ಚಳ್ಳಕೆರೆ ನ.10. ಆಟೋಗಳ ಅಡ್ಡಾ ದಿಡ್ಡಿ ಸಂಚಾರದಿಂದ ಸಾರ್ವಜನಿಕರು.ವಿದ್ಯಾರ್ಥಿಗಳು ಜೀವ ಭಯದಲ್ಲಿ ರಸ್ತೆ ದಾಟುವ ಪರಿಸ್ಥಿತಿ ಇದೆ ಎಂಬ ಆರೋಗಳು ಕೇಳಿ ಬರುತ್ತಿವೆ.
ಹೌದು ಇದು ಚಳ್ಳಕೆರೆ ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಖಾಸಗಿ ಹಾಗೂ ಸಾರಿಗೆ ಬಸ್ ಗಳು ಪ್ರಾಯಾಣಿಕರನ್ನು ಇಳಿಸಲು ಬಂದರೆ ಸಾಕು ಎಲ್ಲೋ ಇದ್ದ ಆಟೋಗಳು ತಾ ಮುಂದು. ನಾ ಮುಂದು ಎಂಬಂತೆ ಆಟೋಗಳು ಬಂದು ಬಸ್ ಸುತ್ತ ಮುತ್ತಿಕೊಳ್ಳುತ್ತವೆ ಇದರಿಂದ ಬಸ್ಸ್ ನಿಂದ ಪ್ರಯಾಣಿಕರು ಇಳಿಯಲು ವೃದ್ದರು.ಮಕ್ಕಳು
ಬಾಣಂತಿ.ಗರ್ಭಿಣಿಯರು ಹರಸಹಾಸ ಪಡಬೇಕಾಕಿದೆ. ಆಟೋಗಳ ಅಡ್ಡಾ ದಿಡ್ಡಿ ಸಂಚಾರದಿಂದ ಕಾರು.ಬೈಕ್ ಸವಾರರಿಗೆ ಕಿರಿ ಕಿರಿ ಹಾಗೂ ಶಾಲಾ ಕಾಲೇಜು ಹೋಗುವ ವಿದ್ಯಾರ್ಥಿಗಳು.ವೃದ್ದರು.ಸಾರ್ವಜನಿಕರು ರಸ್ತೆ ದಾಟಲು ಪ್ರಾಣ ಪಕ್ಷಿ ಕೈಯಲ್ಲಿಡಿದು ಕೊಂಡು ಜೀವ ಭಯದಲ್ಲಿ ರಸ್ತೆಯಲ್ಲಿ ಸಂಚರಿಸುವಂತಾಗಿದೆ.
ಆಟೋಚಾಲಕರಿಗೆ ಪೋಲಿಸರು ಅನೇಕಬಾರಿ ಬುದ್ದಿವಾದ ಹೇಳಿದರೂ ಅಡ್ಡಾ ದಿಡ್ಡಿ ಆಟೋ ಸಂಚಾರ ಮಾಡುವುದು ನಿಲ್ಲಿಸಿಲ್ಲ. ಆಟೋ ಚಾಲಕರು ಬಸ್ ಗಳ ಸುತ್ತುವರಿದು ನಿಲ್ಲಿಸುವುದರಿಂದ ಬಸ್ ವಾಹನ ಮಾಲಿಕರು. ವಾಹನ ಚಾಲಕರು ಹಾಗೂ ನಿರ್ವಹಕರು ಬೇಸತ್ತು ಹೋಗಿದ್ದಾರೆ ಇದರಿಂದ ಸಂಚಾರ ನಿಯಮ ಉಲ್ಲಂಘನೆ ಯಿಂದ ವಾಹನಗಳ ಹಾಗೂ ಪಾದ ಚಾರಿಗಳ ಸಂಚಾರಕ್ಕೆ ಕಿರಿ ಕಿರಿಯಾಗುತ್ತಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಆಟೋಗಳ ಅಡ್ಡಾ ದಿಡ್ಡಿ ಸಂಚಾರಕ್ಕೆ ಬ್ರೇಕ್ ಹಾಕುವರೇ ಕಾದು ನೋಡ ಬೇಕಿದೆ.
ಬಸ್ ನಿಲ್ದಾಣದಲ್ಲಿ ಬಸ್ ಗಳ ಸುತ್ತುವರಿದ ಆಟೋಗಳು ಸಂಚಾರ ನಿಯಮ ಉಲ್ಲಂಘನೆ ಕಿರಿ ಕಿರಿ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments