ಚಳ್ಳಕೆರೆ ಮೇ.30 ಮಗು ಇದೇ ಏಗಪ್ಪ ಕೂಲಿಕೆಲಕ್ಕೆ ಹೋಗೋದು ಎಂಬ ಚಿಂತೆ ಬಿಡಿ ಕೂಸಿನಮನೆ ಬಿಡಿ ಕೆಲಸಕ್ಕೆ ಹೋಗಿ ಎಂದು ತಾಪಂ ಇಒ ಲಕ್ಷ್ಮಣ್ ಕಿವಿಮಾತು ಹೇಳಿದರು.
ತಾಲೂಕಿನ ನಗರಂಗರೆ ಗ್ರಾಪಂ ವತಿಯಿಂದ ಪ್ರಾರಂಭಿಸಿರುವ ಕೂಸಿನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ನರೇಗಾ ಯೋಜನೆಯಡಿಕೂಲಿ ಕೆಲಸಕ್ಕೆ ಬರುವ ಕಾರ್ಮಿಕರ ಕಂದಮ್ಮಗಳ ಆರೈಕೆಗೆ ‘ಕೂಸಿನ ಮನೆ’ ಆಸರೆಯಾಗಿದ್ದು, ಮಗುವಿಗೆ ಆಹಾರ, ಆರೋಗ್ಯ ಸೇರಿದಂತೆ ಲಾಲನೆ-ಪಾಲನೆಯನ್ನು ಇಲ್ಲಿ ಮಾಡಲಾಗುತ್ತದೆ.
ತಾವು ಕೆಲಸಕ್ಕೆ ಹೋದಾಗ ಪುಟ್ಟ ಕೂಸುಗಳನ್ನು ಸಾಕುವುದು ಹೇಗೆ ಎಂಬ ಚಿಂತೆ ನರೇಗಾ ಕಾರ್ಮಿಕರನ್ನು ಕಾಡುತ್ತದೆ. ಈ ಸಮಸ್ಯೆ ನಿವಾರಣೆಗೆ ಸರಕಾರ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಕೂಸಿನ ಮನೆ ಸ್ಥಾಪಿಸಿದ್ದು, ಇಲ್ಲಿ6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನು ಆರೈಕೆ ಮಾಡಲಾಗುತ್ತದೆ. ಇಲ್ಲಿ ಹಾರೈಕೆ ಮಾಡುವವರೂ ಸಹ ನರೇಗಾ ಕೂಲಿಕಾರ್ಮಿಕನ್ನೇ ಆಯ್ಕೆ ಮಾಡಲಾಗಿದೆ ಅವರಿಗೆ ಯಾವುದೇ ವೇತನ ನೀಡುವುದಿಲ್ಲಿ ನರೇಗಾ ಕೂಲಿ ಹಣವೇ ನೀಡಲಾಗಿವುದು ಅವರ ಮಾನವ ದಿನಗಳು ಮುಗಿದಾಗ ಮತ್ತೆ ಬೇರೆಯವರನ್ನು ಆಯ್ಕೆ ಮಾಡಲಾಗುವುದು.
0 Comments