ಭಾರತ ದೇಶ ಒಂದು ಪುಣ್ಯಭೂಮಿ ಇಂತಹ ಭೂಮಿಯಲ್ಲಿ ಹುಟ್ಟಿರುವ ನಾವೆಲ್ಲರೂ ಪುಣ್ಯವಂತರು ಎಂದು ಶಾಸಕ ಟಿ.ರಘುಮೂರ್ತಿ.
by ಗೋಪನಹಳ್ಳಿಶಿವಣ್ಣ | 19/10/23 | ಸುದ್ದಿ

ಚಳ್ಳಕೆರೆ ಜನಧ್ವನಿ ವಾರ್ತೆ ಅ.19 ಭಾರತ ದೇಶ ಒಂದು ಪುಣ್ಯಭೂಮಿ ಇಂತಹ ಭೂಮಿಯಲ್ಲಿ ಹುಟ್ಟಿರುವ ನಾವೆಲ್ಲರೂ ಪುಣ್ಯವಂತರು ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ಪಟ್ಟರು.
ನಗರದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲೆ ಆವರಣದಲ್ಲಿರುವ ಬಯಲು ರಂಗಮಂದಿರದಲ್ಲಿ ಜಿಪಂ.ತಾಪಂ.ನಗರಸಭೆ. ಯುವಜನ ಕ್ರೀಡೆ .ತಾಲೂಕು ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ನಮ್ಮ ಮಣ್ಣು ನಮ್ಮ ದೇಶ ಅಮೃತಕಳಶೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶ ಮೊದಲು ಎನ್ನುವ ಮನೋಭಾವ ಎಲ್ಲರಲ್ಲೂ ಇರಬೇಕು ಹಾಗೆಯೇ ಈ ದೇಶಕ್ಕಾಗಿ ಹೋರಾಡಿದ ಎಲ್ಲಾ ಸ್ವತಂತ್ರ ಹೋರಾಟಗಾರರನ್ನು ಕಾರ್ಗಿಲ್ ಯುದ್ಧದಲ್ಲಿ ಬಲಿದಾನಗೊಂಡ ಯೋಧರಿಗೂ ಗೌರವ ಸಲ್ಲಿಸುವ ಕೆಲಸ ಇಡೀ ದೇಶದಲ್ಲಿ ಆಗಬೇಕು ದೇಶಪ್ರೇಮ ಕೇವಲ ವೇದಿಕೆಯಲ್ಲಿ ಮಾತನಾಡುವುದಕ್ಕೆ ಸೀಮಿತವಾಗದೆ ಎಲ್ಲರಲ್ಲೂ ದೇಶಪ್ರೇಮ ಹಾಗೂ ದೇಶಭಕ್ತಿ ನರನಾಡಿಗಳಲ್ಲಿ ಹರಿಯಬೇಕು ಆಗ ಮಾತ್ರ ನಮ್ಮ ಹಿರಿಯ ಹಾಗೂ ವೀರ ಯೋಧರು ನಮಗಾಗಿ ಹೋರಾಡಿದ್ದಕ್ಕೆ ಸಾರ್ಥಕತೆ ಬರುತ್ತದೆ ಎಂದು ತಿಳಿಸಿದರು.
ದೇಶಕ್ಕಾಗಿ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರು ಹಾಗೂ ಸ್ವತಂತ್ರಕ್ಕಾಗಿ ತಮ್ಮ ಪ್ರಾಣ ಮುಡುಪಾಗಿಟ್ಟವರನ್ನು ಗೌರವದಿಂದ ಕಾಣುವಂತಾಗ ಬೇಕು ಎಂದರು.
ತಾಪಂ ಇ ಒ ಹೊನ್ನಯ್ಯ ಮಾತನಾಡಿ ನಮ್ಮ ತಾಲೂಕಿನ ಎಲ್ಲಾ ಗ್ರಾ.ಪಂ. ಗಳಿಂದ ಸಂಗ್ರಹಿಸಲಾದ ಮಣ್ಣನ್ನು ರಾಷ್ಟ್ರದ ರಾಜಧಾನಿಯಾದ ನವದೆಹಲಿಗೆ ನಮ್ಮ ದೇಶಕ್ಕಾಗಿ ಶ್ರಮಿಸಿದ, ತ್ಯಾಗ ಮತ್ತು ಬಲಿದಾನವಾದ ವ್ಯಕ್ತಿಗಳ ಸ್ಮರಣೆಗಾಗಿ ಈ ಮಣ್ಣನ್ನು ರಾಷ್ಟ್ರದ ರಾಜಧಾನಿಯಲ್ಲಿ ಯುನೀಕ್ ಪವಿತ್ರವಾದ ಉದ್ಯಾನ ವನ ನಿರ್ಮಿಸಲು ಉಪಯೋಗಿಸುವುದಕ್ಕಾಗಿ ಕಳುಹಿಸುತ್ತಿರುವುದು ಹೆಮ್ಮೆಯ ವಿಷಯವೆಂದು ಸಂತಸ ವ್ಯಕ್ತಪಡಿಸಿದರು.


ನಿವೃತ್ತ ಯೋದ ಮಂಜುನಾಥರೆಡ್ಡಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಪಂಚಾಯತ್ ಆವರದಿಂದ ವಾಲ್ಮೀಕಿ ವೃತ್ತದಿಂದ ಪ್ರಮುಖ ರಸ್ತೆಯಲ್ಲಿ ನೆಹರು ವೃತ್ತದ ಮೂಲಕ ಅಮೃತ ಕಳಸ .ಕಲಾತಂಡ.ಆಶಾ.ಅಂಗನವಾಡಿ ಕಾರ್ಯಕರ್ತರಿಂದ ಜಾಥ ನಡೆಸಿ ನಂತರ ಕಾರ್ಯಕ್ರಮದ ವೇಧಿಕೆಯ್ತ ಬರಲಾತ್ತು.

ಗ್ರಾಪಂ ವತಿಯಿಂದ ಸಂಗ್ರಹಿಸಿದ ಮಣ್ಣನ್ನು ಮಣ್ಣಿನ ಕಳಸಕ್ಕೆ ಸಂಗ್ರಹಿಸ ಲಾಯಿತು . ಇದೇ ಸಂದರ್ಭದಲ್ಲಿ ನಿವೃತ್ತ ಯೋದರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರೇಹಾನ್ ಪಾಷ. ಸಹಾಯಕ ಕೃಷಿ ನಿರ್ಧೇಶಕ ಅಶೋಕ್ .ತೋಟಗಾರಿಕೆ ಹಿರಿಯ ಸಹಾಯಕ ನಿರ್ಧೇಶಕ ವಿರುಪಾಕ್ಷಪ್ಪ . ಕುಡಿಯು ನೀರು ನೈರ್ಮಲ್ಯ ಇಲಾಖೆ ಎಇಇ ದಯಾನಂದ್ ಪಿಆರ್ ಡಿ ಎಇಇ ಕಾವ್ಯ. ಬಿಇಒ ಸುರೇಶ್ . ಅಕ್ಷರ ದಾಸೋಹ ತಿಪ್ಪೇಸ್ವಾಮಿ. ನರೇಗಾ ಸಹಾಯಕ ನಿರ್ಧೇಶಕ ಸಂತೋಷ್. ಪಿಆರ್ ಡಿ ಸಹಾಯಕ ನಿರ್ದೇಶಕ ಸಂಪತ್. ಸಮಾಜ ಕಲ್ಯಾಣ ಇಲಾಖೆ ಮಂಜಪ್ಪ. ಶಿಶು ಅಭಿವೃದ್ದಿ ಅಧಿಕಾರಿ ಹರಿಪ್ರಸಾದ್. ಎಸ್ಟಿ ಇಲಾಖೆ ಶಿವರಾಜ್.. ತಾಲೂಕು ಆರೋಗ್ಯಾಧಿಕಾರಿ ಡಾ.ಕಾಶಿ. ಪಶುಇಲಾಖೆ ಡಾ.ರೇವಣ್ಣ ಪಿಡಿಇ.ಆಶಾ.ಅಂಗನವಾಡಿ ಕಾರ್ಯಕರ್ತರು. ಇತರರಿದ್ದರು.

0 Comments