ಚಿತ್ರದುರ್ಗ ನ.17
ಬುಲೆರೋ ಪಿಕಪ್ ವಾಹನಕ್ಕೆ ಕಾರು ಡಿಕ್ಕಿ ಒರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟರೆ ಮೊತ್ತೊಬ್ಬರಿಗೆ ಗಾಯ ಗೊಂಡ ಘಟನೆ ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಹಳೆ ಉಪ್ಪಾರನಹಳ್ಳಿ ಗ್ರಾಮದ ರಾಮಯ್ಯ ( 39 ) ಮಹೇಂದ್ರ ಕಂಪನಿಯ ಪಿಕಪ್ ವಾಹನದ ಕ್ಲೀನರ್ ಶುಕ್ರವಾರಬೆಳಗಿನ ಜಾವ ಸುಮಾರು 2.ಸಮಯದಲ್ಲಿ ಮೋಟಾರ್ ಸೈಕಲ್ ಶ್ರೀನಿವಾಸ
ಗುಂಡೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ, ರವರೊಂದಿಗೆ ಚಿತ್ರದುರ್ಗ ತಾಲ್ಲೂಕಿನ
ದೊಡ್ಡಸಿದ್ದವ್ವಹಳ್ಳಿ ಸಮೀಪ ಎನ್.ಹೆಚ್-48 ರ ರಸ್ತೆಯ ಒವರ್ ಬ್ರಿಡ್ಜ್ ಮೇಲ್ಬಾಗದ ರಸ್ತೆಯಲ್ಲಿ ಹಿರಿಯೂರು
ಕಡೆಯಿಂದ ಹೊಸಪೇಟೆ ಕಡೆಗೆ ಹೋಗುತ್ತಿರುವಾಗ ಹಿಂದಗಡೆಯಿಂದ ಬಂದ ಕಾರು ಚಾಲಕ ವೀರಪ್ಪ ಮೇಟಿ (40) ಮಾರನಬಸರಿ
ಗ್ರಾಮ ರೋಣ ತಾಲ್ಲೂಕು, ಗದಗ ಜಿಲ್ಲೆ, ರವರು ತನ್ನಕಾರನ್ನು ಅತೀ ವೇಗ ಮತ್ತು ಅಜಾಗೂರುಕತೆಯಿಂದ
ಚಾಲನೆ ಮಾಡಿಕೊಂಡು ಬಂದು ಮುಂದೆ ಹೋಗುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ರಾಮಯ್ಯ
ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಬುಲೆರೋ ಪಿಕಪ್ ವಾಹನದ ಕ್ಲೀನರ್
ರಾಮಯ್ಯ ರಸ್ತೆಗೆ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತಗಾಯಗಳಾಗಿರುತ್ತದೆ. ಜೊತೆಯಲ್ಲಿದ್ದ
ಶ್ರೀನಿವಾಸನಿಗೆ ಬಲಗೈ ಬೆರಳುಗಳಿಗೆ ಮತ್ತು ಮೈಕೈಗೆ ಪೆಟ್ಟು ಬಿದ್ದು ಗಾಯಗಳಾಗಿರುತ್ತದೆ. ಗಾಯಗೊಂಡ
ಇಬ್ಬರನ್ನು ಹೈವೆ ಆಂಬ್ಯುಲೆನ್ಸ್ ನಲ್ಲಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ
ಮಧ್ಯೆ ರಾಮಯ್ಯ ಮೃತಪಟ್ಟಿರುತ್ತಾರೆ. ಬುಲೆರೋ ಪಿಕಪ್ ವಾಹನದ ಚಾಲಕ ಶ್ರೀನಿವಾಸ
ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಚಿತ್ರದುರ್ಗ
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬುಲೆರೋ ಪಿಕಪ್ ವಾಹನಕ್ಕೆ ಕಾರು ಡಿಕ್ಕಿ ಒರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟರೆ ಮೊತ್ತೊಬ್ಬರಿಗೆ ಗಾಯ ಗೊಂಡ ಘಟನೆ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments