ಬಸ್ಸಿಗಾಗಿ ಬೆಳ್ಳಂ ಬೆಳಗ್ಗೆ ವಿದ್ಯಾರ್ಥಿಗಳು ರಸ್ತೆ ತಡೆ ಪ್ರತಿಭಟನೆ.

by | 16/11/23 | ಪ್ರತಿಭಟನೆ

ಚಳ್ಳಕೆರೆ ನ.16 ಸಮುದ್ರದಡದಲ್ಲಿ ಉಪ್ಪಿಗೆ ಬರ ಎಂಬಂತೆ ಹೈಟೆಕ್ ಬಸ್ ನಿಲ್ದಾಣ. ಸುಸಜ್ಜಿತ ಸಾರಿಗೆ ಘಟಕ ಇದ್ದರೂ ಬಸ್ ಗಳ‌ಕೊರತೆಯಿಂದ ವಿದ್ಯರ್ಥಿಗಳು ಸಾರ್ವಜನಿಕರು ಪರದಾಡುವಂತಾಗಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ಕರಿಕೆರೆ ಬಳಿ ಬೆಳ್ಳಂ ಬೆಳಗ್ಗೆ ಕಾಲೇಜಿಗೆ ಹೋಗ ಬೇಕಾದ ವಿದ್ಯಾರ್ಥಿಗಳು ನಿಗಧಿತ ಸಮಯಕ್ಕೆ ಬಸ್ ಬಾರದ ರಸ್ತೆಗಿಳಿದು ರಸ್ತೆ ತಡೆ ನಡೆಸಿ ಸುಮಾರು ಒಂದು ಗಂಟೆಯಿಂದ ಪ್ರತಿಭಟನೆ ನಡೆಸಿ ಸಾರಿಗೆ ಅಧಿಕಾರಿಗಳ ವಿರುದ್ದ ಅಕ್ರೋಶವ್ಯಕ್ತಪಡಿಸಿದ್ದಾರೆ.

ತಾಲೂಕು ಕೇಂದ್ರದಿಂದ ಆಂದ್ರಗಡಿ ಭಾಗಕ್ಕೆ ಹೊಂದಿಕೊಂಡ ಓಬಳಾಪುರ. ಚಿಕ್ಕಬಾದಿಹಳ್ಳಿ. ದೊಡ್ಡಬಾದಿಹಳ್ಳಿ.ಜಾಜೂರು.ಯಾದಲಗಟ್ಟೆ.ಕಾಲುವೆಹಳ್ಳಿ. ಕರಿಕೆರೆ. ಮಿರಸಾಭಿಹಳ್ಳಿ. ಮಾರ್ಗದ ತಪ್ಪಗೊಂಡನಹಳ್ಳಿ ಸೇರಿದಂತೆ ಈ ಮಾರ್ಗದ ಗ್ರಾಮೀಣ ಪ್ರದೇಶದಿಂದ ನೂರಾರು ವಿದ್ಯಾರ್ಥಿಗಳು ಪ್ರತಿ ನಿತ್ಯ ವ್ಯಾಸಂಗ ಮಾಡಲು ಚಳ್ಳಕೆರೆ.ಚಿತ್ರದುರ್ಗಕ್ಕೆ ವ್ಯಾಸಂಗ ಮಾಡಲು ಹೋಗುತ್ತಿದ್ದು ಇನ್ನು ಕೆಲವರು ಬಸ್ ಗಳ ಕೊರತೆಯಿಂದ ಮಧ್ಯದಲ್ಲೇ ಶಾಲಾ ಕಾಲೇಜು ಬಿಟ್ಟ ಸಾಕಷ್ಟು ಉದಾಹರಣೆಗಳಿವೆ ಎನ್ನುತ್ತಾರೆ ವಿದ್ಯರ್ಥಿಗಳು. ಸರಕಾರ ಬಡ ಮಕ್ಕಳ ವ್ಯಾಸಂಗಕ್ಕಾಗಿ ಹತ್ತು ಹಲವು ಭಾಗ್ಯಗಳನ್ನು ಒದಗಿಸಿದೆ ಆದರೆ ಬಸ್ ಭಾಗ್ಯ ಮಾತ್ರ ಕರುಣಿಸಿತ್ತಿಲ್ಲ ಈ ಮಾರ್ಗದಲ್ಲಿ ಖಾಸಗಿ ಬಸ್ ಗಳು ಸಹ ಕೊರತೆ ಇವೆ ಒಂದಲ್ಲ ಎರಡು‌ ದಿನವಲ್ಲ ನಿತ್ಯವೂ ಬಸ್ ಗಾಗಿ ಪರದಾಡುವಂತಾಗಿದೆ. ಸೂಕ್ತ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ತಾಲೂಕಿನ ಕರಿಕೆರೆ ಗ್ರಾಮದಲ್ಲಿ ಸಾರಿಗೆ ಸಂಸ್ಥೆ ಬಸ್ ಸಂಚಾರ ತಡೆದು ಒಂದು ಗಂಟೆಯಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಇಣಿಕಿ ನೋಡಿಲ್ಲ


ಸರಿಯಾದ ಸಮಯಕ್ಕೆ ಬಸ್ ಬಾರದ ಕಾರಣ ಶಾಲಾ-ಕಾಲೇಜು ತರಗತಿಗಳಿಗೆ ಹಾಜರಾಗಲು ತೊಂದರೆಯಾಗುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಸಾರಿಗೆ ಸಂಸ್ಥೆಯ ಆಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಉಪಯೋಗವಾಗಿಲ್ಲ . ವಾರ್ಷಿಕ ಹಣ ಕಟ್ಟಿ ಬಸ್ ಪಾಸ್ ಮಾಡಿಸಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವರೇ ಕಾದು ನೋಡ ಬೇಕಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *