ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಎಫೆಕ್ಟ್.
ಚಳ್ಳಕೆರೆ ಜನಧ್ವನಿ ವಾರ್ತೆ ಸೆ.14ಕಳಪೆ ಬಿತ್ತನೆ ಬೀಜ ವಿತರಣೆ ಬೆಳೆ ನಷ್ಟ ಪರಿಹಾರಕ್ಕಾಗಿ ರೈತ ಆಗ್ರಹ ಎಂಬ ತಲೆಬರಹದಡಿಯಲ್ಲಿ ಬುಧವಾರ ಜನಧ್ವನಿ ಡಿಜಿಟಲ್ ಮೀಡಿಯಾ ಸುಧ್ದಿ ಬಿತ್ತರಿಸಿದ ಬೆನ್ನಲ್ಲೇ ಸಹಾಯಕ ಕೃಷಿ ನಿರ್ದೇಶಕ ಡಾ.ಅಶೋಕ್ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಕನೆ ಮಾಡಿ ಮುಂದಿನ ಕ್ರಮ ಕೈಕೊಳ್ಲುವುದಾಗಿ ಜನಧ್ವನಿ ಗೆ ಪ್ರತಿಕ್ರಿಯೇ ನೀಡಿದ್ದಾರೆ. ಮುಂಗಾರಿನಲ್ಲಿ ಬಿತ್ತನೆ ಮಾಡಿದಶೇಂಗಾ ಬೆಳೆಗಳು ನೆಲಕಚ್ಚಿ ಸಂಕಷ್ಟದಲ್ಲಿರುವ ರೈತರಿಗೆ ಕಳಪೆ ಬಿತ್ತನೆ ಬೀಜದ ಹಾವಳಿಯಿಂರ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಎಂದು ಚಳ್ಳಕೆರೆ ತಾಲೂಕಿನ ಸೋಮಗುದ್ದು ಗ್ರಾಪಂ ವ್ಯಾಪ್ತಿಯ ಗಂಜಿಗುಂಟೆ ಗ್ರಾಮದ ರೈತ ರೇವಣ್ಣ ತನ್ನ ಮೂರು ಎಕರೆ ಪ್ರದೇಶದಲ್ಲಿ ಸೋಮಗುದ್ದು ಗ್ರಾಮದ ಶ್ರೀಗೌರವಕಾಶಿ ಉದ್ಪಾಕರ ಸಂಘದಲ್ಲಿ ಬೀಜ ಹೆಚ್ಚು ಇಳುವರಿ ನೀಡುತ್ತದೆ ಎಂದು ನಂಬಿಸಿ ವಿತರಣೆ ಮಾಡಿದ್ದಾರೆ ಎಂದು ಸುದ್ದಿ ಬೆಳಕು ಚೆಲ್ಲಿತ್ತು. ವರದಿ ಓದಿದ ಸಹಾಯಕ ಕೃಷಿ ನಿರ್ದೇಶಕ ಡಾ .ಅಶೋಕ್ ಈ ರೀತಿ ಮಾಹಿತಿ ನೀಡಿದ್ದಾರೆ. ಬೆಳೆ ವಷ್ಟವಾದ ರೈತ ಬೀಜ ವಿತರಣೆ ಮಾಡಿದವರ ಹಾಗೂ ಬೆಳೆ ವಷ್ಟದ ಬಗ್ಗೆ ಇದುವರೆಗೂ ಇಲಾಖೆಯ ಗಮನಕ್ಕೆ ತಂದಿರುವುದಿಲ್ಲ ಎಲ್ಲಾ ರೈತರು ಮಾಡುವುದು ಇದನ್ನೇ ಮೊದಲು ಅವರೇ ಡೀಲರ್ ಜೊತೆ ಮಾತನಾಡಿ ಸಮಯ ವ್ಯರ್ಥ ಮಾಡುತ್ತಾರೆ ಆಮೇಲೆ ಇಲಾಖೆ ಗೆ ಬರುತ್ತಾರೆ ಈಗಲೂ ಕೂಡ ಅವರು ಇಲಾಖೆಗೆ ಒಂದು ಕಂಪ್ಲೇಂಟ್ ನೀಡಿರುವುದಿಲ್ಲ ಆದರೂ ನಿಮ್ಮ ವರದಿಯ ಮೇಲೆ ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮ ತೆಗೆದು ಕೊಳ್ಳುತ್ತೇನೆ ಎಂಬ ಮಾಹಿಯನ್ನು ನೀಡಿದ್ದಾರೆ. ಬೆಳೆ ನಷ್ಟವಾದ ಕೂಡಲೆ ರೈತರು ಸಮಯ ವ್ಯರ್ಥಮಾಡದೆ ಕೂಡಲೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಗಮನ ಹರಿಸ ಬೇಕು ಇವರು ಸ್ಪಂದಿಸದಿಲ್ಲ ಪತ್ರಿಕೆ ಗಮನ ಸೆಲಕೆಯುವಂತೆ ಜನಧ್ವನಿ ಡಿಜಿಟಲ್ ಮೀಡಿಯಾ ರೈತರಲ್ಲಿ ಕಳಕಳಿಯ ಮನವಿ.
ಬೆಳೆ ನಷ್ಟವಾದ ರೈತ ಇಲಾಖೆ ದೂರು ನೀಡಿಲ್ಲ ವರದಿ ಓದಿದ್ದೇನೆ ರೈತರ ಜಮೀನಿಗೆ ಭೇಟಿ ಕ್ರಮಕೈಕೊಳ್ಳುತ್ತೇ ಸಾಹಯಕ ಕೃಷಿ ನಿರ್ದೆಶಕ ಅಶೋಕ್
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments