ಭಕ್ತ ಜನಸಾಗರದ ನಡುವೆ ಅದ್ದೂರಿಯಾಗಿ ನಡೆದ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆ.

by | 19/09/23 | ಸುದ್ದಿ

ಚಳ್ಳಕೆರೆ ಜನಧ್ವನಿ ವಾರ್ತೆ ಸೆ.19. ಚಿತ್ರದುರ್ಗ ಜಿಲ್ಲೆಯ ಪ್ರಮುಖ ಬುಡಕಟ್ಟುಗಳಾದ ಕಾಡುಗೊಲ್ಲ ಹಾಗೂ ಮ್ಯಾಸ ಬೇಡ ಸಮುದಾಯದ ಆರಾಧ್ಯ ದೇವತೆ ಗೌರಸಮುದ್ರದ ಮಾರಮ್ಮದೇವಿ ಜಾತ್ರೆ ಮಂಗಳವಾರ ಸಂಭ್ರಮ ಸಡಗರದಿಂದ ಜಾತ್ತಾ ಉತ್ಸವ ಸಾವಿರಾರು ಭಕ್ತರ ಸಮ್ಮುಕದಲ್ಲಿ ನೆರವೇರಿತು. ಮೂಲಸ್ಥಾನದಿಂದ ದೇವಿಯನ್ನು ಒತ್ತು ಮಧ್ಯಾಹ್ನ 12 ಗಂಟೆ ಸುಮಾರಿಗೆ ದೇವಿಯನ್ನು ಜಾತ್ರೆ ನಡೆಯುವ ತುಮ್ಮಲು ಪ್ರದೇಶಕ್ಕೆ ಅದ್ದೂರಿ ಮೆರವಣಿಗೆಯೊಂದಿಗೆ ಕರೆತಂದರು.
ಶ್ರೀಮಾರಮ್ಮ ದೇವತೆ ಸಾಮಾಜಿಕ ಸಂದರ್ಭದಲ್ಲಿ ಮಕ್ಕಳಿಗೆ ದಡಾರದಮ್ಮ, ಅಮ್ಮ, ಸಿಡುಬುಗಳು ಕಾಣಿಸಿಕೊಂಡಾಗ ಅದಿದೇವತೆ ಮಾರಮ್ಮ ಎಂಬ ನಂಬಿಕೆ ಜನರಲ್ಲಿ ಬಲವಾಗಿ ಬೇರೂರಿರುವುದರಿಂದ ಸಿಡುಬು, ದಡಾರ ಬೇಗಾ ಗುಣಮಾಡಿಕೊಳ್ಳಮ್ಮ ಜಾತ್ರೆಗೆ ಬಂದು ಮಕ್ಕಳಿಗೆ ಬೇವಿನ ಸೀರೆ ಸೇವೆ ಮಾಡಿಸುತ್ತೇವೆ ಎಂದು ಹರಕೆ ಮಾಡಿಕೊಳ್ಳುತ್ತಾರೆ.
ಆದ್ದರಿಂದ ಜಾತ್ರೆಗೆ ಕುಟುಂಬದೊಂದಿಗೆ ಎತ್ತಿನ ಬಂಡಿಗಳನ್ನು ಕಟ್ಟಿಕೊಂಡು ಬಂದು ತಮ್ಮ ಹರಕೆಗಳನ್ನು ತೀರಿಸಿ ದೇವಿಯ ದರ್ಶನ ಪಡೆದರು.

ಜಾತ್ರೆಯಲ್ಲಿ ಮಹಿಳೆಯರು ಒದೊಂತ್ತಿನ ಉಪವಾಸದೊಂದಿಗೆ ಮಡಿಯಾಗಿ ಮಾರಮ್ಮನಿಗೆ ಅಕ್ಕಿ. ಬೇಳೆ, ಕಾಯಿ, ಕರ್ಪೂರ ಹೂವು ಬೇವಿನ ಸೊಪ್ಪು ಹಾಗೂ ಎಡೆಯೊಂದಿಗೆ ದೇವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಹರಕೆ ಹೊತ್ತ ಮಕ್ಕಳು ಹೆಂಗಸರು ಬೇವಿನ ಸೀರೆ ಧರಿಸಿ ದೇವಸ್ಥಾನವನ್ನು ಮೂರು ಸುತ್ತು ಪ್ರದಕ್ಷಣೆ ಹಾಕಿ ನಂತರ ಬೇವಿನ ಸೀರೆ ಕಳಚಿ ಹೊಸ ಉಡುಗೆ ಧರಿಸಿದೇವರ ಹೆಸರಿನಲ್ಲಿ ತಮ್ಮ ಕಾಯಕಗಳನ್ನು ಮಾಡಿಕೊಂಡು ದೇವರು, ಧರ್ಮ, ನಂಭಿಕೆ, ಸಂಪ್ರದಾಯ, ಮೂಢನಂಭಿಕೆ ಆಚರಣೆ ವಿಧಿ ನಿಯಮಗಳನ್ನು ಮಕ್ಕಳು ಸೇರಿಂದಂತೆ ದೇವಿಗೆ ಆರತಿ, ಹರಿಸಿನ, ಕುಂಕುಮ ಸೀರೆ ಕುಪ್ಪಸ ಹಸಿರು ಬಳೆ ಮಡಿಲಕ್ಕಿ ಹಿಡಿದುಕೊಂಡು ಭಯ ಭಕ್ತಿಯಿಂದ ದೇವಾಸ್ಥಾನವನ್ನು ಮೂರು ಸುತ್ತು ಸುತ್ತಿ ದೇವಿಗೆ ಅರ್ಪಿಸುವ ದೃಶ್ಯ ಸಾಮಾನ್ಯವಾಗಿ ಕಾಣುತ್ತಿದ್ದು.
ತುಮ್ಮಲಿನಲ್ಲಿ ಈ ದೇವಿಯ ಪೂಜೆಯನ್ನು ಶ್ರದ್ದೆ ಭಕ್ತಿಗಳಿಂದ ಪೂಜಿಸಿ ತಮ್ಮ ಇಷ್ಟಾರ್ಥಗಳನ್ನು ಪೂರೈಸುವಂತೆ ಜಾತ್ರೆಯಲ್ಲಿ ಬೇವಿನ ಸೀರೆ, ಈರುಳ್ಳಿ, ಹರಿಸಿಣ ಕುಂಕುಮ, ಬಂಡಾರದ ಅಭಿಷೇಕ, ಸಾಕಿದ ಕೋಳಿ ಮರಿಗಳನ್ನುದೇವಿಯ ಉತ್ಸವ ಬತುವಾಗ ತೂರಿ ಹರಕೆ ತೀರಿಸಿದರು.


ಎಲ್ಲೆಲ್ಲೂ ಜನವೋ ಜನ: .
ಈಬಾರಿಯ ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಿರುವ ಶೇಂಗಾ ಫಸಲಿಗೆ ಮಳೆರಾಯ ಕಳೆದ ವಾರ ಒಂದಿಷ್ಟು ಕೃಪೆ ತೋರಿದ ಪರಿಣಾಮ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಒಂದು ದಿನ ಮುಂಚಿತವಾಗಿಯೇ. ಭಕ್ತರು ನಾನಾ ಕಡೆಗಳಿಂದ ಎತ್ತಿನ ಬಂಡಿಗಳಲ್ಲಿ ಮತ್ತು ಟೆಂಪೋಗಳಲ್ಲಿ ಬಂದು ದೇವಿಯ ದರ್ಶನ ಪಡೆದು ಹರಕೆ ತೀರಿಸುವುದುಂಟು. ಇಲ್ಲಿ ಬಹು ಹಿಂದಿನಿಂದಲೂ ಹರಕೆ ಹೊತ್ತ ಭಕ್ತರು ಬೇವಿನ ಉಡುಗೆ ಉಟ್ಟು ದೇವಿಯ ಕೃಪೆಗೆ ಪಾತ್ರರಾಗುವುದನ್ನು ಕಾಣಬಹುದಿತ್ತು. ಆದರೆ, ಇದೀಗ ಜಿಲ್ಲಾಡಳಿತ ಬೆತ್ತಲೆ ಬೇವಿನ ಉಡುಗೆಯನ್ನು ನಿಷೇಧಿಸಿರುವುದರಿಂದ ಮೈಮೇಲೆ ಬಟ್ಟೆ ತೊಟ್ಟ ಕೆಲ ಭಕ್ತರು ಹರಕೆ ತೀರಿಸುತ್ತಿರುವುದು ಮಂಗಳವಾರ ತುಮಲು ಪ್ರದೇಶದಲ್ಲಿ ಕಂಡುಬಂದಿತು.

ಹೊಸದಾಗಿ ವಿವಾಹವಾದ ದಂಪತಿ ಗೌರಸಮುದ್ರ ಮಾರಮ್ಮನ ಜಾತ್ರೆಗೆ ಹೋಗಿ ಬರಬೇಕು ಎಂಬ ಪ್ರತೀತಿ ಈ ಭಾಗದಲ್ಲಿ ಇರುವುದರಿಂದ ಹೊಸ ಜೋಡಿಗಳು ಜಾತ್ರೆಯಲ್ಲಿ ಅಲ್ಲಲ್ಲಿ ಕಂಡುಬಂದರು.
ಶಾಸಕರ ಭೇಟಿ:
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹಾಗೂ ಮೊಳಕಾಲ್ಮುರು ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ಪಾಲ್ಗೊಂಡು ತುಮಲು ಪ್ರದೇಶದಲ್ಲಿ ದೇವಿಯ ದರ್ಶನ ಪಡೆರು ಗೌರಸಮುದ್ರ ಜಾತ್ರೆ ಮುಗಿದ ನಂತರ ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ಒಂದು ತಿಂಗಳವರೆಗೆ ಪ್ರತಿ ಮಂಗಳವಾರ ಮಾರಿಹಬ್ಬವನ್ನು ಆಚರಿಸುವ ಪದ್ದತಿ ಇಂದಿಗೂ ಇದೆ.ದೇವಿಗೆ
ಜಾತ್ರೆಯಲ್ಲಿ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಾಲೂಕು ಆಡಳಿತ ಮುಂಜಾಗ್ರತೆ ವಹಿಸಿತ್ತು ತಹಶೀಲ್ದಾರ್ ರೆಹಾನ್ ಪಾಷಾ.ತಾಪಂ ಇಒ ಹೊನ್ನಯ್ಯ. ಡಿವೈಎಸ್ಪಿ ರಾಜಣ್ಣ.ವೃತ್ತ ನಿರೀಕ್ಷಕ ಸಮೀವುಲ್ಲ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ದೇವಿಯ ದರ್ಶನ ಪಡೆದರು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page