ಚಳ್ಳಕೆರೆ. ಜನಧ್ವನಿ ವಾರ್ತೆ ನ.12 ದೀಪಾವಳಿಯ ಹಬ್ಬದಲ್ಲಿ ಖರೀದಿ ಭರಾಟೆ ಜೋರಾಗಿದ್ದು, ಮಾರುಕಟ್ಟೆ ಸೇರಿದಂತೆ ವಿವಿಧ ಅಂಗಡಿ ಮುಂಗಟ್ಟುಗಳಲ್ಲಿ ಮುಗಿ ಬಿದ್ದ ಜನರು.
ಹೌದು ಇದು ಚಳ್ಳಕೆರೆ ನಗರದ ನೆಹರು ವೃತ್ತ, ಖಾಸಗಿ ಬಸ್ ನಿಲ್ದಾಳ,ಬೆಂಗಳೂರು ರಸ್ತೆ, ಪಾವತಗಡೆ ರಸ್ತೆ ,ತರಕಾರಿ ಮಾರು ಕಟ್ಟೆ ಸೇರಿದಂತೆ ವಿವಿಧ ಪ್ರಮುಖ ರಸ್ತೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ಎಲ್ಲೆಡೆ ಮನೆಯ ಮುಂಭಾಗದಲ್ಲಿ ಕಟ್ಟಲಾಗುವ ಆಕಾಶಬುಟ್ಟಿ, ಪ್ಲಾಸ್ಟಿಕ್ ಮಾವಿನ ತೋರಣ ಮತ್ತು ಹಣತೆ ಮತ್ತಿತರ ವಸ್ತುಗಳ ಖರೀದಿಗೆ ಗೃಹಿಣಿಯರು ಆಸಕ್ತಿ ತೋರಿದರೆ, ಹಸಿರು ಪಟಾಕಿಗಳ ಖರೀದಿಯ ಭರಾಟೆಯಲ್ಲಿ ಮಕ್ಕಳು, ಯುವಕ-ಯುವತಿಯರು ಖರೀದಿಸಲು ಮುಂದಾಗಿದ್ದರು.
ಈಗಾಗಲೇ ಮಾರುಕಟ್ಟೆಯಲ್ಲಿ ಆಕಾಶ ಬುಟ್ಟಿಗಳು ಝಗಮಗಿಸುತ್ತಿವೆ. ಪ್ರತಿವರ್ಷದಂತೆ ಈ ವರ್ಷವೂ ಮಣ್ಣಿನ ದೀಪಕ್ಕೆ ಭಾರಿ ಬೇಡಿಕೆ ಬಂದಿದೆ. ವಿಭಿನ್ನ ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಮಣ್ಣಿನ ದೀಪ ,ಹಣ್ಣು ಹೂವು, ಬಾಳೆ ಕಂದು ಹಾಗೂ ಎಲೆ, ಮಾವಿನ ಸೊಪ್ಪು ಜನರು ಮುಗಿಬಿದ್ದು ಖರೀದಿಸುತ್ತಿದ್ದಾರೆ.

ಒಂದು ಡಜನ್ ಹಣತೆಗೆ ರೂ.35 ರಿಂದ 50 ರವರೆಗೆ ಮಾರಾಟ ಮಾಡಲಾಗುತ್ತಿದೆ. ಆಧುನಿಕ ಭರಾಟೆಯಲ್ಲಿ ಪಿಂಗಾಣಿ ಹಣತೆ ವ್ಯಾಪಾರಕ್ಕೆ ಇಂದಿಗೂ ಬೇಡಿಕೆ ಹೆಚ್ಚಿದೆ.

ನಗರದ ಸೂಪರ್ ಮಾರುಕಟ್ಟೆಯಲ್ಲಿನ ಬಟ್ಟೆ ಮತ್ತು ಫ್ಯಾನ್ಸಿ ಸ್ಟೋರ್‌ಗಳು ಫುಲ್ ರಶ್ ಆಗಿದ್ದವು. ತಮ್ಮ ಕುಟುಂಬಗಳಿಗೆ ಬಟ್ಟೆ ಸೇರಿ ಇತರ ವಸ್ತುಗಳನ್ನು ಸಾರ್ವಜನಿಕರು ಖರೀದಿಸಿದರು. ಅಷ್ಟೇ ಅಲ್ಲದೇ ಕಿರಾಣಿ ಅಂಗಡಿಗಳಲ್ಲಿ ಪೂಜಾ ಸಾಮಗ್ರಿ ಮಾರಾಟ ಜೋರಾಗಿತ್ತು.
ಗ್ರಾಹಕರ ಜೇಬಿಗೆ ಕತ್ತರಿ.

ಬೆಂಗಳೂರು ಸೇರಿದಂತೆ ವಿವಿಧೆಡೆ ಪಟಾಕಿ ಗೋದಾಮಿನಲ್ಲಿ ಬೆಂಕಿಹೊತ್ತಿಕೊಂಡ ಪರಿಣಾಮ ಸಾವು ನೋವು ಕಂಡ ಹಿನ್ನೆಲೆಯಲ್ಲಿ ಪರಿಸರ ಹಾನಿಕಾರಕ ಪಟಾಕಿ ನಿಶೇಷದ ಮಾಡಲಾಗಿದೆ.
ನಗರದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಪ್ರತಿ ವರ್ಷ ಪಟಾಕಿ ಅಂಗಡಿಗಳನ್ನು ಸಾಲಾಗಿ ಒಂದಕ್ಕೊಂದು ತಾಕಿ ಕೊಂಡಿರತ್ತಿದ್ದವು ಈ ಬಾರಿ ಒಂದಕ್ಕೊಂದು ಅಂತರ ಕಾಯ್ದುಕೊಂಡು ನಿರ್ಮಿಸಲಾಗಿದೆ.
ಹಾನಿಕಾರಕ ಪಟಾಕಿ ನಿಶೇಷದಿಂದಾಗಿ ಈ ಬಾರಿ ಪರಿಸರ ಮಾಲಿನ್ಯಗಳ ಪಟಾಕಿ ನೀಷೇದದ ನಡುವೆ ಈ ಬಾರಿ ಹಸಿರು ಪಟಾಕಿ ಮಾತ್ರ ಮಾರಟ ಮಾಡಲು ಅವಕಾಶ ನೀಡಿರುವುದರಿಂದ ವಿವಿಧ ಪಟಾಕಿಗಳ ಬೆಲೆ ಗಗನಕ್ಕೇರಿದ್ದರೂ ಸಹ ದೀಪಾವಳಿ ಹಬ್ಬ ಆಚರಣೆಗೆ ಪಟಾಕಿ ಖರೀದಿಯಲು ಮುಗಿದ್ದ ಬಿದ್ದ ದೃಶ್ಯ ಕಂಡು ಬಂತು.
ಟ್ರಾಫಿಕ್ ಜಾಮ್.
ನಗರದ ಪಾವಗಡ ರಸ್ತೆಯಲ್ಲಿ ಒಂದು ಭಾಗದ ರಸ್ತೆಯಲ್ಲಿ ಹೂವು ,ಹಣ್ಣು, ಬಾಳೆ ಕಂದು, ಬಾಳೆ ಎಲೆ ಸೇರಿದಂತೆ ವಿವಿಧ ವಸ್ತುಗಳ ಮಾರಾಟಗಾರರು ಒಂದು ಭಾಗದ ರಸ್ತೆಯನ್ನು ಸಂಪೂರ್ಣವಾಗಿ ಅಕ್ರಮಿಸಿಕೊಂಡಿದ್ದರಿಂದ ಹಾಗೂ ಖರೀದಿ ಮಾಡಲು ಬಂದವರು ಸಹ ತಮ್ಮ ದ್ವಿಚಕ್ರವಾಹನಗಳನ್ನು ರಸ್ತೆಯಲ್ಲೇ ಅಡ್ಡದಿಡ್ಡಿ ನಿಲ್ಲಿಸಿದ್ದರಿಂದ ಟ್ರಾಫಿಕ್ ಕಿರಿಕಿರಿಯಿಂದ ವಾಹನ ಸವಾರರ ಪ್ರಯಾಸದಿಂದ ಸಂಚಿರುವಂತಾಗಿತ್ತು ಪಾವಗಡ ಕಡೆಯಿಂದ ತುರ್ತು ವಾಹನ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ವಾಹನಗಳ ದಟ್ಟಣೆ ಹಾಗೂ ಅಡ್ಡ ದಿಡ್ಡಿ ನಿಲುಗಡೆಯಿಂದ ರೋಗಿಯನಯ್ಯುವ ಅಂಬ್ಯುಲೆನ್ಸ್ ವಾಹನಕ್ಕೂ ಸಹ ಟ್ರಾಫಿಕ್ ಬಿಸಿ ತಟ್ಟಿದ ಘನನೆ ನಡೆಯಿತು ಒಟ್ಟಾರೆ ಬೆಲೆಗಳ ಏರಿಕೆ ಹಾಗೂ ಬರಗಾಲದ ಬಿಸಿಯ ನಡುವೆಯೂ ದೀಪಾವಳಿ ಹಬ್ಬದ ಖರೀದಿ ಜೋರಾಗಿತ್ತು.
ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಕೋರುವ
0 Comments