಂಡಿAಗ್ ಅನ್ನು ಇಸ್ರೋ ಯಶಸ್ವಿಯಾಗಿ ಸಾಧಿಸಿತು.
ಆ ಮೂಲಕ ಬಾಹ್ಯಕಾಶಕ್ಕೆ ತೆರಳಿದ ಮಾನವರಹಿತ ವಿಮಾನವು ಹೆಚ್ಚಿನ ವೇಗದೊಂದಿಗೆ ಅದೇ ಮಾರ್ಗದಲ್ಲಿ ನಿಖರವಾಗಿ ಹಿಂತಿರುಗಿ ನೆಲೆಕಂಡುಕೊಳ್ಳುವುದು ಮತ್ತು ನೆಲೆಕಂಡುಕೊಳ್ಳುವಾಗ ಭೂಮಿಗೆ ಸಂಬAಧಿತ ವೇಗ ಸೇರಿದಂತೆ ಬಾಹ್ಯಾಕಾಶ ವಾಹನವು ಅದರ ಹಿಂತಿರುಗುವ ಹಾದಿಯಲ್ಲಿ ಅನುಭವಿಸಬಹುದಾದ ಸಮಸ್ಯೆಗಳಿಗೆ ಪರಿಹಾರವನ್ನು ಸಾಧಿಸಲಾಗಿದೆ. ಈ ಮಾನವರಹಿತ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನವು ನಿಖರವಾದ ಸ್ಥಳಸೂಚಿಯ ಜತೆಗೆ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್, ಸ್ಯೂಡೋಲೈಟ್ ವ್ಯವಸ್ಥೆ, ಕಾ-ಬ್ಯಾಂಡ್ ರಾಡಾರ್ ಅಲ್ಟಿಮೀಟರ್, ಸ್ಥಳೀಯ ಲ್ಯಾಂಡಿAಗ್ ಗೇರ್, ಏರೋಫಾಯಿಲ್ ಜೇನು-ಬಾಚಣಿಗೆ ರೆಕ್ಕೆಗಳು ಮತ್ತು ಬ್ರೇಕ್ ಪ್ಯಾರಾಚೂಟ್ ಸಿಸ್ಟಮ್ ಸೇರಿದಂತೆ ಹಲವಾರು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಯಶಸ್ಸು ಸಾಧಿಸಿತು.
ವಿಎಸ್‌ಎಸ್‌ಸಿ ನಿರ್ದೇಶಕ ಡಾ.ಎಸ್.ಉನ್ನಿಕೃಷ್ಣನ್ ನಾಯರ್ ಮತ್ತು ಎಟಿಎಸ್‌ಪಿ ಕಾರ್ಯಕ್ರಮ ನಿರ್ದೇಶಕ ಎನ್.ಶ್ಯಾಮ್‌ಮೋಹನ್ ವಿಜ್ಞಾನಿಗಳ ತಂಡಗಳಿಗೆ ಮಾರ್ಗದರ್ಶನ ನೀಡಿದರು. ಮಿಷನ್ ನಿರ್ದೇಶಕರಾಗಿ ಆರ್‌ಎಲ್‌ವಿ ಯೋಜನಾ ನಿರ್ದೇಶಕ ಡಾ.ಎಂ.ಜಯಕುಮಾರ್, ಮತ್ತು ಯೋಜನೆಗೆ ವಾಹನ ನಿರ್ದೇಶಕರಾಗಿ ಆರ್‌ಎಲ್‌ವಿಯ ಸಹ ಯೋಜನಾ ನಿರ್ದೇಶಕರಾದ ಜೆ.ಮುತ್ತುಪಾಂಡಿಯನ್ ಕಾರ್ಯನಿರ್ವಹಿಸಿದ್ದಾರೆ.
ಇದೇವೇಳೆ ಇಸ್ಟಾçಕ್ ನಿರ್ದೇಶಕರಾದ ರಾಮಕೃಷ್ಣ, ಇಸ್ರೋ ಕಾರ್ಯದರ್ಶಿ ಎಸ್.ಸೋಮನಾಥ್ ಪರೀಕ್ಷೆಯನ್ನು ವೀಕ್ಷಿಸಿದರು ಮತ್ತು ಇಡೀ ತಂಡವನ್ನು ಅಭಿನಂದಿಸಿದರು.

Latest News >>

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಸಹಾಯವಾಣಿ ಆರಂಭ

ಚಿತ್ರದುರ್ಗ ಮೇ.30: ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ-2024ರ ಸಂಬಂಧ ಶಿಕ್ಷಕರು ಮತ ಚಲಾಯಿಸಲು ಮತದಾರರಿಗೆ ಸಹಾಯ ಮಾಡಲು ಮತದಾರರ...

ಜೆಜೆಎಂ ಕಾಮಗಾರಿ ಪರಿಶೀಲಿಸಿದ ಜಿ.ಪಂ ಸಿಇಒ ಸೋಮಶೇಖರ್

ಮೊಳಕಾಲ್ಮೂರು ಮೇ.30: ಮೊಳಕಾಲ್ಮರು ತಾಲ್ಲೂಕಿನ ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕೊಂಡಾಪುರ ಗ್ರಾಮ ಹಾಗೂ ಅಶೋಕ ಸಿದ್ದಾಪುರ ಗ್ರಾಮ...

ಕಾರ್ಮಿಕರಿಗೆ ರಾಜಕೀಯ ತಿಳುವಳಿಕೆ ಬರುವವರೆಗೂ ಜೀವನದಲ್ಲಿ ಬದಲಾವಣೆ ಸಾಧ್ಯವಿಲ್ಲ: ಸಿಐಟಿಯು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಪತ್ತರ್

ಚಳ್ಳಕೆರೆ: ಕಾರ್ಮಿಕರಿಗೆ ರಾಜಕೀಯ ತಿಳುವಳಿಕೆ ಬರುವವರೆಗೂ ಅವರ ಜೀವನದಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ಸಿಐಟಿಯು ಸಂಘಟನೆಯ ರಾಜ್ಯ ಪ್ರಧಾನ...

ಸರಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಬಹಳ ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದ ಪ್ರದೇಶವನ್ನು ಕಂದಾಯ ಗ್ರಾಮಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿ ಕಾರ್ತಿಕ್.

ಚಳ್ಳಕೆರೆ ಜನಧ್ವನಿಮೆ30 ಸರಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಬಹಳ ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದ ಪ್ರದೇಶವನ್ನು...

ಮಗು ಇದೇ ಏಗಪ್ಪ ಕೂಲಿಕೆಲಕ್ಕೆ ಹೋಗೋದು ಎಂಬ ಚಿಂತೆ ಬಿಡಿ ಕೂಸಿನ‌ಮನೆ ಬಿಡಿ ಕೆಲಸಕ್ಕೆ ಹೋಗಿ ಎಂದು ತಾಪಂ ಇಒ‌ ಲಕ್ಷ್ಮಣ್.

ಚಳ್ಳಕೆರೆ ಮೇ.30 ಮಗು ಇದೇ ಏಗಪ್ಪ ಕೂಲಿಕೆಲಕ್ಕೆ ಹೋಗೋದು ಎಂಬ ಚಿಂತೆ ಬಿಡಿ ಕೂಸಿನ‌ಮನೆ ಬಿಡಿ ಕೆಲಸಕ್ಕೆ ಹೋಗಿ ಎಂದು ತಾಪಂ ಇಒ‌ ಲಕ್ಷ್ಮಣ್...

ತಿಮ್ಮಪ್ಪಯ್ಯನಹಳ್ಳಿ ಗ್ರಾಪಂ ಉಪಾಧ್ಯಕ್ಷರಾಗಿ ಎಂ.ತಿಪ್ಪೇಸ್ವಾಮಿ ಅವಿರೋಧವಾಗಿ ಆಯ್ಕೆ.

ನಾಯಕನಹಟ್ಟಿ::ಮೇ28. ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ರಾಜಿನಾಮೆಯಿಂದ ತೆರವಾಗಿದ್ದ ಉಪಧ್ಯಾಕ್ಷ ಸ್ಥಾನಕ್ಕೆ ಮಂಗಳವಾರ ನಡೆದ...

ಬಿಜೆಪಿ ನೇತೃತ್ವದ ಸರ್ಕಾರ ದೇಶದ ಜನರ ಸಂಪತ್ತನ್ನು ಕೆಲವೇ ಶತ ಕೋಟ್ಯಾಧಿಪತಿಗಳಿಗೆ ಧಾರೆ ಎರೆದಿದೆ ಸಿ.ವೈ. ಶಿವರುದ್ರಪ್ಪ

ಚಳ್ಳಕೆರೆ ಮೋದಿ ಸರ್ಕಾರ ದೇಶದ ಕಾನೂನುಗಳನ್ನು ಕಾರ್ಪೊರಿಕ್ ಸಾಗರ ಪ ತಿದ್ದುಪಡಿ ಮಾಡಿ, ಅವುಗಳ ಲಕ್ಷಾಂತರ ಕೋಟಿ ರೂಗಳ ಸಾಲ ಮನ್ನಾ ಮಾಡಿದೆ...

ಯುಪಿ ಯಿಂದ ಬಂದು ಅನಧಿಕೃತವಾಗಿ ಸೆಲೂನ್ ಅಂಗಡಿ ಪ್ರಾರಂಭಿಸುತ್ತಿರುವ ವ್ಯಕ್ತಿಗಳಿಗೆ ಅಂಗಡಿ ಪ್ರಾರಂಭಿಸಲು ಪರವಾನಗಿ ನೀಡದಿರಲು ಮನವಿ

ಹಿರಿಯೂರು : ಉತ್ತರಪ್ರದೇಶ ರಾಜ್ಯದಿಂದ ಹಿರಿಯೂರು ನಗರಕ್ಕೆ ಬಂದು ಅನಧಿಕೃತವಾಗಿ ಸೆಲೂನ್ ಅಂಗಡಿ ಪ್ರಾರಂಭಿಸುತ್ತಿರುವ ವ್ಯಕ್ತಿಗಳಿಗೆ ಅಂಗಡಿ...

ವಿದ್ಯುತ್ ತಂತಿ ಹರಿದು ಬಿದ್ದು ಎಮ್ಮೆ ಸ್ಥಳದಲ್ಲೇ ಸಾವು.

ಚಳ್ಳಕೆರೆ ಮೇ28 ಹಳ್ಳದಲ್ಲಿ ಮೇಯುತ್ತಿದ್ದ ಎಮ್ನೆ ಮೇಲೆ ವಿದ್ಯುತ್ ತಂತಿ ಹರಿದ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಹೌದು...

ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ ವಸತಿ ನಿಲಯಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಕಾವಲುಗಾರರ ನೇಮಿಸಿ

ಚಿತ್ರದುರ್ಗ ಮೇ.27: ಜಿಲ್ಲೆಯ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿರಬೇಕು. ಒಂದು ವೇಳೆ ಸಿಸಿ ಕ್ಯಾಮೆರಾಗಳು...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page