ಹಿರಿಯೂರು ನ.15 ಮೋಟರ್ ಬೈಕ್ ಟ್ರಾಕ್ಟರ್ ನಡುವೆ ಡಿಕ್ಕಿ ಬೈಕ್ ಸವಾರ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತ ಪಟ್ಟ ಘಟನೆ ಅಬ್ಬಿನಹೊಳೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಹಿರಿಯೂರು ತಾಲ್ಲೂಕಿನ ಶ್ರವಣಗೆರೆ ಗ್ರಾಮದ ನರಸಿಂಹಮೂರ್ತಿ.ಜೆ
( 34 ) ಬುಧವಾರ ಬೆಳಗ್ಗೆ 09.30 ಗಂಟೆ
ಸಮಯದಲ್ಲಿ ಮೋಟಾರ್ ಬೈಕ್ ನಲ್ಲಿ ಮಗನಿಗೆ
ಟಾನಿಕ್ ತರಲೆಂದು ಹೋಗುವಾಗ ಧರ್ಮಪುರ ಮತ್ತು ಶ್ರವಣಗೆರೆ ರಸ್ತೆಯಲ್ಲಿರುವ ಭಾರತ್ ಪೆಟ್ರೋಲ್ ಬಂಕ್
ಬಳಿ ಟ್ರ್ಯಾಕ್ಟರ್ ಚಾಲಕ ತನ್ನ ಟ್ಯಾಕ್ಟರ್ ನ್ನು ಅತೀ ವೇಗ ಮತ್ತು
ಅಜಾಗೂರುಕತೆಯಿಂದ ಚಾಲನೆ ಮಾಡಕೊಂಡು ಬಂದು ಮೋಟಾರ್ ಡಿಕ್ಕಿ ಹೊಡೆದ ಟ್ರಾಕ್ಟರ್ ಚಾಲಕ ಪರಾರಿಯಾಗಿರುತ್ತಾನೆ ಬೈಕ್ ಸಾವಾರ ನೆಲಕ್ಕೆ ಬಿದ್ದು ಗಾಯಗೊಂಡಿರುತ್ತಾನೆ ಹಿರಿಯೂರು ಸಾರ್ವಜನಿಕ ಆಸ್ಪತ್ನರಸಿಂಹಮೂರ್ತಿ ಅಪಘಾತ ಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸಮೇತ ಬೈಕ್ ಸವಾರನು ರಸ್ತೆಯ ಮೇಲೆ
ಬಿದ್ದನು. ಟ್ಯಾಕ್ಟರ್ ಚಾಲಕ ಸ್ಥಳದಲ್ಲಿಯೇ ಟ್ರ್ಯಾಕ್ಟರ್ ನ್ನು ಬಿಟ್ಟು ಪರಾರಿಯಾಗಿರುತ್ತಾನೆ. ಮೋಟಾರ್ ಸೈಕಲ್
ಸವಾರ ನರಸಿಂಹಮೂರ್ತಿ ಗೆ ತಲೆಗೆ, ಮೈಕೈಗೆ, ಮುಖಕ್ಕೆ ಪೆಟ್ಟು ರಕ್ತಗಾಯಗಳಾಗಿರುತ್ತವೆ. ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ
ದಾಖಲಿಸಿದಾಗ ಅಲ್ಲಿನ ವೈದ್ಯರು ಪರಿಶೀಲಿಸಿ ನೋಡಲಾಗಿ ನರಸಿಂಹಮೂರ್ತಿಯು ಮೃತಪಟ್ಟಿರುವುದಾಗಿ
ತಿಳಿಸಿರುತ್ತಾರೆ. ಈ ಬಗ್ಗೆ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮಗನಿಗೆ ಟಾನಿಕ್ ತರಲು ಹೋದ ತಂದೆಗೆ ಟ್ರ್ಯಾಕ್ಟರ್ ಡಿಕ್ಕಿ ಸಾವು.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments