ಚಳ್ಳಕೆರೆ. ಜನಧ್ವನಿ ವಾರ್ತೆ ಮ.11 ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ಮಕ್ಕಳು ಹಾಗೂ ಜನರ ಮೇಲೆ ದಾಳಿ ಮಾಡುತ್ತವೆ ಎಂಬ ಬೀತಿಯಲ್ಲಿದ್ದೇವೆ ಎಂದು ಶಾಸಕರ ಬಳಿ ಅಳಲು ತೋಡಿಕೊಂಡರು.
ನಗದ ಶಾಸಕರ ಭವನದಲ್ಲಿ ಶಾಸಕ ಟಿ.ರಘುಮೂರ್ತಿ ಸಾರ್ವಜನಿಕರಿಂದ ಅಹವಾಲು ಹಾಗೂ ಒನಕ್ಕೆ ಓಬವ್ವ ಜಯಂತಿ ಆಚರಣೆ ಸಂದರ್ಭದಲ್ಲಿ ಬೀದಿ ನಾಯಿಗಳಿಗೆ ಕಡಿವಾಣ ಹಾಕುವಂತೆ ಸಾರರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.
ತಕ್ಷಣವೇ ಶಾಸಕ ಟಿ.ರಘುಮೂರ್ತಿ ಸ್ಥಳದಲ್ಲಿದ್ದ ಬೀದಿ ನಾಯಿ, ಬೀದಿ ದನಗ ಹಾವಳಿಯಿಂದ ವಾಹನ ಸಂಚಾರಕ್ಕೆ ಕಿರಿ ಕಿರಿಯಿಂದ ಅಪಘಾತಗಳಾಗುವ ಸಾಧ್ಯತೆ ಹಾಗೂ ಬೀದಿ ನಾಯಿಗಳು ಇತ್ತೀಚೆಗೆ ನಗರದಲ್ಲಿ ಹೆಚ್ಚಾಗಿರುವುದರಿಂದ ಅವುಗಳನ್ನು ಅತೋಟಿಗೆ ತರ ಬೇಕು ಇಲ್ಲವಾದಲ್ಲಿ ನಗರದಲ್ಲಿರುವ ಬೀದಿ ನಾಯಿಗಳನ್ನು ಬೇರೆಡೆಗೆ ಸಾಗಿಸುವಂತೆ ತಾಕೀತು ಮಾಡಿದರ.
ಪೌರಾಯುಕ್ತ ಚಂದ್ರಪ್ಪ ಮಾತನಾಡಿ ಬೀದಿ ನಾಯಿ ಹಾಗೂ ದನಗಳನ್ನು ಕೂಡಿ ಹಾಕುವಂತಿಲ್ಲ ಕಾನೂನು ಅಡ್ಡಿಯಾಗುತ್ತಿದೆ. ಬೀದಿನಾಯಿಗಳಿಗೆ ಸಂತಾನಹರಣ ಮಾಡಲು ಅವಕಾಶ ಇದೆ ರೇಬೀಸ್ ಕಾಯಿಲೆಗೆ ತುತ್ತಾದ ನಾಯಿಗಳನ್ನು ಹೊರಗೆಬಿಡದೆ ಅನ್ನ ಹಾಕಿ ಕೂಡಿಹಾಕಲು ಅವಕಾಶ ಇದೆ ಎಂದು ತಿಳಿಸಿದರು.

ಶಾಸಕ ಟಿ.ರಘುಮೂರ್ತಿ ಮಾತನಾಡಿ ದನಗಳಿಗೆ ಗೋಶಾಲೆ ಮಾಡಿದಂತೆ ನಾಯಿಗಳಿಗೆ ಒಂದು ಕೊಠಡಿ ಅಥವಾ ಶೆಡ್ ಮಾಡಿ ಅನ್ನ ನೀರು ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದರು. ನಗರದಲ್ಲಿ ಸಾರ್ವಜನಿಕಸ್ಥಳ ಗಲ್ಲಿ ಗಲ್ಲಿಳಲ್ಲಿ ಕೋಳಿ.ಮಾಂಸದ ಅಂಗಡಿ ಹಾಗೂ ಕಸದ ತ್ಯಾಜ್ಯ ಇರುವುದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ನಾಗರೀಕರು ಆರೋಪಿಸಿದರು.
ಬೀದಿ ನಾಯಿಗಳಿಗೆ ಕಡಿವಾಣ ಹಾಕಲಾಗುವುದು ಎಂದು ಪೌರಾಯುಕ್ತ ಚಂದ್ರಪ್ಪ ಸಾರ್ವಜನಿಕರಿಗೆ ಹಾಗೂ ಶಾಸಕ ಟಿ.ರಘುಮೂರ್ತಿಗೆ ಭರವಸೆ ನೀಡಿದರು.
0 Comments