ಮನೆ ದೇವರುಗಳ ಪೂಜೆ ಮೌಢ್ಯವಲ್ಲ – ಕಸವನಹಳ್ಳಿ ರಮೇಶ್.

by | 18/12/23 | ಸುದ್ದಿ


ಚಳ್ಳಕೆರೆ .. ಮನೆ ದೇವರುಗಳ ಪೂಜೆ ಮೌಢ್ಯವಲ್ಲ – ಕಸವನಹಳ್ಳಿ ರಮೇಶ್.
ಚಳ್ಳಕೆರೆ ತಾಲೂಕು ಕಲಮರಹಳ್ಳಿ ಗ್ರಾಮದಲ್ಲಿ ಕುಂಚಿಟಿಗರ ಬೆಳ್ಳನಾರ್ ಕುಲದವರ ಮನೆದೇವರು ರಂಗನಾಥಸ್ವಾಮಿ ಸನ್ನಿಧಿಯಲ್ಲಿ ಬೆಳ್ಳನಾರ್ “ಸ್ನೇಹ ಸಮ್ಮಿಲನ”ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.


ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ವಲಸೆ ಬಂದ ಕುಂಚಿಟಿಗರು ಪಶುಸಂಗೋಪನೆ ಮಾಡಿಕೊಂಡು ಮೇವು- ನೀರು ಇರುವ ಬೆಟ್ಟ-ಗುಡ್ಡ ಕೆರೆ -ತೊರೆ ಭಾಗಗಳಲ್ಲಿ ವಾಸವಿದ್ದು. ಇವತ್ತಿನ ದಿನಮಾನಗಳಲ್ಲಿ ರಾಜ್ಯದಲ್ಲಿ 18 ಜಿಲ್ಲೆ 46 ತಾಲೂಕುಗಳಲ್ಲಿ 26 ಲಕ್ಷಕ್ಕೂ ಅಧಿಕ ಸಂಖ್ಯೆಯ ಕುಂಚಿಟಿಗರು ಕುಲ -ಬೆಡಗುಗಳ ಆಧಾರದ ಮೇಲೆ ಒಗ್ಗಟ್ಟಾಗಿ ಕೃಷಿ ಸಂಸ್ಕೃತಿಯನ್ನು ಮಾಡಿಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ನಮ್ಮ ಕುಟುಂಬದ ಹಿರಿಯರು ಭಕ್ತಿ ಭಾವದಿಂದ ಬಂದು ಮುಟ್ಟಿ ಹೋಗಿರುವ ಮನೆ ದೇವರುಗಳ ದೈವಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ನಮ್ಮ ಹಿರಿಯರು ಮತ್ತು ಪೂರ್ವಜರನ್ನು ಗೌರವಿಸಿದಂತಾಗುತ್ತದೆ. ಇದು ಮೂಢನಂಬಿಕೆ ಅಲ್ಲ ಕುಟುಂಬದ ಹಿರಿಯರ ಮೇಲಿರುವ ಗೌರವದ ನಂಬಿಕೆ. ಈ ನಿಟ್ಟಿನಲ್ಲಿ ವಿವಿಧತೆ ಯಲ್ಲಿ ಏಕತೆ ಸಾರುವ 101 ಕುಲ ಬೆಡಗಿನ ಕುಂಚಿಟಿಗರ ಏಕೀಕರಣ ಮತ್ತು ದೃವೀಕರಣದ ಭಾಗವಾಗಿ ಬೆಳ್ಳನಾರ್ ಕುಲದವರನ್ನು ಒಂದೆಡೆ ಸೇರಿಸಿ ಸಮಾವೇಶ ಮಾಡಲಾಗುವುದು.ಇದರಿಂದ ಮುಂದಿನ ಪೀಳಿಗೆಯವರಿಗೆ ನಮ್ಮ ಕುಟುಂಬದ ಹಿರಿಯರ ವಾಸ ಸ್ಥಳಗಳು ,ದೇವಸ್ಥಾನಗಳು, ಜೀವನ ಪದ್ಧತಿ ಕಲಿಸಿಕೊಟ್ಟಂತಾಗುತ್ತದೆ. ಅಲ್ಲದೆ ನಮ್ಮ ವಾಸಸ್ಥಳ ಬದಲಾಗಿರಬಹುದು ,ವ್ಯವಸಾಯದ ಭೂಮಿ ಬದಲಾಗಿರಬಹುದು, ವೃತ್ತಿಯ ಪ್ರದೇಶ ಬದಲಾಗಿರಬಹುದು, ಆದರೆ ಕುಲದ ಮೂಲದ ಬುಡಕಟಿನ ದೇವರುಗಳು ಬದಲಾಗಿಲ್ಲ,ಆದ್ದರಿಂದ ದೈವಿಕ ಕಾರ್ಯಗಳಲ್ಲಿ ಭಕ್ತಿ ಭಾವದಿಂದ ಪಾಲ್ಗೊಳ್ಳಬೇಕು ಎಂದು ಕಸವನಹಳ್ಳಿರಮೇಶ್ ಹೇಳಿದರು. ಇದೇ ಸಂದರ್ಭದಲ್ಲಿ ಹೊಸಹಳ್ಳಿ ಶ್ರೀ ವೀರಬಡಣ್ಣ ಟ್ರಸ್ಟ್ ನ ಕಂಬತ್ತನಹಳ್ಳಿ ಈರಣ್ಣ ಮಾತನಾಡಿ,ನಾವುಗಳು ಶ್ರಮಸಂಸ್ಕೃತಿಯಿಂದ ಬಂದು ಕೃಷಿಯನ್ನು ಆರಾಧಿಸಿಕೊಂಡು ಬುಡಕಟ್ಟಿನ ಮನೆ ದೇವರುಗಳನ್ನು ಪೂಜಿಸುತ್ತಿರುವುದು. ಇದೊಂದು ವಿಶಿಷ್ಟ ಪರಂಪರೆ ಯಾವುದೇ ಕಾರಣಕ್ಕೂ ಸಮಾಜದಲ್ಲಿ ಸ್ಥಾನಮಾನಗಳು ಬದಲಾದರೂ ಮನೆ ದೇವರುಗಳು ಬದಲಾಗಿಲ್ಲ ಎಂದು ಹೇಳಿದರು. ಕುಂಚಿಟಿಗ ಸ್ವಚ್ಛ ಸುಸಂಸ್ಕೃತ ಮತ್ತು ಸುಚಿರ್ಭೂತ ಸಂಸ್ಕಾರಯುಕ್ತ ಜಾತಿಯಾಗಿದೆ ವೈವಿಧ್ಯಮಯ ಕುಲ ಬೆಡಗಿನ ಕುಂಚಿಟಿಗರು ವೈಜ್ಞಾನಿಕ ಹಿನ್ನೆಲೆಯಲ್ಲಿ ವೈವಾಹಿಕ ಬದುಕು ಕಟ್ಟಿಕೊಂಡು ಇತರೆ ಸಮಾಜದವರಿಗೆ ಮಾದರಿಯಾಗಿ ಬದುಕುತ್ತಿದ್ಧಾರೆ ಎಂದು ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಕಲಮರಹಳ್ಳಿ ಪಟೇಲ್ ಚಂದ್ರೇಗೌಡರು ವಹಿಸಿದ್ದರು.ಇದೇ ಸಂದರ್ಭದಲ್ಲಿ ಹಿರಿಯರು ತಾಲ್ಲೋಕು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಪ್ರದಾನ ಕಾರ್ಯದರ್ಶಿ ವಿ.ಕುಬೇರಪ್ಪ, ಮ್ಯಾದನಹೊಳೆ ಪುಟ್ಟಸ್ವಾಮಿ, ಆರ್ ಕೃಷ್ಣಮೂರ್ತಿ. ಈಶ್ವರಗೆರೆ ರಾಜಣ್ಣ.ಹುಲಿಕುಂಟೆ ವೀರಣ್ಣ,ಕೆಪಿ ಪ್ರಹ್ಲಾದ್ ಆರ್.ಸಿದ್ದಯ್ಯ,ಸಿದ್ದೇಶ್ ಪೋಜಾರ್, ಕೆ.ಆರ್.ಪಾಂಡುರಂಗಪ್ಪ , ಆರ್.ರಂಗಸ್ವಾಮಿ,ಸಿದ್ದೇಶ್ ಗೌಡ, ಪ್ರಕಾಶ್, ಕಸವನಹಳ್ಳಿ ಶ್ರೀನಾಥ್ ಮತ್ತಿತರರ ಕುಂಚಿಟಿಗ ಮುಖಂಡರು ಉಪಸ್ಥಿತರಿದ್ದರು.

Latest News >>

ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ: -ಮುಖ್ಯಮಂತ್ರಿ ಸಿದ್ದರಾಮಯ್ಯ

ಬಳ್ಳಾರಿ,ಜೂ.20 ರಾಜ್ಯದಲ್ಲಿ ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ವಿಷಯ ಸದ್ಯ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸೋಲಿನ ಹೊಣೆಯನ್ನು ನಾನೇ ಹೊರುವೆ: ಪರಾಜಿತ ಅಭ್ಯರ್ಥಿ ಬಿ ಎನ್ ಚಂದ್ರಪ್ಪ 

ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆಯು ಕಳೆದ ಹತ್ತು ವರ್ಷಗಳಿಂದ ನನ್ನ ಕರ್ಮಭೂಮಿಯಾಗಿದ್ದು ಇಲ್ಲಿನ ಜನತೆ ಮನೆ ಮಗನಂತೆ ನೋಡಿದ್ದು ಒಂದು ಬಾರಿ...

ಜಾತಿನಿಂದನೆ, ದೌರ್ಜನ್ಯಗಳಂತಹ ಆರೋಪಗಳನ್ನು ಪರಿಶಿಷ್ಟರು ಕೈಬಿಟ್ಟಾಗ ಮಾತ್ರ ಸಮಾಜದಲ್ಲಿಬೆಳೆಯಲು ಸಾಧ್ಯ: ನೂತನ ಸಂಸದರಾದ ಗೋವಿಂದ ಕಾರಜೋಳ

ಹಿರಿಯೂರು: ಜಾತಿ ನಿಂದನೆ ಮತ್ತು ದಲಿತ ದೌರ್ಜನ್ಯಗಳಂತಹ ವೃತಾ ಆರೋಪಗಳನ್ನು ಪರಿಶಿಷ್ಟರು ಕೈ ಬಿಟ್ಟಾಗ ಮಾತ್ರ ಸಮಾಜದಲ್ಲಿ ಬೆಳೆಯಲು ಸಾಧ್ಯ...

ಚಿಕ್ಕಾಲಘಟ್ಟ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮ ಶೀಘ್ರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯ ಭರವಸ -ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ

ಚಿತ್ರದುರ್ಗ. ಜೂನ್.19: ಚಿಕ್ಕಾಲಘಟ್ಟ ಗ್ರಾಮದ ಬಹುದಿನಗಳ ಬೇಡಿಕೆಯಾದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಈಗಾಗಲೇ ಜಾಗ...

ಜನಪ್ರತಿನಿಧಿಗಳು ಸರ್ಕಾರಿ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸೋಣ – ಸಂಸದ ಗೋವಿಂದ ಕಾರಜೋಳ

ಚಿತ್ರದುರ್ಗ. ಜೂನ್19: ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಸಮನ್ವಯತೆಯಿಂದ ಉತ್ತಮವಾಗಿ ಕಾರ್ಯನಿರ್ವಹಿಸಿ ಕೇಂದ್ರ ಹಾಗೂ...

ಕರ್ನಾಟಕ ಮಾಧ್ಯಮ ಮಹಾಕೂಟ ಜಿಲ್ಲಾ ಅಧ್ಯಕ್ಷರಾಗಿ ಕರುನಾಡು ಜಿಯಾ ಉಲ್ಲಾ ಆಯ್ಕೆ

ಚಳ್ಳಕೆರೆ ಕರ್ನಾಟಕ ಮಾಧ್ಯಮ ಮಹಾಕೂಟ ಜಿಲ್ಲಾ ಅಧ್ಯಕ್ಷರಾಗಿ ಕರುನಾಡು ಜಿಯಾ ಉಲ್ಲಾ ಆಯ್ಕೆ ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರ್ನಾಟಕ...

ಜೂ.21 ರ ಶುಕ್ರವಾರ ಬೆಳಗ್ಗೆ 10- 30 ಕ್ಕೆ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ತಾಪಂ ಇಒ ಶಶಿಧರ್

ಚಳ್ಳಕೆರೆ ಜೂ.19ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜೂ21 ರ ಶುಕ್ರವಾರ ಬೆಳಗ್ಗೆ 10-30 ಕ್ಕೆ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ...

ಗೋವಿಂದಕಾರಜೋಳರನ್ನು ಕೇಂದ್ರಸಚಿವರಾಗಿ ಮಾಡಬೇಕೆಂದು ಹೆಗ್ಗೆರೆ ಮಂಜುನಾಥ್ ಒತ್ತಾಯ

ಹಿರಿಯೂರು: ರಾಜ್ಯದಲ್ಲಿ ಅತಿ ಹೆಚ್ಚು ಎಡಗೈ ಸಮುದಾಯದವರಿದ್ದು, ಈ ಬಾರಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಹಾಗೆಯೇ ಚಿತ್ರದುರ್ಗ ಲೋಕಸಭಾ...

ಮಹನೀಯರ ಜಯಂತಿ: ಅರ್ಥಪೂರ್ಣ ಆಚರಣೆಗೆ ನಿರ್ಧಾರ- ಬಿ.ಟಿ. ಕುಮಾರಸ್ವಾಮಿ

ಚಿತ್ರದುರ್ಗ ಜೂನ್19: ಇದೇ ಜೂನ್ 27 ರಂದು ನಾಡಪ್ರಭು ಕೆಂಪೇಗೌಡ ಜಯಂತಿ ಹಾಗೂ ಜುಲೈ 02 ರಂದು ಡಾ. ಫ.ಗು. ಹಳಕಟ್ಟಿಯವರ ಜನ್ಮದಿನದ ಅಂಗವಾಗಿ...

ಯೋಗ ನಡಿಗೆಗೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ

ಚಿತ್ರದುರ್ಗ ಜೂನ್18: 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮಂಗಳವಾರ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page