ಭಯಭೀತರಾಗಿರುವ ಜನರ ರಕ್ಷಣೆಗೆ ಸರ್ಕಾರ ಧಾವಿಸಬೇಕು – ಬಿ.ಸುರೇಶಗೌಡ.

by | 13/12/23 | ಕರ್ನಾಟಕ

ಬೆಳಗಾವಿ.
ವನ್ಯ ಜೀವಿಗಳಿಗೆ ಸಂಬಂಧ ಪಟ್ಟ ವಸ್ತುಗಳು ಮನೆಯಲ್ಲಿದ್ದರೆ ಯಾರೂ ಭಯಪಡವು ಅಗತ್ಯವಿಲ್ಲ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಲ್ಲಿದೆ – ಬಿ.ಸುರೇಶಗೌಡ

ರಾಜ್ಯದಲ್ಲಿ ಅನೇಕರು ಪೂರ್ವಜರ ಕಾಲದಿಂದಲೂ ಕೂಡ ಕೆಲವು ಮನೆಗಳಲ್ಲಿ ಇಂದಿಗೂ ಜಿಂಕೆ ಕೊಂಬು, ಕಾಡುಕೋಣದ ಕೊಂಬು ಮತ್ತಿತರ ವನ್ಯಜೀವಿಗಳ ಪರಿಕರಗಳನ್ನು ಮನೆಗಳ ಗೋಡೆ ಮತ್ತು ಕಂಬಗಳಲ್ಲಿ ಅಳವಡಿಸಿರುವುದು ಕೇಳಿ ಬಂದಿದೆ. ಇದರಿಂದ ಇತ್ತೀಚೆಗೆ ಹುಲಿ ಉಗುರು ಪ್ರಕರಣ ಬೆಳಕಿಗೆ ಬಂದಾಗಿನಿಂದ ಈ ವಿಚಾರವಾಗಿ ಜನ ಭಯಭೀತರಾಗಿದ್ದಾರೆ. ಆದ್ದರಿಂದ ಮನೆಗಳಲ್ಲಿರುವ ಜಿಂಕೆ ಕೊಂಬು, ಕಾಡುಕೋಣದ ಕೊಂಬುಗಳನ್ನು ಸಕ್ರಮಗೊಳಿಸುವ ಬಗ್ಗೆ ಸರ್ಕಾರದ ಗಮನದಲ್ಲಿದೆಯೇ? ಎಂಬ ಕುರಿತಂತೆ ನಿಯಮ 73 ರಡಿ ಮಂಗಳವಾರ ಸರ್ಕಾರದ ಗಮನ ಸೆಳೆದರು .

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶಗೌಡರು ಈ ಬಗ್ಗೆ ಗಮನ ಸೆಳೆದರು. ಈ ಹಿಂದೆ ಈ ರೀತಿಯ ಪ್ರಕರಣಗಳಲ್ಲಿ ಪರಿಕರಗಳನ್ನು ಸರ್ಕಾರಕ್ಕೆ ವಾಪಸ್ಸು ನೀಡಲು ಮತ್ತು ಸಕ್ರಮೀಕರಣ ಗೊಳಿಸಿಕೊಳ್ಳಲು ಸಾಕಷ್ಠು ಸಮಯಾವಾಕಾಶ ನೀಡಿತ್ತಾದರೂ ಕೂಡಾ ಕಾನೂನುಗಳ ಅರಿವಿನ ಕೊರತೆಯಿಂದ ವನ್ಯಪ್ರಾಣಿಗಳ ಅಂಗಾಂಗ ಮತ್ತು ಟ್ರೋಫಿಗಳನ್ನು ಘೋಷಿಸಿಲ್ಲ ಎಂದು ತೋರುತ್ತದೆ. ವನ್ಯ ಜೀವಿಗಳ ಅಂಗಾಂಗಗಳನ್ನು ಹೊಂದಿರುವುದರಿಂದ ಆಗುವ ಪ್ರಯೋಜನಗಳ ಕುರಿತಾಗಿರುವ ತಪ್ಪು ನಂಬಿಕೆ ಇತ್ಯಾದಿಗಳಿಂದ ಇನ್ನೂ ಕೆಲವು ಜನರು ತಮ್ಮಲ್ಲಿರುವ ವನ್ಯ ಜೀವಿಗಳ ಅಂಗಾಂಗ ಮತ್ತು ಟ್ರೋಫಿಗಳನ್ನು ಘೋಷಿಸಿಕೊಳ್ಳದೆ ಇರುವುದು ಗಮನಕ್ಕೆ ಬಂದಿರುತ್ತದೆ. ರಾಜ್ಯದಲ್ಲಿ ಸಮಾಜದ ವಿವಿಧ ಸ್ಥಳಗಳ ಜನರು ಹುಲಿ ಮತ್ತು ಚಿರತೆ ಉಗುರುಗಳು , ಕಾಡುಕೋಣದ ಕೊಂಬು ಆನೆಯ ಬಾಲ, ದಂತ, ಮತ್ತು ಕೂದಲು ಇತ್ಯಾದಿ ಪ್ರಾಣಿಗಳ ವಸ್ತುಗಳನ್ನು ಹೊಂದಿರುವುದನ್ನು ಗಮನಿಸಿದ ಹಲವಾರು ಪ್ರಕರಣಗಳು ಗಮನಕ್ಕೆ ಬಂದಿವೆ ಮತ್ತು ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಇದರಿಂದ ಜನ ಭಯಬೀತರಾಗಿದ್ದಾರೆ ಆದ್ದರಿಂದ ಇದರ ಬಗ್ಗೆ ಸರ್ಕಾರ ಕೂಡಲೇ ಒಂದು ಕಾನೂನು ತಂದು ರಾಜ್ಯದ ಜನರ ರಕ್ಷಣೆಗೆ ಧಾವಿಸಬೇಕು ಎಂದು ಸುರೇಶಗೌಡ ಆಗ್ರಹಿಸಿದರು.

ಅಲ್ಲದೆ ವನ್ಯಜೀವಿ (ಸಂರಕ್ಷಣಾ) ಅಧಿನಿಯಮ 1972ರ ಸೆಕ್ಷನ್ 44 ರನ್ವಯ ಇಂತಹ ಟ್ರೋಫಿಗಳನ್ನು ಹೊಂದುವುದನ್ನು ನಿಷೇಧಿಸಲಾಗಿದೆ. ಆದರೆ ವನ್ಯಜೀವಿ (ಸಂರಕ್ಷಣಾ) ಅಧಿನಿಯಮ 1972ರ ಸೆಕ್ಷನ್ 64 ರನ್ವಯ ರಾಜ್ಯ ಸರ್ಕಾರಕ್ಕೆ ನೀಡಿರುವ ಅಧಿಕಾರದ ಅನ್ವಯ ಈ ಹಿಂದೆ ಒದಗಿಸಿದ ಅವಕಾಶಗಳಲ್ಲಿ ಅಂಗಾಂಗ ಮತ್ತು ಟ್ರೋಫಿಗಳ ಘೋಷಣೆಗಳನ್ನು ಮಾಡಿಕೊಂಡಿರದ ಜನರಿಗೆ ರಾಜ್ಯ ಸರ್ಕಾರದ ಆಸ್ತಿಯಾಗಿರುವ ವನ್ಯಜೀವಿ ಅಂಗಾಂಗ / ಟ್ರೋಫಿಗಳನ್ನು ರಾಜ್ಯ ಸರ್ಕಾರಕ್ಕೆ ಆಧ್ಯರ್ಪಿಸಲು ಕಾಲಾವಕಾಶವನ್ನು ಒದಗಿಸಲು ನಿಯಮಗಳನ್ನು ರಚಿಸುವ ಕುರಿತು ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿರುತ್ತದೆ. ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ ಖಂಡ್ರೆ ಅವರು ಸದನಕ್ಕೆ ತಿಳಿಸಿದರು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page