ಬಾಪೂಜಿ ಪ್ರಬಂಧ ಸ್ಪರ್ಧೆ : ಪ್ರಬಂಧ ಸಲ್ಲಿಕೆಗೆ ಸೆ. 26 ಕೊನೆಯ ದಿನ

by | 22/09/23 | ಶಿಕ್ಷಣ


ಚಿತ್ರದುರ್ಗ ಸೆ.22:
ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ ಅಂಗವಾಗಿ ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಣ ಹಾಗೂ ಪದವಿ-ಸ್ನಾತಕೋತ್ತರ ಪದವಿಗಳ ಹಂತದ ವಿದ್ಯಾರ್ಥಿಗಳಿಗೆ ಒಟ್ಟು 3 ಪ್ರತ್ಯೇಕ ವಿಭಾಗಗಳಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆಯೋಜಿಸಿದ್ದು, ಆಯಾ ಶಾಲಾ ಕಾಲೇಜುಗಳ ಮುಖ್ಯಸ್ಥರು ಅತ್ಯುತ್ತಮ 03 ಪ್ರಬಂಧಗಳನ್ನು ಆಯ್ಕೆ ಮಾಡಿ ಸಲ್ಲಿಸಲು ಸೆ. 26 ಕೊನೆಯ ದಿನವಾಗಿದೆ.
ಗಾಂಧೀಜಿ ಜಯಂತಿ ಅಂಗವಾಗಿ ವಿದ್ಯಾರ್ಥಿ, ಯುವಜನರಲ್ಲಿ ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಸಹಬಾಳ್ವೆ, ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಮೊದಲಾದ ವಿಷಯಗಳ ಕುರಿತು ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಣ ಹಾಗೂ ಪದವಿ-ಸ್ನಾತಕೋತ್ತರ ಪದವಿಗಳ ಹಂತದ ವಿದ್ಯಾರ್ಥಿಗಳಿಗೆ ಒಟ್ಟು 3 ಪ್ರತ್ಯೇಕ ವಿಭಾಗಗಳಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆಯೋಜಿಸಿದ್ದು, ಪ್ರಬಂಧಗಳನ್ನು ವಿದ್ಯಾರ್ಥಿಗಳು ಆಯಾ ಶಾಲಾ ಕಾಲೇಜುಗಳ ಮುಖ್ಯಸ್ಥರಿಗೆ ಸಲ್ಲಿಸಬೇಕು. ಆಯಾ ಶಾಲಾ ಕಾಲೇಜು ಮುಖ್ಯಸ್ಥರು, ಅತ್ಯುತ್ತಮವಾದ 03 ಪ್ರಬಂಧಗಳನ್ನು ಆಯ್ಕೆ ಮಾಡಿ, ಸೆ. 26 ರ ಒಳಗಾಗಿ ಸಲ್ಲಿಸಬೇಕು.
ಜಿಲ್ಲಾ ಮಟ್ಟದಲ್ಲಿ ವಿಜೇತರಾದವರಿಗೆ ಪ್ರತಿ ವಿಭಾಗದಲ್ಲಿ ಪ್ರತ್ಯೇಕವಾಗಿ ಹಾಗೂ ಕ್ರಮವಾಗಿ ತಲಾ 3 ಸಾವಿರ ರೂ, 2 ಸಾವಿರ ರೂ. ಹಾಗೂ 1 ಸಾವಿರ ರೂ. ಹಾಗೂ ರಾಜ್ಯ ಮಟ್ಟದಲ್ಲಿ ವಿಜೇತರಾದವರಿಗೆ ಪ್ರತಿ ವಿಭಾಗದಲ್ಲಿ ಪ್ರತ್ಯೇಕವಾಗಿ ಹಾಗೂ ಕ್ರಮವಾಗಿ ತಲಾ 31 ಸಾವಿರ ರೂ, 21 ಸಾವಿರ ರೂ. ಹಾಗೂ 11 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ವಿಭಾಗಾವಾರು ಪ್ರಬಂಧದ ವಿಷಯಗಳು ಈ ಕೆಳಗಿನಂತಿವೆ.

ಪ್ರೌಢ ಶಾಲಾ ವಿಭಾಗ :- 1) ನನಗೇಕೆ ಗಾಂಧೀಜಿ ಇಷ್ಟವಾಗುತ್ತಾರೆ. 2) ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗೆ. 3) ಗಾಂಧೀಜಿಯವರ ತತ್ವಗಳಿಂದ ದೇಶ ಕಟ್ಟುವ ಬಗೆ. ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು ಸುಮಾರು 900 ಪದಗಳಿಗೆ ಮೀರದಂತೆ ಪ್ರಬಂಧಗಳನ್ನು ವಿದ್ಯಾರ್ಥಿಗಳು ರಚಿಸಬೇಕು

ಪದವಿ ಪೂರ್ವ ಶಿಕ್ಷಣ ವಿಭಾಗ :- 1) ದೇಶದ ಕಳಂಕವಾದ ಅಸ್ಪೃಶ್ಯತೆ ನಿವಾರಿಸುವಲ್ಲಿನ ಗಾಂಧೀಜಿಯವರ ಪ್ರಯೋಗಗಳು. 2) ಗಾಂಧೀಜಿಯವರನ್ನು ಜಗತ್ತು ಗ್ರಹಿಸಿದ ರೀತಿ. 3) ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗೆ. ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು ಸುಮಾರು 1500 ಪದಗಳಿಗೆ ಮೀರದಂತೆ ಪ್ರಬಂಧಗಳನ್ನು ವಿದ್ಯಾರ್ಥಿಗಳು ರಚಿಸಬೇಕು.

ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗ :- 1) ದೇಶ ನಿರ್ಮಾಣದಲ್ಲಿ ಗಾಂಧೀಜಿಯವರ ಜಾತ್ಯಾತೀತ ನಿಲುವುಗಳು. 2) ಗಾಂಧೀಜಿಯವರ ಧಾರ್ಮಿಕ ಸಹಿಷ್ಣುತೆ ಚಿಂತನೆ, ಸ್ವಾತಂತ್ರ್ಯ ಮತ್ತು ಸಮಾನತೆಯ ಪರಿಕಲ್ಪನೆಗಳು. 3) ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗೆ. 4) ಗಾಂಧೀಜಿಯವರು ಕಂಡ ಸ್ವರಾಜ್ಯ ಮತ್ತು ಆರ್ಥಿಕ ಚಿಂತನೆಗಳು. ಈ ನಾಲ್ಕು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು ಸುಮಾರು 2000 ಪದಗಳಿಗೆ ಮೀರದಂತೆ ಪ್ರಬಂಧಗಳನ್ನು ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳು ರಚಿಸಬೇಕು.

ಪ್ರತಿ ಶಾಲೆ / ಕಾಲೇಜು / ಸ್ನಾತಕೋತ್ತರ ಪದವಿ ವಿಭಾಗಗಳ ಮುಖ್ಯಸ್ಥರು ತಮ್ಮ ಸಂಸ್ಥೆಯಲ್ಲಿನ ಆಯ್ದ ಅತ್ಯುತ್ತಮವಾದ ಮೂರು ಪ್ರಬಂಧಗಳನ್ನು ಸೆ. 26 ರೊಳಗಾಗಿ ಜಿಲ್ಲಾ ವಾರ್ತಾಧಿಕಾರಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಭವನ, ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಚಿತ್ರದುರ್ಗ-577501 ಈ ವಿಳಾಸಕ್ಕೆ ತಲುಪಿಸಬೇಕು.

ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮವೆನಿಸಿದ ಪ್ರತಿ ವಿಭಾಗದಲ್ಲಿನ ಮೂರು (3) ಪ್ರಬಂಧಗಳನ್ನು ಆಯ್ಕೆ ಮಾಡಿ ಅವುಗಳಲ್ಲಿ ಅತ್ಯುತ್ತಮವಾದ ಪ್ರಬಂಧಗಳಿಗೆ ರಾಜ್ಯಮಟ್ಟದ ಸ್ಪರ್ಧೆಗೆ ಸಲ್ಲಿಸಲಾಗುವುದು.
ಪ್ರಬಂಧ ರಚಿಸಲು ಮಾರ್ಗಸೂಚಿಗಳು :- ಪ್ರಬಂಧವು ಸಂಪೂರ್ಣವಾಗಿ ಸ್ವರಚಿತವಾಗಿರಬೇಕು. ಪ್ರಬಂಧವು ಕನ್ನಡದಲ್ಲಿ ಶುದ್ಧ ಕೈಬರಹ ಅಥವಾ ನುಡಿ ಇಲ್ಲವೇ ಯೂನಿಕೋಡ್ ತಂತ್ರಾಂಶದಲ್ಲಿ ಬೆರಳಚ್ಚು ಮಾಡಿರಬೇಕು. ಪ್ರಬಂಧವು ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು ಎಂದು ಪ್ರಕಟಣೆ ತಿಳಿಸಿದೆ.

Latest News >>

ಸಮಾಜದ ಸಮಗ್ರ ಬೆಳವಣಿಗೆಗೆ ಶಿಕ್ಷಣ ವಲಯ ಅಭಿವೃದ್ಧಿ ಆಗಬೇಕಾಗಿದೆ ಶಾಸಕ ಎನ್ ವೈ ಗೋಪಾಲಕೃಷ್ಣ.

ನಾಯಕನಹಟ್ಟಿ:: ಮೇ.23. ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದ್ದಾರೆ....

ತಾಲ್ಲೂಕಿನ ಶುಭೋದಯ ಸೇವಾವೃದ್ದಾಶ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಎಲ್.ಮೂರ್ತಿ ರವರ ಹುಟ್ಟುಹಬ್ಬಆಚರಣೆ: ಮುಖ್ಯಸ್ಥ ತೇಜೋಮೂರ್ತಿ

ಹಿರಿಯೂರು: ಅಭಿಮತ ಪತ್ರಿಕೆಯ ಸಂಪಾದಕರು ಹಾಗೂ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಎಸ್.ಸಿ.ಸೆಲ್. ಘಟಕ ಅಧ್ಯಕ್ಷರಾದ ಜಿ.ಎಲ್.ಮೂರ್ತಿ...

ಮೌಡ್ಯಗಳಿಂದ ಹೊರಬಂದು ಬುದ್ಧನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ:ಪ್ರೊ.ಸಿಕೆ ಮಹೇಶ್ವರಪ್ಪ ಅಭಿಮತ 

ಚಳ್ಳಕೆರೆ: ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಶಾತವಾಹನ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ವಿಜಯ ಸಂಕಲ್ಪ ದಿನಪತ್ರಿಕೆ ವತಿಯಿಂದ ಬುದ್ಧ...

ವಾಣಿವಿಲಾಸಸಾಗರ ಜಲಾಶಯಕ್ಕೆ ತಗ್ಗಿದ ಒಳಹರಿವು ಮುಂಗಾರು ಮಳೆಯಿಂದಾಗಿ 1.65ಅಡಿ ನೀರು ಸಂಗ್ರಹ

ಹಿರಿಯೂರು : ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ಪೂರ್ವ ಮುಂಗಾರು ಮಳೆಯಿಂದಾಗಿ 1.65 ಅಡಿ ನೀರು ಸಂಗ್ರಹವಾಗಿದೆ. ಇದರಿಂದ ಪ್ರಸ್ತುತ...

ಸಡಗರ ಸಂಭ್ರಮದಿಂದ ಜರುಗಿದ ಶ್ರೀವೀರಭದ್ರಸ್ವಾಮಿ ರಥೋತ್ಸವ..

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 22 ನಗರದ ಜನತೆಯ ಆರಾದ್ಯದೈವ ಶ್ರೀ ವೀರಭದ್ರಸ್ವಾಮಿ ರಥೋತ್ಸವವು ಶ್ರದ್ಧೆ ಭಕ್ತಿ ಸಂಭ್ರಮದಿAದ ಬುಧವಾರ...

ವಾಣಿವಿಲಾಸ ಸಾಗರಕ್ಕೆ ಈ ಮಳೆಯಲ್ಲಿ 3800ಕ್ಯೂಸೆಕ್ ನೀರಿನ ಒಳಹರಿವು ರೈತರ ಮೊಗದಲ್ಲಿ ಸಂತಸ ತಂದಿದೆ

ಹಿರಿಯೂರು: ಈ ಬಾರಿ ಸುರಿದ ಮಳೆಯಿಂದಾಗಿ ಕಡೂರು, ಬೀರೂರು, ಹೊಸದುರ್ಗ ಸೇರಿದಂತೆ ವೇದಾವತಿ ಜಲಾನಯನ ಪ್ರದೇಶದಾದ್ಯಂತ ಸುರಿಯುತ್ತಿರುವ...

ಮಾಡಿದಷ್ಟು ನೀಡು ಬಿಕ್ಷೆ ಕಾಯಕಯೋಗಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಕಟ್ಟಿಸಿದ ಚಿಕ್ಕ ಕೆರೆ- 18 ವರ್ಷಗಳ ನಂತರ ಕೆರೆಗೆ ನೀರು ಈ ಭಾಗರದ ಜನರಲ್ಲಿ ಮಂದಹಾಸ ಮೂಡಿಸಿದ ವರುಣ..

ನಾಯಕನಹಟ್ಟಿ ಮೇ 22 ಸುಮಾರು ವರ್ಷಗಳಿಂದ ನೀರು ಕಾಣದ ಕೆರೆಗೆ ನೀರು ಬರುತ್ತಿರುವ ದೃಶ್ಯ ಕಂಡು ಗ್ರಾಮದ ಜನರಲ್ಲಿ ಮಂದಹಾಸ ಮೂಡುವಂತೆ ಮಾಡಿದೆ....

ವಿಶ್ವಕರ್ಮ ಸಮುದಾಯದ ವತಿಯಿಂದ ಪಟ್ಟಣದ ಶ್ರೀ ಕಾಳಿಕಾದೇವಿ ಪಲ್ಲಕ್ಕಿ ಉತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು.

ನಾಯಕನಹಟ್ಟಿ:: ಶ್ರೀ ಕಾಳಿಕಾದೇವಿ ಏಳನೇ ವರ್ಷದ ವಾರ್ಷಿಕ ಸಮಾರಂಭದ ಪಲ್ಲಕ್ಕಿ ಉತ್ಸವ ಸಂಭ್ರಮ ಸಡಗರದಿಂದ ಜರುಗಿದೆ ಎಂದು ಕಾರ್ಯದರ್ಶಿ...

ಚಿತ್ರದುರ್ಗ ಜಿಲ್ಲೆಯಲ್ಲಿ ವಿಧಾನ ಪರಿಷತ್ ಸ್ಥಾನ ಗಳಿಸುವ ಕಾಂಗ್ರೆಸ್ ಪಕ್ಷದ ಕನಸು ಭಗ್ನವಾಗಲಿದೆ ಶಿಕ್ಷಕ ಮತದಾರರು ನಾಲ್ಕನೇ ಬಾರಿಗೆ ಬೆಂಬಲಿಸಲಿದ್ದಾರೆ: ವೈಎ ನಾರಾಯಣಸ್ವಾಮಿ ವಿಶ್ವಾಸ 

ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಇದುವರೆಗೂ ವಿಧಾನ ಪರಿಷತ್ ಸ್ಥಾನದ ಗೆಲುವಿನ ಬಾಗಿಲು ತೆಗೆಯುವಲ್ಲಿ ವಿಫಲವಾಗಿದೆ ಈ...

ಮೇ 22 ರ ಬುಧವಾರ ಮಧ್ಯಾಹ್ನ 3.30ಕ್ಕೆ ಮುಕ್ತಿ ಬಾವುಟ ಹರಾಜು ನಂತರ ಶ್ರೀವೀರಭದ್ರಸ್ವಾಮಿ ದೊಡ್ಡ ರಥೋತ್ಸವ ಜರುಗಲಿದೆ.

ಚಳ್ಳಕೆರೆ ಮೇ 20ಚಳ್ಳಕೆರೆ ನಗರದ ಆರಾಧ್ಯ ದೈವ ವೀರಭದ್ರಸ್ವಾಮಿ ದೊಡ್ಡ ರಥೋತ್ಸವ ಮೇ 22 ರಂದು ಬುಧವಾರ ಮಧ್ಯಾಹ್ನ 3.30ಕ್ಕೆ ಮುಕ್ತಿ ಬಾವುಟ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page