“ಭದ್ರೇ ನೀ ಬಾರಮ್ಮೆ ” ಸಾರಿಗೆ ನಿರ್ವಹಕ ತಿಪ್ಪೇಸ್ವಾಮಿ.

by | 22/01/24 | ಕಥೆ.ಕವನ.ಜೀವನ ಚರಿತ್ರೆ

“ಭದ್ರೆ ನೀ ಬಾರಮ್ಮ.”

ಮಲೆನಾಡ ಸೀಮೆಯವಳನ್ನ
ಕರೆದೋಯ್ಯಲು ಬಂದಿರುವೆ
ಬಯಲುಸೀಮೆ ಕಡೆಗೆ l
ತುಂಗೆ ಧಾರೆರೆದುಕೊಡು
ನಿನ್ನ ತಂಗಿ ಭದ್ರೆನಾ l
ಬಾ ತಾಯಿ ಬಾ—ಭದ್ರೆ ನೀ ಬಾ—
*
ಚಿಂತಿಸದಿರು ನಾ ಒಬ್ಬಂಟಿಯಂದು
ಅಲ್ಲಿರುವಳು ವೇದಾವತಿ l
ವೇದಾವತಿ ಜೊತೆಗೂಡಿ
ನಲಿನಲಿದು ಹರಿಯು ಬಾ l
ಬಾ ತಾಯಿ ಬಾ—ಭದ್ರೆ ನೀ ಬಾ—
*
ನೋಡಲ್ಲಿ ತಾಯಿ—
ಭೂತಾಯಿ ಬೆತ್ತಳಾಗಿರುವಳು ಅಲ್ಲಿ l
ಹಚ್ಚ ಹಸುರಿನ ಸೀರೆ ಕುಪ್ಪಸ ತೋಡಿಸಿ
ಭೂತಾಯಿ ಒಡಲನ್ನ ತಣಿಸಿ
ಪಶು ಪಕ್ಷಿ ದಾಹ ನೀಗಿಸು ಬಾ l
ಸಿರಿವಂತರ ಮನೆ ಬಿಟ್ಟು
ಬಡ ರೈತರ ಮನೆಬಾಗಿಲಿಗೆ ಬಾ l
ಬಾ ತಾಯಿ ಬಾ—ಭದ್ರೆ ನೀ ಬಾ—
*
ಬರಡು ಭೂಮಿಯ ಹೆಸರಳಿಸಲು
ಹಚ್ಚ ಹಸುರಿನ ವನವೆಂದು ಹೆಸರಿಸಲು ಬಾ l
ಭೂತಾಯ ತಣಿಸಿ ಅನ್ನಧಾತನ ಕುಣಿಸಿ
ಬಡವರ ಬವಣೆ ನೀಗಿಸಲು ಬಾ l
ಬಾ ತಾಯಿ ಬಾ—ಭದ್ರೆ ನೀ ಬಾ—
*
ಕಣಿವೆ ಮಾರಿಯ ಒಡಲಿಗೆ ಬಾ ಸಾಕು
ಹಸಿರು ತೋರಣಕಟ್ಟಿ ಭಜಭಜಂತ್ರಿ ನುಡಿಸಿ l
ಓಡ್ಡೋಲಗದಲಿ ಕರೆದೊಯ್ಯುವೆ
ಬಯಲು ಸೀಮೆಯ ನಾಡಿಗೆ l
ಬಾ ತಾಯಿ ಬಾ—ಭದ್ರೆ ನೀ ಬಾ—
*
ನೀರಿನ ಬವಣೆ ಗೊತ್ತಮ್ಮ ಎನಗೆ
ಕಳಂಕ ತಾರೆನಮ್ಮ ನಿನಗೆ l
ಹಾದರ ತೋರುವೆ ನಿನಗಮ್ಮ
ಹರಿದು ಬಾ ನೀನಮ್ಮ l
ಬಾ ತಾಯಿ ಬಾ—ಭದ್ರೆ ನೀ ಬಾ—

ಕೆ. ತಿಪ್ಪೇಸ್ವಾಮಿ, ಮಣೆಗಾರ.
K S R T C.
ಚಳ್ಳಕೆರೆ ಘಟಕ. @@@@@@@@@@@@@@@@@@@@@@@@@@@@@@@@@@@@@@@@ಬಯಲುಸೀಮೆಯ ಬರದ ನಾಡು ಚಿತ್ರದುರ್ಗಕ್ಕೆ ಬರುವ ಭದ್ರೆಗೆ ಇರುವ ಎಲ್ಲಾ ಅಡೆತಡೆಗಳನೆಲ್ಲ ದಾಟಿ ಸರಾಗವಾಗಿ ಹರಿಯಲು “ರಾಮಲಲ್ಲಾ”ಪ್ರೇರಣೆ ನೀಡಲಿ, ಭದ್ರ ಮೇಲ್ದಂಡೆ ಯೋಜನೆಯ ಹೋರಾಟಗಾರರ ಮತ್ತು ಬಯಲುಸೀಮೆಯ ಅನ್ನಧಾತರ ಬಹುದಿನಗಳ ಕನಸು ಸಕಾಗೊಳಿಸಲು ನಾಡಿನ ದೊರೆಗೆ ಹಾಗು ಜನ ಪ್ರತಿನಿಧಿಗಳಿಗೆ ಪ್ರಭು ಶ್ರೀರಾಮಚಂದ್ರ ಆಶೀರ್ವಾದ ನೀಡಲಿ ಎಂದು ಆ ಭಗವಂತನಲ್ಲಿ ಬೇಡಿಕೊಳ್ಳುತ್ತಾ, ಬಯಲುಸೀಮೆಗೆ ಭದ್ರೆ ಹರಿದು. ನೀರಾವರಿಯ ಮುಂಚೂಣಿ ನಾಯಕ, ನೊಂದವರ ಧ್ವನಿ, ಬಯಲುಸೀಮೆಯ ಭೀಮ ರಾವ್ ಎಂ. ಜಯಣ್ಣನವರ ಕನಸು ನನಸಾಗಲಿ ಎಂದು ಆ ದೇವರಲ್ಲಿ ಬೇಡಿ. ನನ್ನ ಈ ಕವನವನ್ನ ಎಂ. ಜಯಣ್ಣನವರ ಚರಣ ಕಮಲಗಳಿಗೆ ಅರ್ಪಿಸುತ್ತೇನೆ.

ಕೆ. ತಿಪ್ಪೇಸ್ವಾಮಿ, ಮಣೆಗಾರ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page