ಚಳ್ಳಕೆರೆ ಡಿ.25. ಯೇಸು ಕ್ರಿಸ್ತನ ಜನ್ಮದಿನವಾದ ಕ್ರಿಸ್ಮಸ್ ಹಬ್ಬವನ್ನು ನಗರದ ವಿವಿಧ ಚರ್ಚ್ ಗಳಲ್ಲಿ ಕ್ರೈಸ್ತರು ಸೋಮವಾರ ಸಡಗರದಿಂದ ಆಚರಿಸಿದರು. ಚರ್ಚ್ ಗಳಿಗೆ ಸುಣ್ಣ. ಬಣ್ಣ.ತಳಿರು ತೋರಣ . ಬಲೂನ್ ಹಾಗೂ ವಿದ್ಯುತ್ ದೀಪಾಲಂಕಾರದೊಂದಿಗೆ ಝಗಮಗಿಸಿತು. ಚರ್ಚ್ನ ಫಾದರ್ ಗಳು ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಜನರ ಆರೋಗ್ಯ. ಆರ್ಥಿಕ ಸಂವೃದ್ದಿ ದೊರಲೆಂದು ಪ್ರಾರ್ಥಿಸಿದರು.
ನಗರದ ವಾಲ್ಮೀಕಿ ನಗರಕ್ಕೆ ಹೊಂದಿಕೊಂಡ ಪ್ರಾರ್ಥನಾ ಮಂದಿರಕ್ಕೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಭಕ್ತರು ಕುಟುಂಬ ಸಮೇತ ಹೊಸ ಬಟ್ಟೆ ಉಡುಗೆ ತೊಡುಗೆಯೊಂದಿ ಶುಭ್ರ ಬಟ್ಟೆಗಳನ್ನು ಧರಿಸಿಕೊಂಡು ಕೈಯಲ್ಲಿ ಯೇಸು ಕ್ರಿಸ್ತನ ಪ್ರಾರ್ಥನಾ ಪುಸ್ತಕದೊಂದಿಗೆ ಬಂದು ಭಕ್ತರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಯ.ಭಕ್ತಿ.ಶ್ರದ್ದೆ. ಶಾಂತಿ.ಶಿಸ್ತಿನಿಂದ ಪಾಲ್ಗೊಂಡು ಪ್ರಾರ್ಥನೆ ಮಾಡುತ್ತಿದ್ದರು.
ಸಾಮೂಹಿಕ ಪ್ರಾರ್ಥನೆ ನೆರವೇರಿತು. ನಂತರ ಭಕ್ತರಿಗೆ ಬಿರಿಯಾನಿ ಊಟ. ಕೇಕ್ ಸ್ವೀಟ್ ವಿತರಸಿದರು. ಯಾವುದೃ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ಪ್ರಾರ್ಥನಾ ಮಂದಿರಗಳ ಬಳಿ ಪೋಲಿಸ್ ಬಿಗಿ ಬಂದೋಬಸ್ತು ವ್ಯವಸ್ಥೆ ಮಾಡಲಾಗಿತ್ತು.
![](https://janadhwani.in/wp-content/uploads/2023/12/IMG-20231225-WA0006.jpg)
0 Comments