ಚಳ್ಳಕೆರೆ ಜನಧ್ವನಿ ವಾರ್ತೆ ಫೆ.24
ಭಾರತೀಯ ವಿಜ್ಞಾನ ಸಂಸ್ಥಾನ ಸೊಸೈಟಿ ಫಾರ್ ಇನ್ನೋವೇಷನ್ ಅಂಡ್ ಡೆವಲಪ್ಮೆಂಟ್ ಚಳ್ಳಕೆ ಹೊಸ ತಂತ್ರಜ್ಞಾನ / ಉತ್ಪನ್ನಗಳ ಅಭಿವೃದ್ಧಿ ತರಬೇತಿ ಕಾರ್ಯಾಗಾರ
ಭಾರತೀಯ ವಿಜ್ಞಾನ ಸಂಸ್ಥಾನ ಮತ್ತು ಸೊಸೈಟಿ ಫಾರ್ ಇನ್ನೋವೇಷನ್ ಅಂಡ್ ಡೆವಲಪ್ಮೆಂಟ್ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ ಜಿಲ್ಲೆಯ ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಿಗಳಿಗೆ, ನವೋದ್ಯಮಿಗಳಿಗೆ, ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಡಿಪ್ಲೊಮಾ, ಪದವಿ,ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮತ್ತು ನವೀನ ತಂತ್ರಜ್ಞಾನ/ ಉತ್ಪನ್ನಗಳ ಅಭಿವೃದ್ಧಿಯಲ್ಲಿ ಆಸಕ್ತಿ ಹೊಂದಿರುವವರಿಗೆ “ಹೊಸ ತಂತ್ರಜ್ಞಾನ / ಉತ್ಪನ್ನಗಳ ಅಭಿವೃದ್ಧಿ” ಬಗ್ಗೆ ತರಬೇತಿ ನೀಡಲಾಗುವುದು. ಈ ತರಬೇತಿ ಕಾರ್ಯಾಗಾರವನ್ನು ದಿನಾಂಕ 13-03-2023 ರಿಂದ ದಿನಾಂಕ 18-03-2023 ರ ವರೆಗೆ 06 ದಿನಗಳ ಕಾಲ ಭಾರತೀಯ ವಿಜ್ಞಾನ ಸಂಸ್ಥಾನ ಆವರಣ ಕುದಾಪುರ ಚಳ್ಳಕೆರೆ ತಾಲೂಕು ಇಲ್ಲಿ ಹಮ್ಮಿಕೊಳ್ಳಲಾಗಿದೆ.
18 ವರ್ಷ ಮೇಲ್ಪಟ್ಟ ಕನಿಷ್ಠ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿರುವ ಚಿತ್ರದುರ್ಗ ಜಿಲ್ಲೆಯ ಅಭ್ಯರ್ಥಿಗಳು ದಿನಾಂಕ 06-03-2023 ರ ಒಳಗೆ ತಮ್ಮ ಹೆಸರನ್ನು ನೋಂದಾಯಿಸಕೊಳ್ಳಬಹುದು. ಅಭ್ಯರ್ಥಿಗಳು ನೋಂದಾಯಿಸಿದ ನಂತರ ಸಂಸ್ಥೆಯು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ದಿನಾಂಕ 09-03-2023 ರ ಒಳಗೆ ಆಯ್ಕೆ ಆದ ಅಭ್ಯರ್ಥಿಗಳಿಗೆ ತಿಳಿಸಲಾಗುವುದು. SC/ST ಸಮುದಾಯ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಆಯ್ಕೆ ಆದ ಅಭ್ಯರ್ಥಿಗಳು ಕಡ್ಡಾಯವಾಗಿ ೦6 ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಬೇಕು. ಈ ಕಾರ್ಯಾಗಾರಕ್ಕೆ ಆಯ್ಕೆ ಆದ ಅಭ್ಯರ್ಥಿಗಳ ಊಟ ಮತ್ತು ವಸತಿ ವ್ಯವಸ್ಥೆಯನ್ನು ಸಂಸ್ಥೆಯು ನೋಡಿಕೊಳ್ಳುತ್ತದೆ. ಈ ಕಾರ್ಯಾಗಾರ ಸಂಪೂರ್ಣ ಉಚಿತವಾಗಿದ್ದು ಆಸಕ್ತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : (ಗಣೇಶ್) 7349695100 , (ಕೋಟೇಶ್) 9663364234
0 Comments