ಮಕ್ಕಳ ಸ್ನೇಹಿ ಗ್ರಂಥಾಲಯ ತರಬೇತಿ ಕಾರ್ಯಾಗಾರ

by | 27/09/23 | ಶಿಕ್ಷಣ


ಚಿತ್ರದುರ್ಗ ಸೆ.27:
ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಮಕ್ಕಳ ಸ್ನೇಹಿ ಗ್ರಂಥಾಲಯ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್, ತೆರೆದ ಕಿಟಕಿ ಮನೆಯ ಬೆಳಕಿಗೆ, ತೆರೆದ ಪುಸ್ತಕ ಮನದ ಬೆಳಕಿಗೆ ಎಂಬ ಡಿ.ವಿ.ಗುಂಡಪ್ಪನವರ ಸಾಲುಗಳನ್ನು ನೆನಪಿಸಿಕೊಂಡು ಗ್ರಾಮೀಣ ಗ್ರಂಥಪಾಲಕರಿಗೆ ಕಿವಿಮಾತು ಹೇಳಿದರು.
“ಪ್ರಸ್ತುತ ದಿನಗಳಲ್ಲಿ ಮೊಬೈಲ್‍ಗಳ ಹಾವಳಿ ಹೆಚ್ಚಾಗಿರುವ ಕಾರಣ ಗ್ರಂಥಾಲಯಗಳಿಗೆ ಹೋಗುವವರ ಸಂಖ್ಯೆ ಕ್ಷೀಣಿಸುತ್ತಿದೆ. ಆದಾಗ್ಯೂ ಸಹ ಸರ್ಕಾರವು ಗ್ರಂಥಾಲಯಗಳನ್ನು ಉಳಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ಅಜೀಂ ಪ್ರೇಮ್‍ಜಿ ಪೌಂಡೇಶನ್‍ರವರ ಸಹಯೋಗದೊಂದಿಗೆ ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಭಾಗದ ಗ್ರಂಥಪಾಲಕರು, ಮೇಲ್ವಿಚಾರಕರಿಗೆ ಉಚಿತವಾಗಿ ಅದರಲ್ಲೂ ಚಳ್ಳಕೆರೆ, ಮೊಳಕಾಲ್ಮುರು, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ಮತ್ತು ಚಿತ್ರದುರ್ಗ ತಾಲ್ಲೂಕುಗಳಲ್ಲಿ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಕೊಡುವುದಲ್ಲದೇ ಗ್ರಂಥಪಾಲಕರಿಗೆ, ಮಕ್ಕಳಲ್ಲಿ ಅರಿವು ಮೂಡಿಸಲು ಆರೋಗ್ಯಕರ ಮತ್ತು ಸುರಕ್ಷಾ ವಾತಾವರಣ ನಿರ್ಮಿಸುವುದು, ಮಕ್ಕಳೊಂದಿಗೆ ಗೌರವಯುತ ನಡವಳಿಕೆಗಳು ಮತ್ತು ವ್ಯವಹಾರಗಳು, ಸೂಕ್ಷ್ಮ ಮತ್ತು ಸಂವೇದನೆ ಪೂರಕವಾದ ಮಕ್ಕಳ ಸಾಹಿತ್ಯವನ್ನು ಗುರುತಿಸುವುದು, ಹಿತಮಿತವಾಗಿ ನಿಯಮಗಳನ್ನು ಬಳಸುವುದು, ನಿರಂತರ ಓದು ಮತ್ತು ಚಟುವಟಿಕೆಗಳು, ಸ್ಥಳೀಯ ಸಂಪನ್ಮೂಲಗಳ ಬಳಕೆ ಬಗ್ಗೆ ಹಾಗೂ ಜೀವನವನ್ನು ಉತ್ತಮಗೊಳಿಸವುಲ್ಲಿ ಗ್ರಂಥಪಾಲಕರು, ಮೇಲ್ವಿಚಾಕರು ಹಾಗೂ ಶಿಕ್ಷಕರ ಪಾತ್ರ ಬಹಳ ಮುಖ್ಯವಾದುದು ಎಂದರು.
2023ರ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 2 ರವರೆಗೆ ವಿಶೇಷ ಆಂದೋಲನವನ್ನು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ ಶ್ರಮದಾನ ಮಾಡುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಂಥಪಾಲಕರು, ಮೇಲ್ವಿಚಾರಕರು ಗ್ರಾಮೀಣ ಭಾಗದ ಜನರಲ್ಲಿ ಅರಿವು ಮೂಡಿಸಿ ಸ್ವಚ್ಛತೆಯನ್ನು ಕಾಪಾಡಲು ಶ್ರಮಿಸಬೇಕು ಎಂದು ತಿಳಿಸಿದರು. ಶಿಬಿರಾರ್ಥಿಗಳಿಗೆ ಸ್ವಚ್ಛತಾ ಪ್ರತಿಜ್ಞಾವಿಧಿಯನ್ನು ಜಿ.ಪಂ ಸಿಇಒ ಬೋಧಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಂಥಾಲಯಾಧಿಕಾರಿ ಪಿ.ಆರ್.ತಿಪ್ಪೇಸ್ವಾಮಿ, ಅಜೀಂ ಪ್ರೇಮ್‍ಜಿ ಫೌಂಡೇಶನ್‍ನ ಸಿಬ್ಬಂದಿ ರವಿ, ಸ್ವಚ್ಚ ಭಾರತ ಮಿಷನ್ (ಗ್ರಾ) ಜಿಲ್ಲಾ ಸಮಾಲೋಚಕರು ಇದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *