ಬೆಳೆ ಕಾಟಾವ್ ಸಮೀಕ್ಷೆ ಸಿಬ್ಬಂದಿಗಳು ಮಾಡಿದ ಯಡವಟ್ಟು- ಅನ್ನತಾದ ಅರ್ಜಿಸಲ್ಲಿಸದಿದ್ದರೂ ಕೃಷಿ ಭೂಮಿ ಕೃಷಿಯೇತರ ಎಂದು ನಮೂದು, ಸರಕಾರಿ ಸೌಲಭ್ಯದಿಂದ ಅನ್ನದಾತರು ವಂಚಿತ.

by | 16/05/24 | ತನಿಖೆ ವರದಿ


ಚಳ್ಳಕೆರೆ ಜನಧ್ವನಿ ವಾರ್ತೆ ಮೇ 16 ಭೂಮಿ ವಿವರ ನೀಡುವ ಪಹಣಿಗೆ ಬೆಳೆ ವಿವರ ನಮೂದಿಸುವಲ್ಲಿ ಬೆಳೆ ಕಟಾವ್ ಸಮೀಕ್ಷೆ ಸಿಬ್ಬಂದಿಗಳು ಮಾಡಿದ ಎಡವಟ್ಟಿನಿಂದ ರೈತರು ಸರಕಾರದ ಸೌಲಭ್ಯದಿಂದ ವಂಚಿತರಾಗಿರುವುದು ಬೆಳೆದಿಕೆ ಬಂದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ರೀಸಂ ನಂ 64/2,1/23 ಎಕರೆ, 73 ರಲ್ಲಿ10/33 ಎಕರೆ,17/3 ರಲ್ಲಿ 1/08 ಎಕರೆ, ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ಕೃಷಿಯೇತರ ಎಂದುನಮೂದು ಮಾಡಿರುವುದರಿಂದ ಬೆಳೆ ವಿಮೆ, ಬೆಳೆ ಪರಿಹಾರ, ಪಿ.ಎಂ.ಕಿಸಾನ್ ಸೌಲಭ್ಯಗಳಿಂದ ವಂಚನೆಯಾಗಿರುವ ಜತೆಗೆ ಪಾಲುವಿಭಾಗ, ದುರಸ್ಥಿ, ಮಾಡಿಸಿಕೊಳ್ಳಲು ಬರದಾಂಗಿದ್ದು ಸುಮಾರು ಬೆಳೆ ಕಟಾವ್ ಸಮೀಕ್ಷೆ ಸಿಬ್ಬಂದಿಗಳು ಮಾಡಿರುವ ಯಡವಟ್ಟಿನಿಂದ ಸುಮಾರು ಎರಡು ವರ್ಷಗಳಿಂದ ಕಂದಾಯ , ಕೃಷಿ ಇಲಾಖೆ ಕಚೇರಿಗಳಿಗೆ ಅಲೆದಾರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಭೂ ಪರಿವರ್ತನೆ ಮಾಡಲು ನಾವು ಅರ್ಜಿಸಲ್ಲಿಸಿಲ್ಲ ಭೂ ಪರಿವರ್ತನೆ ಮಾಡಿಕೊಳ್ಳಲು ಲಕ್ಷ ಗಟ್ಟಲೆ ಹಣ ಕರ್ಚಾಗುತ್ತದೆ ಆದರೆ ನಾವು ಅರ್ಜಿನೇ ಸಲ್ಲಿಸಿ ಆದರೂ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿ ಎಂದು ತಪ್ಪು ನಮೂದು ಮಾಡಿದ್ದಾರೆ.


ಕಂದಾಯ ಇಲಾಖೆ ಕೃಷಿ ಇಲಾಖೆಯತ್ತ ಬೊಟ್ಟು ತೋರಿಸಿದರೆ , ಕೃಷಿ ಇಲಾಖೆ ಕಂದಾಯ ಇಲಾಖೆಯತ್ತ ಬೊಟ್ಟು ತೋರಿಸುತ್ತದೆ ಸುಮಾರು ಎರಡು ವರ್ಷಗಳಿಂದ ಅಲೆದಾಡಿದರೂ ಸಹ ಅನ್ನದಾತರ ಕಷ್ಟಕ್ಕೆ ಸ್ಪಂದಿಸಬೇಕಿದ್ದ ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳಿ ದೂರು ನೀಡಿದರೂ ಸಹ ಸರಿಪಡಿಸಲು ಮುಂದಾಗುತ್ತಿಲ್ಲ ಎಂದು ರೈತರು ಆಳಲು ತೋಡಿಕೊಂಡಿದ್ದಾರೆ.
ಇ-ಆಡಳಿತಕ್ಕೆ ಒತ್ತು ಕೊಡುವ ಸಲುವಾಗಿ ಬೆಳೆ ವಿವರ, ಸಮೀಕ್ಷೆ ನಡೆಸುವವರ ವಿವರಗಳು ರೈತರಿಗೆ ಅಂಗೈನಲ್ಲೇ ಸಿಗುವಂತೆ ಮಾಡುವ ಉದ್ದೇಶದಿಂದ ಸರಕಾರ ‘ಬೆಳೆ ದರ್ಶಕ್’ ಮೊಬೈಲ್ ಆ್ಯಪ್ ಪರಿಚಯಿಸಿದೆ. ಗ್ರಾಮಲೆಕ್ಕಿಗರು, ತರಬೇತಿ ಪಡೆದ ಖಾಸಗಿ ವ್ಯಕ್ತಿಗಳು ಗ್ರಾಮಗಳಿಗೆ ತೆರಳಿ ಆಯಾ ಸರ್ವೆ ನಂಬರ್ ಜಮೀನಿಗೆ ಮಾಲೀಕನ ಹೆಸರು, ಬೆಳೆ ವಿವರ ಜತೆಗೆ ಫೋಟೊವನ್ನು ಆ್ಯಪ್ಗೆ ಅಪ್ಲೋಡ್ ಮಾಡಬೇಕು. ಈ ಮಾಹಿತಿ ಕಂದಾಯ, ಕೃಷಿ ಇಲಾಖೆಯಲ್ಲಿಲಭ್ಯ ಇರಲಿದೆ. ‘ಬೆಳೆ ದರ್ಶಕ್’ನಲ್ಲಿನಮೂದಿಸಿರುವ ಮಾಹಿತಿಯೇ ಬೆಂಬಲ ಬೆಲೆಗೆ ಮಾರಾಟ ಮಾಡುವುದಕ್ಕೆ, ಬೆಳೆ ಪರಿಹಾರ, ಬೆಳೆ ವಿಮೆ ಸೇರಿದಂತೆ ಸರಕಾರಿ ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ ಆದರೆ ಇಲಾಖೆಯವರು ತಪ್ಪು ಮಾಹಿತಿ ಎಂಟ್ರಿ ಮಾಡಿರುವುದರಿಂದ ಎಲ್ಲಾ ಸೌಲಭ್ಯಗಳಿಂದ ವಂಚನೆಯಾಗುವಂತೆ ಮಾಡಿದೆ.
ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಕೃಷಿ ಭೂಮಿಯನ್ನು ಕೃಷಿಯೇತರ ಎಂದು ತಪ್ಪು ಮಾಹಿತಿ ನೀಡಿ ರೈತರನ್ನು ಅಲೆದಾಡಿಸುವಂತೆ ಹಾಗೂ ಸಾರದ ಸೌಲಭ್ಯಗಳಿಂದ ವಂಚಿಸುವಂತೆ ಮಾಡಿದವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳ ಬೇಕು ಕೃಷಿಯೇತರ ಎಂಬ ತಪ್ಪು ಮಾಹಿತಿಯನ್ನು ತೆಗೆದು ಕೃಷಿ ಭೂಮಿ ಎಂದು ಸರಿಪಡಿಸುವಂತೆ ರೈತರು ಆಗ್ರಹಿಸಿದ್ದಾರೆ.
ಅರ್ಜಿ ಸಲ್ಲಿಸದಿದ್ದರೂ ಭೂ ಪರಿವರ್ತನೆ.
ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 95(2)ರಡಿಯಲ್ಲಿ ಕೃಷಿ ಉದ್ದೇಶಕ್ಕಾಗಿ ಹೊಂದಿರುವ ಭೂಮಿಯ ಅಧಿಭೋಗದಾರನು ಅಂತಹ ಜಮೀನನ್ನು ಅಥವಾ ಅದರ ಯಾವುದೇ ಭಾಗವನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸಲು ಇಚ್ಛಿಸಿದರೆ ಜಿಲ್ಲಾಧಿಕಾರಿಯವರಿಗೆ ಅರ್ಜಿ ಸಲ್ಲಿಸ ಬೇಕೆಂಬ ನಿಯಮವಿದೆ. ಆದರೆ ಹೆಗ್ಗೆರೆ ಗ್ರಾಮದ ರೈತರು ಕೃಷಿ ಭೂಮಿಯನ್ನು ಭೂಪರಿವರ್ತನೆ ಅರ್ಜಿ ಸಲ್ಲಿಸದೆ ಇದ್ದರೂ ಸಹ ಕೃಷಿಯೇತರ ಭೂಮಿ ಎಂದು ಹೇಗೆ ಪರಿವರ್ತನೆಯಾಗಿದೆ. ಭೂ ಪರಿವರ್ತನೆ ಅಲ್ಲಿ ಸಲ್ಲಿಸಿದ ಕಚೇರಿಗೆ ಅಲೆದಾಡಿದರೂ ವಿಳಂಭವಾಗುತ್ತದೆ ಲಕ್ಷ ಲಕ್ಷ ರೂ ಹಣ ಖರ್ಚಾಗುತ್ತದೆ ಆದರೆ ರೈತರು ಅರ್ಜಿಯೂ ನೀಡದೆ, ನಿಗಧಿತ ಶುಲಕ್ಷವೂ ನೀಡದೆ ಭೂ ಪರಿವರ್ತನೆ ನಮೂದು ಮಾಡಿರುವುದು ರೈತರಿಗೆ ತಲೆಬಿಸಿ ಮಾಡಿದೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page