ಹಿರಿಯೂರು :
ತಾಲ್ಲೂಕಿನ ಮತದಾರರು ಹೊರಗಿನ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿದ್ದರಿಂದ, ಕ್ಷೇತ್ರದ ಮೂಲಭೂತ ಸಮಸ್ಯೆಗಳು ಇನ್ನೂ ಜೀವಂತವಾಗಿ ಉಳಿದಿವೆ. ಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಇರುವ ಸ್ಥಳೀಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೇ ಹೊರತು ವಲಸಿಗರ ಮುಂದೆ ಕೈಚಾಚಿ ನಿಲ್ಲಬಾರದು ಎಂಬುದಾಗಿ ಕೆ.ಆರ್.ಪಿ.ಪಿ ವಿಧಾನಸಭಾ ಆಕಾಂಕ್ಷಿ ಗನ್ನಾಯಕನಹಳ್ಳಿ ಎಚ್.ಮಹೇಶ್ ಹೇಳಿದರು.
ನಗರದ ರಂಜಿತ ಹೋಟೆಲ್ ವೃತ್ತದಲ್ಲಿ ಬುಧವಾರದಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (ಕೆ.ಆರ್.ಪಿ.ಪಿ) ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಅವರ 56ನೇ ಜನ್ಮದಿನವನ್ನು ರೆಡ್ಡಿ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಜನಾರ್ದನ ರೆಡ್ಡಿ ಅವರ ಬೃಹತ್ ಕಟೌಟ್ ಗೆ ಕ್ಷೀರಾಭಿಷೇಕ ಮಾಡಿ ನಂತರ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಟೌಟ್ ಮುಂದೆ ಕೇಕ್ ಕತ್ತರಿಸಿ ಅಭಿಮಾನಿಗಳಿಗೆ ಸಿಹಿ ವಿತರಿಸಲಾಯಿತು. ನಂತರ ನಗರದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಆಸ್ಪತ್ರೆಯಲ್ಲಿರುವ ಒಳರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಹರ್ತಿಕೋಟೆ ತಿಪ್ಪೇಸ್ವಾಮಿ, ಹೇಮಳದ ಕಾಂತೇಶ್ವರಸ್ವಾಮಿ, ವೀರಭದ್ರ, ಚಂದ್ರಪ್ಪ, ಮಧುವಾಲ್ಮೀಕಿ, ಮಂಜುವಾಲ್ಮೀಕಿ, ಮಹಮದ್ ಅಲಿ, ಶಾಂತಪ್ಪ, ಈಶ್ವರಪ್ಪ, ಸಿದ್ದೇಶ್, ತೇಜಸ್, ಸಂತೋಷ್, ಸೋಮಣ್ಣ, ಮಂಜು, ಸುರೇಶ್, ಶಿವ್ವಣ್ಣ, ತಿಪ್ಪೇಸ್ವಾಮಿ ಇತರರು ಉಪಸ್ಥಿತರಿದ್ದರು.
ಮತದಾರರು ಹೊರಗಿನಅಭ್ಯರ್ಥಿಗೆ ಅವಕಾಶಕಲ್ಪಿಸಿದ್ದರಿಂದ ಕ್ಷೇತ್ರದ ಮೂಲಭೂತಸಮಸ್ಯೆಗಳು ಇನ್ನೂಜೀವಂತವಾಗಿವೆ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments