ಹಿರಿಯೂರು :
ನಮ್ಮ ಶಾಲೆಯಲ್ಲಿ ಓದಿ ಉದ್ಯೋಗಗಳನ್ನು ತೊಡಗಿಕೊಂಡಿರುವ ವಿದ್ಯಾರ್ಥಿಗಳು ತಾವು ಓದಿದ ಶಾಲೆಯನ್ನು ಮರೆಯದೇ ಇಲ್ಲಿಗೆ ಬಂದು ಇಲ್ಲಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಟೈ ಹಾಗೂ ಬೆಲ್ಟ್ ಗಳನ್ನು ವಿತರಣೆ ಮಾಡುವ ಮೂಲಕ ತಾವು ಕಲಿತಶಾಲೆಗೆ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂಬುದಾಗಿ ಮುಖ್ಯಶಿಕ್ಷಕರಾದ ಪ್ರಭಾಕರ್ ಹೇಳಿದರು.
ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದ ಪಾರ್ಥಲಿಂಗೇಶ್ವರ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಶಾಲೆಯ ಇಂದಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಟೈ ಹಾಗೂ ಬೆಲ್ಟ್ ಗಳನ್ನು ವಿತರಿಸಿ, ನಂತರ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಆರ್.ಎಸ್.ಉಪ್ಪಾರಹಟ್ಟಿ ಗ್ರಾಮದ ವಿದ್ಯಾರ್ಥಿಗಳಾದ ಲಕ್ಷ್ಮಣ್, ಮಾರುತಿ, ಕಿರಣ್, ದರ್ಶನ್, ನಂದೀಶ್, ಇವರುಗಳು ಪಾರ್ಥಲಿಂಗೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಟೈ ಹಾಗೂ ಬೆಲ್ಟ್ ಗಳನ್ನು ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕರಾದ ಪ್ರಭಾಕರ್, ಶಿಕ್ಷಕರುಗಳಾದ ಶಂಷುದ್ದೀನ್, ಮೂಡ್ಲಪ್ಪ, ಭರತ, ಶಿವಮೂರ್ತಿ, ಶ್ರೀಮತಿ ತ್ರಿವೇಣಿ, ತಿಪ್ಪೇಸ್ವಾಮಿ, ಮಲ್ಲೇಶಪ್ಪ ಸುಣ್ಣಗಾರ್, ಗೋಸಿಕೆರೆ ರಂಗನಾಥ್ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬ್ಯಾಡರಹಳ್ಳಿಯ ಪಾರ್ಥಲಿಂಗೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಟೈ ಹಾಗೂ ಬೆಲ್ಟ್ ವಿತರಣೆ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments